Home
ಸುದ್ದಿಜಾಲ

ಐಪೋನ್ ಬಳಕೆಯನ್ನೇ ಬದಲಿಸುವ ಆಪಲ್ iOS 12ನಲ್ಲಿನ ಹೊಸ 7 ಅಂಶಗಳು!

By Avinash

ಪ್ರತಿ ವರ್ಷ ನಡೆಯುವ ಆಪಲ್ WWDCಯತ್ತ ಐಪೋನ್ ಮತ್ತು ಐಪಾಡ್ ಬಳಕೆದಾರರು ತಮ್ಮ ದೃಷ್ಟಿ ನೆಟ್ಟಿರುತ್ತಾರೆ. ಏಕೆಂದರೆ, ಮುಂದಿನ ದಿನಗಳಲ್ಲಿ ತಮ್ಮ ಗ್ಯಾಡ್ಜೆಟ್ ಬಳಕೆಯಲ್ಲಿ ಏನಾದರೂ ಹೊಸ ರೀತಿಯ ಅನುಭವ ತೆರೆದಿಡುತ್ತಾರಾ ಎಂಬ ಕುತೂಹಲ ಗ್ರಾಹಕರಿಗೆ ಪ್ರತಿ ವರ್ಷವೂ ಕಾಡುತ್ತಿರುತ್ತೆ. ಅದರಂತೆ, ಈ ಬಾರಿಯೂ ಆಪಲ್ ಕಂಪನಿ ತನ್ನ ಗ್ರಾಹಕರ ನಿರೀಕ್ಷೆಯನ್ನೂ ಹುಸಿಗೊಳಿಸದೆ ಹೊಸ ಆಪರೇಟಿಂಗ್ ಸಿಸ್ಟಮ್ iOS 12 ಬಿಡುಗಡೆ ಮಾಡಿದ್ದು, ಹಲವು ವಿಶೇಷತೆಗಳೊಂದಿಗೆ ಹೊಸ ರೀತಿಯ ಅನುಭವವನ್ನು ನೀಡಲು ಮುಂದಾಗಿದೆ.

ಐಪೋನ್ ಬಳಕೆಯನ್ನೇ ಬದಲಿಸುವ ಆಪಲ್ iOS 12ನಲ್ಲಿನ ಹೊಸ 7 ಅಂಶಗಳು!

ಜೂನ್ 4ರಂದು ಸ್ಯಾನ್ ಜೋಸ್ ನಲ್ಲಿ ಆಯೋಜಿಸಿದ್ದ WWDC ಕಾರ್ಯಕ್ರಮದಲ್ಲಿ ಆಪಲ್ ತನ್ನ ಬಹುನಿರೀಕ್ಷಿತ iOs 12 ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಹೊಸ ರೀತಿಯ ಆಯ್ಕೆಗಳನ್ನು ನೀಡಿದ್ದು. 7 ಪ್ರಮುಖ ಹೊಸ ವೈಶಿಷ್ಟ್ಯಗಳು ಬಂದು ಸೇರಿದ್ದು, ಗ್ರಾಹಕರು ಫಿದಾ ಆಗುವದಂತೂ ಗ್ಯಾರಂಟಿ ಎನ್ನುವಂತಾಗಿದೆ. ಹಾಗಾದರೆ ಹೊಸ iOS 12ನಲ್ಲಿರುವ ಆ 7 ವಿಶೇಷತೆಗಳೇನು ಎಂಬುದನ್ನು ತಿಳಿಯಲು ಮುಂದೆ ನೋಡಿ.

