5G ಮೊಬೈಲ್ ಬಳಕೆದಾರರೇ ಇಲ್ನೋಡಿ! 2028ಕ್ಕೆ 5G ಕಥೆ ಏನಾಗಲಿದೆ ಅಂತಾ?
ಭಾರತದಲ್ಲಿ 5G ಶುರುವಾದ ನಂತರ 5G ನೆಟ್‌ವರ್ಕ್ ಟೆಕ್ನಾಲಜಿ ಸಾಕಷ್ಟು ವೇಗವಾಗಿ ಬೆಳೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ 2022ರ ಅಂತ್ಯದ ವೇಳೆಗೆ ದೇಶದಲ್ಲಿ 5G ಚಂದಾದಾರಿಕೆಯ ಪ್ರಮಾಣ ಸುಮಾರು 10 ಮಿಲಿಯನ್ ತಲುಪಿದೆ ಎಂದು ವರದಿಯಾಗಿದೆ. ಅಲ್ಲದೆ 2028ರ ಅಂತ್ಯದ ವೇಳೆಗೆ ಸುಮಾರು 700 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಹೌದು, ಭಾರತದಲ್ಲಿ 5G ಚಂದಾದಾರಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಸಾಕಷ್ಟು ವೇಗವಾಗಿ ದೇಶದಲ್ಲಿ 5G ಚಂದಾದಾರಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾದ್ರೆ ದೇಶದ 5G ನೆಟ್‌ವರ್ಕ್ ಮುಂದಿನ ದಿನಗಳಲ್ಲಿ ಹೇಗೆ ಏರಿಕೆಯಾಗಲಿದೆ? ಇದಕ್ಕೆ ಕಾರಣಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದ 5G ಮೊಬೈಲ್ ಟೆಕ್ನಾಲಜಿ ದೇಶದಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾದಿಸುತ್ತಿದೆ ಎಂದು ವರದಿಯಾಗಿದೆ. ಇದೀಗ ದೇಶದಲ್ಲಿ ಒಟ್ಟು 57% 5G ಮೊಬೈಲ್ ಚಂದಾದಾರಿಕೆಯಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಮುಂದಿನ ಐದು ವರ್ಷಗಳಲ್ಲಿ ದೇಶದ 5G ಚಂದಾದಾರಿಕೆ 700 ಮಿಲಿಯನ್ ದಾಟಲಿದೆ ಎನ್ನಲಾಗಿದೆ. ಪ್ರಸ್ತುತ ದಿನಗಳಲ್ಲಿ ಜಾಗತಿಕವಾಗಿ, ಪ್ರತಿ ಪ್ರದೇಶದಲ್ಲಿ 5G ಚಂದಾದಾರಿಕೆಗಳು ಹೆಚ್ಚುತ್ತಿವೆ ಎಂದು ವರದಿಯಾಗಿದೆ. ಅಲ್ಲದೆ ಇದು 2023 ರ ಅಂತ್ಯದ ವೇಳೆಗೆ 1.5 ಬಿಲಿಯನ್ ತಲುಪುವ ಮುನ್ಸೂಚನೆ ಇದೆ.
ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ 5G ಮೊಬೈಲ್ ಟೆಕ್ನಾಲಜಿ ಕಾರಣದಿಂದಾಗಿ ಪ್ರತಿ ಸ್ಮಾರ್ಟ್‌ಫೋನ್‌ಗೆ ಸರಾಸರಿ ಡೇಟಾ ಟ್ರಾಫಿಕ್ ಸುಮಾರು ಎರಡು ಪಟ್ಟು ಹೆಚ್ಚಾಗಲಿದೆ. ಅಂದರೆ 2022 ರಲ್ಲಿ ತಿಂಗಳಿಗೆ 26GB ತನಕ ಇದ್ದ ಡೇಟಾ ಪ್ರಮಾಣ 2028 ರಲ್ಲಿ ತಿಂಗಳಿಗೆ 62GB ಡೇಟಾಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಭಾರತದಲ್ಲಿ ಒಟ್ಟು ಮೊಬೈಲ್ ಚಂದಾದಾರಿಕೆಗಳ ಶೇಕಡಾವಾರು ಪ್ರಮಾಣ 2028 ರಲ್ಲಿ 93% ಇರಲಿದೆ ಎಂದು ವರದಿಯಾಗಿದೆ.
