ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದರೆ ನೀವು ಸಿಟ್ಟಾಗುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

|

ನೀವು ನಿರಂತರವಾಗಿ ನಿಮ್ಮ ಫೋನಿನಲ್ಲಿ ಸಂದೇಶಗಳು ಮತ್ತು ನೋಟಿಫಿಕೇಶನ್ ಗಳನ್ನೂ ಪರಿಶೀಲಿಸುತ್ತೀರಿ. ಇಂಟರ್‌ನೆಟ್ ಸರಿಯಾಗಿ ಕನೆಕ್ಟ್ ಆಗದಿದ್ದರೆ ಅಥವಾ ಫೋನ್ ಬ್ಯಾಟರಿ ಖಾಲಿಯಾಗಿದ್ದರೆ ನೀವು ಸಿಟ್ಟಾಗುತ್ತೀರಿ ಎಂದಾದರೆ ನೀವು ಒಂದು ರೋಗಕ್ಕೆ ತುತ್ತಾಗಿದ್ದೀರಾ ಎದಂರ್ಥ. ಅಚ್ಚರಿ ಎಂದರೆ ಈ ರೋಗ ಈಗ ವಿಶ್ವದ ಒಂದು ಅತಿದೊಡ್ಡ ಸಾಮೂಹಿಕ ರೋಗ.!

ಹೌದು, ಸ್ಮಾರ್ಟ್‌ಫೋನಿನ ಗೀಳಿಗೆ ಬಿದ್ದು ಈ ರೀತಿಯಲ್ಲಿ ವರ್ತಿಸುವವರನ್ನು ನೋಮೋಫೋಬಿಯಾ ಎಂಬ ರೋಗವೊಂದು ಆಕ್ರಮಿಸಿಕೊಂಡಿದೆ. ವಿಶ್ವದಾದ್ಯಂತದ ಹೆಚ್ಚಿನ ಜನರು ಈ ನೋಮೋಫೋಬಿಯಾಕ್ಕೆ ಒಳಗಾಗಿದ್ದಾರೆ. ಅದರಲ್ಲಿಯೂ ನೋಮೋಫೋಬಿಯಾಗೆ ಭಾರತೀಯರು ವೇಗವಾಗಿ ಬಲಿಯಾಗುತ್ತಿದ್ದಾರೆ ಎಂಬ ಹೊಸ ಸುದ್ದಿ ಕಳವಳಕಾರಿ ವಿಷಯವಾಗಿದೆ.

ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದರೆ ನೀವು ಸಿಟ್ಟಾಗುತ್ತೀರಾ?..ಈ ಸ್ಟೋರಿ ನೋಡಿ!!

ಭಾರತೀಯರು ಪ್ರತಿ 4 ರಿಂದ 6 ನಿಮಿಷಗಳಿಗೊಮ್ಮೆ ಮೊಬೈಲ್ ಪರಿಶೀಲಿಸುತ್ತಾರೆ. ವಿಶ್ವದಲ್ಲೇ ಅತಿ ಕಡಿಮೆ ನಿದ್ರೆ ಮತ್ತು 74% ಬಳಕೆದಾರರು ಫೋನ್ ಅನ್ನು ಜೊತೆಯಲ್ಲೇ ಹಿಡಿದು ಮಲಗುತ್ತಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ ಹಾಗಾದರೆ, ಏನಿದು ವರದಿ? ನೋಮೋಫೋಬಿಯಾದಿಂದ ದೂರಾಗುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನಿಮ್ಮನ್ನೂ ಮೊಬೈಲ್ ಗೀಳು ಕಾಡುತ್ತಿದೆಯೇ?

ನಿಮ್ಮನ್ನೂ ಮೊಬೈಲ್ ಗೀಳು ಕಾಡುತ್ತಿದೆಯೇ?

ಭಾರತದಲ್ಲಿ ನೊಮೊ ಫೋಬಿಯಾದ ಸಂತ್ರಸ್ತರನ್ನು ಗುರುತಿಸಲು ಪ್ರಯತ್ನಿಸಿದಾಗ, ಹೆಚ್ಚಿನ ಜನರು ನೊಮೊ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂಬುದು ಅಧ್ಯಯನ ಒಂದಿಂದ ತಿಳಿದುಬಂದಿದೆ. ದುರದೃಷ್ಟಕರ ಸಂಗತಿಯೆಂದರೆ ತಾವು ನೋಮೋಫೋಬಿಯಾಗೆ ಒಳಗಾಗಿರುವುದು ಹೆಚ್ಚಿನ ಮೊಬೈಲ್ ಬಳಕೆದಾರರಿಗೇ ತಿಳಿದಿಲ್ಲ ಎಂದು ಸಂಶೋಧನೆ ಹೇಳಿದೆ.

