Home
ಸುದ್ದಿಜಾಲ

ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸುವವರ ಪ್ರಮಾಣ ಎಷ್ಟಿದೆ ಗೊತ್ತಾ?

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಸಂಖ್ಯೆಯೇನು ಕಡಿಮೆಯಿಲ್ಲ. ಆದರೆ ಇತ್ತೀಚಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಶಿಪ್ಪಿಂಗ್‌ ಪ್ರಮಾಣದಲ್ಲಿ ಕುಸಿತವಾಗಿದೆ ಎನ್ನಲಾಗಿದೆ. ಆದರೆ ಇದೀಗ ಭಾರತದಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸುವ ಪ್ರಮಾಣ 45% ಏರಿಕೆಯಾಗಿದೆ ಎಂದು ವರದಿಯಾಗಿದೆ.

ಹೌದು, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸುವವರ ಸಂಖ್ಯೆ 45% ಇದೆ ಎನ್ನಲಾಗಿದೆ. ಇದರಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಕಮಾಲ್‌ ಮಾಡಿದೆ. ಹಾಗಾದ್ರೆ ಭಾರತದಲ್ಲಿ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗಲು ಕಾರಣವೇನು? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸುವವರ ಪ್ರಮಾಣ ಎಷ್ಟಿದೆ ಗೊತ್ತಾ?

ಭಾರತದಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸುವವರ ಸಂಖ್ಯೆ 45% ಹೊಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31% ಇತ್ತು ಎಂದು ವರದಿಯಾಗಿದೆ. ಅದರಲ್ಲೂ ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ ಎಂದು ವರದಿಯಾಗಿದೆ. ಸದ್ಯ ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ 31 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಶಿಪ್ಪಿಂಗ್‌ ಮಾಡಲಾಗಿದೆ. ಇದು 16% (ವರ್ಷದಿಂದ ವರ್ಷಕ್ಕೆ) ಇಳಿಕೆಯಾಗಿದೆ ಎಂದು ಸಹ ಅಭಿಪ್ರಾಯ ಪಡಲಾಗಿದೆ.

ಆದರೆ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಎಂಟ್ರಿ ನೀಡಿವೆ. ಇದರಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿವೆ ಎಂದು ಹೇಳಲಾಗಿದೆ. ಇದರಿಂದ ಸರಾಸರಿ ಮಾರಾಟದ ಬೆಲೆ ಸಾರ್ವಕಾಲಿಕ ಗರಿಷ್ಠ $265 (21,675ರೂ) ಅನ್ನು ತಲುಪಿದೆ. ಇದರಿಂದ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪಾಲು $600 (49,076ರೂ) ಆಗಿದೆ. ಇದರಿಂದ ಒಂದು ವರ್ಷದ ಹಿಂದೆ 4% ಹೋಲಿಸಿದರೆ 11% ಏರಿದೆ ಎನ್ನಲಾಗಿದೆ.

ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ ಖರೀದಿಸುವವರ ಪ್ರಮಾಣ ಎಷ್ಟಿದೆ ಗೊತ್ತಾ?

ಇನ್ನು ಇದೇ ಸಮಯದಲ್ಲಿ ಆನ್‌ಲೈನ್ ಚಾನೆಲ್‌ಗಳ ಶಿಪ್ಪಿಂಗ್‌ ಪ್ರಮಾಣ ಕಡಿಮೆಯಾಗಿದೆ. ಏಕೆಂದರೆ ಆಫ್‌ಲೈನ್ ಚಾನೆಲ್‌ಗಳು ಮೊದಲನೇ ತ್ರೈಮಾಸಿಕದಲ್ಲಿ ಹೆಚ್ಚು ಆಕರ್ಷಕವಾಗಿ ಪ್ರಮೋಷನ್‌ಗಳಿಂದ ಬೆಂಬಲಿತವಾಗಿವೆ ಎಂದಯ ವರದಿಯಾಗಿದೆ. ಇನ್ನು ಕೈಗೆಟುಕುವ ಬೆಲೆಯ 5G ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಸದ್ದು ಮಾಡ್ತಿದೆ. ನಂತರದ ಸ್ಥಾನದಲ್ಲಿ ವಿವೋ ಕಂಪೆನಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇದಾದ ಮೇಲೆ ಒಪ್ಪೋ ಕಂಪೆನಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಶಿಯೋಮಿ ಕಂಪೆನಿ ಗುರುತಿಸಿಕೊಂಡಿದೆ ಎಂದು ಹೇಳಲಾಗಿದೆ.

ಇದೆಲ್ಲದರ ನಡುವೆ ಇತ್ತೀಚಿಗೆ ಪ್ರಮುಖ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ನೀಡಿರುವ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆ ವರ್ಷದಿಂದ ವರ್ಷಕ್ಕೆ 20% ರಷ್ಟು ಕಡಿಮೆಯಾಗಿದೆ. ಅದರಲ್ಲೂ 60 ಕೋಟಿಗೂ ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹಿನ್ನಡೆ ಅನುಭವಿಸಿರೋದು ವರಿದಯಾಗಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರ ಬೇಡಿಕೆ ಕಡಿಮೆಯಾಗಿದೆ. ಅಲ್ಲದೆ ಹೆಚ್ಚಿನ ಹಣದುಬ್ಬರ, ದಾಸ್ತಾನು ತಿದ್ದುಪಡಿ ಮತ್ತು ಘಟಕಗಳ ಕೊರತೆಯ ಕಾರಣದಿಂದಾಗಿ ಬೇಡಿಕೆ ಕುಸಿತವಾಗಿದೆ ಎನ್ನಲಾಗಿದೆ. ಪ್ರಸ್ತುತ ಲಭ್ಯವಿರುವ ವರದಿಯ ಪ್ರಕಾರ 2022ರ 4ನೇ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಶಿಯೋಮಿಯನ್ನು ಹಿಂದಿಕಿತ್ತು. ಅದು ಈ ವರ್ಷವೂ ಮುಂದುವರೆದಿದ್ದು 2023ರ 1ನೇ ತ್ರೈಮಾಸಿಕದಲ್ಲಿ 21% ಮಾರುಕಟ್ಟೆ ಪಾಲು ಮತ್ತು 6.3 ಮಿಲಿಯನ್ ಯುನಿಟ್ ಸಾಗಣೆಯ ಮೂಲಕ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.

ಇದೇ ಅವಧಿಯಲ್ಲಿ ಶಿಯೋಮಿ ಕಂಪೆನಿ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ. ವರದಿಯ ಪ್ರಕಾರ ಶಿಯೋಮಿ 5 ಮಿಲಿಯನ್ ಸಾಗಣೆಗಳನ್ನು ಮಾತ್ರ ಹೊಂದಿದ್ದು, ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆದರೆ ಶಿಯೋಮಿಯನ್ನು ಹಿಂದಿಕ್ಕಿರುವ ಒಪ್ಪೋ ಕಂಪೆನಿ 5.5 ಮಿಲಿಯನ್ ಶಿಪ್ಪಿಂಗ್‌ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ವಿವೋ ಕಂಪೆನಿ ತನ್ನ 5.4 ಮಿಲಿಯನ್ ಶಿಪ್‌ಮೆಂಟ್ಸ್‌ ಮೂಲಕ ಮೂರನೇ ಸ್ಥಾನಕ್ಕೇರಿದೆ.

Best Mobiles in India

English summary
5G smartphone share increased to 45 percent in India in the March quarter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+