ನೀವಿನ್ನು 5 ಜಿ ಮೂಲಕ ಅಂತರ್ಜಾಲದ ಅತಿ ಸನಿಹಕ್ಕೆ
ಮೊಬೈಲ್ ಇದ್ದು ಅದರಲ್ಲೂ ಸ್ಮಾರ್ಟ್‌ಪೋನ್ ಇದ್ದು ಇಂಟರ್ನೆಟ್ ಇಲ್ಲದಿದ್ದರೆ ಹೇಗ್ರೀ? ಹೇಳಿದ ಹಾಗೆ ಇಂಟರ್ನೆಟ್ ಕನೆಕ್ಷನ್ ಅನ್ನು ನಿಮ್ಮ ಫೋನ್‌ಗೆ ಹಾಕಿಸುವ ಮುನ್ನ ಕೊಂಚ ಇತ್ತ ನೋಡಿ...
ನಿಮಗೆ ಪ್ರಯೋಜನಕಾರಿಯಾದ ಮತ್ತು ಸಂತೋಷಕರವಾದ ವಿಷಯವೊಂದನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ. ಇನ್ನೂ 2ಜಿ 3ಜಿ 4ಜಿ ಗೂ ಬೈ ಹೇಳುವ ಕಾಲ ಬಂದಾಯಿತು, ಇನ್ನು ನಿಮ್ಮನ್ನು ವೇಗವಾದ ಅಂತರ್ಜಾಲ ಪ್ರಪಂಚಕ್ಕೆ ಕೊಂಡೊಯ್ಯಲು ಬರುತ್ತಿದೆ 5 ಜಿ. ಹಾಗಿದ್ದರೆ ಈ 5ಜಿ ಮಾಡುವ ಕರಾಮತ್ತೇನು ಯಾವಾಗ 5ಜಿ ನಿಮಗೆ ಲಭ್ಯವಾಗುವುದು ಅದರ ವಿಶೇಷತೆಗಳೇನು ತಿಳಿಯಬೇಕೇ? ಹಾಗಿದ್ದರೆ ಲೇಖನ ಓದುವುದನ್ನು ಮುಂದುವರಿಸಿ.
ನೋಕಿಯಾ ಹಾಗೂ ಡೊಕೊಮೊ ಕಂಪೆನಿಗಳು ಜೊತೆಯಾಗಿ ಸೇರಿ ಇದೊಂದು ವಿಶೇಷ ಯೋಜನೆಗೆ ಕೈ ಹಾಕಿದ್ದು ನಿಮಗಿನ್ನು ವೇಗವಾದ ಇಂಟರ್ನೆಟ್ ಸಂಪರ್ಕವನ್ನು ಬೇಕೆಂದಲ್ಲಿ ಬೇಕಾದ ಡಿವೈಸ್‌ನಲ್ಲಿ ಪಡೆಯುವ ಕಾಲ ಹೆಚ್ಚು ದೂರವಿಲ್ಲ.

#1
ಕಾಲ ಬದಲಾದಂತೆ ಮಾನವ ಬಳಸುವ ಪ್ರತಿಯೊಂದು ವಸ್ತುವಿನಲ್ಲೂ ಹೊಸತನವನ್ನು ಹುಡುಕುತ್ತಾನೆ. ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಅದೇ ರೀತಿ ತಂತ್ರಜ್ಞಾನ ಕೂಡ ತನ್ನ ಹಳೆಯ ದಾಖಲೆಗಳನ್ನು ಅಳಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.
ಮಾರುಕಟ್ಟೆಗೆ ಬರಲಿರುವ 5ಜಿ ತಂತ್ರಜ್ಞಾನ ಬಳಕೆದಾರರಲ್ಲಿ ಸಂತಸದ ಅಲೆಯನ್ನು ತರುವುದಂತೂ ಖಂಡಿತ. ಯಾವುದೇ ತೊಡಕಿಲ್ಲದೆ ಇಂಟರ್ನೆಟ್‌ನಲ್ಲಿ ತಮ್ಮ ಇಷ್ಟದ ಹಾಡು, ವೀಡಿಯೋ, ಚಾಟ್ ಮಾಡುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬಹುದಾಗಿದೆ.

#2
ಹೊಸ ಹೊಸ ವಿನ್ಯಾಸ ತಂತ್ರಜ್ಞಾನದಲ್ಲಿ ಉಂಟಾದಂತೆ ನೆಟ್‌ವರ್ಕ್ ವಿನ್ಯಾಸ ಕೂಡ ಬದಲಾಗುತ್ತದೆ. ಹೆಚ್ಚು ಔಟ್‌ಪುಟ್ ಹಾಗೂ ಹೆಚ್ಚು ಇನ್‌ಪುಟ್ (ಮಿಮೊ) ಗೆ ಸಂಬಂಧಿಸಿದಂತೆ ನೆಟ್‌ವರ್ಕ್ ವಿನ್ಯಾಸದಲ್ಲಿ ಬದಲಾವಣೆಯಾಗಲಿದೆ.

#3
ಸ್ಪೆಕ್ಟ್ರಮ್ ವೇಗ ಕೂಡ 5ಜಿಗೆ ಸಂಬಂಧಿಸಿದಂತೆ ವೇಗವಾಗಿದ್ದು 10 GHz ಸ್ಪೆಕ್ಟ್ರಮ್ ಲಭ್ಯತೆ ಇದಕ್ಕಿದೆ. 100 GHz ಸ್ಪೆಕ್ಟ್ರಮ್ ಲಭ್ಯತೆ ಇರುವ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೂಡ ಕಂಪೆನಿ ಕಾರ್ಯಪ್ರವೃತ್ತವಾಗಿದೆ.

#4
ಕಡಿಮೆ ಚಾರ್ಜ್‌ನಲ್ಲಿ ಫೈವ್ ಜೀಯನ್ನು ಬಳಸಲು ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪೆನಿ ಶತಪ್ರಯತ್ನಗಳನ್ನು ಮಾಡುತ್ತಿದೆ. ಇದು ಅತಿ ಕಡಿಮೆ ಚಾರ್ಜಿಂಗ್ ಪವರ್ ಅನ್ನು ಬಳಸಿ ನಿಮಗೆ ಹೆಚ್ಚುವರಿ 5ಜಿ ಬೆಂಬಲವನ್ನು ನೀಡಲಿದೆ.

#5
5ಜಿ ಯು ಬಳಕೆದಾರರಿಗೆ ಉತ್ತಮ ಫೋನ್ ವೈಶಿಷ್ಟ್ಯವನ್ನು ನೀಡಿದ್ದು ಅವರ ಮನಗೆಲ್ಲುವ ಸಕಲ ಪ್ರಯತ್ನವನ್ನು ಮಾಡುತ್ತಿದೆ. ಇನ್ನೂ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.


Click it and Unblock the Notifications








