ಯಶಸ್ವಿ ಟೆಕ್ ಉದ್ಯಮಿಯ ಯಶಸ್ಸಿನ ರಹಸ್ಯಗಳೇನು?
ಒಬ್ಬ ಯಶಸ್ವಿ ಉದ್ಯಮಿಯಾಗಲು ಇರಬೇಕಾದ ಅರ್ಹತೆಗಳೇನು? ಮತ್ತು ಈ ಯಶಸ್ವಿ ಉದ್ಯಮಿಗಳು ವಾರಾಂತ್ಯದಲ್ಲಿ ಕೂಡ ಕಾರ್ಯನಿರತರಾಗಿರುತ್ತಾರಾ ಮತ್ತು ವಾರಾಂತ್ಯವನ್ನು ಅವರು ಹೇಗೆ ಕಳೆಯುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ. ಹಾಗಿದ್ದರೆ ಯಶಸ್ವಿ ಉದ್ಯಮಿಗಳು ವಾರಾಂತ್ಯದಲ್ಲಿ ತಮ್ಮ ಸಹಾಯವನ್ನು ಹೇಗೆ ಕಳೆಯುತ್ತಾರೆ ಎಂಬುದನ್ನು ಇಲ್ಲಿ ನೋಡೋಣ.

#1
ವಾರದ ದಿನಗಳಲ್ಲೂ ಇವರು ಬೇಗ ಏಳುತ್ತಾರೆ ಅಂತೆಯೇ ವಾರಾಂತ್ಯಗಳಲ್ಲೂ ಇವರು ಬೇಗನೇ ಎದ್ದೇಳುತ್ತಾರೆ. ಸೋಮಾರಿಯಾಗಿ ಮಲಗಿರುವುದಿಲ್ಲ.

#2
ನಿಯಮಿತವಾಗಿ ವ್ಯಾಯಾಮ ಮಾಡುವುದು ಉದ್ಯಮಿಗಳ ಚಟುವಟಿಕೆಯಾಗಿರುತ್ತದೆ. ವಾರದಲ್ಲೂ ನಡೆಸುವ ಅದೇ ವ್ಯಾಯಾಮಗಳನ್ನೇ ವಾರಾಂತ್ಯಗಳಲ್ಲೂ ಅವರು ಮಾಡುತ್ತಾರೆ.

#3
ಇತರೆ ದಿನಗಳಲ್ಲಿ ಕೆಲಸದ ಸಲುವಾಗಿ ಅವರಿಗೆ ಕುಟುಂಬ ಸದಸ್ಯರಿಗೆ ಸಮಯ ನೀಡಲಾಗುವುದಿಲ್ಲ. ಅದಕ್ಕಾಗಿಯೇ ವಾರಾಂತ್ಯಗಳಲ್ಲಿ ಅವರು ಕುಟುಂಬದವರಿಗೆ ಸಮಯ ಮೀಸಲಿಡುತ್ತಾರೆ. ಹೀಗೆ ಕೆಲಸದ ನಡುವೆಯೂ ಕುಟುಂಬದವರಿಗೆ ಸಮಯವನ್ನು ಮೀಸಲಿರಿಸಲು ಅವರಿಗೆ ಸಾಧ್ಯವಾಗುತ್ತದೆ.

#4
ಈವೆಂಟ್‌ಗಳಲ್ಲಿ ಸಂಪರ್ಕಗಳನ್ನು ಮಾಡಿಕೊಳ್ಳುವ ಇವರುಗಳು ವಾರಾಂತ್ಯದಲ್ಲೂ ಅದನ್ನು ನಿರ್ವಹಿಸುತ್ತಾರೆ.

#5
ತಮ್ಮ ಇತರೆ ಹವ್ಯಾಸಗಳನ್ನು ವಾರಾಂತ್ಯಗಳಲ್ಲಿ ನಡೆಸುವ ಅವರು ಚಿತ್ರಕಲೆ, ಬೈಕಿಂಗ್, ಬರೆಯವುದು ಹೀಗೆ ತಮ್ಮ ನೆಚ್ಚಿನ ಕೆಲಸಗಳನ್ನು ಪೂರೈಸಿಕೊಳ್ಳುತ್ತಾರೆ.

#6
ವಾರದ ದಿನಗಳಲ್ಲಿ ತಮ್ಮ ಕೆಲಸಗಳಲ್ಲಿ ವ್ಯಸ್ತರಾಗುವ ಇವರುಗಳು ತಮ್ಮ ಹವ್ಯಾಸಗಳಿಂದ ಸಂತಸವನ್ನು ಪಡೆದುಕೊಳ್ಳುತ್ತಾರೆ. ಇದು ಅವರಿಗೆ ವಿಶ್ರಾಂತಿಯನ್ನು ನೀಡುತ್ತದೆ.

#7
ವಾರಾಂತ್ಯಗಳಲ್ಲಿ ಸಂಪೂರ್ಣ ವಾರಕ್ಕಾಗಿ ಇವರು ಯೋಜನೆಗಳನ್ನು ನಡೆಸುತ್ತಾರೆ. ಶನಿವಾರ ಭಾನುವಾರವೇ ತಮ್ಮ ವಾರದ ಕೆಲಸಕ್ಕಾಗಿ ಇವರು ಯೋಜನೆಗಳನ್ನು ರೂಪಿಸುತ್ತಾರೆ.

#8
ವಾರದ ದಿನಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳನ್ನು ಅವರಿಗೆ ಬಳಸಲೇ ಬೇಕಾಗಿರುತ್ತದೆ. ಆದರೆ ವಾರಾಂತ್ಯಗಳಲ್ಲಿ ಈ ಉಪಕರಣಗಳಿಂದ ಅವರು ದೂರವಿದ್ದು ತಮ್ಮನ್ನು ತಾವು ಬಿಡುವಾಗಿರಿಸಿಕೊಳ್ಳುತ್ತಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








