ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಈ ಏಳು ಪುಸ್ತಕಗಳನ್ನು ಓದಲು ಹೇಳುತ್ತಿದ್ದಾರೆ
ಪುಸ್ತಕ ಓದುವ ಹವ್ಯಾಸ ನಿಮ್ಮದಾಗಿದ್ದಲ್ಲಿ, ಬಿಡುವಿನ ಸಮಯದಲ್ಲಿ ಪುಸ್ತಕವೇ ನಿಮ್ಮ ಸಂಗಾತಿಯಾಗಿದ್ದಲ್ಲಿ ಈ ಲೇಖನವನ್ನು ನೀವು ಓದಲೇ ಬೇಕು. ಯಾಕೆಂದರೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ನ ಕೋ ಫೌಂಡರ್ ಆಗಿರುವ ಬಿಲ್ ಗೇಟ್ಸ್ ತಾವು ಇಷ್ಟಪಟ್ಟ ಕೆಲವು ಪುಸ್ತಕಗಳನ್ನು ನಿಮಗೆ ಓದುವಂತೆ ಸಲಹೆ ನೀಡಿದ್ದಾರೆ. ಹಾಗಾದ್ರೆ ಗೇಟ್ಸ್ ಹೇಳಿದ ಪುಸ್ತಕಗಳು ಯಾವುವು ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

Upheaval: ಜೇರ್ಡ್ ಡೈಮಂಡ್ ಅವರಿಂದ
ಗೇಟ್ಸ್ ಈ ಪುಸ್ತಕದ ಬಗ್ಗೆ ಬರೆದಿರುವಂತೆ ಇದರಲ್ಲಿ ಕ್ರೈಸಿಸ್ ನ ಸಮಯದಲ್ಲಿ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇದರಲ್ಲಿ ವರ್ಣಿಸಲಾಗಿದೆ. ಗೇಟ್ಸ್ ಹೇಳುವ ಪ್ರಕಾರ ಈ ಪುಸ್ತಕದ ಲೇಖಕರು ನಾಗರೀಕ ಯುದ್ಧ,ವಿದೇಶಿ ಬೆದರಿಕೆಗಳು ಮತ್ತು ಸಾಮಾನ್ಯ ಅಸ್ವಸ್ಥತೆಗಳಂತಹ ಕೆಲವು ವಿಚಾರಗಳನ್ನು ದೇಶ ಹೇಗೆ ಎದುರಿಸಿತ್ತು ಎಂಬ ಬಗೆಗಿನ ಕೇಸ್ ಸ್ಟಡಿಯ ಸಹಿತ ವಿವರಿಸುವ ಪ್ರಯತ್ನ ನಡೆಸಿದ್ದಾರೆ. ಈ ಪುಸ್ತಕ ಸ್ವಲ್ಪ ಖಿನ್ನತೆಯನ್ನುಂಟು ಮಾಡುತ್ತದೆ ಆದರೆ ಪೂರ್ತಿ ಓದಿ ಮುಗಿಸಿದಾಗ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದ ಕುರಿತು ಹೆಚ್ಚು ಆಶಾವಾದವನ್ನು ನಾನು ಹೊಂದಿದ್ದೇನೆ ಎಂದು ಗೇಟ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ನೈನ್ ಪಿಂಟ್ಸ್: ರೋಸ್ ಚಾರ್ಜಿಂದ
ನೈನ್ ಪಿಂಟ್ಸ್: ರೋಸ್ ಚಾರ್ಜಿಂದ

ಮಾಸ್ಕೋದಲ್ಲಿ ಜೆಂಟಲ್ ಮೆನ್ : ಅಮೋರ್ ಟೌವೆಲ್ಸ್ ಅವರಿಂದ
ಈ ಪುಸ್ತಕವು ತಮಾಷೆಯಾಗಿ, ಬುದ್ಧಿವಂತಿಕೆಯಿಂದ ಮತ್ತು ಆಶ್ಚರ್ಯಕರವಾಗಿರುವ ಲವಲವಿಕೆಯಿಂದ ಕೂಡಿದೆ.ಮಾಸ್ಕೋ ಹೋಟೆಲ್ ನಲ್ಲಿ ಗೃಹಬಂಧನದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಕುರಿತ ಒಂದು ಕಾದಂಬರಿ ಇದಾಗಿದ್ದು ಓದುವುದಕ್ಕೆ ಕುತೂಹಲಕಾರಿಯಾಗಿದೆ ಎಂದು ಗೇಟ್ಸ್ ಹೇಳುತ್ತಾರೆ.

