ಭವಿಷ್ಯದ 5ಜಿ ತಂತ್ರಜ್ಞಾನದ ಬಗ್ಗೆ "5G ಫೋರಂ ಇಂಡಿಯಾ"ದ ಅಧ್ಯಕ್ಷರು ಹೇಳಿದ್ದೇನು ಗೊತ್ತಾ?

|

ಸಂವಹನ ಕ್ರಾಂತಿಯ ಇದುವರೆಗಿನ ತರಂಗಾಂತರಗಳು ಬರೀ ಮೊಬೈಲ್‌ ಇಂಟರ್‌ನೆಟ್‌ಗೆ ಸೀಮಿತವಾಗಿದ್ದವು. ಆದರೆ, 5ಜಿ ಹಾಗಲ್ಲ. ನಾವು 5ಜಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇ ಆದಲ್ಲಿ 5ಜಿ ತರಂಗಾಂತರ ಅಥವಾ ತಂತ್ರಜ್ಞಾನ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದು "5ಜಿ ಫೋರಂ ಇಂಡಿಯಾ' ಅಧ್ಯಕ್ಷರಾದ ಡಾ.ಎ.ಜೆ.ಪಾಲ್‌ರಾಜ್‌ ಹೇಳಿದರು.

ಬೆಂಗಳೂರಿನಲ್ಲಿನ ಐಟಿಐ ಲಿಮಿಟೆಡ್‌ನ‌ಲ್ಲಿ ಹಮ್ಮಿಕೊಂಡಿದ್ದ ಇನ್‌ಫಾರ್ಮೇಶನ್ ಆಂಡ್‌ ಕಮ್ಯುನಿಕೇಶನ್‌ ಟೆಕ್ನಾಲಜಿ ಹಾಗೂ ಇಂಟರ್‌ನೆಟ್‌ ಆಫ್ ಥಿಂಗ್ಸ್ ಸ್ಟಾರ್ಟ್‌ಅಫ್ ಟೆಕ್‌ ಎಕ್ಸ್‌ಪೋ-2018 ಮಾತನಾಡಿದ ಪಾಲ್‌ರಾಜ್‌ ಅವರು, 5G ತಂತ್ರಜ್ಞಾನ ನಮ್ಮ ಊಹೆಗೂ ಮೀರಿದ್ದು ಈ ತಂತ್ರಜ್ಞಾನದ ಸಮರ್ಪಕ ಬಳಕೆಗೆ ನಾವು ಸಜ್ಜಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭವಿಷ್ಯದ 5ಜಿ ತಂತ್ರಜ್ಞಾನದ ಬಗ್ಗೆ

5G ಪೀಕ್‌ ಅವರ್ ಗರಿಷ್ಠ ವೇಗ 200 ಎಂಬಿಪಿಎಸ್ ಇರಲಿದೆ. ಆರ್ಥಿಕ ಪ್ರಗತಿಯಲ್ಲಿ 5ಜಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಹಾಗಾಗಿ, ನಾವು 5Gಯನ್ನು ಕೇವಲ ಇಂಟರ್‌ನೆಟ್‌ನ ಭಾಗವಾಗಿ ನೋಡಬಾರದು ಎಂದು ತಿಳಿಸಿದರು. 5G ತಂತ್ರಜ್ಞಾನ ಇನ್ನೇನು ಕೆಲವೇ ವರ್ಷಗಳಲ್ಲಿ ಬರುವ ಬಗ್ಗೆ ಸೂಚನೆ ನೀಡಿದ ಅವರು, ಅನ್ವೇಷಣೆಗಳಿಗೆ ವಿಪುಲ ಅವಕಾಶಗಳ ಬಗ್ಗೆ ತಿಳಿಸಿದರು.ಹಾಗಾದರೆ, 5G ಬಂದರೆ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.

ಇಂದು 7.8 ಬಿಲಿಯನ್‌ ಮೊಬೈಲ್‌ಗ‌ಳು!!

ಇಂದು 7.8 ಬಿಲಿಯನ್‌ ಮೊಬೈಲ್‌ಗ‌ಳು!!

1983ರಲ್ಲಿ "2ಜಿ' ಜಿಎಸ್‌ಎಂ ಬಳಕೆ ಆರಂಭವಾಯಿತು. ದಶಕದ ಕೆಳಗೆ 4ಜಿ ಎಲ್‌ಟಿಇ ಪ್ರವೇಶಿಸಿತು. ಇಂದು ಜಗತ್ತಿನಲ್ಲಿ 7.8 ಬಿಲಿಯನ್‌ ಮೊಬೈಲ್‌ಗ‌ಳು ಬಳಕೆಯಲ್ಲಿವೆ. ಇದರಲ್ಲಿ ಶೇ.45ರಷ್ಟು ಬ್ರಾಡ್‌ಬ್ಯಾಂಡ್‌ (4ಜಿ) ಸಂಪರ್ಕ ಹೊಂದಿವೆ. ಇದಕ್ಕಿಂತಲೂ ಹೆಚ್ಚು ಜನರನ್ನು 5G ತಲುಪಲಿದೆ ಎಂಬ ಮಾಹಿತಿಯನ್ನು ಡಾ.ಎ.ಜೆ.ಪಾಲ್‌ರಾಜ್‌ ಅವರು ನೀಡಿದರು.

