ಸೈಬರ್‌ ಕ್ರೈಮ್‌ ದಾಳಿಗೆ ಒಳಗಾದವರಲ್ಲಿ ಭಾರತೀಯರೇ ಹೆಚ್ಚು!

|

ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಟೆಕ್ನಾಲಜಿ ಮುಂದುವರೆದಂತೆ ಸೈಬರ್‌ ಕ್ರೈಮ್‌ ಕೂಡ ಹೆಚ್ಚಾಗುತ್ತಿದೆ. ಸದ್ಯ ಸೈಬರ್‌ ಕ್ರೈಮ್‌ ಪ್ರಕರಣಗಳ ಕುರಿತು ನಾರ್ಟನ್ ಲೈಫ್‌ಲಾಕ್‌ ಸಂಸ್ಥೆ ಭಾರತೀಯರು ಬೆಚ್ಚಿ ಬೀಳುವ ಸಂಗತಿಯನ್ನು ವರದಿ ಮಾಡಿದೆ. ಸದ್ಯ ನಾರ್ಟನ್ ಲೈಫ್‌ಲಾಕ್‌ನ 2021 ನಾರ್ಟನ್ ಸೈಬರ್ ಸುರಕ್ಷತಾ ಒಳನೋಟಗಳ ವರದಿಯ ಪ್ರಕಾರ, ಭಾರತೀಯ ವಯಸ್ಕರಲ್ಲಿ ಸುಮಾರು 59% ರಷ್ಟು ಜನರು ಕಳೆದ 12 ತಿಂಗಳುಗಳಲ್ಲಿ ಸೈಬರ್ ಕ್ರೈಮ್‌ ದಾಳಿಗೆ ಒಳಗಾಗಿದ್ದಾರೆ.

ಸೈಬರ್‌

ಹೌದು, ನಾರ್ಟನ್ ಲೈಫ್‌ಲಾಕ್ ಸಂಸ್ಥೆಯ ಸೈಬರ್‌ ಅಪರಾಧ ಕುರಿತು ವರದಿ ಪ್ರಕಾರಭಾರತೀಯ ವಯಸ್ಕರು ಹೆಚ್ಚಿ ನ ಸೈಬರ್‌ ದಾಳಿಗೆ ಒಳಗಾಗಿದ್ದಾರೆ. ನಾರ್ಟನ್ ಲೈಫ್‌ಲಾಕ್ ವರದಿಯು ಭಾರತದ 1,000 ವಯಸ್ಕರು ಸೇರಿದಂತೆ 10 ದೇಶಗಳಲ್ಲಿ 10,000 ಕ್ಕೂ ಹೆಚ್ಚು ವಯಸ್ಕರ ಸಮೀಕ್ಷೆಯನ್ನು ಆಧರಿಸಿದೆ. ದಿ ಹ್ಯಾರಿಸ್ ಪೋಲ್ ಸಹಭಾಗಿತ್ವದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಹಾಗಾದ್ರೆ ಈ ಸಮೀಕ್ಷೆ ಏನನ್ನು ಹೇಳಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾರ್ಟನ್

ನಾರ್ಟನ್ ಲೈಫ್‌ಲಾಕ್ ವರದಿಯ ಪ್ರಕಾರ, ಭಾರತೀಯ ವಯಸ್ಕರಲ್ಲಿ 36% ಮಂದಿ ಕಳೆದ 12 ತಿಂಗಳುಗಳಲ್ಲಿ ಸೈಬರ್‌ ದಾಳಿಗೆ ಗುರಿಯಾಗಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ಈ ಘಟನೆಯ ಬಗ್ಗೆ ಕೋಪ ಅಥವಾ ಒತ್ತಡವನ್ನು ಅನುಭವಿಸಿದ್ದಾರೆ. ಅದರಲ್ಲೂ 5 ರಲ್ಲಿ 2 ಮಂದಿ ಸೈಬರ್‌ ದಾಳಿಯ ಪರಿಣಾಮ ಭಯಭೀತರಾಗಿದ್ದಾರೆ (42%) ಅಥವಾ ದುರ್ಬಲರಾಗಿದ್ದಾರೆ. ಅಲ್ಲದೆ 10 ರಲ್ಲಿ 3 (30%) ಜನರು ಶಕ್ತಿಹೀನರಾಗಿದ್ದಾರೆಂದು ವರದಿ ಆಗಿದೆ.

ಸೆಕ್ಯೂರ್‌

ಇದರ ಹೊರತಾಗಿಯೂ, 36% ಮಂದಿ ಮಾತ್ರ ಸೈಬರ್‌ ದಾಳಿಯಿಂದ ಸುರಕ್ಷತೆ ಪಡೆದುಕೊಳ್ಳಲು ಸೆಕ್ಯೂರ್‌ ಸಾಫ್ಟ್‌ವೇರ್‌ ಬಳಕೆಗೆ ಮುಂದಾಗಿದ್ದಾರೆ. ಅಲ್ಲದೆ 52% ಮಂದಿ ಸಹಾಯಕ್ಕಾಗಿ ಸ್ನೇಹಿತರ ಕಡೆಗೆ ತಿರುಗಿದರೆ, 47% ಜನರು ರೆಸಲ್ಯೂಶನ್‌ಗಾಗಿ ಸೈಬರ್‌ ದಾಳಿ ಕುರಿತು ಸುರಕ್ಷತಾ ಕಂಪನಿಯನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಹೆಚ್ಚಿನ ಮಂದಿ ಕೊರೊನಾ ವೈರಸ್‌ನ ಕಾಟದ ಕಾರಣದಿಂದಾಗಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಹೆಚ್ಚಿನ ಸೈಬರ್‌ ದಾಳಿಕೋರರು ತಮ್ಮ ದಾಳಿಗಳನ್ನು ನಡೆಸುತ್ತಿದ್ದಾರೆ.

ಸುರಕ್ಷತೆಯ

ಸದ್ಯ ಹೊಸ ಕೆಲಸದ ಮಾನದಂಡದ ಅಡಿಯಲ್ಲಿ ಬಳಕೆದಾರರು ತಮ್ಮ ಡೇಟಾ ಸುರಕ್ಷತೆಯ ಬಗ್ಗೆ ಹೇಗೆ ಭಾವಿಸುತ್ತಾರೆ ಎಂಬುದರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಅಧ್ಯಯನದ ಪ್ರಕಾರ, 10 ರಲ್ಲಿ 7 ಭಾರತೀಯ ವಯಸ್ಕರು (70%) ಮನೆಯಿಂದಲೇ ಕಾರ್ಯನಿರ್ವಹಿಸುವುದು ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳಿಗೆ ಲಾಭವಾಗಿದೆ ಎಂದು ಹೇಳಿದ್ದಾರೆ. ಅದರಲ್ಲೂ ಸುಮಾರು ಮೂರನೇ ಎರಡರಷ್ಟು ಜನರು ಸೈಬರ್ ಅಪರಾಧಕ್ಕೆ ಬಲಿಯಾಗುವ ಬಗ್ಗೆ ಎಂದಿಗಿಂತಲೂ ಹೆಚ್ಚು ಚಿಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಡೇಟಾ

ಇನ್ನು ಹೆಚ್ಚಿನ ಭಾರತೀಯ ವಯಸ್ಕರು ಡೇಟಾ ಗೌಪ್ಯತೆ (75%) ಬಗ್ಗೆ ಕಾಳಜಿ ವಹಿಸುತ್ತಾರೆ. ಅಲ್ಲದೆ ಅದನ್ನು ರಕ್ಷಿಸಲು ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ವಾಸ್ತವವಾಗಿ, 76% ಜನರು ತಮ್ಮ ಗೌಪ್ಯತೆಯನ್ನು ರಕ್ಷಿಸಲು ಉತ್ತಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ. 10 ರಲ್ಲಿ 9 (90%) ಜನರು ತಮ್ಮ ಆನ್‌ಲೈನ್ ಚಟುವಟಿಕೆಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪಾಸ್‌ವರ್ಡ್‌ಗಳನ್ನು ಬಲಪಡಿಸುವ (43%) ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದ ಮಾಹಿತಿಯನ್ನು ಸೀಮಿತಗೊಳಿಸುವ (36%) ಕೆಲವು ಸಾಮಾನ್ಯ ಕ್ರಮಗಳು, ಸೈಬರ್‌ ಅಪರಾಧಗಳನ್ನು ಕಡಿಮೆ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Most Read Articles
Best Mobiles in India

English summary
59% of Indian adults have experienced cybercrime in the last one year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X