ಕೊರೊನಾ ಎರಡನೇ ಅಲೆಗೆ 5G ನೆಟ್‌ವರ್ಕ್‌ ಕಾರಣನಾ? DoT ಹೇಳಿದ್ದೇನು?

|

ಪ್ರಸ್ತುತ ದಿನಗಳಲ್ಲಿ ಕೊರೊನಾ ಎರಡನೇ ಅಲೆ ಇಡೀ ವಿಶ್ವವನ್ನೇ ಭಾದಿಸುತ್ತಿದೆ. ಇದರ ನಡುವೆ ಭಾರತದಲ್ಲಿಯೂ ಸಹ ದಿನೇ ದಿನೇ ಕೊರೊನಾ ಸೊಂಕಿರತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಹಾಗೆಯೇ ಕೊರೊನಾ ಕುರಿತಾಗಿ ಹಲವು ವಿಚಾರಗಳು ಸೊಶೀಯಲ್‌ ಮೀಡಿಯಾಗಳಲ್ಲಿ ಹರಿದಾಡ್ತಿವೆ. ಈ ವೀಡಿಯೊಗಳಲ್ಲಿ ಕೆಲವು ಸತ್ಯಾಂಶವನ್ನು ಹೊಂದಿದ್ದರೆ. ಇನ್ನು ಕೆಲವು ವಿಚಾರಗಳು ಸತ್ಯಕ್ಕೆ ದೂರವಾದ ಮಾಹಿತಿಯನ್ನೇ ಹೊಂದಿವೆ. ಇಂತಹ ವಿಚಾರಗಳಲ್ಲಿ ಕೊರೊನಾಗೆ 5G ನೆಟ್‌ವರ್ಕ್‌ನ ತರಂಗಗಳೇ ಕಾರಣ ಅನ್ನೊ ಸುದ್ದಿ ಕೂಡ ಒಂದು.

ನೆಟ್‌ವರ್ಕ್‌

ಹೌದು, ಕೊರೊನಾ ವೈರಸ್‌ಗೆ ಕಾರಣವಾಗಿರೋದು 5G ನೆಟ್‌ವರ್ಕ್‌ ಹೊರಸೂಸುವ ತರಂಗಗಳೇ ಕಾರಣ ಅನ್ನೊ ಮಾತು ಸೊಶೀಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಮಂದಿ ಫೇಸ್‌ಬುಕ್‌ ವಾಟ್ಸಾಪ್‌ನಲ್ಲಿ ಶೇರ್‌ ಮಾಡ್ತಾ ಇದ್ದಾರೆ. ಆದರೆ ಇದು ಸುಳ್ಳು ಸುದ್ದಿ ಆಗಿದ್ದು, 5G ನೆಟ್‌ವರ್ಕ್‌ ಹಾಗೂ ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ ಅನ್ನೊ ವಿಚಾರವನ್ನು ದೂರಸಂಪರ್ಕ ಇಲಾಖೆ ಹೇಳಿದೆ. ಅಷ್ಟೇ ಅಲ್ಲ ಆಧಾರರಹಿತ ಸುಳ್ಳು ಸುದ್ದಿಗಳಿಂದ ಸಾರ್ವಜನಿಕರ ಹಾದಿ ತಪ್ಪಿಸಬಾರದು ಎನ್ನುವ ಎಚ್ಚರಿಕೆಯನ್ನು ನೀಡಿದೆ. ಹಾಗಾದ್ರೆ 5G ನೆಟ್‌ವರ್ಕ್‌ ಹಾಗೂ ಕೊರೊನಾ ವೈರಸ್‌ ಬಗ್ಗೆ ಇದ್ದ ಸುದ್ದಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೊಶೀಯಲ್‌

ಕಳೆದ ಕೆಲವು ತಿಂಗಳುಗಳಿಂದ ಸೊಶೀಯಲ್‌ ಮೀಡಿಯಾದಲ್ಲಿ ಕೊರೊನಾ ವೈರಸ್‌ ಕುರಿತಾಗಿ ಹೊಸ ಸುದ್ದಿಯೊಂದು ಹರಿದಾಡ್ತಿದೆ. ಕೊರೊನಾ ವೈರಸ್‌ ಅಲ್ಲವೇ ಅಲ್ಲ. ಇದಕ್ಕೆಲ್ಲಾ ಕಾರಣ 5G ನೆಟ್‌ವರ್ಕ್ ಹೊರಸೂಸವ ತರಂಗಗಳು ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಹರಿದಾಡ್ತಿದೆ. ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿರುವ ದೂರಸಂಪರ್ಕ ಇಲಾಖೆ (ಡಿಒಟಿ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಆಧಾರರಹಿತ ಮತ್ತು ಸುಳ್ಳು ಸಂದೇಶಗಳಿಂದ ಸಾರ್ವಜನಿಕರನ್ನು ದಾರಿ ತಪ್ಪಿಸಬಾರದು ಎಂದು ಇಲಾಖೆ ಸಾರ್ವಜನಿಕರನ್ನು ಕೋರಿದೆ.

