Subscribe to Gizbot

ಟೆಕ್‌ ಕ್ಷೇತ್ರದಲ್ಲಿ ಇವರೇ ಪವರ್‌ಫುಲ್‌ ಮಹಿಳೆಯರು

Written By:

ನೆನ್ನೆ ತಾನೆ ಪ್ರತಿ ವರ್ಷದಂತೆ (ಮಾರ್ಚ್‌ 8) ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಮಹಿಳಾ' ದಿನವನ್ನು ವಿಜೃಭಣೆಯಿಂದ ಆಚರಿಸಲಾಯಿತು. ಮಹಿಳಾ ಸಾಧಕರನ್ನು ನೆನೆಯುತ್ತಾ, ಜೀವನದಲ್ಲಿ ನೊಂದ ಮಹಿಳೆಯರಿಗೆ ಹೊಸ ಸ್ಫೂರ್ತಿಯನ್ನು ನೀಡುವ ಹೊಸ ಭರವಸೆಯೊಂದಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು. ಅಲ್ಲದೇ ಸಮಾಜಿಕವಾಗಿ ಮತ್ತು ವೃತ್ತಿ ಸಮಾನತೆಗಾಗಿಯೂ ಹೋರಾಟದ ಕುರಿತ ಹಲವು ಅಂಶಗಳೊಂದಿಗೆ ಮಹಿಳಾ ಸಬಲೀಕರಣವನ್ನು ಆಚರಿಸಲಾಯಿತು. ಎಲ್ಲಾ ಕ್ಷೇತ್ರದಲ್ಲೂ ಮಹಿಳಾ ಸಾಧಕಿಯರನ್ನು ಹುಡುಕಿ ನೆನಪು ಮಾಡಿಕೊಂಡು ಅವರನ್ನು ಸ್ಫೂರ್ತಿಯಾಗಿಸಿಕೊಂಡ ಹಲವು ಮಹಿಳೆಯರಿಗೆ ಇನ್ನೊಂದು ಹೊಸ ವಿಷಯ ಹೇಳಲೇಬೇಕು.

ಎಲ್ಲಾ ಕ್ಚೇತ್ರದಲ್ಲಿಯೂ ಮಹಿಳಾ ಸಾಧಕಿಯರನ್ನು ಸ್ಫೂರ್ತಿಯಾಗಿ ಸ್ವೀಕರಿಸುವ ಹಾಗೆ ಟೆಕ್‌ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ ಯುವತಿಯರಿಗೆ ಗಿಜ್‌ಬಾಟ್‌ ಇಂದು ತಿಳಿಸುವ ಟೆಕ್‌ ಕ್ಷೇತ್ರದ ಅತ್ಯಂತ ಪ್ರಭಾವಿ ಪವರ್‌ಫುಲ್‌ ಮಹಿಳೆಯರು ಎಲ್ಲಾ ಕಾಲಕ್ಕೂ ಸ್ಫೂರ್ತಿಯಾಗಬಲ್ಲರು. ಅವರು ಯಾರು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೆರಿಲ್‌ ಸ್ಯಾಂಡ್‌ಬರ್ಗ್‌

Sheryl Sandberg, COO, Facebook

"ಶೆರಿಲ್‌ ಸ್ಯಾಂಡ್‌ಬರ್ಗ್‌" 2012 ರವರೆಗೆ ಪ್ರಪಂಚದ ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಚೀಫ್‌ ಆಪರೇಟಿಂಗ್‌ ಆಫೀಸರ್‌ ಆಗಿದ್ದವರು. 50 ಪ್ರಖ್ಯಾತ ಮಹಿಳಾ ಬ್ಯುಸಿನೆಸ್‌ಮ್ಯಾನ್‌ಗಳಲ್ಲಿ ಇವರು ಒಬ್ಬರಾಗಿದ್ದರು. ಅಲ್ಲದೇ ಇವರು ಗೂಗಲ್‌ನ ಗ್ಲೋಬಲ್‌ ಆನ್‌ಲೈನ್‌ ಸೇಲ್ಸ್‌ ಉಪಾದ್ಯಕ್ಷರಾಗಿದ್ದರು.

ರುಥ್‌ ಪೊರಟ್‌

Ruth Porat, CFO Alphabet

ರುಥ್‌ ಪೊರಟ್'ರವರು ಗೂಗಲ್‌ ಪೇರೆಂಟ್‌ ಕಂಪನಿ "Alphabet Inc" ನ ಸಿಏಫ್‌ಓ ಆಗಿದ್ದರು. ಇವರ ಬಗೆಗಿನ ಇನ್ನೊಂದು ವಿಶೇಷತೆ ಎಂದರೆ ಸ್ತನ ಕ್ಯಾನ್ಸರ್‌ನಿಂದ ಬದುಕುಳಿದವರು. ರುಥ್‌ ಮೊರ್ಗನ್‌ ಸ್ಟ್ಯಾನ್ಲಿ, ಮುಖ್ಯ ಹಣಕಾಸು ಅಧಿಕಾರಿಯವರೊಂದಿಗೆ ಕಾರ್ಯನಿರ್ವಹಿಸಿದ್ದಾರೆ.