150 ಬಾರಿ ಫೋನ್ ಬಳಸುತ್ತಾರೆ!

150 ಬಾರಿ ಫೋನ್ ಬಳಸುತ್ತಾರೆ!

ಭಾರತೀಯರು ಪ್ರತಿ 4 ರಿಂದ 6 ನಿಮಿಷಗಳಿಗೊಮ್ಮೆ ಮೊಬೈಲ್ ಪರಿಶೀಲಿಸುತ್ತಾರೆ. 74% ಬಳಕೆದಾರರು ಫೋನ್ ಅನ್ನು ಜೊತೆಯಲ್ಲೇ ಹಿಡಿದು ಮಲಗುತ್ತಾರೆ. ದಿನಕ್ಕೆ ಕನಿಷ್ಟವೆಂದರೂ 150 ಬಾರಿ ಫೋನ್ ಬಳಸುತ್ತಾರೆ ಎಂದು ಅಧ್ಯಯನ ಹೇಳಿದೆ. ಇವೆಲ್ಲವಕ್ಕಿಂತ ಹೆಚ್ಚಾಗಿ, ಸ್ಮಾಟ್‌ಫೋನ್ ಗೀಳಿಗೆ ಬಿದ್ದ ಭಾರತೀಯರು ವಿಶ್ವದಲ್ಲೇ ಅತಿ ಕಡಿಮೆ ನಿದ್ರಿಸುತ್ತಿದ್ದಾರೆ ಎಂದು ಹೇಳಿದೆ.

ನೋಟಿಫಿಕೇಷನ್ಸ್ ಬಂದ್‌ ಮಾಡಿ.

ನೋಟಿಫಿಕೇಷನ್ಸ್ ಬಂದ್‌ ಮಾಡಿ.

ಪ್ರತಿಸಾರಿ ಮೊಬೈಲ್‌ ಟಿಂಗ್ ಎಂದಾಗಲೂ ತೆರೆದು ನೋಡುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇಂತಹ ನೋಟಿಫಿಕೇಷನ್‌ಗಳು ಮೊಬೈಲ್ ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಹಾಗಾಗಿ, ತೀರಾ ಅಗತ್ಯವಿರುವ ಸಂಗತಿಗಳನ್ನು ಬಿಟ್ಟು ಉಳಿದವುಗಳ ನೋಟಿಫಿಕೇಷನ್‌ಗಳನ್ನು ಡಿಆಕ್ಟಿವೇಟ್ ಮಾಡುವ ಮೂಲಕ ಮೊಬೈಲ್ ಅನ್ನು ನಿಯಂತ್ರಿಸಬಹುದು.

ಮಲಗಿದ್ದಾಗ ಫೋನ್‌ ಬೇಡ

ಮಲಗಿದ್ದಾಗ ಫೋನ್‌ ಬೇಡ

ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಇನ್‌ಸ್ಟಗ್ರಾಮ್‌ನಂತಹ ಜಾಲತಾಣಗಳಿಂದ ರಾತ್ರಿ ಮಲಗುವ ಮುನ್ನ ದುರವಿರಿ. ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮೊಬೈಲ್‌ನಿಮದ ದೂರವಿರಿ. ನೀವು ಹಾಸಿಗೆಯಲ್ಲಿ ಕಳೆಯುವ ಸಮಯ, ಬೆಳಗ್ಗೆ ಏಳುವ ಮುನ್ನದ ಗಳಿಗೆಗಳು ನಿಮ್ಮ ಅತ್ಯಂತ ಖಾಸಗಿ ಕ್ಷಣಗಳು. ಅಂತಹ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.

ನಿಮಗೆ ನೀವೇ ಟೈಮರ್!

ನಿಮಗೆ ನೀವೇ ಟೈಮರ್!

