ಮೊಬೈಲ್‌ ಕಳೆದುಹೋದಾಗ ಮಾಡಲೇಬೇಕಾದ 6 ಚಟುವಟಿಕೆಗಳು

By Suneel
|

ಬಹುಸಂಖ್ಯಾತರಿಗೆ ಮೊಬೈಲ್‌ ಅನ್ನು ಆಕಸ್ಮಿಕವಾಗಿ ಕಳೆದುಕೊಂಡಿರುವ, ತಮ್ಮ ಫೋನ್‌ ಕಳವು ಆಗಿರುವ ಅಥವಾ ಇನ್ನೆಲ್ಲೋ ಆಕಸ್ಮಿಕವಾಗಿ ಮರೆತು ತಮ್ಮ ಫೋನ್‌ ಕಳೆದುಕೊಂಡಿರುವ ಅನುಭವ ಆಗಿರಬಹುದು. ಹಣ ಬೇಕಾದ್ರೆ ಸಂಪಾದಿಸಿ ಇನ್ನೊಂದು ಹೊಸ ಮೊಬೈಲ್‌ ತೆಗೆದುಕೊಳ್ಳಬಹುದು, ಆದರೆ ಮೊಬೈಲ್‌ ಕಳೆದುಕೊಂಡ ನಂತರ ಮೊಬೈಲ್‌ನಲ್ಲಿರುವ ಅಮೂಲ್ಯವಾದ ಸಂಪರ್ಕಗಳು, ಮಾಹಿತಿಗಳನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ತಮ್ಮ ಮೊಬೈಲ್‌ ಆಕಸ್ಮಿಕವಾಗಿ ಕಳೆದುಕೊಂಡವರು ತಕ್ಷಣ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿರುವ 6 ಪ್ರಮುಖ ಚಟುವಟಿಕೆಗಳನ್ನು ಮಾಡಲೇಬೇಕಿದೆ. ಅದು ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಓದಿರಿ : ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ

 ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ

ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ

ಪ್ರಯತ್ನ ಅನ್ನುವುದು ಎಲ್ಲವನ್ನು ಸಕಾರಾತ್ಮಕವಾಗಿ ಮಾಡಬಲ್ಲದು. ನಿಮ್ಮ ಮೊಬೈಲ್‌ಗೆ ಒಮ್ಮೆ ಕರೆ ಅಥವಾ ಸಂದೇಶ ಕಳುಹಿಸಿದರೆ ಮೊಬೈಲ್‌ ಅನ್ನು ಕೆಲವರು ಹಿಂದಿರಿಗಿಸಬಹುದು. ಭರವಸೆ ಇರಲಿ.

ಪಾಸ್‌ವರ್ಡ್‌ಗಳ ಬದಲಾವಣೆ

ಪಾಸ್‌ವರ್ಡ್‌ಗಳ ಬದಲಾವಣೆ

ನಿಮ್ಮ ಮೊಬೈಲ್‌ ಕಳೆದುಹೋದ ತಕ್ಷಣ ಕಂಪ್ಯೂಟರ್‌ನಿಂದ ನಿಮ್ಮ ಇಮೇಲ್‌, ಫೇಸ್‌ಬುಕ್‌, ಟ್ವಿಟರ್, ನೆಟ್‌ ಬ್ಯಾಂಕ್‌ ಖಾತೆಗಳ ಮತ್ತು ಹಲವು ಅಪ್ಲಿಕೇಶನ್‌ಗಳ ಪಾಸ್‌ವರ್ಡ್‌ ಅನ್ನು ಬದಲಾವಣೆ ಮಾಡಿ.

ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಬಳಸಿ

ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಬಳಸಿ

ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಬಳಸುವುದರಿಂದ ಕಳೆದು ಹೋದ ಮೊಬೈಲ್‌ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದು ಮತ್ತು ರಿಂಗ್‌ ಮಾಡಬಹುದು. ಅಲ್ಲದೇ ನಿಮ್ಮ ಫೋನ್‌ ಅನ್ನು ಲಾಕ್‌ ಮಾಡಬಹುದು. ಫೋನ್‌ನಲ್ಲಿರುವ ಡೇಟಾವನ್ನು ಡಿಲೀಟ್‌ ಮಾಡಲು ಸಹ ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಬಳಸಬಹುದಾಗಿದೆ.

 ಸಿಮ್‌ ಕಾರ್ಡ್‌ ಬ್ಲಾಕ್‌

ಸಿಮ್‌ ಕಾರ್ಡ್‌ ಬ್ಲಾಕ್‌

ನಿಮ್ಮ ಹತ್ತಿರದ ಟೆಲಿಕಾಮ್‌ ಆಪರೇಟರ್ ಅನ್ನು ಸಂಪರ್ಕಿಸಿ ಕಳೆದು ಹೋದ ಮೊಬೈಲ್‌ ಸಿಮ್‌ ಅನ್ನು ಬ್ಲಾಕ್‌ ಮಾಡಿಸಿ. ಇದರಿಂದ ಸಿಮ್‌ ದುರ್ಬಳಕೆಯಾಗುವುದನ್ನು ತಡೆಗಟ್ಟಬಹುದಾಗಿದೆ.

ಪೊಲೀಸ್ ಸಂಪರ್ಕ

ಪೊಲೀಸ್ ಸಂಪರ್ಕ

ನಿಮ್ಮ ಫೋನ್‌ ಕಳೆದುಹೋದ ಬಗ್ಗೆ ದೂರು ಸಲ್ಲಿಸುವುದು ಅತಿ ಅವಶ್ಯಕವೆನಿಸಿದಲ್ಲಿ ಪೊಲೀಸರ ಬಳಿ ದೂರು ಸಲ್ಲಿಸಿ.

ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ ಎಚ್ಚರ

ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ ಎಚ್ಚರ

ಫೋನ್‌ ಕಳೆದುಕೊಂಡ ನಂತರದಲ್ಲಿ ಹಲವು ದಿನಗಳವರೆಗೆ ನಿಮ್ಮ ಇಮೇಲ್‌, ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಎಚ್ಚರವಹಿಸಿ.

Best Mobiles in India

English summary
6 things to do when you lose your Phone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X