ಖರ್ಚಿಗೆ ಕಡಿವಾಣ ಹಾಕುವ ಟಾಪ್ ಅಪ್ಲಿಕೇಶನ್‌ಗಳು

By Shwetha
|

ಇಂದಿನ ದುಬಾರಿ ಜಗತ್ತಿನಲ್ಲಿ ಎಲ್ಲಾ ಉತ್ಪನ್ನಗಳು ದುಬಾರಿ ಬೆಲೆಯಲ್ಲಿ ದೊರಕುತ್ತಿರುವುದು ಖೇದಕರ ಸಂಗತಿಯಾಗಿದೆ. ಮಿತವ್ಯಯದಲ್ಲಿ ನಾವು ಉತ್ಪನ್ನದ ಮೇಲೆ ಖರ್ಚು ಮಾಡುವ ಬಗೆಯನ್ನು ಕಂಡುಕೊಳ್ಳುವುದೇ ದುಬಾರಿ ಖರ್ಚಿಗೆ ತಡೆಯೊಡ್ಡುವ ವಿಧಾನವಾಗಿದೆ. ಆದರೆ ಇದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ವಿಧಾನವನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿರುವೆವು.

ಓದಿರಿ: ರೋಮಿಂಗ್ ಹಂಗಿಲ್ಲದೆ ಉಚಿತ ಕರೆಮಾಡಲು ಲಿಬನ್ ಬಳಸಿ

ಹೌದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೂಲಕ ಹೆಚ್ಚುವರಿ ಖರ್ಚಿಗೆ ಕಡಿವಾಣವನ್ನು ಹಾಕಬಹುದು. ಅದು ಹೇಗೆ ಎಂಬುದನ್ನು ಕೆಳಗಿನ ಅಪ್ಲಿಕೇಶನ್‌ಗಳಿಂದ ತಿಳಿದುಕೊಳ್ಳಿ.

ಯು ನೀಡ್ ಎ ಬಜೆಟ್

ಯು ನೀಡ್ ಎ ಬಜೆಟ್

ನಿಮ್ಮ ಎಲ್ಲಾ ಖಾತೆಯನ್ನು ನಿಮ್ಮ ಕುಟುಂಬದ ಸದಸ್ಯರ ಡಿವೈಸ್‌ಗಳ ಮೂಲಕ ಸಿಂಕ್ ಮಾಡಿ. ಹೆಚ್ಚುವರಿ ಖರ್ಚಿನ ಮೇಲೆ ನಿಗಾಇರಿಸುವ ಕೆಲಸವನ್ನು ಇದು ಮಾಡುತ್ತದೆ.ಡೌನ್‌ಲೋಡ್ ಲಿಂಕ್

ಮಿಂಟ್

ಮಿಂಟ್

ನಿಮ್ಮ ಖರ್ಚಿನ ವಿವರವನ್ನು ಮಿಂಟ್.ಕಾಮ್ಸ್ ಅಪ್ಲಿಕೇಶನ್ ಬಳಸಿ ಅರಿತುಕೊಳ್ಳಿ. ನಿಮ್ಮ ಖರ್ಚಿನ ನಿಖರವಾದ ವಿವರವನ್ನು ಈ ಅಪ್ಲಿಕೇಶನ್ ನೀಡುತ್ತದೆ. ನೀವು ಯಾವುದಕ್ಕೆಲ್ಲಾ ಖರ್ಚು ಮಾಡುತ್ತಿದ್ದೀರಿ ಎಂಬುದರ ಮಾಹಿತಿ ದೊರೆಯುತ್ತದೆ.ಡೌನ್‌ಲೋಡ್ ಲಿಂಕ್

ಬಿಲ್ ಗಾರ್ಡ್

ಬಿಲ್ ಗಾರ್ಡ್

ಯಾವುದೇ ರೀತಿಯ ಮೋಸ ನಡೆಯದಂತೆ ನಿಮ್ಮನ್ನು ಕಾಪಾಡಲು ಬಿಲ್ ಗಾರ್ಡ್ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ನಿಮ್ಮ ಡೆಬಿಟ್ ಕಾರ್ಟ್ ಇಲ್ಲವೇ ಕ್ರೆಡಿಟ್ ಕಾರ್ಡ್‌ನಿಂದ ಏನಾದರೂ ಮೋಸ ನಡೆಯುತ್ತಿದೆ ಎಂದಾದಲ್ಲಿ ಇದು ನಿಮಗೆ ತಿಳಿಸುತ್ತದೆ.ಡೌನ್‌ಲೋಡ್ ಲಿಂಕ್

ಆಪಲ್2ಆರೆಂಜಸ್

ಆಪಲ್2ಆರೆಂಜಸ್

ಮಿತದರದಲ್ಲಿ ವಸ್ತುಗಳನ್ನು ಖರೀದಿಸಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಪ್ರತಿಯೊಂದು ಐಟಮ್‌ಗಳ ಮೇಲೆ ದರವನ್ನು ಕಡಿತಗೊಳಿಸಿ ನಿಮ್ಮ ಹೆಚ್ಚುವರಿ ಖರ್ಚನ್ನು ಇದು ನಿಯಂತ್ರಿಸುತ್ತದೆ.ಡೌನ್‌ಲೋಡ್ ಲಿಂಕ್

ಶಾಪ್‌ಕಿಕ್

ಶಾಪ್‌ಕಿಕ್

ಡೀಲ್‌ಗಳಿಗೆ ಸೂಚನೆಗಳನ್ನು ಪಡೆಯಲು ಈ ಅಪ್ಲಿಕೇಶನ್ ಅತ್ಯುತ್ತಮವಾಗಿದೆ. ಉಚಿತ ಗಿಫ್ಟ್ ಕಾರ್ಡ್‌ಗಳನ್ನು ನಿಮಗಿಲ್ಲಿ ಪಡೆದುಕೊಳ್ಳಬಹುದಾಗಿದೆ. ಡೌನ್‌ಲೋಡ್ ಲಿಂಕ್

ಅಕಾರ್ನ್

ಅಕಾರ್ನ್

ನೀವು ಖರ್ಚು ಮಾಡುವ ವಸ್ತುವಿನಿಂದಲೇ ಆದಾಯ ಗಳಿಸುವಂತಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ? ಅಕಾರ್ನ್ ಇದೇ ಕೆಲಸವನ್ನು ಮಾಡುತ್ತದೆ.ಡೌನ್‌ಲೋಡ್ ಲಿಂಕ್

Best Mobiles in India

English summary
Below are six apps to help you master your finances. Securely connect your accounts and credit cards, and let them do the heavy lifting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X