Home
ಸುದ್ದಿಜಾಲ

ಭಾರತೀಯರಿಗೆ ಬಿಗ್‌ ಶಾಕ್‌!..70 ಲಕ್ಷಕ್ಕೂ ಹೆಚ್ಚು ಭಾರತೀಯರ ಡೇಟಾ ಸೋರಿಕೆ!

ಈ ಸುದ್ದಿಯನ್ನು ಪ್ರತಿಯೊಬ್ಬ ಭಾರತೀಯರು ಗಮನಿಸಲೇಬೇಕು. ಇಡೀ ಭಾರತವೇ ಕೊರೊನಾ ವೈರಸ್‌ನ ವಿರುದ್ದ ಹೋರಾಡುತ್ತಿರುವಾಗ ಸದ್ದಿಲ್ಲದೆ 70 ಲಕ್ಷಕ್ಕೂ ಅಧಿಕ ಭಾರತೀಯರ ಡೇಟಾ ಸೋರಿಕೆ ಆಗಿದೆ. ಸುಮಾರು 70 ಲಕ್ಷ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ವೈಯಕ್ತಿಕ ವಿವರಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿವೆ. ಇದರಲ್ಲಿ ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳು ಕೂಡ ಸೇರಿವೆ ಎಂಬ ಆತಂಕಕಾರಿ ಮಾಹಿತಿಯನ್ನು ಇಂಟರ್‌ನೆಟ್‌ ಸೆಕ್ಯುರಿಟಿ ಸಂಶೋದಕರು‌ ಬಹಿರಂಗ ಪಡಿಸಿದ್ದಾರೆ.

ಡಾರ್ಕ್ ವೆಬ್

ಹೌದು, ಇಡೀ ದೇಶವೇ ಕೊರೊನಾ ಎಂಬ ಕಪಿಮುಷ್ಟಿಯಿಂದ ಹೊರಬರುವ ದಾವಂತದಲ್ಲಿದೆ. ಇದೇ ಸಂದರ್ಭದಲ್ಲಿ ಭಾರತೀಯರು ಬೆಚ್ಚಿ ಬೀಳುವ ಸುದ್ದಿ ಹೊರಬಿದ್ದಿದೆ. 2019-2020 ರ ನಡುವಿನ ಅವಧಿಯಲ್ಲಿ 70 ಲಕ್ಷಕ್ಕೂ ಹೆಚ್ಚು ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರ ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳು ಸೇರಿದಂತೆ ವೈಯಕ್ತಿಕ ವಿವರಗಳು ಡಾರ್ಕ್ ವೆಬ್‌ನಲ್ಲಿ ಹರಿದಾಡುತ್ತಿವೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಡಾರ್ಕ್‌ವೆಬ್‌ನಲ್ಲಿ ಸೋರಿಕಾ ಆಗಿರುವುದಾದರೂ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋರಿಕೆ

ಇನ್ನು ಸೋರಿಕೆಯಾದ ಇತರ ವಿವರಗಳಲ್ಲಿ ಬಳಕೆದಾರರ ಹೆಸರುಗಳು, ಉದ್ಯೋಗದಾತ ಸಂಸ್ಥೆಗಳು ಮತ್ತು ವಾರ್ಷಿಕ ಆದಾಯವಿದೆ ಎಂದು ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಹೇಳಿದ್ದಾರೆ. ಅಲ್ಲದೆ ಸೋರಿಕೆಯಾದ ಡೇಟಾಬೇಸ್‌ನ ಗಾತ್ರ 2GB ಯನ್ನು ಹೊಂದಿದ್ದು, ಬಳಕೆದಾರರ ಖಾತೆಗಳ ಪ್ರಕಾರಗಳನ್ನು ಮತ್ತು ಅವರು ಮೊಬೈಲ್ ಎಚ್ಚರಿಕೆಗಳನ್ನು ಬದಲಾಯಿಸಿದ್ದಾರೋ ಇಲ್ಲವೋ ಎಂಬುದನ್ನು ಸಹ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಈ "ಡೇಟಾವು 2010 ಮತ್ತು 2019 ರ ನಡುವಿನ ಅವಧಿಗೆ ಸಂಬಂಧಿಸಿದೆ, ಇದು ಹಗರಣಕಾರರು ಮತ್ತು ಹ್ಯಾಕರ್‌ಗಳಿಗೆ ಬಹಳ ಮೌಲ್ಯಯುತವಾಗಿದೆ" ಎಂದು ಹೇಳಲಾಗಿದೆ.

ಡೆಬಿಟ್ ಕಾರ್ಡ್‌

ಇದಲ್ಲದೆ ಇದು ಹಣಕಾಸಿನ ದತ್ತಾಂಶವಾಗಿರುವುದರಿಂದ, ಹ್ಯಾಕರ್ಸ್‌ ಮತ್ತು ಹಗರಣಕಾರರಿಗೆ ಅವರು ಫಿಶಿಂಗ್ ಅಥವಾ ಇತರ ದಾಳಿಗಳಿಗಾಗಿ ವೈಯಕ್ತಿಕ ಸಂಪರ್ಕ ವಿವರಗಳನ್ನು ಬಳಸಿಕೊಳ್ಳಬಹುದು ಎಂಬ ಆತಂಕ ಇದೀಗ ಶುರುವಾಗಿದೆ. ಅಲ್ಲದೆ ಗ್ರಾಹಕರಿಗೆ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಬ್ಯಾಂಕುಗಳು ಒಪ್ಪಂದ ಮಾಡಿಕೊಂಡಿರುವ ತೃತೀಯ ಸೇವಾ ಪೂರೈಕೆದಾರರಿಂದ ಈ ರೀತಿಯ ಡೇಟಾ ಸೋರಿಕೆ ಆಗಿರಬಹುದು ಎಂದು ಭದ್ರತಾ ಸಂಸ್ಥೆಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಡೇಟಾಬೇಸ್

ಇನ್ನು ಸೋರಿಕೆಯಾದ ಡೇಟಾಬೇಸ್‌ನಲ್ಲಿ ಸುಮಾರು 5 ಲಕ್ಷ ಕಾರ್ಡ್‌ದಾರರಿಗೆ ಪ್ಯಾನ್ ಸಂಖ್ಯೆಗಳಿವೆ ಎಂದು ಹೇಳಲಾಗಿದೆ. ಸದ್ಯ 70 ಲಕ್ಷ ಬಳಕೆದಾರರ ದತ್ತಾಂಶವು ನಿಜವೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲು ಸಂಶೋಧಕರಿಗೆ ಸಾಧ್ಯವಾಗಿಲ್ಲ, ಆದಾಗ್ಯೂ, ಅನೇಕ ಕ್ಷೇತ್ರಗಳಲ್ಲಿ ಉಲ್ಲೇಖಿಸಲಾದ ಕೆಲವು ವಿವರಗಳು ನಿಖರವಾಗಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಯಾರಾದರೂ ಈ ಡೇಟಾ / ಲಿಂಕ್ ಅನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಿರಬಹುದು ಎಂದು ಸಹ ಶಂಕಿಸಲಾಗಿದೆ.

Best Mobiles in India

English summary
In a major cybersecurity lapse, a security research firm has found credit and debit card data of 70 lakh Indians leaked on the dark web.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+