ಟೆಕ್‌ ಕ್ಷೇತ್ರದಲ್ಲಿ ಎಲ್ಲಾಕಾಲಕ್ಕೂ ಉತ್ತಮ ಸೇಲ್ಸ್‌ಮನ್‌ಗಳು ಯಾರು ಗೊತ್ತೇ?

By Suneel
|

ಜಾಗತಿಕವಾಗಿ ಟೆಕ್‌ ಕ್ಷೇತ್ರದ ಕೋಟ್ಯಾಧಿಪತಿಗಳು ಎನಿಸಿಕೊಂಡಿರುವ ಟೆಕ್‌ ನಾಯಕರ ಬಗ್ಗೆ ಹೇಳೋದಾದ್ರೆ ಅವರು ಅತ್ಯುತ್ತಮ ಮಾರಾಟಗಾರರು ಎಂದು ಹೇಳಬಹುದು. ಯಾವುದೇ ಒಂದು ಟೆಕ್‌ ಉತ್ಪನ್ನ ಸಂಶೋಧಿಸುವ ಮುನ್ನ ಅದನ್ನು ಹೇಗೆ ಉತ್ತಮವಾಗಿ ಮಾರಾಟ ಮಾಡಬಹುದು, ಕಂಪನಿಯನ್ನು ಹೇಗೆ ಅಭಿವೃದ್ದಿಗೊಳಿಸಬಹುದು ಎಂದು ತಿಳಿದಿದ್ದರೆ ಮಾತ್ರ ಅಂತಹವರು ಟೆಕ್‌ ಕ್ಷೇತ್ರದ ಉತ್ತಮ ಮಾರಾಟಗಾರರು ಆಗುತ್ತಾರೆ. ಅಲ್ಲದೇ ಟೆಕ್‌ ದಿಗ್ಗಜರು ಸಹ ಆಗುತ್ತಾರೆ. ಇದಕ್ಕೆ ಉದಾಹರಣೆಯಾಗಿ ಇಂದಿನ ಲೇಖನದಲ್ಲಿ ಟಾಪ್‌ ಟೆಕ್‌ ಕ್ಷೇತ್ರದ ಉತ್ತಮ ಮಾರಾಟಗಾರರು ಯಾರು, ಅವರು ಯಾವ ಕಂಪನಿಯ ಮಾರಾಟಗಾರರಾಗಿದ್ದರು ಎಂದು ತಿಳಿಸುತ್ತಿದ್ದೇವೆ.

1

1

ಮಾರ್ಕ್‌ ಬೆನಿಯಾಫ್'ರವರು ಓರಾಕಲ್‌ನ ಯುವ ಸ್ಟಾರ್‌ ಸೇಲ್ಸ್‌ಮನ್‌ ಎಂತಲೇ ಪ್ರಸಿದ್ದಿಯಾಗಿದ್ದರು. ನಂತರ ಇವರು ಅಲ್ಲಿ ಯುವಕರಾಗಿದ್ದಗಲೇ ಓರಾಕಲ್ ಟೆಕ್‌ ಕಂಪನಿಯ ಉಪಾಧ್ಯಕ್ಷರಾದರು. ಆದರೆ ಪುನಃ ಮರಳಿ ಇವರು ತಮ್ಮ ಸೇಲ್ಸ್‌ಫೋರ್ಸ್‌ಗೆ ಬಂದರು.

2

2

ಬೆನಿಯಾಫ್‌'ರವರು ತಮ್ಮ ಸೇಲ್ಸ್‌ ಶಾಪ್‌ ಅನ್ನು ಲಾರಿ ಎಲಿಸನ್‌'ರವರಿಂದ ಪಡೆದುಕೊಂಡರು. ಅಂದಹಾಗೆ ಲಾರಿ ಎಲಿಸನ್‌'ರವರು ಓರಾಕಲ್‌ನಲ್ಲಿ ಅತ್ಯುತ್ತಮ ಮಾರಾಟ ಪರಿಸರವನ್ನು ಸೃಷ್ಟಿಸಿದರು. ಪ್ರಸ್ತುತದಲ್ಲಿ $38 ಬಿಲಿಯನ್‌ ಲಾಭಗಳಿಸುವ ಹಾಗೆ ಅಭಿವೃದ್ದಿಪಡಿಸಿದ್ದಾರೆ.

3

3

ಆಪಲ್‌ ಕಂಪನಿಯು ಇಂದು ದೊಡ್ಡ ಕಂಪನಿಯಾಗಿ ಬೆಳೆಯಬೇಕಾದರೆ ಅದಕ್ಕೆ ಕಾರಣ ಆಪಲ್‌'ನ ಸಹ ಸಂಸ್ಥಾಪಕರಾದ ಸ್ಟೀವ್‌ ಜಾಬ್ಸ್‌'ರವರ ಮಾರಾಟ ತಂತ್ರವೇ ಕಾರಣ. ಇವರ ಮಾರಾಟ ತಂತ್ರದಿಂದ ಪ್ರತಿ ಪ್ರಾಡಕ್ಟ್‌ ಸಹ ಆಪಲ್‌ನಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಪ್ರಪಂಚದಾದ್ಯಂತ ಮೌಲ್ಯ ಕಂಪನಿ ಎಂದು ಸಹ ಆಪಲ್‌ ಹೆಸರು ಪಡೆದಿದೆ. ಅಂದಹಾಗೆ ಸ್ಟೀವ್‌ ಜಾಬ್ಸ್‌'ರನ್ನು ಪ್ರಖ್ಯತಾ ಮಾರಾಟಗಾರ ಎಂದು ಸಹ ಕರೆಯುತ್ತಾರೆ.