1. ಆಗ್ಮೆಂಟೆಡ್ ರಿಯಾಲಿಟಿ ಮತ್ತು ಯುಎಸ್ ಡಿಜೆಡ್ Augmented Reality and USDZ

1. ಆಗ್ಮೆಂಟೆಡ್ ರಿಯಾಲಿಟಿ ಮತ್ತು ಯುಎಸ್ ಡಿಜೆಡ್ Augmented Reality and USDZ

ಆಪಲ್ ಕಂಪನಿಯು ಟ್ರಾನ್ಸ್ ಫಾರ್ಮೆಷನಲ್ ತಂತ್ರಜ್ಞಾನ AR ಪರಿಚಯಿಸಿದ್ದು, ಪಿಕ್ಸರ್ ಜೊತೆ ಕಾರ್ಯನಿರ್ವಹಿಸಿ USDZ ಪರಿಚಯಿಸಿದೆ. ಇದು ಹೊಸ ಫೈಲ್ ಫಾರ್ಮ್ಯಾಟ್ ಆಗಿದ್ದು, ಎಆರ್ ವಿಷಯದ ಹಂಚಿಕೆ ಮತ್ತು ಸಂಪಾದನೆಯನ್ನು ಸರಳಗೊಳಿಸಿದೆ. USDZ ಗೆ ಅಡೋಬ್ ಸ್ಥಳೀಯ ಕ್ರಿಯೆಟಿವ್ ಕ್ಲೌಡ್ ಬೆಂಬಲ ಪಡೆದು ಕಾರ್ಯನಿರ್ವಹಿಸುತ್ತದೆ. ಅಡೋಬ್ ಕಾರ್ಯನಿರ್ವಾಹಕ ಪಾಧ್ಯಕ್ಷ ಮತ್ತು ಸಿಟಿಒ ಅಭಯ್ ಪರಾನಿಸ್ ಹೇಳುವಂತೆ ಯಾವುದೇ ಆಬ್ಜೇಕ್ಟಿವ್ ನ್ನು ಕ್ರಿಯೆಟಿವ್ ಕ್ಲೌಡ್ ನಿಂದ ಎಆರ್ ಪರಿಸರಕ್ಕೆ ತರಬಹುದು. ಮೊದಲ ಬಾರಿಗೆ ಬಳಕೆದಾರರು ಏನನ್ನು ನೋಡುತ್ತಾರೋ ಅದನ್ನು ಅನುಭವಿಸುತ್ತಾರಂತೆ.

2. ಸಿರಿ ಶಾರ್ಟ್ ಕಟ್ಸ್ Siri Shortcuts

2. ಸಿರಿ ಶಾರ್ಟ್ ಕಟ್ಸ್ Siri Shortcuts

ಆಪಲ್ ಗ್ರಾಹಕರಿಗೆ ಮತ್ತೊಂದು ಆಯ್ಕೆ ಸಿಕ್ಕಿದ್ದು, ಅದೇ ಸಿರಿ ಶಾರ್ಟ್ ಕಟ್ಸ್. ಅಮೆಜಾನ್ ಅಲೆಕ್ಸಾ ಸ್ಕಿಲ್ಸ್ ಹೋಲುವ ಆಯ್ಕೆ ಇದಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸುತ್ತದೆ. ದೈನಂದಿನ ಚಟುವಟಿಕೆಗಳು ಮತ್ತು ಕ್ಯಾಲೆಂಡರ್ ವಿಶೇಷಗಳ ಕುರಿತು ಗ್ರಾಹಕರಿಗೆ ಸಲಹೆ ನೀಡುತ್ತದೆ. ಇದಕ್ಕಾಗಿಯೇ ಶಾರ್ಟ್ ಕಟ್ಸ್ ಅಪ್ಲಿಕೇಷನ್ ಇದ್ದು, ನಮ್ಮ ಆಯ್ಕೆಗಳನ್ನು ಎಡಿಟ್ ಮಾಡಬಹುದು ಅಥವಾ ಸೇರಿಸಬಹುದಾಗಿದೆ.

3. ಡು ನಾಟ್ ಡಿಸ್ಟರ್ಬ್ ಮತ್ತು ಸ್ಕ್ರೀನ್  ಸಮಯ Do Not Disturb and Screen Time

3. ಡು ನಾಟ್ ಡಿಸ್ಟರ್ಬ್ ಮತ್ತು ಸ್ಕ್ರೀನ್ ಸಮಯ Do Not Disturb and Screen Time

iOS 12 ಡು ನಾಟ್ ಡಿಸ್ಟರ್ಬ್ ಆಯ್ಕೆ ನೀಡಿದ್ದು, ಹೋಮ್ ಸ್ಕ್ರೀನ್ ನಲ್ಲಿ ಅಪ್ಲಿಕೇಷನ್ ನೋಟಿಫಿಕೇಷನ್ಸ್ ಬರದಂತೆ ನೋಡಿಕೊಳ್ಳುತ್ತದೆ. ಆದರೆ, ಹೊಸ ಆಯ್ಕೆ ನೀಡಿದ್ದು, ಸ್ಥಳ ಅಥವಾ ನಿಗದಿತ ಸಮಯದಲ್ಲಿ DND ಆಕ್ಟಿವ್ ಮಾಡಿಕೊಳ್ಳಬಹುದು. ಲಿಮಿಟೆಡ್ ನೋಟಿಫಿಕೇಷನ್ ತೋರಿಸುವ ಆಯ್ಕೆಯಿದ್ದು, ಕೆಲವೊಂದು ಅಪ್ಲಿಕೇಷನ್ ಗಳ ನೋಟಿಫಿಕೇಷನ್ ಗಳನ್ನು ಹೋಮ್ ಸ್ಕ್ರಿನ್ ನಲ್ಲಿ ತೋರಿಸದೆ ಪಟ್ಟಿ ಮಾಡಿಕೊಳ್ಳುತ್ತದೆ.

