ಈ ಸುದ್ದಿ ಕೇಳಿದ್ರೆ ಬ್ಯಾಟರಿ ಚಾಲಿತ ಕಾರು ಖರೀದಿಗೆ ಕ್ಯೂ ನಿಲ್ಲುವುದು ಪಕ್ಕಾ!!

  |

  ಭಾರತವನ್ನು ಹೆಚ್ಚು ಕಾಡುತ್ತಿರುವ ಪೆಟ್ರೋಲ್, ಡೀಸೆಲ್ ಸಮಸ್ಯೆಗೆ ಎಲೆಕ್ಟ್ರಿಕ್ ವಾಹನಗಳು ಪರ್ಯಾಯವಾಗುತ್ತವೆ ಎಂಬ ನಂಬಿಕೆ ಈಗ ಧೃಡವಾಗಿದೆ. 2015ರಿಂದ ಈಚೆಗೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ತುಸು ಚುರುಕಾಗಿದೆ. ಬ್ಯಾಟರಿ ಚಾಲಿತ ವಾಹನಗಳ ಖರೀದಿಯನ್ನು ಉತ್ತೇಜಿಸಲು ಸರ್ಕಾರ 795ಕೋಟಿ ರೂಪಾಯಿಗಳ ಭಾರೀ ಹಣವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.

  ಈಗ ಒಂದು ಕಾರನ್ನು ಖರಿದಿಸಬೇಕಿದ್ದರೆ, ಗರಿಷ್ಠ ಶೇ 28ರಷ್ಟು ಜಿಎಸ್‌ಟಿ ಜತೆಗೆ ಇದರ ಮೇಲೆ ಶೇ 22ರಷ್ಟು ಸೆಸ್ ಕೂಡಾ ಭರಿಸಬೇಕಿದೆ. ಆದರೆ ಬ್ಯಾಟರಿ ವಾಹನಗಳಿಗೆ ಶೇ 12ರಷ್ಟು ತೆರಿಗೆ ಮಾತ್ರ ಇರುವುದು ಮತ್ತು ಲಿಥಿಯಂ ಅಯಾನ್ ಬ್ಯಾಟರಿ ಮೇಲಿನ ತೆರಿಗೆಯನ್ನೂ ಶೇ 28ರಿಂದ 18ಕ್ಕೆ ಇಳಿಸಿರುವುದು ಕೂಡ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ.

  ಈ ಸುದ್ದಿ ಕೇಳಿದ್ರೆ ಬ್ಯಾಟರಿ ಚಾಲಿತ ಕಾರು ಖರೀದಿಗೆ ಕ್ಯೂ ನಿಲ್ಲುವುದು ಪಕ್ಕಾ!!

  ಇಷ್ಟೆಲ್ಲಾ ಪ್ರೋತ್ರಾಹವಿದ್ದರೂ ಈವರೆಗೂ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಬ್ಯಾಟರಿ ಚಾಲಿತ ವಾಹನಗಳನ್ನು ಎಲ್ಲೆಂದರಲ್ಲಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಇದರೂ ಸಮಯ ಸಾಲುವುದಿಲ್ಲ ಎಂಬ ಆತಂಕ ಇದಕ್ಕೆ ಕಾರಣವಾಗಿದೆ.! ಆದರೆ, ಇನ್ಮುಂದೆ ಈ ಸಮಸ್ಯೆಗಳ ಚಿಂತೆ ಬಿಡಿ. ಈಗ ಕೇವಲ 20 ನಿಮಿಷದಲ್ಲೇ ನಿಮ್ಮ ಕಾರು 80 ರಷ್ಟು ಚಾರ್ಜ್ ಆಗಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕೇವಲ 20 ನಿಮಿಷ ಸಾಕು!

  ಸದ್ಯ ಭಾರತದಲ್ಲಿರುವ ಈಗಿನ ತಂತ್ರಜ್ಞಾನ ಬಳಸಿಕೊಂಡು ಬ್ಯಾಟರಿ ಚಾಲಿತ ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 24 ಗಂಟೆ ಬೇಕು. ಆದರೆ, ವೇಗದ ಚಾರ್ಜರ್‌ಗಳನ್ನು ಬಳಿಸಿದಲ್ಲಿ 20 ನಿಮಿಷದಲ್ಲಿ ಶೇ 80ರಷ್ಟು ಚಾರ್ಜ್‌ ಮಾಡಬಹುದಾಗಿದೆ. ಈ ವೇಗದ ಚಾರ್ಜರ್‌ಗಳು ಶೀಘ್ರವೇ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿವೆ.

  ತಂತ್ರಜ್ಞಾನದ ಆಯ್ಕೆಯಲ್ಲಿ ಸರ್ಕಾರ!

  ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ವೇಗದ ಚಾರ್ಜಿಂಗ್ ತಂತ್ರಜ್ಞಾನ ಜಾರಿಗೆ ಬಂದಿದೆ.ಯುರೋಪಿಯನ್ ಕಂಬೈಂಡ್ ಚಾರ್ಜಿಂಗ್ ವ್ಯವಸ್ಥೆ ಮತ್ತು ಚಡೆಮೊ ಎಂಬ ತಂತ್ರಜ್ಞಾಗಳು ಭಾರತದಲ್ಲಿನ ಅವಕಾಶದತ್ತ ನೋಡುತ್ತಿವೆ. ಈ ತಂತ್ರಜ್ಞಾನಗಳನ್ನು ಒಂದನ್ನು ಅಳವಡಿಸಿಕೊಳ್ಳಲು ಸರ್ಕಾರ ಹಾಗೂ ಕಾರು ತಯಾರಕರು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

  ಬ್ಯಾಟರಿ ಚಾಲಿತ ವಾಹನ ಪರ್ವ!

  ಬ್ಯಾಟರಿ ಚಾಲಿತ ವಾಹನಗಳ ಪರ್ವ ಆರಂಭವಾಗಲು ಈಗಾಗಲೇ ವೇದಿಕೆ ಸಿದ್ಧಗೊಳ್ಳುತ್ತಿದೆ. ತೆರಿಗೆ ಇಳಿಸುವ ಜೊತೆಗೆ ಸಹಾಯಧನವನ್ನು ನೀಡುತ್ತಿರುವ ಸರ್ಕಾರ ವೇಗದ ಚಾರ್ಜರ್ ತಂತ್ರಜ್ಞಾನದ ಮೊರೆಹೋಗಿದೆ. ಹಾಗಾಗಿ, 20 ನಿಮಿಷದಲ್ಲಿ ಶೇ 80ರಷ್ಟು ಚಾರ್ಜ್‌ ಮಾಡಬಹುದಾಗಿದ ತಂತ್ರಜ್ಞಾನ ಸಹಾಯದಿಂದ ಬ್ಯಾಟರಿ ಚಾಲಿತ ವಾಹನ ಪರ್ವ ಶುರುವಾಗಲಿದೆ.

  ಸಮಸ್ಯೆ ಕೂಡ ಇದೆ.!

  ಬ್ಯಾಟರಿ ಚಾಲಿತ ವಾಹನಗಳಲ್ಲಿ ಬಹುಮುಖ್ಯವಾದ ಬ್ಯಾಟರಿ ಪ್ಯಾಕ್‌ಗಳು ಮತ್ತು ಇಂಧನ ಕೋಶಗಳು ದುಬಾರಿಯಾಗಿರುವುದು ಇದಕ್ಕೆ ಕಾರಣವಾಗಿದೆ. ಒಂದು ವಾಹನದ ಒಟ್ಟು ತಯಾರಿಕಾ ವೆಚ್ಚದಲ್ಲಿ ಇವುಗಳ ಪಾಲೇ ಶೇ 80ರಷ್ಟು ಇರುವುದರಿಂದ ಇವುಗಳ ಬೆಲೆ ಗಗನಕ್ಕೇರಿವೆ. ಹಾಗಾಗಿ, ವೇಗದ ಚಾರ್ಜರ್‌ಗಳ ಬೆಲೆ ಕೂಡ ಹೆಚ್ಚಿರುವುದು ಸ್ಪಷ್ಟವಾಗಿದೆ.

  ದೇಶದಲ್ಲೇ ತಯಾರು?

  ಬ್ಯಾಟರಿ ಚಾಲಿತ ವಾಹನಗಳ ಇಂಧನ ಕೋಶಗಳು ದುಬಾರಿಯಾಗಿರುವುದರಿಂದ, ಇವುಗಳನ್ನು ದೇಶೀಯವಾಗಿ ಉತ್ಪಾದಿಸುವ ಮೂಲಕವೂ ಬ್ಯಾಟರಿ ಚಾಲಿತ ವಾಹನಗಳ ಬೆಲೆ ಇಳಿಕೆ ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಂದು ವೇಳೆ ಸರ್ಕಾರ ಇದಕ್ಕೆ ಮನಸ್ಸು ಮಾಡಿದರೆ, ನಾವು ನೀವೆಲ್ಲಾ ಬ್ಯಾಟರಿ ಚಾಲಿತ ಕಾರನ್ನು ಖರೀದಿಸಲು ಕ್ಯೂ ನಿಲ್ಲುವುದು ಪಕ್ಕಾ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How long does it take to charge a car battery with a charger?. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more