Home
ಸುದ್ದಿಜಾಲ

ಮಂಗಳ ಪ್ರವಾಸ: ಅಂತಿಮ ಸುತ್ತಿಗೆ 62 ಭಾರತೀಯರು ಆಯ್ಕೆ

By Ashwath

ಏಕಮುಖ ಮಂಗಳ ಪ್ರವಾಸದ 1 ಸಾವಿರ ಮಂದಿಯ ಅಂತಿಮ ಸುತ್ತಿನ ಪಟ್ಟಿ ಸಿದ್ದವಾಗಿದ್ದು, ಈ ಪಟ್ಟಿಯಲ್ಲಿ 62 ಮಂದಿ ಭಾರತೀಯರು ಸ್ಥಾನಗಿಟ್ಟಿಸಿದ್ದಾರೆ.

2023ರ ವೇಳೆಗೆ ಮಂಗಳನಲ್ಲಿ ಕಾಯಂ ಕಾಲೋನಿ ನಿರ್ಮಿ‌ಸಲು ಉದ್ದೇಶಿಸಿ 'ಮಾರ್ಸ್ ಒನ್‌' ಪ್ರಾಜೆಕ್ಟ್‌‌ನ್ನು ಹಮ್ಮಿಕೊಳ್ಳಲಾಗಿದೆ. ಇದು ಒನ್ ವೇ ಟ್ರಿಪ್ ಆಗಿದ್ದು, ಅಲ್ಲಿ ಹೋದವರು ಮರಳಿ ಭೂಮಿಗೆ ಬರುವಂತಿಲ್ಲ.

ಯೋಜನೆಗೆ ಸಹಿ ಹಾಕಿದ ಜನರಲ್ಲಿ 1,058 ಜನರ ಅಂತಿಮ ಸುತ್ತಿನ ಪಟ್ಟಿ ತಯಾರಾಗಿದ್ದು ಪಟ್ಟಿಯಲ್ಲಿ ಅಮೆರಿಕದಿಂದ ಹೆಚ್ಚಿನ ಜನ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿಗೆ ಆಯ್ಕೆಯಾದ ದೇಶಗಳ ಪೈಕಿ ಅಮೆರಿಕ(297 ಜನ),ಕೆನಡಾ(75 ಜನ),ಭಾರತ(62 ಜನ)ರಷ್ಯಾದ(52 ಜನ) ಆಯ್ಕೆಯಾಗಿದ್ದಾರೆ.

ಅಂತಿಮ ಸುತ್ತಿನಲ್ಲಿ ಬಂದಿರುವ ಅರ್ಜಿ‌ಯನ್ನು ಪರಿಶೀಲಿಸಿ ವಿವಿಧ ರಾಷ್ಟ್ರಗಳ 40 ಜನರನ್ನು ಈ ಯಾನಕ್ಕೆ ಆರಿಸಲಾಗುವುದು. ನಂತರ ಈ 40 ಜನರನ್ನು,ನಾಲ್ಕು ಜನರಿರುವ ಹತ್ತು ತಂಡಗಳಾಗಿ ವಿಂಗಡಿಸಿ,ಅಂತಿಮ ಹೆಸರನ್ನು 'ಮಾರ್ಸ್ ಒನ್‌' ಪ್ರಾಜೆಕ್ಟ್ ತಂಡ ಆಯ್ಕೆ ಮಾಡಲಿದೆ.ಈ ನಾಲ್ಕು ಮಂದಿಯಲ್ಲಿ ತಲಾ ಇಬ್ಬರು ಪುರುಷರು ಮತ್ತು ಮಹಿಳೆಯರು 2022ರ ಸೆಪ್ಟೆಂಬರ್‌ನಲ್ಲಿ ಪ್ರಯಾಣ ಆರಂಭಿಸಲಿದ್ದು,2023ರ ಏಪ್ರಿಲ್‌ನಲ್ಲಿ ಮಂಗಳನಲ್ಲಿ ಇಳಿಯುವಂತೆ ವೇಳಾಪಟ್ಟಿ ತಯಾರಾಗಿದೆ.

2011 ಜನವರಿಯಿಂದ ಆರಂಭಗೊಂಡ ಈ ಮಾರ್ಸ್‌ ಒನ್‌ ಪ್ರಾಜೆಕ್ಟ್‌ ಕಳೆದ ವರ್ಷದ ಮೇ ತಿಂಗಳಿನಲ್ಲಿ 78 ಸಾವಿರ ಜನರು ಸಹಿ ಹಾಕಿದ್ದರು. ನಂತರ ಈ ಪ್ರಾಜೆಕ್ಟ್‌ ಸುದ್ದಿ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗಿ ಹೆಚ್ಚಿನ ಜನರು ಈ ಪ್ರಾಜೆಕ್ಟ್‌ ಸಹಿ ಹಾಕಲು ಆರಂಭಿಸಿದ್ದರು. ಅಗಸ್ಟ್‌ 31 ಸಹಿ ಹಾಕಲು ಅಂತಿಮ ದಿನ ನಿಗದಿಯಾಗಿತ್ತು.ಈ ಡೆಡ್‌ ಲೈನ್ ಸಮೀಪಿಸುತ್ತಿದ್ದಂತೆ, ಒಟ್ಟು 140 ದೇಶಗಳಿಂದ 2ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಗೆ ಸಹಿ ಹಾಕಿದ್ದರು.

ಮಂಗಳ ಗ್ರಹದ ಪ್ರಯಾಣದ ನೋಂದಣಿಗೆ ಸುಮಾರು 20 ಸಾವಿರಕ್ಕೂ ಅಧಿಕ ಭಾರತೀಯರು ಸಹಿ ಹಾಕಿದ್ದರು.ಈ ಮೂಲಕ ಮಾರ್ಸ್‌ ಒನ್‌ ಪ್ರಾಜೆಕ್ಟ್‌ಗೆ ನೋಂದಣಿ ಮಾಡಿಕೊಂಡ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನ ಪಡೆದಿತ್ತು.

ಮುಂದಿನ ಪುಟದಲ್ಲಿ ಈ ಯೋಜನೆಯ ಟೈಮ್‌ಲೈನ್‌ ಮತ್ತು ಯೋಜನೆಯನ್ನು ವಿವರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌

ಮಾರ್ಸ್‌ ಮಾರ್ಸ್ ಒನ್‌ ಪ್ರಾಜೆಕ್ಟ್ ಸ್ಥಾಪನೆ
ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಏಪ್ರಿಲ್‌ನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಗಗನಯಾತ್ರಿ ಆಯ್ಕೆಯ ಬಗ್ಗೆ ಅರ್ಜಿ ಆಹ್ವಾನ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌

ಆಯ್ಕೆಯಾದ ಜನರಿಗೆ ತರಬೇತಿ ಆರಂಭ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಮಂಗಳ ಮತ್ತು ಭೂಮಿ ನಡುವೆ ಸಂವಹನಕ್ಕಾಗಿ ಉಪಗ್ರಹ ಉಡಾವಣೆ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ರೋವರ್‌ ಉಪಗ್ರಹ ಉಡಾವಣೆ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಯಾನಿಗಳು ಮಂಗಳ ಗ್ರಹದಲ್ಲಿ ವಾಸ ಮಾಡಲು ಎರಡು ಲೈಫ್ ಸಪೋರ್ಟ್ ಸಿಸ್ಟಮ್ಸ್, ಎರಡು ಸರಬರಾಜು ಘಟಕಗಳು( Life Support Systems, and two Supply Units) ಮೇ ತಿಂಗಳಿನಲ್ಲಿನೌಕೆಯ ಮೂಲಕ ಕಳುಹಿಸಲಾಗುತ್ತದೆ. 2021ಕ್ಕೆ ಮಂಗಳ ಗ್ರಹದಲ್ಲಿ ಈ ನೌಕೆ ಇಳಿಯಲಿದೆ.

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಏಪ್ರಿಲ್‌ನಲ್ಲಿ ಮಂಗಳ ಗ್ರಹಕ್ಕೆ ತೆರಳಲು ಭೂಮಿಯಿಂದ ಪ್ರಯಾಣ ಆರಂಭ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಮಂಗಳ ಗ್ರಹದಲ್ಲಿ ಇಳಿಯಲಿರುವ ಯಾನಿಗಳು

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ಅಕ್ಟೋಬರ್‌ನಲ್ಲಿ ಎರಡನೇ ತಂಡದಿಂದ ಮಂಗಳ ಗ್ರಹಕ್ಕೆ ಪ್ರಯಾಣ ಆರಂಭ

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌


ವಿಡಿಯೋ ವೀಕ್ಷಿಸಿ

ಏಕಮುಖ ಮಂಗಳ ಪ್ರವಾಸದ  ಟೈಮ್‌ಲೈನ್‌

ಏಕಮುಖ ಮಂಗಳ ಪ್ರವಾಸದ ಟೈಮ್‌ಲೈನ್‌

ಮಾರ್ಸ್ ಒನ್‌ ಪ್ರಾಜೆಕ್ಟ್ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ:www.mars-one.com

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+