Home
ಸುದ್ದಿಜಾಲ

ಭಾರತೀಯರಿಗಾಗಿ ಬಜೆಟ್ ಬೆಲೆಯ ಜನೋಪಯೋಗಿ ಅನ್ವೇಷಣೆಗಳು

By Shwetha

ಭಾರತವು ಮುಂದುವರಿಯುತ್ತಿರುವ ದೇಶವಾಗಿದ್ದು ಅನ್ವೇಷಣೆಗಳ ಹರಿಕಾರನಾಗಿ ಬೆಳಕು ಚೆಲ್ಲಿದೆ. ಸಣ್ಣ ಸಣ್ಣ ಸಂಶೋಧನೆಗಳ ಮೂಲಕ ಸಾಮಾನ್ಯ ಭಾರತೀಯನಿಗೆ ಬೆನ್ನೆಲುಬಾಗಿ ನಿಂತಿರುವ ಹಲವು ಅನ್ವೇಷಣೆಗಳು ಭಾರತಕ್ಕೆ ಇಂದು ಮಾನ್ಯತೆಯನ್ನು ತಂದುಕೊಟ್ಟಿದೆ. ಇಲ್ಲಿನ ಜನಜೀವನಕ್ಕೆ ಹೊಂದಿಕೊಳ್ಳುವ ರೀತಿಯಲ್ಲೇ ಈ ಅನ್ವೇಷಣೆಗಳಿದ್ದು ಅವುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಿರುವೆವು.

ಬನ್ನಿ ಜನಜೀವನಕ್ಕೆ ಪೂರಕವಾಗಿರುವ ಈ ಅನ್ವೇಷಣೆಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಬಜೆಟ್ ಬೆಲೆಯ ಜನೋಪಯೋಗಿ ಅನ್ವೇಷಣೆಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

#1

#1

ಈ ಸರಳ ನೋಟವನ್ನು ಹೊಂದಿರುವ ಗ್ಯಾಜೆಟ್ ಬಳಸಲು ಸುಲಭ. ಮುಂಬೈ ಆಧಾರಿತ ಕಂಪೆನಿಯೊಂದು ಸಂಪೂರ್ಣ ಫಂಕ್ಶನಲ್ ಡಿವೈಸ್ ಅನ್ನು ರೂ 1500 ಕ್ಕೆ ನೀಡುತ್ತಿದೆ. ಜನಸಾಮಾನ್ಯರಿಗೆ ತಲುಪುವುದೇ ಇದರ ಗುರಿಯಾಗಿದೆ. ಬಕೆಟ್‌ನಲ್ಲಿ ಸಮನಾಗಿ ಕುಳಿತುಕೊಳ್ಳಬಹುದಾದ ಇದು ಒಮ್ಮೆಗೆ 4-5 ಬಟ್ಟೆಗಳನ್ನು ತೊಳೆಯಬಲ್ಲುದು.

#2

#2

ನಿಜಕ್ಕೂ ಇದು ಸೂಪರ್ ಕೂಲ್ ಎಂದೆನಿಸಿದೆ. ಭಾರತೀಯ ಇಂಜಿನಿಯರ್ ಮನ್‌ಸುಕ್ ಭಾಯ್ ಪ್ರಜಾಪತಿ ಮಿಟ್ಟಿಕೂಲ್ ಫ್ರಿಡ್ಜ್ ಅನ್ನು ತಯಾರಿಸಿದ್ದು, ಇದಕ್ಕೆ ಸೊನ್ನೆ ವಿದ್ಯುತ್ ಸಾಕು. 5-6 ದಿನಗಳ ಕಾಲ ಇದು ಆಹಾರವನ್ನು ತಾಜಾವಾಗಿರಿಸುತ್ತದೆ.

