ಒಂದೇ ಒಂದು ಕರೆಯಿಂದ ಈ ವ್ಯಕ್ತಿ ಕಳೆದುಕೊಂಡ ಹಣ ಎಷ್ಟು ಗೊತ್ತಾ? ಎಚ್ಚರವಿರಲಿ!
ಇಂದಿನ ದಿನಗಳಲ್ಲಿ ಆನ್‌ಲೈನ್ ಸ್ಕ್ಯಾಮ್‌ಗಳಿಗೆ ಅಂತ್ಯವೇ ಇಲ್ಲದಂತಾಗಿದೆ. ಪ್ರತಿನಿತ್ಯವೂ ಒಂದಲ್ಲ ಒಂದು ಆನ್‌ಲೈನ್ ಸ್ಕ್ಯಾಮ್ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಕೋಲ್ಕತ್ತಾದಲ್ಲಿ ಹೊಸ ಪ್ರಕರಣವೊಂದು ದಾಖಲಾಗಿದ್ದು, ಇಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ ವಂಚಕರು ಉಂಡೆನಾಮ ಹಾಕಿದ್ದಾರೆ. ಬ್ಯಾಂಕ್ ಕೆವೈಸಿ ಹೆಸರಿನಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ.
ಹೌದು, ಕೋಲ್ಕತ್ತಾದ 83 ವರ್ಷದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ ಬ್ಯಾಂಕ್ ಕೆವೈಸಿ ಹೆಸರಿನಲ್ಲಿ ವಂಚಕರು 2.5 ಲಕ್ಷ ರೂ.ವಂಚನೆ ಮಾಡಿದ್ದಾರೆ. ಠಾಕುರ್ಪುಕೂರ್‌ನಲ್ಲಿ ನೆಲೆಸಿರುವ ನಿವೃತ್ತ ಅಧಿಕಾರಿ ಎಸ್.ಪಿ. ಸಿನ್ಹಾ ಅವರೇ ವಂಚಕರಿಂದ ಮೋಸ ಹೋದವರು. ಸಿನ್ಹಾ ಅವರಿಗೆ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿ ವಂಚನೆ ಮಾಡಲಾಗಿದೆ. ಅಷ್ಟಕ್ಕೂ ಈ ಪ್ರಕರಣ ನಡೆದಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿನ್ಹಾ ಅವರು ಪಿಂಚಣಿ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಯಿಂದ ಕರೆ ಮಾಡಿರುವುದಾಗಿ ವಂಚಕರು ಹೇಳಿದ್ದಾರೆ. ಅಲ್ಲದೆ ನಿಮ್ಮ ಬ್ಯಾಂಕ್ ಶಾಖೆಯ "ಟೇಬಲ್ ಸಂಖ್ಯೆ 3" ರಿಂದ ಕರೆ ಮಾಡಿದ್ದು ನೀವು ನಿಮ್ಮ ಕೆವೈಸಿ ವಿವರಗಳನ್ನು ನೀಡಬೇಕೆಂದು ಕೇಳಿದ್ದಾರೆ. ಕೆವೈಸಿ ಅಪ್ಡೇಟ್‌ಗಾಗಿ ವಿವರಗಳನ್ನು ನೀಡಬೇಕೆಂದು ಹೇಳಿದ ವಂಚಕರು ವಂಚಿಸಿದ್ದಾರೆ. ಸಿನ್ಹಾ ಅವರು ತಮ್ಮ ಬ್ಯಾಂಕ್ ಖಾತೆಗೆ ಸಂಬಂದಿಸಿದ ಕೆಲಸಕ್ಕಾಗಿ ಅದೇ ಟೇಬಲ್‌ಗೆ ಭೇಟಿ ನೀಡುತ್ತಿದ್ದರಿಂದ ಇದರ ಬಗ್ಗೆ ಹೆಚ್ಚು ಯೋಚಿಸುವುದಕ್ಕೆ ಹಯೋಗಿಲ್ಲ.
ಇದೇ ಕಾರಣಕ್ಕೆ ಕರೆ ಮಾಡಿದವರು ಕೇಳಿದ ಎಲ್ಲಾ ಮಾಹಿತಿಯನ್ನು ಸಿನ್ಹಾ ಅವರು ಒದಗಿಸಿದ್ದಾರೆ. ಕೆವೈಸಿ ವಿವರಗಳನ್ನು ನೀಡುತ್ತಿದ್ದ ಹಾಗೇ ವಂಚಕರು ಸಿನ್ಹಾ ಅವರ ಖಾತೆಗೆ ಪ್ರವೇಶಿಸಿದ್ದಾರೆ. ಅಲ್ಲದೆ ಸಿನ್ಹಾ ಅವರ ಖಾತೆಯಿಂದ 2,57,650 ರೂ.ಗಳನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ ಅವರ ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿಗಳಿಗೆ ಪ್ರವೇಶವನ್ನು ಕಳೆದುಕೊಳ್ಳುವ ಮೂಲಕ ಕರೆಯನ್ನು ಕಡಿತಗೊಳಿಸಲಾಗಿದೆ.

