ಭಾರತದಲ್ಲಿ 5G ಇಲ್ಲದೆ ಹೋದರೂ 5G ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ!
ಭಾರತದಲ್ಲಿ 5G ನೆಟ್‌ವರ್ಕ್ ಯಾವಾಗ ಲಭ್ಯವಾಗಲಿದೆ ಎನ್ನುವ ಚರ್ಚೆ ಕಳೆದ ಕೆಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಅದರಲ್ಲೂ ಈ ವರ್ಷ 5G ನೆಟ್‌ವರ್ಕ್ ಭಾರತದಲ್ಲಿ ಲಭ್ಯವಾಗಲಿದೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ. ಇದೇ ಕಾರಣಕ್ಕೆ ಮಾರ್ಚ್‌ನಲ್ಲಿ ನಡೆಯಲ್ಲಿರುವ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಕಡೆಗೆ ಎಲ್ಲರ ಗಮನ ಇದೆ. ಇದರ ನಡುವೆ ಸ್ವಾರಸ್ಯಕರ ಸಂಗತಿಯೊಂದು ಬಯಲಾಗಿದೆ. ಏನೆಂದರೆ ಭಾರತದಲ್ಲಿ 5G ನೆಟ್‌ವರ್ಕ್ ಇಲ್ಲದೆ ಹೋದರೂ 5G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ ಎಂದು ವರದಿಯಾಗಿದೆ.

ಹೌದು, ಭಾರತದಲ್ಲಿ 5G ಇಲ್ಲದೆ ಹೋದರೂ 5G ಸ್ಮಾರ್ಟ್‌ಫೋನ್‌ಗಳಿಗೆನೂ ಭರವಿಲ್ಲ. ಇತ್ತಿಚಿನ ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್‌ನ ತ್ರೈಮಾಸಿಕ ಮೊಬೈಲ್ ಫೋನ್ ಟ್ರ್ಯಾಕರ್ ಪ್ರಕಾರ, ದೇಶವು 2020 ರಲ್ಲಿ 5G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಮೂರು ದಶಲಕ್ಷಕ್ಕೂ ಹೆಚ್ಚಿದೆ. ಅದರಲ್ಲೂ ಒಟ್ಟು 150 ಮಿಲಿಯನ್ ಯುನಿಟ್‌ಗಳಲ್ಲಿ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ. ಹಾಗಾದ್ರೆ ಭಾರತದಲ್ಲಿ 5G ಇಲ್ಲದೆ ಹೋದರು 5G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಾಗಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಾಗತಿಕವಾಗಿ ಲಭ್ಯವಿರುವ 5G ಭಾರತಕ್ಕೆ ಇನ್ನೂ ಎಂಟ್ರಿ ನೀಡಿಲ್ಲ. ಆದರೆ ಭಾರತದಲ್ಲಿ 5G ಲಭ್ಯತೆಯ ಕೊರತೆಯ ಹೊರತಾಗಿಯೂ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ತ್ರೈಮಾಸಿಕ ಮೊಬೈಲ್ ಫೋನ್ ಟ್ರ್ಯಾಕರ್ ಪ್ರಕಾರ, ದೇಶವು 2020 ರಲ್ಲಿ 5G ಸ್ಮಾರ್ಟ್‌ಫೋನ್‌ಗಳು ಮೂರು ಮಿಲಿಯನ್‌ಗೂ ಹೆಚ್ಚಿನ ಮಾರಾಟವನ್ನು ಕಂಡಿವೆ. ಅದರಲ್ಲೂ 5G ಸ್ಮಾರ್ಟ್‌ಫೋನ್ ಮಾರುಕಟ್ಟೆ 2019 ಮತ್ತು 2020 ರ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಂಡಿದೆ.

ಇನ್ನು 2021 ರಲ್ಲಿ, 5G ಸ್ಮಾರ್ಟ್‌ಫೋನ್ ಮಾರುಕಟ್ಟೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸೈಬರ್‌ಮೀಡಿಯಾ ರಿಸರ್ಚ್ ನಾಲ್ಕನೇ ತ್ರೈಮಾಸಿಕ ಮಾರುಕಟ್ಟೆ ವರದಿಯ ಪ್ರಕಾರ, ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ 5G ಸ್ಮಾರ್ಟ್‌ಫೋನ್ ವಿಭಾಗವನ್ನು 2020 ರಲ್ಲಿ 58% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಅಮೆರಿಕದ ಟೆಕ್ ದೈತ್ಯ ಆಪಲ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 20% ತೆಗೆದುಕೊಂಡಿದೆ. 2021 ರಲ್ಲಿ ಈ ಸಂಖ್ಯೆ ಗಣನೀಯವಾಗಿ ಬೆಳೆಯುತ್ತದೆ ಎಂದು ಸಿಎಮ್ಆರ್ ಅಂದಾಜು ಮಾಡಿದೆ. ತನ್ನ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ, 5G ಸ್ಮಾರ್ಟ್‌ಫೋನ್ ಸಾಗಣೆಗೆ 30 ಮಿಲಿಯನ್ ಸಾಧನಗಳಿಗೆ "ಹತ್ತು ಪಟ್ಟು" ಬೆಳವಣಿಗೆಯನ್ನು ಸಂಸ್ಥೆಯು ನಿರೀಕ್ಷೇ ಮಾಡಿದೆ.

ಸದ್ಯ ಭಾರತದ 5G ರೋಲ್ ಔಟ್ ಯೋಜನೆಗಳು ಇಲ್ಲಿಯವರೆಗೆ ವಿಳಂಬವಾಗಿದೆ. ಆದರೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಟೆಲ್ಕೋಗಳು ಸಿದ್ಧವಾಗುವ ನಿರೀಕ್ಷೆಯಿದೆ. ದೇಶದ ಪ್ರಮುಖ ಟೆಲಿಕಾಂ ಭಾರ್ತಿ ಏರ್‌ಟೆಲ್ ಈ ವರ್ಷದ ಜನವರಿ 28 ರಂದು ಹೈದರಾಬಾದ್‌ನಲ್ಲಿನ ವಾಣಿಜ್ಯ ನೆಟ್‌ವರ್ಕ್ ಮೂಲಕ ಯೂಸ್ ಕೇಸ್ ಆಧಾರದ ಮೇಲೆ ಲೈವ್ 5 ಜಿ ಸೇವೆಯನ್ನು ಪ್ರದರ್ಶಿಸಿತ್ತು. ಆದರೆ ಬಿಲಿಯನೇರ್ ಮುಖೇಶ್ ಅಂಬಾನಿ ಅವರು 2021 ರ ದ್ವಿತೀಯಾರ್ಧದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ "5G ಕ್ರಾಂತಿಗೆ" ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.


Click it and Unblock the Notifications