Home
ಸುದ್ದಿಜಾಲ

ಸರ್ಕಾರದಿಂದ ಚೀನಾದ 59 ಆಪ್‌ಗಳಿಗೆ ಗೇಟ್‌ಪಾಸ್‌!

ಟಿಕ್‌ಟಾಕ್‌ ಸೇರಿದಂತೆ ಚೀನಾದ 59 ಆಪ್‌ಗಳನ್ನ ಬ್ಯಾನ್‌ ಮಾಡಿ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಕೆಲ ದಿನಗಳಿಂದ ಭಾರತ ಮತ್ತು ಚೀನಾ ಲಡಾಖ್‌ ಗಡಿಯಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿರೋದು ನಿಮಗೆಲ್ಲಾ ತಿಳಿದೆ ಇದೆ. ಇದೆ ಹೊತ್ತಿನಲ್ಲಿ ಭಾರತ ಸರ್ಕಾರದ ಈ ದೃಡ ನಿರ್ಧಾರ ಚೀನಾ ದೇಶಕ್ಕೆ ಬಿಗ್‌ ಶಾಕ್‌ ನೀಡಿದೆ ಅಂತಾನೇ ಹೇಳಬಹುದಾಗಿದೆ. ಸದ್ಯ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸುರಕ್ಷತೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಚೀನಾದ 59 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ ಎಂದು ಸರ್ಕಾರ ಹೇಳಿದೆ.

ಭಾರತ

ಹೌದು, ಭಾರತ ಸರ್ಕಾರ ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಚೀನಾದ ಆಪ್‌ಗಳು ದಕ್ಕೆ ತರುತ್ತಿವೆ ಎಂದು ಹೇಳುವ ಮೂಲಕ ಚೀನಾದ ಆಪ್‌ಗಳನ್ನ ಭಾರತದಲ್ಲಿ ಬ್ಯಾನ್‌ ಮಾಡಿದೆ. ಈ ಮೂಲಕ ವ್ಯವಹಾರಿಕವಾಗಿ ಚೀನಾಗೆ ಭಾರತ ಸರ್ಕಾರ ಭರ್ಜರಿಯಾಗಿಯೆ ಪಂಚ್‌ ನೀಡಿದೆ. ಸದ್ಯ ಭಾರತದ ಬಳಕೆದಾರರ ಡೇಟಾವನ್ನು ಅನಧಿಕೃತ ರೀತಿಯಲ್ಲಿ ಕದಿಯಲು ಮತ್ತು ರಹಸ್ಯವಾಗಿ ರವಾನಿಸಲು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಚೀನಾ ದುರುಪಯೋಗ ಪಡಿಸಿಕೊಳ್ತಿದೆ ಎಂದು ಭಾರತ ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖ ,ಮಾಡಿದೆ.

ಚೀನಾ

ಸದ್ಯ ಚೀನಾದ ಅಪ್ಲಿಕೇಶನ್‌ಗಳು ಬಳಕೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ, ಬಳಕೆದಾರರ ಗೌಪ್ಯತೆಗೆ ಧಕ್ಕೆಯುಂಟುಮಾಡುತ್ತಿವೆ ಮತ್ತು ಸ್ಪೈವೇರ್ ಅಥವಾ ಮಾಲ್‌ವೇರ್ ಆಗಿ ಬಳಸಲಾಗುತ್ತಿದೆ ಎಂದು ಗುಪ್ತಚರ ಒಳಹರಿವು ಸೂಚಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದರ ಅನ್ವಯ ಟಿಕ್‌ಟಾಕ್‌, ಶೆರ್‌ಇಟ್‌, ಕ್ವಾಯ್‌, ಯುಸಿ ಬ್ರೌಸರ್‌, ಬೈದು ಮ್ಯಾಪ್‌, ಶೈನ್‌, ಕ್ಲಾಷ್‌ ಆಫ್‌ ಕಿಂಗ್ಸ್‌, ಹಲೋ, ಲೈಕ್‌, ಯೂಕಾಮ್‌ ಮೇಕಪ್‌ ನಂತಹ ಆಪ್‌ಗಳನ್ನ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿ ಆದೇಶ ಹೊರಡಿಸಿದೆ. ಇದಿಷ್ಟೇ ಅಲ್ಲ ಭಾರತ ಸರ್ಕಾರ ಒಟ್ಟು 59 ಚೀನಿ ಆಪ್‌ಗಳನ್ನ ಬ್ಯಾನ್‌ ಮಾಡಿದ್ದು, ಆ ಆಪ್‌ಗಳು ಯಾವುವು ಅನ್ನೊದನ್ನ ತಿಳಿಸಿಕೊಡ್ತೀವಿ ಓದಿರಿ.

