ದೇಶದಲ್ಲಿ ಶೇ.70 ರಷ್ಟು ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್‌ಫೋನ್
ಟೆಕ್ ಜಗತ್ತಿನಲ್ಲಿ ಪ್ರತಿದಿನ ಸಹ ಹೊಸ ಸುದ್ದಿಗಳು ಬರುತ್ತಿರುತ್ತವೆ. ಅದರಲ್ಲೂ ಇವತ್ತಿನ ಸುದ್ದಿಯಲ್ಲಿ ಶಾಲಾ ಮಕ್ಕಳು ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರಂತೆ, ವೊಡಾಫೋನ್ 2ಜಿ ಇಂಟರ್‌ನೆಟ್‌ನ ಬೆಲೆಯನ್ನು ಕಡಿಮೆ ಮಾಡಿದೆ, ಆಕ್ಸಫರ್ಡ್ ಇಂಗ್ಷಿಷ್ ಶಬ್ಧಕೋಶಕ್ಕೆ ಟ್ವೀಟ್ ಪದ ಸೇರಿದೆ. ಈ ಸುದ್ದಿಗಳ ಮತ್ತಷ್ಟು ವಿವರಣೆ ಮುಂದಿನ ಪುಟದಲ್ಲಿ ನೀಡಲಾಗಿದೆ . ಪುಟ ತಿರುಗಿಸಿ ಓದಿಕೊಂಡು ಹೋಗಿ.

ದೇಶದಲ್ಲಿ ಶೇ.70 ರಷ್ಟು ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್‌ಫೋನ್
ದೇಶದಲ್ಲಿ ಶೇ.70 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ ನೂತನ ಸಮೀಕ್ಷೆ ತಿಳಿಸಿದೆ. ಸಾಫ್ಟ್‌ವೇರ್ ಕಂಪೆನಿ ಟಿಸಿಎಸ್ ಈ ಸಮೀಕ್ಷೆ ನಡೆಸಿದ್ದು, ಮಹಾನಗರಗಳಲ್ಲಿ ಶೇ. 58.50, ಸಣ್ಣ ನಗರಗಳಲ್ಲಿ ಶೇ. 59.36 ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ ಸಮೀಕ್ಷೆ ತಿಳಿಸಿದೆ.

ವೊಡಾಫೋನ್2ಜಿ ಇಂಟರ್‌ನೆಟ್ ಬೆಲೆ ಕಡಿತ
ವೊಡಾಫೋನ್ 2ಜಿ ಇಂಟರ್‌ನೆಟ್ ಸೇವೆಯ ಬೆಲೆಯನ್ನು ಕಡಿತಗೊಳಿಸಿದೆ. ಈ ಹಿಂದೆ 10 KB ಹತ್ತು ಪೈಸೆಗ ಇದ್ದರೆ, ಈಗ 2 ಪೈಸೆಯಲ್ಲಿ 10KB ಡೇಟಾವನ್ನು ಬಳಕೆ ಮಾಡಬಹುದಾಗಿದೆ.ಕರ್ನಾಟಕ,ಉತ್ತರ ಪ್ರದೇಶ,ಮಧ್ಯಪ್ರದೇಶ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ.

ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ಧಕೋಶಕ್ಕೆ ಟ್ವೀಟ್ ಪದ ಸೇರ್ಪಡೆ
ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ಧಕೋಶಕ್ಕೆ ಟ್ವೀಟ್ ಪದ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ಹೊಸ ಪದ ಸೇರಿಸಬೇಕಿದ್ದರೆ ಆ ಪದ 10 ವರ್ಷ ಹಳೇಯದಾಗಿರಬೇಕು ಎಂಬ ನಿಯಮವಿದೆ. ಆದರೆ ನಿಯಮವನ್ನು ಈ ಸಂದರ್ಭಲ್ಲಿ ಬ್ರೇಕ್ ಮಾಡಿ ಟ್ವೀಟ್ ಪದವನ್ನು ಸೇರಿಸಲಾಗಿದೆ.

ಇನ್ಸ್‌ಟಾಗ್ರಾಮ್‌ನಲ್ಲಿ ವೀಡಿಯೋ ಸೌಲಭ್ಯ!
ಪ್ರಸಿದ್ದ ಫೋಟೋ ಶೇರಿಂಗ್ ಸೋಶಿಯಲ್ ನೆಟ್‌ವರ್ಕ್ ಇನ್ಸ್‌ಟಾಗ್ರಾಮ್‌ನಲ್ಲಿ ವೀಡಿಯೋ ಸೌಲಭ್ಯವನ್ನು ಫೇಸ್‌ಬುಕ್‌ನೀಡಲಿದೆ ಎನ್ನುವ ರೂಮರ್ ಸುದ್ದಿ ಹರಿದಾಡತೊಡಗಿದೆ. 5 ರಿಂದ 10 ಸೆಕೆಂಡ್‌ಗಳಿರುವ ವೀಡಿಯೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುವಂತ ಹೊಸ ವಿಶೇಷತೆಯನ್ನು ಸದ್ಯದಲ್ಲೇ ಬಳಕೆದಾರರಿಗೆ ನೀಡಲಿದೆ ಎನ್ನುವ ಸುದ್ದಿ ಈಗ ಮಾಧ್ಯಮದಲ್ಲಿ ಹರಿದಾಡತೊಡಗಿದೆ.


Click it and Unblock the Notifications








