Home
ಸುದ್ದಿಜಾಲ

ದೇಶದಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲು ರಿಯಲ್‌ಮಿ ಸಿದ್ಧತೆ!

ಮೊಬೈಲ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಬ್ರ್ಯಾಂಡ್ ರಿಯಲ್‌ಮಿ ಶೀಘ್ರದಲ್ಲೇ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆಯಂತೆ. ವಿಶ್ವದ ಸಂಪರ್ಕ ಕ್ಷೇತ್ರದ ಕ್ರಾಂತಿಯ ಭಾಗವಾಗಿ 5G ನೆಟ್‌ವರ್ಕ್ ಶೀಘ್ರದಲ್ಲೇ ಪ್ರವೇಶಿಸುತ್ತಿದ್ದು, ದೇಶದಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲು ರಿಯಲ್‌ಮಿ ಸಿದ್ಧತೆ ನಡೆಸಿದೆ ಎಂದು ರಿಯಲ್‌ಮಿ ಇಂಡಿಯಾ ಸಿಇಒ ತಿಳಿಸಿದ್ದಾರೆ.

ಹೌದು, ಜಾಗತಿಕವಾಗಿ 5G ತಂತ್ರಜ್ಞಾನಕ್ಕೆ ಬೇಡಿಕೆ ಬರುತ್ತಿದ್ದು, ಭಾರತದಲ್ಲಿ ನೆಟ್‌ವರ್ಕ್ ಸೇವಾದಾರ ಕಂಪನಿಗಳು ಸಿದ್ಧವಾದ ಬೆನ್ನಲ್ಲೇ 5G ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸುತ್ತವೆ.5G ನೆಟ್‌ವರ್ಕ್ ಸಿದ್ಧವಾದ ಬೆನ್ನಲ್ಲೇ ರಿಯಲ್‌ಮಿ 5G ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತದೆ ಎಂದು ರಿಯಲ್‌ಮಿ ಇಂಡಿಯಾ ಸಿಇಒ ಮಾಧವ್ ಸೇಠ್ ತಿಳಿಸಿದ್ದಾರೆ.

ದೇಶದಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲು ರಿಯಲ್‌ಮಿ ಸಿದ್ಧತೆ!

ಕೆಲ ವಾರಗಳ ಹಿಂದಷ್ಟೇ ಚೀನಾದಲ್ಲಿ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಫೋನನ್ನು ರಿಯಾಲ್‌ಮಿ ಕಂಪೆನಿ ಪ್ರಾರಂಭಿಸಿದೆ. 5ಜಿ ಫೋನ್‌ಗಳನ್ನು ಭಾರತಕ್ಕೆ ತರುವ ಮೊದಲ ಬ್ರ್ಯಾಂಡ್‌ಗಳಲ್ಲಿ ಇದು ಕೂಡ ಒಂದು ಎಂದು ಕಂಪನಿ ತಿಳಿಸಿದೆ. ಆದರೆ ನಿಖರ ಸಮಯವನ್ನು ಬಹಿರಂಗಪಡಿಸದೇ, ಈ ವರ್ಷದ ಅಂತ್ಯದ ವೇಳೆಗೆ ರಿಯಲ್‌ಮಿ 5G ಫೋನ್‌ಗಳು ದೇಶಕ್ಕೆ ಬರಬಹುದೆಂದು ತಿಳಿಸಿದೆ.

ಇತ್ತೀಚಿನ ಟ್ವಿಟ್ ಮೂಲಕ ಈ ವರ್ಷ ಜಾಗತಿಕವಾಗಿ 5ಜಿ ಉತ್ಪನ್ನಗಳನ್ನು ತರಲು ಮೊದಲ ಬ್ರ್ಯಾಂಡ್ ಗಳಲ್ಲಿ ರಿಯಲ್‌ಮಿ ಕೂಡ ಒಂದಾಗಿರುತ್ತದೆ ಎಂದು ಮಾಧವ್ ಸೇಠ್ ದೃಢಪಡಿಸಿದ್ದಾರೆ. ರಿಯಲ್‌ಮಿ ಕಂಪೆನಿಯ ಗ್ಲೋಬಲ್ ಸಿಇಒ ಸ್ಕೈಲಿ ಅವರೊಂದಿಗೆ ನಿಂತಿರುವ ಚಿತ್ರವನ್ನು ಟ್ವಿಟ್ ಮಾಡಿರುವ ಮಾಧವ್ ಸೇಠ್, ರಿಯಲ್‌ಮಿ 5G ಫೋನನ್ನು ಹಿಡಿದಿರುವುದನ್ನು ನೋಡಬಹುದು.

ದೇಶದಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲು ರಿಯಲ್‌ಮಿ ಸಿದ್ಧತೆ!

ಕೆಲ ವದಂತಿಗಳ ಪ್ರಕಾರ, ರಿಯಲ್‌ಮಿ ಎಕ್ಸ್ ಪ್ರೊ ಎಂಬ ಫೋನ್ ಮೂಲಕ 5ಜಿ ಆವೃತ್ತಿಯನ್ನು ರಿಯಾಲ್‌ಮಿ ಪ್ರಾರಂಭಿಸಬಹುದು. ಈ ಪ್ರೋ ಮಾದರಿಯು ಸ್ನಾಪ್‌ಡ್ರಾಗನ್ 855 ಚಿಪ್ಸೆಟ್ ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ ದೇಶದಲ್ಲಿ ರಿಯಲ್‌ಮಿ ಎಕ್ಸ್ ಬಿಡುಗಡೆಯಾಗುವ ನಿರೀಕ್ಷೆ ಇರುವುದರಿಂದ ವದಂತಿಗಳು ನಿಜವಿದ್ದರೂ ಇರಬಹದು.

ಓದಿರಿ: ಹುವಾವೇ ಕಂಪೆನಿಗೆ ಮತ್ತೊಂದು ಬಿಗ್ ಶಾಕ್ ನೀಡಿದ 'ಫೇಸ್‌ಬುಕ್‌!

Best Mobiles in India

English summary
Realme India CEO Sheth said in a tweet that Realme will be among the first brands to bring 5G products globally this year, and the the company is determined to bring the technology to India as early as possible. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+