ಭೀಮ್ ಆಪ್‌ ಸುರಕ್ಷಿತವೇ? ಸರ್ಕಾರದ 550 ವೆಬ್‌ಸೈಟ್‌ಗಳು ಹ್ಯಾಕ್!!!

Written By:

ಸರ್ಕಾರದ ವೆಬ್‌ಸೈಟ್‌ಗಳು ಸರಕ್ಷಿತವಲ್ಲ ಎನ್ನುವಾಗಲೇ, ಸರ್ಕಾರಗಳ ವೆಬ್‌ಸೈಟ್‌ಗಳ ಹ್ಯಾಕ್ ಬಗ್ಗೆ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಆನ್‌ಲೈನ್‌ ಬಳಕೆದಾರರನ್ನು ಬೆಚ್ಚಿಬೀಳಿಸಿದೆ.!!

ಪದೇ ಪದೇ ಸರ್ಕಾರದ ಪ್ರಮುಖ ಇಲಾಖೆಗಳ ವೆಬ್‌ಸೈಟ್‌ಗಳಿಗೆ ಅಕ್ರಮವಾಗಿ ಪ್ರವೇಶಿಸಿ ಮಾಹಿತಿ ಕದಿಯುವ ಅಥವಾ ನಿಯಂತ್ರಿಸುವ ಕಾರ್ಯನಡೆಯುತ್ತಿದ್ದು, ಮಂಗಳವಾರ ಲೋಕಸಭೆಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ 550 ಬಾರಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ.!!

ಭೀಮ್ ಆಪ್‌ ಸುರಕ್ಷಿತವೇ? ಸರ್ಕಾರದ 550 ವೆಬ್‌ಸೈಟ್‌ಗಳು ಹ್ಯಾಕ್!!!

ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್ ಮಾರಾಟ!!?

ಕಳೆದ ಮೂರು ವರ್ಷದಲ್ಲಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳು 550 ಬಾರಿ ಹ್ಯಾಕ್ಆಗಿದ್ದು, 2014ರಲ್ಲಿ 155, 2015ರಲ್ಲಿ 164 ಹಾಗೂ 2016ರಲ್ಲಿ 199 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಬ್‌ಸೈಟ್‌ಗಳು ಹ್ಯಾಕ್‌ ಆಗಿವೆ.!! ಇನ್ನು 2017ರ ಜನವರಿ ಮತ್ತು ಫೆಬ್ರುವರಿಯ ಎರಡು ತಿಂಗಳಲ್ಲಿಯೇ 39 ವೆಬ್‌ಸೈಟ್‌ಗಳು ಹ್ಯಾಕ್‌ ಆಗಿವೆ. !!

ಭೀಮ್ ಆಪ್‌ ಸುರಕ್ಷಿತವೇ? ಸರ್ಕಾರದ 550 ವೆಬ್‌ಸೈಟ್‌ಗಳು ಹ್ಯಾಕ್!!!

ಹೀಗಾಗಿ, ಒಟ್ಟು ಮೂರು ವರ್ಷಗಳಲ್ಲಿ ಒಟ್ಟು 550 ಬಾರಿ ಸರ್ಕಾರದ ವೆಬ್‌ಸೈಟ್‌ಗಳು ಹ್ಯಾಕ್ ಆಗಿದ್ದು, ಭೀಮ್ ಪೇಮೆಂಟ್ ಆಪ್‌ ಸುರಕ್ಷತೆ ಬಗ್ಗೆ ಎಚ್ಚರಿಕೆವಹಿಸಬೇಕಿದೆ. !! ಇನ್ನು ಸೈಬರ್‌ ಕ್ರೈಂ ಸವಾಲುಗಳ ನಿರ್ವಹಣೆಗಾಗಿ ತಜ್ಞರ ತಂಡ ರಚಿಸಿರುವುದಾಗಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಹಂಸ್ರಾಜ್‌ ಆಹಿರ್ ತಿಳಿಸಿದ್ದಾರೆ.

English summary
Over 550 incidents of hacking of government websites were reported in the past three years, 550 govt websites hacked including 39 in the first two months of 2017, Lok Sabha was informed on Tuesday. to now more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot