ಆಂಡ್ರಾಯ್ಡ್ ನಲ್ಲಿ ಕ್ರೋಮ್ ಬ್ರೌಸಿಂಗ್ ಶೇ.60%ರಷ್ಟು ಸುರಕ್ಷಿತ
ಬಳಕೆದಾರರಿಗೆ ಸುರಕ್ಷಿತವಾದ ಬ್ರೌಸಿಂಗ್ ಸೇವೆಯನ್ನು ನೀಡುವ ಸಲುವಾಗಿಯೇ ಗೂಗಲ್ ಅನೇಕ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಮತ್ತು ಡೆಸ್ಕಟಾಪ್ ಎರಡಕ್ಕೂ ಹೆಚ್ಚಿನ ಸುರಕ್ಷತೆಯನ್ನು ನೀಡಲು ಮುಂದಾಗಿದೆ.
ಆಂಡ್ರಾಯ್ಡ್ ನಲ್ಲಿ ಗೂಗಲ್ ಕ್ರೋಮ್ ಬಳಕೆ ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅದನ್ನು ಸುರಕ್ಷಿತಗೊಳಿಸಲು ಗೂಗಲ್ ಪ್ರಯತ್ನಿಸುತ್ತಿದ್ದು, ಗೂಗಲ್ ತಿಳಿಸಿರುವಂತೆ ಶೇ. 60 ರಷ್ಟು ಕ್ರೋಮ್ ಟ್ರಾಫಿಕ್ ಅನ್ನು ಸುರಕ್ಷಿತಗೊಳಿಸಲಾಗಿದೆ ಎನ್ನಾಗಿದೆ.

ಅಧ್ಯಾಯನದ ಪ್ರಕಾರ ಗೂಗಲ್ ಕ್ರೋಮ್ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಬ್ರೌಸರ್ ಆಗಿದೆ. ಅಲ್ಲದೇ ಅತೀ ಹೆಚ್ಚು ದಾಳಿಗೆ ಸಿಲುಕುವ ಬ್ರೌಸರ್ ಸಹ ಇದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಿವಿಧ ಪದರಗಳ ಸೆಕ್ಯೂರಿಟಿಯನ್ನು ಕ್ರೋಮ್ ಗೆ ನೀಡಲಾಗಿದೆ.
ಬಳಕೆದಾರರಿಗೆ ಸುರಕ್ಷಿತವಾದ ಬ್ರೌಸಿಂಗ್ ಸೇವೆಯನ್ನು ನೀಡುವ ಸಲುವಾಗಿಯೇ ಗೂಗಲ್ ಅನೇಕ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಮತ್ತು ಡೆಸ್ಕಟಾಪ್ ಎರಡಕ್ಕೂ ಹೆಚ್ಚಿನ ಸುರಕ್ಷತೆಯನ್ನು ನೀಡಲು ಮುಂದಾಗಿದೆ.
ಈಗಾಗಲೇ ಮ್ಯಾಕ್ ನಲ್ಲಿ ಬಳಸುವ ಕ್ರೊಮ್ ಗೆ ಶೇ.70 ಸುರಕ್ಷತೆಯನ್ನು ಗೂಗಲ್ ನೀಡಿದೆ. ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ನಲ್ಲಿ ಬಳಸುವವರಿಗೆ ಶೇ.60 ಸುರಕ್ಷತೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಸುಧಾರಿಸಿ 100ರಷ್ಟು ಸುರಕ್ಷತೆಯನ್ನು ನೀಡಲು ಯೋಜನೆ ರೂಪಿಸಿದೆ.
ಗೂಗಲ್ ಇದಕ್ಕಾಗಿಯೇ ಹಲವಾರು ಬದಲಾವಣೆಯನ್ನು ತನ್ನ ಸೆಕ್ಯೂರಿಟಿಯಲ್ಲಿ ತಂದಿದ್ದು, ಕೃತಕಬುದ್ಧಿ ಮತ್ತೆಯ ಸಹಾಯವನ್ನು ಪಡೆಯಲು ಮುಂದಾಗಿದೆ, ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯೂ ದೊರೆಯಲಿದೆ.

Click it and Unblock the Notifications