#3

#3

ಡಿ ರಂಗನಾಥನ್ ಈ ಅನ್ವೇಷಣೆಯ ಹಿಂದಿರುವ ವ್ಯಕ್ತಿ ಎಂದೆನಿಸಿದ್ದಾರೆ. ಇದರ ಬೆಲೆ ರೂ 7,000 ಆಗಿದೆ. ತೆಂಗಿನ ಮತ್ತು ಅಡಿಕೆ ಮರ ಹತ್ತಲು ಇದು ಸಹಕಾರಿಯಾಗಿದೆ.

#4

#4

ಐಐಟಿ ದೆಹಲಿ ಲ್ಯಾಬ್ ಡಾ. ರೋಹನ್ ಪಾಲ್ ಇದನ್ನು ಅಭಿವೃದ್ಧಿಪಡಿಸಿದ್ದು ಅಂಧರಿಗೆ ಈ ಸ್ಮಾರ್ಟ್ ಕೇನ್ ವರವಾಗಿ ಪರಿಣಮಿಸಲಿದೆ. ಬೆಲೆ ರೂ 3,000 ಆಗಿದೆ.

#5

#5

ಈ ಪಾಕೆಟ್ ಗಾತ್ರದ ಇಮೇಜಿಂಗ್ ಡಿವೈಸ್ ಆರ್ಥಿಕವಾಗಿ ಅತ್ಯುತ್ತಮವಾಗಿದೆ. ಗ್ರಾಮೀಣ ಭಾಗದಲ್ಲಿ ಜನನ ಪೂರ್ವ ರೋಗಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.

#6

#6

ವಿಶ್ವದ ಕಡಿಮೆ ಬೆಲೆಯ ಟ್ಯಾಬ್ಲೆಟ್‌ನತ್ತ ನೋಟ ಹರಿಸುತ್ತಿದ್ದೀರಾ ಹಾಗಿದ್ದರೆ ಇಲ್ಲಿದೆ ಆಕಾಶ್ ಟ್ಯಾಬ್ಲೆಟ್. ಕಡಿಮೆ ಬೆಲೆಯಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯ.

#7

#7

ನೀರು ಶುದ್ಧೀಕರಿಸುವ ಕಡಿಮೆ ಬೆಲೆಯ ಪ್ಯೂರಿಫೈಯರ್ ಇದಾಗಿದೆ. ನೀರನ್ನು ಶುದ್ಧೀಕರಿಸುವ ಈ ಸಾಧನ ಬಜೆಟ್ ಬೆಲೆಯಲ್ಲಿ ಲಭ್ಯ.

#8

#8

ಅರುಣಾಚಲಮ್ ಮುರುಗನಾಥಮ್ ಭಾರತದ ಮಹಿಳೆಯರಿಗಾಗಿ ಕಡಿಮೆ ಬೆಲೆಯ ನ್ಯಾಪ್‌ಕಿನ್‌ಗಳನ್ನು ಉತ್ಪಾದಿಸಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಗಂಟೆಗೆ 120 ನ್ಯಾಪ್‌ಕಿನ್ಸ್ ಅನ್ನು ಇದು ಸಿದ್ಧಪಡಿಸುತ್ತದೆ. ಇದಕ್ಕೆ ತಗಲುವ ವೆಚ್ಚ ರೂ 75,000 ಮತ್ತು 3,000,000 ಆಗಿದೆ. ಹಲವಾರು ಎನ್‌ಜಿಓಗಳೊಂದಿಗೆ ಸಂಘಟಿತರಾಗಿ ಹಳ್ಳಿಯ ಮೂಲೆ ಮೂಲೆಗಳಿಗೂ ತಮ್ಮ ಉತ್ಪನ್ನವನ್ನು ತಲುಪಿಸುವ ಇರಾದೆ ಅರುಣಾಚಲಮ್ ಇವರದ್ದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ನಮ್ಮ ಕನ್ನಡ.ಗಿಜ್‌ಬಾಟ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Take a look at these 8 inventions that show how Indian minds create world-class solutions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+