4.ಆಪಲ್ ನ್ಯೂಸ್, ಸ್ಟಾಕ್ಸ್ ಮತ್ತು ವಾಯ್ಸ್ ಮೆಮೋ Apple News, Stocks and Voice Memos

4.ಆಪಲ್ ನ್ಯೂಸ್, ಸ್ಟಾಕ್ಸ್ ಮತ್ತು ವಾಯ್ಸ್ ಮೆಮೋ Apple News, Stocks and Voice Memos

ಆಪಲ್ ನ್ಯೂಸ್ ಮತ್ತು ಸ್ಟಾಕ್ಸ್ ಅಪ್ಲಿಕೇಷನ್ ಗಳನ್ನು ಅಪ್ ಡೇಟ್ ಮಾಡಿದ್ದು, ಹೆಚ್ಚು ಬಳಕೆದಾರರ ಸ್ನೇಹಿಯಾಗಿ ರೂಪಿಸಿದೆ. ಆಪಲ್ ನ್ಯೂಸ್ ಸೈಡ್ ಬಾರ್ ಹೊಂದಿದ್ದು, ಸರಳವಾಗಿ ನ್ಯಾವಿಗೇಷನ್ ಮಾಡಬಹುದು. ಇನ್ನು ಸ್ಟಾಕ್ಸ್ ಆಫರ್ ಆಧಾರದಲ್ಲಿ ಪ್ರಸ್ತುತವಾದ ಹೆಡ್ ಲೈನ್ ನೀಡುತ್ತದೆ. ವಾಯ್ಸ್ ಮೆಮೋ ಮರು ನಿರ್ಮಿಸಿದ್ದು, ಈಗ ಆಪಲ್ ನ್ಯೂಸ್ ಮತ್ತು ಸ್ಟಾಕ್ಸ್ ಜತೆ ಐಪಾಡ್ ನಲ್ಲಿಯೂ ಲಭ್ಯವಿದೆ.

5.ಪೋಟೋಸ್ Photos

5.ಪೋಟೋಸ್ Photos

ಹೊಸ iOS 12ನಲ್ಲಿ ಪೋಟೋಸ್ ಅಪ್ಲಿಕೇಷನ್ ಸರ್ಚ್ ಸಲಹೆಗಳೊಂದಿಗೆ ಉತ್ತಮವಾಗಿದೆ. ಪೋಟೋದಲ್ಲಿರುವ ಸ್ಥಳ, ಇವೆಂಟ್ ಗಳನ್ನು ಹುಡುಕಬಹುದು. ಹೊಸ ಹುಡುಕುವಿಕೆ ಹಾಗೂ ಮಲ್ಟಿಪಲ್ ಸರ್ಚ್ ಗೆ ಅವಕಾಶ ನೀಡಿದೆ.

6. ಅನಿಮೋಜಿ ಮತ್ತು ಮೆಮೋಜಿ Animojis and Memoji

6. ಅನಿಮೋಜಿ ಮತ್ತು ಮೆಮೋಜಿ Animojis and Memoji

iOS 12ನಲ್ಲಿ ಹೆಚ್ಚು ಅನಿಮೋಜಿಗಳ ಆಯ್ಕೆಯಿದ್ದು, ಅವುಗಳೆಲ್ಲ ಟಂಗ್ ಡಿಟೇಕ್ಷನ್ ಮೂಲಕ ಬಂದಿದ್ದು, ಇವುಗಳನ್ನು ಫೇಸ್ ಟೈಮ್ ಮತ್ತು ಮೇಸೆಜಿಂಗ್ ನಲ್ಲಿ ರಿಪ್ಲೇ ಮಾಡಬೇಕಾದಾಗ ಬಳಸಬಹುದು. ನಿಮ್ಮದೇ ಆದ ಸ್ವಂತ ಅನಿಮೋಜಿ ಮಾಡಿಕೊಳ್ಳಬಹುದು. ಹೊಸ ಮೆಮೋಜಿಗಳ ಯ್ಕೆಯನ್ನು ಸಹ iOS 12 ನೀಡಿದೆ.

How to Send Message to Multiple Contacts on WhatsApp - GIZBOT KANNADA
7.ಫೇಸ್ ಟೈಮ್ ಗ್ರೂಪ್ ವಿಡೀಯೋ Facetime group video

7.ಫೇಸ್ ಟೈಮ್ ಗ್ರೂಪ್ ವಿಡೀಯೋ Facetime group video

ಆಪಲ್ iOS 12ನೊಂದಿಗೆ ಫೇಸ್ ಟೈಮ್ ಗ್ರೂಪ್ ವಿಡೀಯೋ ವ್ಯವಸ್ಥೆ ಪರಿಚಯಿಸಿದೆ. ಇದರಲ್ಲಿ ಏಕಕಾಲದಲ್ಲಿ 32 ಜನರೊಂದಿಗೆ ವಿಡೀಯೋ ಕಾಲ್ ಸಂಪರ್ಕ ಸಾಧಿಸಬಹುದು. ಗುಂಪು ಆಡಿಯೋ ಚಾಟ್ ಮಾಡಬಹುದಾಗಿದೆ.

Best Mobiles in India

English summary
7 iOS 12 features that will change the way you use the iPhone, to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+