ಎಲೆಕ್ಟ್ರಾನಿಕ್ಸ್

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಾರ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಈ "ಸಮಗ್ರ ಶಿಫಾರಸು" ಸ್ವೀಕರಿಸಲಾಗಿದೆ ಎಂದು ಹೇಳಿದೆ.ಇದರ ಅನ್ವಯ ಭಾರತ ಸರ್ಕಾರ ಯಾವೆಲ್ಲ ಆಪ್‌ಗಳನ್ನ ಬ್ಯಾನ್‌ ಮಾಡಿದೆ ಅನ್ನೊದರ ಪಟ್ಟಿ ಹೀಗಿದೆ ನೋಡಿ.
TikTok, Shareit, Kwai, UC Browser, Baidu map, Shein, Clash of Kings, DU battery saver, Helo, Likee, YouCam makeup, Mi Community, CM Browers, Virus Cleaner, APUS Browser, ROMWE, Club Factory, Newsdog, Beutry Plus, WeChat, UC News, QQ Mail, Weibo, Xender, QQ Music, QQ Newsfeed, Bigo Live, SelfieCity, Mail Master
Parallel Space, Mi Video Call - Xiaomi, WeSync, ES File Explorer, Viva Video - QU Video Inc, Meitu, Vigo Video, New Video Status, DU Recorder, Vault- Hide, Cache Cleaner DU App studio, DU Cleaner, DU Browser, Hago Play With New Friends, Cam Scanner, Clean Master - Cheetah Mobile, Wonder Camera, Photo Wonder, QQ Player, We Meet, Sweet Selfie, Baidu Translate, Vmate, QQ International, QQ Security Center, QQ Launcher, U Video, V fly Status Video, Mobile Legends, DU Privacy
ಈ ಎಲ್ಲಾ 59 ಆಪ್‌ಗಳನ್ನ ಭಾರತ ಸರ್ಕಾರ ಬ್ಯಾನ್‌ ಮಾಡಿದೆ.

ಕೇಂದ್ರ

ಸದ್ಯ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಚೀನಾಗೆ ಭಾರಿ ಹೊಡೆತ ಬಿದ್ದಿದೆ. ಅದರಲ್ಲೂ ಇತ್ತಿಚಿನ ಮಾಹಿತಿ ಪ್ರಕಾರ ಟಿಕ್‌ಟಾಕ್‌ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದ್ದು, ಜಾಗತಿಕವಾಗಿ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಅಷ್ಟೇ ಅಲ್ಲ 2020 ರ ಮೊದಲ ತ್ರೈಮಾಸಿಕದಲ್ಲಿ 2 ಬಿಲಿಯನ್ ಗಡಿ ಕೂಡ ದಾಟಿತ್ತು. ದಾಟಿದೆ. ಇನ್ನು ಈ ರೀತಿ ಚೀನಿ ಆಪ್‌ಗಳನ್ನ ಬಹಿಷ್ಕಾರ ಮಾಡಿ ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಲ್ಲಿ ಟ್ರೆಂಡ್‌ಕೂಡ ಸೃಷ್ಟಿಯಾಗಿತ್ತು. ಭಾರತದಲ್ಲಿ ಚೀನಾ ಪ್ರಾಡಕ್ಟ್‌ಗಳನ್ನ ಬಹಿಷ್ಕರಿಸಿ, ಚೀನಿ ಆಪ್‌ಗಳನ್ನ ಆನ್‌ಇನ್‌ಸ್ಟಾಲ್‌ ಮಾಡಿ ಅಭಿಯಾನ ಜೊರಾಗಿಯೇ ನಡೆಯುತ್ತಿತ್ತು. ಸದ್ಯ ಇದೀಗ ಕೇಂದ್ರ ಸರ್ಕಾರ ಚೀನಾ ಆಪ್‌ಗಳನ್ನ ಬ್ಯಾನ್‌ ಮಾಡಿರೋದು ಚೀನಾ ಪ್ರಾಡಕ್ಟ್‌ ಬಾಯ್ಕಾಟ್‌ ಅಭಿಯಾನಕ್ಕೆ ಇನ್ನಷ್ಟು ಬಲತುಂಬಿದಂತೆ ಆಗಿದೆ.

Best Mobiles in India

English summary
The Centre blocked 59 apps with Chinese links that included the hugely popular TikTok and UC Browser.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+