ಸುಸನ್‌ ವಾಜ್ಸಿಕ್ಕಿ

Susan Wojcicki, CEO, YouTube

ಗೂಗಲ್‌ನ 16 ನೇ ನಂಬರ್ ಉದ್ಯೋಗಿಯಾಗಿದ್ದ 'ಸುಸನ್‌ ವಾಜ್ಸಿಕ್ಕಿ'ರವರು 2014 ರಲ್ಲಿ ಪ್ರಪಂಚದ ಅತಿದೊಡ್ಡ ವೀಡಿಯೋ ವೇದಿಕೆ ಯೂಟ್ಯೂಬ್‌ನ ಸಿಇಓ ಆದರು. ಅಲ್ಲದೇ ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಿದವರಲ್ಲಿ ಇವರು ಸಹ ಒಬ್ಬರು.

Angela Ahrendts

Angela Ahrendts, Senior VP, Apple

ಆಪಲ್‌ ಕಂಪನಿ ಇಂದು ಟೆಕ್‌ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಪ್ರಖ್ಯಾತಗೊಂಡ ಕಂಪನಿ. ಆದರೆ ನೆನಪಿಡಬೇಕಾದ ವಿಷಯ ಎಂದರೆ ಇಂತಹ ಅಭಿವೃದ್ದಿಯ ಹಿಂದೆ ಆಪಲ್‌ ಹಿರಿಯ ಉಪಾಧ್ಯಕ್ಷೆ 'ಏಂಜೆಲಾ ಆರೆಂಡ್ಟ್ಸ್'ರವರು ಇದ್ದಾರೆ ಎಂಬುದನ್ನ. 2015'ರ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಪಂಚದ ಪವರ್‌ಫುಲ್‌ ಮಹಿಳೆಯರ ಸ್ಥಾನದಲ್ಲಿ 25 ಸ್ಥಾನ ಪಡೆದಿದ್ದಾರೆ.

ಅಮಿ ಹುಡ್‌

Amy Hood, CFO, Microsoft

ಯಶಸ್ಸು ಅಂದ್ರೆ ಇದು. ಅಮಿ ಹುಡ್‌'ರವರು ಮೊಟ್ಟ ಮೊದಲ ಮೈಕ್ರೋಸಾಫ್ಟ್‌ ಕಾರ್ಫೋರೇಷನ್‌ನ ಮಹಿಳಾ ಮುಖ್ಯ ಹಣಕಾಸು ಅಧಿಕಾರಿಯಾದವರು. ಇವರು 2013ರ ವರೆಗೆ ಆ ಸ್ಥಾನದಲ್ಲಿದ್ದರು. ಅಲ್ಲದೇ ಮೈಕ್ರೋಸಾಫ್ಟ್‌ನಲ್ಲಿ ಅತಿ ಹಿರಿಯ ಸ್ಥಾನಗಳನ್ನು ಸಹ ಅಲಂಕರಿಸಿದ್ದಾರೆ. ಇವರು ಡ್ಯೂಕ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿಯನ್ನು ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್‌ ಇನ್‌ ಬ್ಯುಸಿನೆಸ್‌ ಆಡ್ಮಿನಿಸ್ಟ್ರೇಷನ್‌ ಸ್ನಾತಕೋತ್ತರ ಪದವಿಯನ್ನು ಪಡೆದವರು.

ಮೇಗ್ ವಿಟ್‌ಮ್ಯಾನ್‌

Meg Whitman, CEO, HP Enterprise

ಮೇಗ್‌ ವಿಟ್‌ಮ್ಯಾನ್‌'ರವರು ಎಚ್‌ಪಿ ಎಂಟರ್‌ಪ್ರೈಸಸ್‌ನ ಸಿಇಓ ಮತ್ತು ಅಧ್ಯಕ್ಷರಾಗಿದ್ದವರು.

ಮರಿಸ್ಸಾ ಮೇಯರ್

Marissa Mayer, CEO, Yahoo

ಇಮೇಲ್‌ ಸೇವೆಯ ಯಾಹೂ'ನ ಅಧ್ಯಕ್ಷೆ ಮತ್ತು ಸಿಇಓ ಆಗಿ ಮರಿಸ್ಸಾ ಮೇಯರ್ ಕರ್ತವ್ಯ ನಿರ್ವಹಿಸಿದ್ದಾರೆ. ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ ಇವರು ತಮ್ಮ 37ನೇ ವಯಸ್ಸಿಗೆ ಈ ಸ್ಥಾನ ಅಲಂಕರಿಸಿದರು. ಇಲ್ಲಿ ಅಧಿಕಾರ ಸ್ವೀಕರಿಸುವ ಮೊದಲು ಗೂಗಲ್‌ ನಲ್ಲಿ ಹೆಚ್ಚು ಪ್ರಸಿದ್ಧವಾದ ಗೂಗಲ್‌ ಮ್ಯಾಪ್ಸ್‌, ಗೂಗಲ್‌ ಅರ್ಥ್‌, ಗೂಗಲ್‌ ಸ್ಟ್ರೀಟ್ ವ್ಯೂ, ಗೂಗಲ್‌ ನ್ಯೂಸ್‌ ಮತ್ತು ಜಿಮೇಲ್‌ನ ಅಭಿವೃದ್ದಿಗಳಲ್ಲಿ ಪಾತ್ರವಹಿಸಿದ್ದಾರೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಬೆಂಗಳೂರು ಹ್ಯಾಕರ್‌ನಿಂದ ಫೇಸ್‌ಬುಕ್‌ ದೋಷ ಪತ್ತೆ: 10 ಲಕ್ಷ ಬಹುಮಾನ

ಏಲಿಯನ್‌ಗಳಿಂದ ಮೆಸೇಜ್‌: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
7 most powerful women in tech. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot