ಭಾರತದ 5ಜಿ ತಂತ್ರಜ್ಞಾನಕ್ಕೆ ಚೀನೀಯರಿಗಿಲ್ಲ ಅವಕಾಶ!

|

ಹುವಾವೇ ಸೇರಿದಂತೆ ಚೀನೀ ಕಂಪೆನಿಗಳಿಲ್ಲದೇ ಭಾರತದಲ್ಲಿ 5ಜಿ ಮೊಬೈಲ್ ನೆಟ್‌ವರ್ಕ್ ಪ್ರಯೋಗಗಳನ್ನು ಪ್ರಾರಂಭಿಸಲು ದೇಶದ 5ಜಿ ಪ್ಯಾನಲ್ ಬಯಸಿದೆ ಎಂಬ ಸುದ್ದಿ ಹೊರಬಿದ್ದಿದೆ. 5ಜಿ ಕುರಿತು ದೇಶದ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರಾಗಿರುವ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಅವರು, ಭಾರತವು 'ಚೀನಾದ ಮಾರಾಟಗಾರರನ್ನು ಹೊರತುಪಡಿಸಿ ಎಲ್ಲರೊಂದಿಗೆ ತಕ್ಷಣವೇ ಪ್ರಯೋಗಗಳಿಗೆ ಹೋಗಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ 5ಜಿ ತಂತ್ರಜ್ಞಾನಕ್ಕೆ ಚೀನೀಯರಿಗಿಲ್ಲ ಅವಕಾಶ!

ಹೌದು, ಭಾರತದಲ್ಲಿ 5 ಜಿ ನೆಟ್‌ವರ್ಕ್ ತರುವ ಸಂದರ್ಭದಲ್ಲೇ ಹುವಾವೇ ಮತ್ತು ಚೀನೀ ಕಂಪೆನಿಗಳ ಪಾತ್ರದ ಬಗ್ಗೆ ಚರ್ಚೆ ಮುಂದುವರೆದಿದೆ. 5ಜಿ ಪ್ರಯೋಗಗಳಲ್ಲಿ ಹುವಾವೇ ಸೇರಿದಂತೆ ಚೀನಾದ ಮಾರಾಟಗಾರರನ್ನು ಸೇರಿಸುವುದನ್ನು 5 ಜಿ ಕುರಿತು ಉನ್ನತ ಮಟ್ಟದ ಸಮಿತಿ ವಿರೋಧಿಸುತ್ತದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಭಾರತವು ಕೂಡ ಅಮೆರಿಕಾದಂತೆ ಚೀನೀ ಕಂಪೆನಿಗಳ ವಿಶ್ವಾಸರ್ಹತೆ ಮೇಲೆ ಚಿಂತಿಸಿದೆ ಎಂದು ಹೇಳಲಾಗಿದೆ.

ಚೀನೀ ಕಂಪೆನಿಗಳು ಮಾರಾಟ ಮಾಡುವ ಉಪಕರಣಗಳು ಹಿಂಬಾಗಿಲನ್ನು ಒಳಗೊಂಡಿರುತ್ತವೆ ಎಂಬ ನಿರಂತರ ಭಯವಿದೆ. 5ಜಿ ನೆಟ್‌ವರ್ಕ್‌ಗಳಿಂದ ದೇಶದ ಡೇಟಾವನ್ನು ಪ್ರವೇಶಿಸಲು ಚೀನಾ ಸರ್ಕಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ. ಹಾಗಾಗಿ, ಭಾರತವು ಚೀನಾದ ಮಾರಾಟಗಾರರನ್ನು ಹೊರತುಪಡಿಸಿ ಎಲ್ಲರೊಂದಿಗೆ ತಕ್ಷಣವೇ ಪ್ರಯೋಗಗಳಿಗೆ 5G ತಂತ್ರಜ್ಞಾನದ ಪ್ರಯೋಗಗಳಿಗೆ ಹೋಗಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಭಾರತದ 5ಜಿ ತಂತ್ರಜ್ಞಾನಕ್ಕೆ ಚೀನೀಯರಿಗಿಲ್ಲ ಅವಕಾಶ!

5ಜಿ ಪ್ರಯೋಗಗಳನ್ನು ಶೀಘ್ರದಲ್ಲೇ ಪ್ರಾರಂಭಿಸುವ ಉದ್ದೇಶವನ್ನು ಸರ್ಕಾರ ಸ್ಪಷ್ಟಪಡಿಸಿರುವ ಸಮಯದಲ್ಲಿ ವರದಿ ತಯಾರಿಸಲಾಗಿದ್ದು, 5 ಜಿ ಪ್ರಯೋಗಗಳಲ್ಲಿ ಹುವಾವೇ ಸೇರಿದಂತೆ ಚೀನಾದ ಮಾರಾಟಗಾರರನ್ನು ಸೇರಿಸುವುದನ್ನು 5 ಜಿ ಕುರಿತು ಉನ್ನತ ಮಟ್ಟದ ಸಮಿತಿ ವಿರೋಧಿಸುತ್ತದೆ. ಈ ಸಮಿತಿಯು ಗುಪ್ತಚರ ಬ್ಯೂರೋ (ಐಬಿ), ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ, ಟೆಲಿಕಾಂ ಮತ್ತು ಐಟಿ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧಿಕಾರಿಗಳನ್ನು ಒಳಗೊಂಡಿದೆ.

ರಿಯಲ್ ಮಿ ಎಕ್ಸ್ ಮೊಬೈಲ್ ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿದೆರಿಯಲ್ ಮಿ ಎಕ್ಸ್ ಮೊಬೈಲ್ ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿದೆ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹುವಾವೇ ಮೇಲಿನ ವ್ಯಾಪಾರ ನಿಷೇಧವನ್ನು ತೆಗೆದುಹಾಕಿದ ಕೆಲವೇ ದಿನಗಳಲ್ಲಿ ಈ ವರದಿ ಬಂದಿದೆ. ಭಾರತದಲ್ಲಿ ಹುವಾವೇ ಇನ್ನೂ 5 ಜಿ ಪ್ರಯೋಗಗಳಿಗೆ ಅನುಮತಿಗಳನ್ನು ಹೊಂದಿಲ್ಲ. ಆದರೆ, ಹುವಾವೇಗೆ ಇದು ಅನಿವಾರ್ಯವಾಗಿದೆ. ಹಾಗಾಗಿಯೇ, ತಾನು ಯಾವುದೇ ಘಟಕದೊಂದಿಗೆ ಯಾವುದೇ ಡೇಟಾವನ್ನು ಹಂಚಿಕೊಳ್ಳುವುದಿಲ್ಲ ಎಂದು ಹುವಾವೇ ಈಗಾಗಲೇ ಪುನರಾವರ್ತಿತ ಭರವಸೆ ನೀಡಿದೆ. ಆದರೆ, ಭಾರತ ಮಾತ್ರ ಈ ಕಂಪೆನಿಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.!

Best Mobiles in India

English summary
5G Panel Wants India to Start 5G Mobile Network Trials Without Chinese Vendors, Including Huawei. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X