ಒಂದೇ ದಿನದಲ್ಲಿ ಕಂಪ್ಯೂಟರ್ ಗೇಮ್‌ ಸೃಷ್ಟಿಸಿದಳು ಈ 7ರ ಬಾಲೆ..!

By Avinash
|

ನಮಗೆ, ನಿಮಗೆಲ್ಲಾ ವಯಸ್ಸು 15 ಆದರೂ, ಕಂಪ್ಯೂಟರ್ ಗಂಧಗಾಳಿ ಗೊತ್ತಿದ್ದಿಲ್ಲ. ಆದರೆ, ಈಗಿನ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ನೀಡಿ ಸಾಕು ಏನೇನಿದೆ ಏನೇನಿಲ್ಲ ಎಂಬುದನ್ನು ಜಾಲಾಡಿ ನಿಮ್ಮ ಮೊಬೈಲ್ ಸರಿಯಿಲ್ಲ ಎನ್ನುತ್ತವೆ. ನಾವೀಗ ನಿಮ್ಮ ಮುಂದಿಡುತ್ತಿರುವುದು ಅಂತದ್ದೇ ಕಥೆಯನ್ನು. ಆದರೆ, ಸ್ವಲ್ಪ ವಿಭಿನ್ನವಾಗಿದ್ದು, ಮಗುವಿನ ಬುದ್ಧಿ ಶಕ್ತಿ ಸಾಧನೆಯಾಗಿ ಬದಲಾಗಿದೆ.

ನೀವು ಈ ವಾರಾಂತ್ಯದಲ್ಲಿ ಬಿಡುವಿದ್ದರೆ ಈ ಸಣ್ಣ ಗೇಮ್‌ ಮತ್ತು ಅದರ ಹಿಂದಿರುವ ರೋಚಕ ಕಥೆಯನ್ನು ಓದಿ. ಕೇವಲ ಏಳನೇ ವಯಸ್ಸಿನಲ್ಲಿ ಕಂಪ್ಯೂಟರ್ ಗೇಮ್‌ ಸೃಷ್ಟಿ ಮಾಡುವುದೇಂದರೆ ತಮಾಷೆಯ ಮಾತಲ್ಲ.
ಹೌದು, ಪ್ರಶ್ನೆಗೆ ಉತ್ತರ ನೀಡಿ ಎಂಬ ಗೇಮ್‌ ಸೃಷ್ಟಿಸಿದ್ದು, ಕೇವಲ ಒಂದೇ ದಿನದಲ್ಲಿ ಗೇಮ್ ಅಭಿವೃದ್ಧಿಪಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪೆನ್ನಿ ಮೆಕ್‌ಡೋನಾಲ್ಡ್‌ ಎಂಬ ಬಾಲಕಿಯೇ ಗೇಮ್‌ ಸೃಷ್ಟಿಸಿರುವುದು.

ಒಂದೇ ದಿನದಲ್ಲಿ ಕಂಪ್ಯೂಟರ್ ಗೇಮ್‌ ಸೃಷ್ಟಿಸಿದಳು ಈ 7ರ ಬಾಲೆ..!

ಈಗ ಪಿಸಿ ಗೇಮಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿಯೇ ಗೇಮ್ ಅಭಿವೃದ್ಧಿಪಡಿಸಿದ ಅತಿ ಕಿರಿಯಳಾಗಿದ್ದಾಳೆ. ಪೆನ್ನಿ ಕೇವಲ ಒಂದು ವಾರದ ಹಿಂದೆ ಗೇಮಿಂಗ್ ಅಭ್ಯಾಸ ಆರಂಭವಾಗಿರುವುದು ಎಂದರೇ ನಂಬಲೇಬೇಕು. ಆದರೆ, ಇದೆಲ್ಲಾ ಆಗಿರುವುದು ಆಕಸ್ಮಿಕ ಘಟನೆಯಿಂದ ಆದರೂ 7ರ ಬಾಲೆಯನ್ನು ಮೆಚ್ಚಲೆಬೇಕು.