ಪ್ರಸಿಡೆಂಟ್ ಆಫ್ ವಾರ್: ಮೈಕೆಲ್ ಬೆಷ್ಲಾಸ್ ಅವರಿಂದ
ಗೇಟ್ಸ್ ತಿಳಿಸುವಂತ ಈ ಪುಸ್ತಕ ಓದಿದ ನಂತರ ಅವರು ಕೇವ ವಿಯೆಟ್ನಾಂ ಬಗ್ಗೆ ಮಾತ್ರ ಅಲ್ಲ ಇತರೆ ಪ್ರಮುಖ ಯುಎಸ್ ನ ಕಾನ್ಫಿಕ್ಟ್ ಗಳ ಬಗ್ಗೆ ಅವರು ಅರಿತಿದ್ದಾರಂತೆ ಮತ್ತು 1970 ಮತ್ತು 19 ನೇ ಶತಮಾನದ ಕೆಲವು ವಿಚಾರಗಳು ಇದರಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ. ಅಧ್ಯಕ್ಷೀಯ ನಾಯಕತ್ವದ ಬಗ್ಗೆ ಕೆಲವು ವಿಚಾರಗಳ ವಿಮರ್ಷೆಯನ್ನು ನಿಮ್ಮೊಳಗೆ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ಗೇಟ್ಸ್ ಹೇಳಿದ್ದಾರೆ.

ದಿ ಫ್ಯೂಚರ್ ಆಫ್ ಕ್ಯಾಪಿಟಲಿಸಂ: ಪೌಲ್ ಕೂಲಿರ್ ಅವರಿಂದ
ಈ ಪುಸ್ತಕವು ಮನಸ್ಸಿನಲ್ಲಿ ಉನ್ನತವಾದ ವಿಚಾರವೊಂದರ ಬಗ್ಗೆ ಚಿಂತನೆಗೆ ಪ್ರಚೋದನೆ ನೀಡುತ್ತದೆಯಂತೆ. ಎಲ್ಲಾ ವಿಚಾರಗಳ ಬಗ್ಗೆ ಗೇಟ್ಸ್ ಗೆ ಸಹಮತ ಇಲ್ಲದೇ ಇದ್ದರೂ ಕೂಡ ಕೆಲವು ಸಮಸ್ಯೆಗಳ ಪರಿಹಾರಗಳಲ್ಲಿನ ಲೇಖಕರ ವಿಶ್ಲೇಷಣೆ ಗೇಟ್ಸ್ ಗೆ ಇಷ್ಟವಾಗಿದೆಯಂತೆ.

ದಿ ರೂಯಿಸ್ ರಿಸಲ್ಟ್: ಗ್ರೇಮ್ ಸಿಮ್ಸನ್ರಿಂದ
ಈ ಪುಸ್ತಕವು ಗೇಟ್ಸ್ ಹೇಳುವಂತೆ ಅಧ್ಬುತವಾದ ಬೇಸಿಗೆ ರಜೆಯನ್ನುಕಳೆಯಲು ಹೇಳಿಮಾಡಿಸಿದ ಪುಸ್ತಕವಾಗಿದೆಯಂತೆ.
ದಿ ಮೂಮೆಂಟ್ ಆಫ್ ಲೈಫ್:ಮೆಲಿಂದಾ ಗೇಟ್ಸ್
ಗೇಟ್ಸ್ ಈ ಪುಸ್ತಕವನ್ನು ಪ್ಲಗಿಂಗ್ ಮಾಡುವುದನ್ನು ವಿರೋಧಿಸುತ್ತಾರಂತೆ ಆದರೆ ಲೇಖತ ಪಕ್ಷಪಾತಿ ಎಂದು ಗೇಟ್ಸ್ ಗೆ ಅನ್ನಿಸುತ್ತದೆಯಂತೆ. ಆದರೆ ಈ ಪುಸ್ತಕ ಈ ವರ್ಷ ಓದಲೇಬೇಕಾಗುವ ಪುಸ್ತಕಗಳಲ್ಲಿ ಒಂದು ಎಂದು ಗೇಟ್ಸ್ ಅಭಿಪ್ರಾಯ ಪಡುತ್ತಾರೆ.


Click it and Unblock the Notifications