ಕ್ರಾಂತಿಕಾರಿ ಬದಲಾವಣೆ

ಕ್ರಾಂತಿಕಾರಿ ಬದಲಾವಣೆ

5ಜಿ ತಂತ್ರಜ್ಞಾನವು ಅತ್ಯಧಿಕ ವೇಗ, ವಿಶ್ವಾಸಾರ್ಹತೆಯನ್ನು ಒಳಗೊಂಡಿದ್ದು, ಪೀಕ್‌ ಅವರ್ ಗರಿಷ್ಠ ವೇಗ 200 ಎಂಬಿಪಿಎಸ್ ಇರಲಿದೆ. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಅತ್ಯಗತ್ಯ. ಇದು ಸಾಧ್ಯವಾದರೆ ನಾವು 5ಜಿ ತರಂಗಾಂತರ ಅಥವಾ ತಂತ್ರಜ್ಞಾನ ಕ್ರಾಂತಿಕಾರಿ ಬದಲಾವಣೆಗಳಿಗೆ ಬಳಸಿಕೊಳ್ಳಬಹುದು ಎಂದು ಡಾ.ಎ.ಜೆ.ಪಾಲ್‌ರಾಜ್‌ ಅವರು ತಿಳಿಸಿದರು.

2020ರ ವೇಳೆಗೆ ವಿಶ್ವದಲ್ಲಿ 5ಜಿ!

2020ರ ವೇಳೆಗೆ ವಿಶ್ವದಲ್ಲಿ 5ಜಿ!

ವಿಶ್ದದಲ್ಲಿಯೇ 5G ತಂತ್ರಜ್ಞಾನ ಈಗಿನ್ನೂ ಕಣ್ಣು ಬಿಡುತ್ತಿರುವ ಈ ತಂತ್ರಜ್ಞಾನವಾದರೂ ಸಹ 2020ರ ವೇಳೆಗೆ ವಿಶ್ವದಲ್ಲಿ 5ಜಿ ಕಾಲಿಡಲಿದೆ ಎಂದು ಮೊಬೈಲ್‌ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರ. ಇದೇ ಸಮಯದಲ್ಲಿ ಭಾರತ ಕೂಡ 5G ತಂತ್ರಜ್ಞಾನವನ್ನು ಹೊಂದಲಿದೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಫಸ್ಟ್!?

ಬೆಂಗಳೂರಿನಲ್ಲಿ ಫಸ್ಟ್!?

ಜಿಯೋ 4Gಯನ್ನು ಆಕ್ರಮಿಸಿಕೊಂಡಿರುವುದನ್ನು ಮನಗಂಡಿರುವ ಏರ್‌ಟೆಲ್ ಮೊಬೈಲ್ ತರಂಗಾಂತರ ದಕ್ಷತೆ ಹೆಚ್ಚಿಸುವ ‘ಮ್ಯಾಸಿವ್‌ ಎಂಐಎಂಒ' ತಂತ್ರಜ್ಞಾನ ಬಳಸಿಕೊಂಡು 5ಜಿ ಸೇವೆ ಜಾರಿಗೆ ತರಲು ಮುಂದಾಗಿದೆ. ಮೊದಲು 4G ಸೇವೆಯನ್ನು ನೀಡಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದೆ.

1 ರೂಪಾಯಿಗೆ 10GB ಡೇಟಾ!

1 ರೂಪಾಯಿಗೆ 10GB ಡೇಟಾ!

ಹೌದು, ಕೆವಲ ಒಂದು ವರ್ಷದ ಹಿಂದಷ್ಟೆ ಹಿಂದಷ್ಟೆ ನೀವು ಒಂದು ಜಿಬಿ ಡೇಟಾಗೆ 300 ರೂಪಾಯಿಗಳನ್ನು ನೀಡುತ್ತಿದ್ದಿರಿ. ಪ್ರಸ್ತುತ 5 ರೂಪಾಯಿಗೆ ಒಂದು ಜಿಬಿ ಡೇಟಾ ನಿಮಗೆ ಲಭ್ಯವಿದೆ.! 5G ತಂತ್ರಜ್ಞಾನ ಬಂದರೆ ಇನ್ನೆರಡು ವರ್ಷಗಳಲ್ಲಿ ಒಂದು ರೂಪಾಯಿಗೆ 10GB ಡೇಟಾ ಸಿಗಲಿದೆ ಎನ್ನುತ್ತಿವೆ ವರದಿಗಳು.!