ತಂದೆಯೂ ಗೇಮ್‌ ಡೆವಲಪರ್‌

ತಂದೆಯೂ ಗೇಮ್‌ ಡೆವಲಪರ್‌

ಪೆನ್ನಿ ಮೆಕ್‌ಡೋನಾಲ್ಡ್‌ ಗೇಮ್ ಡೆವಲಪ್‌ ಮಾಡುವುದಕ್ಕೆ ಮತ್ತೊಂದು ಕಾರಣವಿದೆ. ಅವಳ ತಂದೆ ಲ್ಯಾನ್ಸ್‌ ಮೆಕ್‌ಡೋನಾಲ್ಡ್‌ ಸಹ ಗೇಮ್‌ ಡೆವಲಪರ್ ಆಗಿರುವುದರಿಂದ ತಂದೆಯಿಂದ ಸ್ಪೂರ್ತಿಗೊಂಡು ಗೇಮ್‌ ಡೆವಲಪ್‌ ಮಾಡಿದ್ದಾಳೆ ಎನ್ನಲಾಗಿದೆ.

ಗೇಮ್ ಸೃಷ್ಟಿಸುವುದಾಗಿ ಕೇಳಿದ್ದಳು

ಗೇಮ್ ಸೃಷ್ಟಿಸುವುದಾಗಿ ಕೇಳಿದ್ದಳು

ಪೆನ್ನಿ ಮೆಕ್‌ಡೊನಾಲ್ಡ್‌ ತನ್ನ ತಂದೆಯತ್ತಿರ ಒಂದು ದಿನ ನಾನು ಗೇಮ್ ಸೃಷ್ಟಿಸುತ್ತೇನೆ ಎಂದು ಕೇಳಿದಳು. ಆದ್ದರಿಂದ ಲ್ಯಾನ್ಸ್‌ ಮೆಕ್‌ಡೊನಾಲ್ಡ್‌ ವಿಂಡೋಸ್‌ 98 ಪಿಸಿಯನ್ನು ಕೋಡ್ ಮಾಡಲು ನೀಡಿ, ಗೇಮ್‌ ಅಭಿವೃದ್ಧಿಪಡಿಸಲು ಬಿಗಿನಿಂಗ್ ಗೈಡ್‌ ನೀಡಿ, ಪ್ರಶ್ನೆಗೆ ಉತ್ತರಿಸಿ ಎಂಬ ಗೇಮ್‌ ಸೃಷ್ಟಿಸಲು ಹೇಳಿದರು. ನಂತರ ಆಗಿದ್ದು ಇತಿಹಾಸ.

ಮೊದಲ ಪ್ರಯತ್ನದಲ್ಲಿಯೇ ಜಯ

ಮೊದಲ ಪ್ರಯತ್ನದಲ್ಲಿಯೇ ಜಯ

ಪೆನ್ನಿ ಮೆಕ್‌ಡೊನಾಲ್ಡ್‌ ಗೇಮ್‌ ಅಭಿವೃದ್ಧಿಪಡಿಸುವ ಮೊದಲ ದಿನದಲ್ಲಿಯೇ ಯಶಸ್ಸನ್ನು ಕಂಡಳು. ಪ್ರಶ್ನೆಗೆ ಉತ್ತರಿಸಿ ಗೇಮ್‌ನಲ್ಲಿ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳ ಮಾಲಿಕೆಯನ್ನು ಕಂಪ್ಯೂಟರ್ ಪ್ರೋಗ್ರಾಂ ಮಾಡಿದಳು. ಇದು ಯಾವ ಗೇಮ್ ಡೆವಲಪರ್‌ಗೂ ಕಡಿಮೆ ಇಲ್ಲದಂತೆ ಸೃಷ್ಟಿಸಿ ಯಶಸ್ವಿಯಾದಳು. ಅನೇಕ ಕಡೆಯಿಂದ ಉತ್ತಮ ವಿಮರ್ಷೆಯು ಸಹ ಬಂದಿದೆ.