ರೇಡಿಯೋ

ಎಲೆಕ್ಟ್ರೋಮೋಟಿವ್ (ಇಎಂಎಫ್) ಮಾಪನಗಳಿಗಾಗಿ ಸರ್ಕಾರದ ಪೋರ್ಟಲ್ ಅನ್ನು ಪರಿಶೀಲಿಸುವ ಮೂಲಕ ಹೊರಸೂಸಲ್ಪಟ್ಟ 5G ರೇಡಿಯೋ ತರಂಗಗಳು ಅನುಮತಿಸುವ ಮಟ್ಟದಲ್ಲಿದೆಯೇ ಎಂದು ನಾಗರಿಕರು ಪರಿಶೀಲಿಸಬಹುದು ಎಂದು ಹೇಳಿದೆ. ಅಲ್ಲದೆ 5G ನೆಟ್‌ವರ್ಕ್ ಪರೀಕ್ಷೆ ಭಾರತದಲ್ಲಿ ಎಲ್ಲಿಯೂ ಪ್ರಾರಂಭವಾಗಿಲ್ಲ, ಅಂತಹದರಲ್ಲಿ ಭಾರತದಲ್ಲಿ ಕೊರೊನಾ ವೈರಸ್‌ಗೆ 5G ನೆಟ್‌ವರ್ಕ್‌ ಹೇಗೆ ಕಾರಣ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದೆ. ಈ ಸಂದೇಶಗಳು ಸುಳ್ಳು ಇಂತಹ ಸಂದೇಶಗಳಿಗೆ ಜನರು ಬೆಲೆ ಕೊಡಬೇಕಾಗಿಲ್ಲ ಎಂದು ಹೇಳಿದೆ.

ಮೊಬೈಲ್

ಮೊಬೈಲ್ ಗೋಪುರಗಳು ಅಯಾನೀಕರಿಸದ ರೇಡಿಯೊ ಆವರ್ತನಗಳನ್ನು ಹೊರಸೂಸುತ್ತವೆ. ಅದು ಬಹಳ ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಮಾನವರು ಸೇರಿದಂತೆ ಜೀವಕೋಶಗಳಿಗೆ ಯಾವುದೇ ರೀತಿಯ ಹಾನಿಯನ್ನುಂಟುಮಾಡಲು ಅಸಮರ್ಥವಾಗಿದೆ ಎಂದು ಡಿಒಟಿ ಹೇಳಿದೆ. ಈ ತಿಂಗಳ ಆರಂಭದಲ್ಲಿ, ಭಾರತದಲ್ಲಿ 5G ಯ ಪ್ರಯೋಗಗಳನ್ನು ಪ್ರಾರಂಭಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಡಿಒಟಿ ಮುಂದಾಗಿದೆ. "ರೇಡಿಯೊ ಫ್ರೀಕ್ವೆನ್ಸಿ ಫೀಲ್ಡ್ ಗಾಗಿ ಮಾನ್ಯತೆ ಮಿತಿಗಾಗಿ ಡಿಒಟಿ ಸೂಚಿಸಿದೆ, ಇದು ಅಯೋನೈಜಿಂಗ್ ವಿಕಿರಣ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಆಯೋಗ (ಐಸಿಎನ್‌ಐಆರ್ಪಿ) ಸೂಚಿಸಿರುವ ಸುರಕ್ಷಿತ ಮಿತಿಗಳಿಗಿಂತ 10 ಪಟ್ಟು ಹೆಚ್ಚು ಕಠಿಣವಾಗಿದೆ ಮತ್ತು ಇದನ್ನು WHO (ವಿಶ್ವ ಆರೋಗ್ಯ ಸಂಸ್ಥೆ) ಶಿಫಾರಸು ಮಾಡಿದೆ ), "ಎಂದು ಹೇಳಿದೆ.

Most Read Articles
Best Mobiles in India

English summary
The Department of Telecommunications has noted that 5G is in no way related to the spread of Covid 19, and the messages being circulated for the same are false and baseless.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X