ಪ್ರಸ್ತುತ ಎರಿಕ್ಸನ್ ಮೊಬಿಲಿಟಿ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ, ಒಟ್ಟು ಮೊಬೈಲ್ ಡೇಟಾ ಟ್ರಾಫಿಕ್ 2022 ರಲ್ಲಿ ತಿಂಗಳಿಗೆ 18 ಎಕ್ಸಾಬೈಟ್ (EB) ನಿಂದ 2028 ರಲ್ಲಿ ತಿಂಗಳಿಗೆ 58 EB ಗೆ ಬೆಳೆಯುತ್ತದೆ ಎಂದು ಹೇಳಲಾಗಿದೆ. ಅಂದರೆ 22% CAGR ವೇಗದಲ್ಲಿ ಬೆಳವಣಿಗೆ ಸಾದಿಸಲಿದೆ. ಇನ್ನು ಹೆಚ್ಚುತ್ತಿರುವ ಮೊಬೈಲ್ 5G ಟೆಕ್ನಾಲಜಿಯು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬೆಣವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಸಹ ವರದಿಯಾಗಿದೆ.

ಇದಲ್ಲದೆ ಇದೇ ವರದಿಯಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಬೆಳವಣಿಗೆಯ ಬಗ್ಗೆ ಕೂಡ ಹೇಳಲಾಗಿದೆ. ಅದರಂತೆ ದೇಶದಲ್ಲಿ 2028ರ ವೇಳೆಗೆ ಒಟ್ಟು ಮೊಬೈಲ್ ಚಂದಾದಾರಿಕೆಗಳು 1.2 ಶತಕೋಟಿಗೆ ಬೆಳೆಯುತ್ತವೆ ಎಂದು ಅಂದಾಜಿಸಲಾಗಿದೆ. ಅಂದರೆ ಒಟ್ಟು ಮೊಬೈಲ್ ಚಂದಾದಾರಿಕೆಗಳ ಶೇಕಡಾವಾರು ಪ್ರಮಾಣ 2022 ರಲ್ಲಿದ್ದ 76% ರಿಂದ 2028 ರಲ್ಲಿ 93% ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಇನ್ನು ಇದೇ ಸಂದರ್ಭದಲ್ಲಿ ಜಾಗತಿಕವಾಗಿ 5G ತಂತ್ರಜ್ಞಾನದ ಬೆಳವಣಿಗೆಯು ಒಂದು ಶತಕೋಟಿಯನ್ನು ಮೀರಿದೆ. ಇದರಿಂದ ಪ್ರಮುಖ 5G ಮಾರುಕಟ್ಟೆಗಳಲ್ಲಿ ಸಂವಹನ ಸೇವಾ ಪೂರೈಕೆದಾರರಿಗೆ ಆದಾಯವನ್ನು ಕೂಡ ತಂದಿದೆ ಎಂದು ಎರಿಕ್ಚನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ವಿಶ್ವಾದ್ಯಂತ, ಸುಮಾರು 240 ಸಂವಹನ ಸೇವಾ ಪೂರೈಕೆದಾರರು (CSPs) ವಾಣಿಜ್ಯ 5G ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ಲಾಭವನ್ನು ಕೂಡ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸುಮಾರು 35 5G ಸ್ಟ್ಯಾಂಡ್‌ಅಲೋನ್ (SA) ಅನ್ನು ನಿಯೋಜಿಸಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications








