ಅತೀ ಹೆಚ್ಚು ಸಂಬಳ ಪಡೆಯುವ ಇನ್ಫೋಸಿಸ್ ಅಧಿಕಾರಿಗಳು..!

|

ಇನ್ಪೋಸಿಸ್ ನಲ್ಲಿ ಕೆಲವು ಅಧಿಕಾರಿಗಳು ಅತೀ ಹೆಚ್ಚು ಸಂಬಳ ಪಡೆಯುತ್ತಾರೆ. ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಎಂ.ಡಿ. ರಂಗನಾಥ್ 2017-18 ರಲ್ಲಿ ತಮ್ಮ ಸಂಬಳವನ್ನು 60 ಶೇಕಡಾ ಹೆಚ್ಚಿಸಿಕೊಂಡಿದ್ದಾರೆ. ಅಧ್ಯಕ್ಷ ಮೋಹಿತ್ ಜೋಷಿ ಶೇಕಡಾ 50 ರಷ್ಟು ತಮ್ಮ ಇನ್ ಕಂ ಹೆಚ್ಚಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಯಾರೆಲ್ಲ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ ತಿಳಿಯಲು ಮುಂದೆ ಓದಿ.

ಅತೀ ಹೆಚ್ಚು ಸಂಬಳ ಪಡೆಯುವ ಇನ್ಫೋಸಿಸ್ ಅಧಿಕಾರಿಗಳು..!


1. ಸಲ್ಲೀಲ್ ಪರೇಕ್, CEO ಇನ್ಫೋಸಿಸ್ , 18.6 ಕೋಟಿ ರುಪಾಯಿ

ಇನ್ಫೋಸಿಸ್ ನ CEO ಆಗಿರುವ ಸಲ್ಲೀಲ್ ಪರೇಕ್ 18.6 ಕೋಟಿ ರುಪಾಯಿ ವಾರ್ಷಿಕ ಸಂಬಳ ಪಡೆಯುತ್ತಿದ್ದಾರೆ ಇದರಲ್ಲಿ ಅವರ ವೇರಿಯೇಬಲ್ ಕಾಂಪೋನೆಂಟ್ ಕೂಡ ಸೇರಿಕೊಂಡಿರುತ್ತದೆ.

2. ಎಂ.ಡಿ ರಂಗನಾಥ್, CFO, ಇನ್ಫೋಸಿಸ್ ,7.9 ಕೋಟಿ ರುಪಾಯಿ

ರಂಗನಾಥ್ ಅವರ ಸಂಬಳ 2017-18 ರ ವಾರ್ಷಿಕದಲ್ಲಿ 2016-17 ಕ್ಕೆ ಹೋಲಿಸಿದರೆ ಶೇಕಡಾ 68 ರಷ್ಟು ಹೆಚ್ಚಳವಾಗಿದ್ದು, 2016-17 ರಲ್ಲಿ 4.7 ಕೋಟಿ ರುಪಾಯಿ ಸಂಬಳ ಪಡಿದಿದ್ದ ರಂಗನಾಥ್ ಪ್ರಸಕ್ತ ಸಾಲಿನಲ್ಲಿ 7.9 ಕೋಟಿ ರುಪಾಯಿ ಸಂಬಳ ಪಡೆದಿದ್ದಾರೆ.

3. ಮೋಹಿತ್ ಜೋಷಿ..ಅಧ್ಯಕ್ಷರು, ಇನ್ಫೋಸಿಸ್ , 10.3 ಕೋಟಿ ರುಪಾಯಿ

ಜೋಷಿ ಸಂಬಳ 2017-18 ರಲ್ಲಿ ಶೇಕಡಾ 52 ರಷ್ಟು ಹೆಚ್ಚಳವಾಗಿದ್ದು,2016-17 ರಲ್ಲಿ ಅವರು 6.8 ಕೋಟಿ ರುಪಾಯಿ ಸಂಬಳ ಪಡೆದಿದ್ದರೆ ಈ ವರ್ಷ 10.3 ಕೋಟಿ ರುಪಾಯಿ ಸಂಬಳ ಪಡೆದಿದ್ದಾರೆ.

4. ರವಿ ಕುಮಾರ್, ಡೆಪ್ಯುಟಿ ಸಿಒಒ, ಇನ್ಪೋಸಿಸ್, 9.5 ಕೋಟಿ ರುಪಾಯಿ

2017-18 ರಲ್ಲಿ ಕುಮಾರ್ ಅವರ ಸಂಬಳ 36 ಶೇಕಡಾ ಅಧಿಕಗೊಂಡಿದ್ದು,2016-17 ರಲ್ಲಿ ಅವರು 7 ಕೋಟಿ ರುಪಾಯಿ ಸಂಬಳ ಪಡೆದಿದ್ದರೆ ಈ ವರ್ಷ 9.5 ಕೋಟಿ ರುಪಾಯಿ ಸಂಬಳ ಪಡೆದಿದ್ದಾರೆ.

5. ಕ್ರಿಶ್ ಶಂಕರ್, ಗ್ರೂಪ್ ಹೆಚ್ ಆರ್ ಹೆಡ್, ಇನ್ಫೋಸಿಸ್ , 4.2 ಕೋಟಿ

ಶಂಕರ್ ಸಂಬಳ 2017-18 ರಲ್ಲಿ 13 ಶೇಕಡಾ ಅಧಿಕಗೊಂಡಿದ್ದು,ಕಳೆದ ವರ್ಷ 2016-17 ರಲ್ಲಿ 3.7 ಕೋಟಿ ಸಂಬಳ ಪಡೆದಿದ್ದರು. ಈ ವರ್ಷ 4.2 ಕೋಟಿ ರುಪಾಯಿ ಸಂಬಳವನ್ನು ಅವರಿಗೆ ನೀಡಲಾಗಿದೆ.

6. ಯುಬಿ ಪ್ರವೀಣ್ ರಾವ್ , ಸಿಒಒ,ಇನ್ಫೋಸಿಸ್, 8.2 ಕೋಟಿ

ರಾವ್ ಸಂಬಳ 2017-18 ರಸಾಲಿನಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ 2016-17 ರಲ್ಲಿ 708 ಕೋಟಿ ರುಪಾಯಿ ಸಂಬಳವನ್ನು ಪಡೆದಿದ್ದರು. ಈ ವರ್ಷ 8.2 ಕೋಟಿ ರುಪಾಯಿ ಸಂಬಳವನ್ನು ಅವರು ಪಡೆದಿದ್ದಾರೆ.

Best Mobiles in India

English summary
6 top-paid executives at Infosys. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X