ಡೇಟಾ ಸ್ಪೀಡ್ ಎಷ್ಟಿರುತ್ತೆ?

ಡೇಟಾ ಸ್ಪೀಡ್ ಎಷ್ಟಿರುತ್ತೆ?

ಇಲ್ಲಿಯವರೆಗೂ 2G, 3G, 4G ಬಳಕೆ ಮಾಡುತ್ತಿದ್ದ ಕಾಲ ಮುಗಿಯುತ್ತದೆ. ಭವಿಷ್ಯದಲ್ಲಿ 5G ಮತ್ತು ಅದಕ್ಕಿಂತಲೂ ಹೆಚ್ಚಿನ ವೇಗದ ಡೇಟಾ ಸ್ಪೀಡ್ ಜನರಿಗೆ ದೊರೆಯುತ್ತದೆ. ಒಂದು 1 GB ಡೇಟಾ ಒಂದು ಸೆಕೆಂಟ್‌ನಲ್ಲಿಯೇ ಡೌನ್‌ಲೋಡ್ ಆಗಬಹುದಾದ ತಂತ್ರಜ್ಞಾನವನ್ನು ಈಗಾಗಲೇ ಅಭಿವೃದ್ದಿಪಡಿಸಲಾಗಿದೆ.

ಭವಿಷ್ಯದಲ್ಲಿ ಡೇಟಾ ಟಿವಿ ಮಾತ್ರ!

ಭವಿಷ್ಯದಲ್ಲಿ ಡೇಟಾ ಟಿವಿ ಮಾತ್ರ!

ಈಗಲೂ ಹಣ ನೀಡಿ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಯನ್ನು ಬಳಕೆ ಮಾಡುತ್ತಿರುವವರನ್ನು ನೋಡಬಹುದು. ಆದರೆ, ಇನ್ನೈದು ವರ್ಷಗಳಲ್ಲಿಯೇ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಗೆ ಹಣವನ್ನು ನೀಡಲುವ ಅವಶ್ಯಕತೆ ಇಲ್ಲ. ಬರಿ ಡೇಟಾದಲ್ಲಿಯೇ ಇವೆಲ್ಲವೂ ನಡೆದುಹೋಗುತ್ತದೆ.

ಡೇಟಾ ಟಿವಿ.!

ಡೇಟಾ ಟಿವಿ.!

ರೋಡಿನಲ್ಲಿ ಹರಡಿರುವ ಟಿವಿ ಕೇಬಲ್‌ಗಳು, ಮನೆಯ ಅಂದ ಕೆಡಿಸುವ ಡಿಟಿಹೆಚ್ ಬಾಂಡಲಿಗಳು ಭವಿಷ್ಯದಲ್ಲಿ ಮರೆಯಾಗುತ್ತವೆ. ಕೇವಲ ಇಂಟರ್‌ನೆಟ್ ಕನೆಕ್ಷನ್ ಮೂಲಕವೇ ನಿಮ್ಮ ಟಿವಿ ಕಾರ್ಯ ನಿರ್ವಹಿಸುತ್ತವೆ. ಈಗಾಗಲೇ ಮುಂದುವರೆದ ರಾಷ್ಟ್ರಗಳಲ್ಲಿ ಈ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಇನ್ನೆಡು ವರ್ಷದಲ್ಲಿ ಡೇಟಾ ಟಿವಿಗಳು ಹೆಚ್ಚಲಿವೆ.!

BSNL ಕೂಡ ತರುವ ಸೂಚನೆ ಇದೆ.!

BSNL ಕೂಡ ತರುವ ಸೂಚನೆ ಇದೆ.!

2018ರ ಅಂತ್ಯದ ವೇಳಗೆ ದೇಶದೆಲ್ಲೆಡೆ 5ಜಿ ಪ್ರಾಯೋಗಿಕ ಸೇವೆ ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಸದ್ಯ ದೇಶದಲ್ಲೇ ಅತಿದೊಡ್ಡ ಆಪ್ಟಿಕಲ್‌ ಪೈಬರ್‌ ನೆಟ್‌ವರ್ಕ್‌ ಜಾಲವನ್ನು ಬಿಎಸ್‌ಎನ್‌ಎಲ್‌ ಹೊಂದಿದ್ದು, BSNL ಕೂಡ ಮೊದಲು 5G ತರುವ ಸೂಚನೆ ಇದೆ.

Most Read Articles
Best Mobiles in India

English summary
Nokia India bags 50 contracts in the first half of the ongoing fiscal year ... The high-level5G Forum, set up by the government, also recommended that free. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more