ಗೇಮ್‌ ಅಲ್ಲ ಅಂದವರೇ ಬಹಳಷ್ಟು ಜನ

ಗೇಮ್‌ ಅಲ್ಲ ಅಂದವರೇ ಬಹಳಷ್ಟು ಜನ

ಪೆನ್ನಿ ಸೃಷ್ಟಿಸಿದ ಗೇಮ್ ಹಾರ್ಡ್‌ ಕೋಡೆಡ್ ಆಗಿತ್ತು, ಮತ್ತು ಗೇಮ್ ಕಾರ್ಯನಿರ್ವಹಣೆಗೆ ಇಡೀ ಸಿಪಿಯು ಕಾರ್ಯಕ್ಷಮತೆಯನ್ನು ಬಳಸಿಕೊಳ್ಳುತ್ತಿತ್ತು. ಆದರೆ, ಬಹಳಷ್ಟು ಜನ ಮಾತ್ರ ಒಂದು ತಾಂತ್ರಿಕ ಕಾರಣದಿಂದ ಈ ಗೇಮ್‌ ಸೃಷ್ಟಿಯಾಗಿದೆ. ಇದು ನಿಜವಾದ ಗೇಮ್ ಅಲ್ಲ ಎನ್ನುತ್ತಿದ್ದಾರಂತೆ. ನಾವು ಗೇಮ್‌ ಲೈಕ್‌ ಮಾಡುತ್ತೇವೋ ಇಲ್ಲ ಗೊತ್ತಿಲ್ಲ. ಆದರೆ, ಆ ಗೇಮ್ ಬೇರೆ ಗೇಮ್‌ಗಿಂತ ಉತ್ತಮವಾಗಿದೆ. ಪೆನ್ನಿ ಸೃಷ್ಟಿಸಿರುವ ಗೇಮ್‌ ಫನ್ ಪ್ಯಾರಾಡಾಕ್ಸ್ ಆಗಿದ್ದು, ಸಾಮಾನ್ಯಕ್ಕಿಂತ ವಿರುದ್ಧವಾಗಿದೆ ಎಂದು ಲ್ಯಾನ್ಸಿ ಮೆಕ್‌ಡೊನಾಲ್ಡ್‌ ಹೇಳಿದ್ದಾರೆ.

ಆಕ್ಷನ್ ಗೇಮ್‌ ಸೃಷ್ಟಿಸುವ ಹಂಬಲ

ಆಕ್ಷನ್ ಗೇಮ್‌ ಸೃಷ್ಟಿಸುವ ಹಂಬಲ

ಕ್ಯೂಎ ಗೇಮ್ ಸೃಷ್ಟಿಸಿರುವ ಪೆನ್ನಿ ಹೆಚ್ಚಿನ ಗೇಮ್ ಅಭಿವೃದ್ಧಿಪಡಿಸುವ ಹಂಬಲ ಹೊಂದಿದ್ದಾಳೆ. ಅಲ್ಲದೇ ಟೆಂಪಲ್‌ ರನ್‌ನಂತಹ ಆಕ್ಷನ್‌ ಗೇಮ್‌ ಸೃಷ್ಟಿಸುವ ಗುರಿಯನ್ನು ಪೆನ್ನಿ ಹೊಂದಿದ್ದಾಳೆ. "ಹೌದು ನಾನು ಆಕ್ಷನ್‌ ಗೇಮ್‌ ಸೃಷ್ಟಿ ಮಾಡುವುದನ್ನು ಕಲಿಯುವವರೆಗೂ ಗೇಮ್‌ಗಳನ್ನು ಸೃಷ್ಟಿ ಮಾಡುತ್ತೇನೆ. ಅಲ್ಲದೇ ಗೇಮ್ ಆಡುವಾಗ ನೀವೇನು ಯೋಚಿಸುತ್ತೀರಿ ಆ ರೀತಿ ಗೇಮ್ ಮುಂದುವರೆಸುವುದನ್ನು ಸೃಷ್ಟಿ ಮಾಡುತ್ತೇನೆ"ಎಂದು ಹೇಳಿದ್ದಾಳೆ.

Best Mobiles in India

English summary
7 YO Girl Developed Her Own Programme Game Inspired By Her Father. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X