4

4

ಮೈಕ್ರೋಸಾಫ್ಟ್‌ ಟೆಕ್‌ ಕಂಪನಿಯ ಮೊಟ್ಟ ಮೊದಲ ಮಾರಾಟಗಾರರೆಂದರೆ ಸ್ಟೀಮ್‌ ಬಾಲ್ಮರ್‌'ರವರು. ಬಾಲ್ಮರ್‌'ರವರ ಮಾರಾಟ ಕಲೆಯು ಬಿಲ್‌ ಗೇಟ್ಸ್'ರ ಸಣ್ಣ ಕಂಪನಿಯನ್ನು ಪ್ರಪಂಚದ ದೊಡ್ಡ ಸಾಫ್ಟ್‌ವೇರ್‌ ಮೇಕರ್‌ ಆಗಲು ಸಹಾಯ ಮಾಡಿತು. ಇವರು ಬಿಲ್‌ ಗೇಟ್ಸ್‌'ರವರಿಂದ 200೦ ದಲ್ಲಿ ಸಿಇಓ ಸ್ಥಾನವನ್ನು ಪಡೆದರು.

5

5

ಡೆಲ್‌ ಕಂಪನಿಯು ಪ್ರಾಥಮಿಕ ಹಂತದಲ್ಲೇ ಅತ್ಯುತ್ತಮ ಮಾರಾಟಗಾರರನ್ನು ಪಡೆಯಿತು. ಮೈಕೆಲ್‌ ಡೆಲ್‌'ರವರು ತಮ್ಮ ಪ್ರೌಢಶಾಲಾ ಹಂತದಲ್ಲೇ $18,000 ಪ್ರತಿ ವರ್ಷಕ್ಕೆ ನ್ಯೂಸ್‌ ಸಬ್‌ಸ್ಕ್ರಿಪ್ಸನ್‌ನಿಂದ ಗಳಿಸುತ್ತಿದ್ದರಂತೆ. ನಂತರ ತಮ್ಮ ಕಾಲೇಜು ಹಂತದಲ್ಲಿ ಮಕ್ಕಳಿಗಾಗಿ ಡೆಲ್‌ ಎಂದು ಕಂಪ್ಯೂಟರ್ ಅಪ್‌ಗ್ರೇಡ್‌ ಮಾಡಿ ಮಾರಾಟ ಮಾಡಲಾರಂಭಿಸಿದರಂತೆ. ಇಂದು ಪ್ರಪಂಚದ ಉತ್ತಮ ಕಂಪ್ಯೂಟರ್ ತಯಾರಕರು ಆಗಿ ಹೆಸರು ಪಡೆದಿದೆ ಡೆಲ್‌ ಕಂಪನಿ.

6

6

ಮಾರ್ಕ್‌ ಕ್ಯೂಬನ್'ರವರು ಡಲ್ಲಾಸ್‌ ಮೇವರಿಕ್' ಬಾಸ್ಕೆಟ್‌ ಟೀಮ್‌ನ ಮಾಲೀಕರು. ಪ್ರಸ್ತುತದಲ್ಲಿ ಇವರು ಕಂಪ್ಯೂಟರ್‌ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಬಂಡವಾಳಿಶಾಹಿಗಳಾಗಿದ್ದಾರೆ. ಇವರ ಮಾರಾಟ ಕಲೆಯಿಂದ ಕೇವಲ 9 ತಿಂಗಳಲ್ಲಿ $15,000 ಲಾಭ ಗಳಿಸಿದರು. ನಂತರದಲ್ಲಿ ಇವರೇ ಒಮದು ಪಿಸಿ ಸಲಹಾ ಉದ್ಯಮವನ್ನು ಆರಂಭಿಸಿದರು. Broadcast.com ಎಂಬ ಕಂಪನಿಯನ್ನು ಸಹ ಆರಂಭಿಸಿದರು.

7

7

ಡೇವಿಡ್‌ ಸ್ಯಾಕ್ಸ್‌ರವರು ಕಂಪನಿಗಳ ಸ್ಥಾಪನೆ ಮತ್ತು ಬಿಲಿಯನ್‌ ಗಟ್ಟಲೇ ಬೆಲೆಗೆ ಅವರ ಕಂಪನಿಗಳನ್ನು ಮಾರಾಟ ಮಾಡಿದ ಇತಿಹಾಸ ಹೊಂದಿದ್ದಾರೆ. ಇವರು ಪೇಪಾಲ್ಸ್ eBay $1.5 ಬಿಲಿಯನ್‌'ಗೆ 2002 ರಲ್ಲಿ ಮಾರಾಟವಾದ ನಂತರ ಪೇಪಾಲ್ಸ್‌ನ ಪ್ರಧಾನ ವ್ಯವಸ್ಥಾಪಕ ಅಧಿಕಾರಿಯಾಗಿದ್ದಾರೆ. ಅಲ್ಲದೇ ಇವರ ನಂತರದ Yammer ಉದ್ಯಮ ಮೈಕ್ರೋಸಾಫ್ಟ್‌ $1.2 ಬಿಲಿಯನ್‌ಗೆ ಮಾರಾಟವಾಯಿತು. ಪ್ರಸ್ತುತದಲ್ಲಿ ಇವರು Zenefits (ಆನ್‌ಲೈನ್‌ ಎಚ್‌ಆರ್‌ ಸಾಫ್ಟ್‌ವೇರ್‌) ಉದ್ಯಮದ ಸಿಇಓ ಆಗಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?

ಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲ

ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
7 best salesmen of technology industry globally. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X