ಮೊಬೈಲ್‌ ತೆರೆಯುವಾಗ ಇಂತಿಷ್ಟೇ ಸಮಯ ಇದನ್ನು ನೋಡುತ್ತೇನೆ ಎಂಬ ಸಮಯಮಿತಿಯನ್ನು ಹಾಕಿಕೊಳ್ಳಿ. ಆದರೆ ನೋಡುತ್ತಾ ಹೋದರೆ ಸಮಯ ದಾಟಿದ್ದೇ ತಿಳಿಯುವುದಿಲ್ಲ. ಅದಕ್ಕೇ ನೀವು ಅಂದುಕೊಂಡ ಸಮಯಕ್ಕೆ ಅಲಾರ್ಮ್ ಸೆಟ್‌ ಮಾಡಿಕೊಳ್ಳಿ. ಅದು ಸೂಚನೆ ನೀಡಿದ ಕೂಡಲೇ ನಿರ್ದಾಕ್ಷಿಣ್ಯವಾಗಿ ಮೊಬೈಲ್‌ ಅನ್ನು ಬದಿಗಿಡಿ.

ನಿರ್ದಿಷ್ಟ ಉದ್ದೇಶ ಇರಲಿ!

ನಿರ್ದಿಷ್ಟ ಉದ್ದೇಶ ಇರಲಿ!

ಒಂದು ಬಾರಿ ಮೊಬೈಲ್‌ ತೆರೆದಾಗ ಒಂದು ಕೆಲಸವನ್ನು ಮಾತ್ರ ಮಾಡುತ್ತೇನೆ ಎಂದು ನಿರ್ಧರಿಸಿ. ನಿರ್ದಿಷ್ಟ ಉದ್ದೇಶ ಈಡೇರಿದ ಬಳಿಕ ನಿಮ್ಮ ಫೋನ್‌ ಕೆಳಗಿಡಿ. ಒಮ್ಮೆ ಬಳಸಿದ ನಂತರ ಆಪ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿ. ಕಿರಿಕಿರಿ ಆಗುತ್ತಿದೆ ಎನಿಸಿದ ಆಪ್‌ಗಳನ್ನು ಹೈಡ್ ಮಾಡಿ ಅಥವಾ ಡಿಲೀಟ್ ಮಾಡಿದರೂ ತೊಂದರೆ ಏನಿಲ್ಲ.

ಸೋಶಿಯಲ್ ಸೈಟ್‌ ಏಕೆ?

ಸೋಶಿಯಲ್ ಸೈಟ್‌ ಏಕೆ?

ಒಂದು ತಿಂಗಳು ಅಥವಾ ವರ್ಷವೇ ಟ್ವಿಟ್ಟರ್‌, ಫೇಸ್‌ಬುಕ್‌ನಿಂದ ಆಚೆಗೆ ಇದ್ದರೆ ಆಕಾಶವೇನೂ ಮುಳುಗಿಹೋಗುವುದಿಲ್ಲ.ಬದಲಿಗೆ ನಿಮ್ಮ ಪಾಲಿಗೆ ಓದಲು, ಚಿಂತಿಸಲು ಕ್ವಾಲಿಟಿ ಟೈಮ್‌ ಉಳಿಯುತ್ತದೆ. ಕೆಲವು ಸೋಶಿಯಲ್ ಸೈಟ್‌ಗಳಿಂದ ಆಗಾಗ ಹೊರಗೆ ಹೋಗುವುದು, ಕೆಲವು ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

ಆಪ್‌ಗಳನ್ನು ಹೈಡ್ ಮಾಡಿ.

ಆಪ್‌ಗಳನ್ನು ಹೈಡ್ ಮಾಡಿ.

ಇದು ಒಂದು ವಿಶೇಷ ತಂತ್ರವಾಗಿದ್ದು, ನೀವು ಮೊಬೈಲ್‌ ತೆರೆದು ನೋಡಿ ಯಾವುದೇ ಆಪ್‌ ನೋಡಿದರು ಮನಸ್ಸು ಸಲೀಸಾಗಿ ಅದರ ಹತ್ತಿರ ವಾಲುತ್ತದೆ. ನೀವು ಮೊಬೈಲ್ ಅನ್ನು ತೆಗೆದಾಗ ಪ್ರತಿಯೊಂದು ಆಪ್ ಅನ್ನು ಚೆಕ್ ಮಾಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಹೆಚ್ಚು ಸೆಳೆಯುವಂತಹ ಆಪ್‌ಗಳಿಗಳನ್ನು ಹೈಡ್ ಮಾಡಿಡುವುದು ಒಳ್ಳೆಯದು.

Most Read Articles
Best Mobiles in India

English summary
For many smartphone owners, checking their phones is among the first and last things they do every day, with 61 per cent respondents saying they look at their devices within 5 minutes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more