ಈ ಪ್ರಕರಣವು ವಿಶೇಷವಾಗಿ ವಯಸ್ಸಾದವರನ್ನು ಟಾರ್ಗೆಟ್ ಮಾಡಿದಂತಿದೆ. ವಯೋವೃದ್ದರನ್ನು ಸುಲಭವಾಗಿ ವಂಚಿಸುವುದಕ್ಕೆ ಆನ್‌ಲೈನ್ ಸ್ಕ್ಯಾಮರ್‌ಗಳ ಈ ಹಾದಿಯನ್ನು ಹಿಡಿದಿರುವು ಸ್ಪಷ್ಟವಾಗಿದೆ. ಇನ್ನು ಸರ್ಕಾರ ಅಥವಾ ಬ್ಯಾಂಕ್‌ಗಳು ಎಂದಿಗೂ ಕೂಡ ತಮ್ಮ ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಮಾಡುವಂತೆ ಫೋನ್ ಕರೆಗಳ ಮೂಲಕ ತಿಳಿಸಿಸುವುದಿಲ್ಲ ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ. ಬದಲಿಗೆ ನಿಮ್ಮ ಮಾಹಿತಿಯನ್ನು ನವೀಕರಿಸಲು KYC ಅಪ್‌ಡೇಟ್‌ಗೆ ಸಂಬಂಧಿಸಿದಂತೆ ತಮ್ಮ ಬ್ಯಾಂಕ್ ಶಾಖೆಗೆ ಬೇಟಿ ನೀಡುವುದು ಸೂಕ್ತವಾಗಿದೆ.
ಆನ್‌ಲೈನ್‌ನಲ್ಲಿ ನಿಮ್ಮ KYC ವಿವರ ಅಪ್ಡೇಟ್ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ ಬ್ಯಾಂಕಿನ ಆನ್‌ಲೈನ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
* ಇದರಲ್ಲಿ KYC ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ನಂತರ ಅಪ್‌ಡೇಟ್ KYC ಬಟನ್ ಅನ್ನು ಆಯ್ಕೆ ಮಾಡಿ.
* ಇದರಲ್ಲಿ ನೀವು ಅಪ್ಡೆಟ್ ಮಾಡಲು ಬಯಸುವ ಮಾಹಿತಿಯನ್ನು ಆಯ್ಕೆಮಾಡಿ.
* ನಿಮಗೆ ಬೇಕಾದ ಬದಲಾವಣೆಗಳನ್ನು ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ.
* ನಂತರ ನಿಮ್ಮ ವಿನಂತಿಯನ್ನು ಮೌಲ್ಯೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ನಮೂದಿಸಬೇಕಾಗುತ್ತದೆ.

ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವುದು ಹೇಗೆ?
* ಮೊದಲಿಗೆ https://cybercrime.gov.in ವೆಬ್‌ಸೈಟ್ ಮೂಲಕ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ತೆರೆಯಿರಿ
* ನಂತರ ಪೋರ್ಟಲ್‌ನ ಮೇನ್‌ಪೇಜ್‌ನಲ್ಲಿ ಕಾಣಿಸುವ 'ಫೈಲ್ ಎ ಕಂಪ್ಲೇಂಟ್' ಅನ್ನು ಕ್ಲಿಕ್ ಮಾಡಿರಿ
* ಇದೀಗ ತೆರೆಯುವ ಪೇಜ್‌ನಲ್ಲಿ ಕಾಣಿಸುವ ನಿಯಮಗಳು ಮತ್ತು ಷರತ್ತುಗಳನ್ನು ಓದಿರಿ ಮತ್ತು ಅಕ್ಸೆಪ್ಟ್ ಮಾಡಿರಿ
* ನಂತರ 'ರಿಪೋರ್ಟ್' ಅದರ್ ಸೈಬರ್ ಕ್ರೈಮ್' ಆಯ್ಕೆಯ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ 'ಸಿಟಿಜನ್ ಲಾಗಿನ್' ಆಪ್ಶನ್ ಅನ್ನು ತೆರೆಯಿರಿ
* ನಂತರ ಹೆಸರು, ಇಮೇಲ್ ಮತ್ತು ಫೋನ್ ಸಂಖ್ಯೆ ಸೇರಿದಂತೆ ನಿಮ್ಮ ವಿವರಗಳನ್ನು ನಮೂದಿಸಬೇಕಾಗುತ್ತದೆ
* ಇದೀಗ ನಿಮ್ಮ ಮೊಬೈಲ್ ನಂಬರ್‌ಗೆ OTP ಬರಲಿದೆ ಅದನ್ನು ಸೂಕ್ತ ಜಾಗದಲ್ಲಿ ನಮೂದಿಸಿ
* ನಂತರ ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
* ಇದೀಗ ನೀವು ವರದಿ ಮಾಡಲು ಬಯಸುವ ಸೈಬರ್ ಕ್ರೈಂ ನ ವಿವರಗಳನ್ನು ಒದಗಿಸಬೇಕಾಗುತ್ತದೆ
* ಮಾಹಿತಿಯನ್ನು ಪರಿಶೀಲಿಸಿದ ನಂತರ, 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿ.
* ಇದೀಗ ನಿಮ್ಮನ್ನು ಘಟನೆಯ ವಿವರಗಳ ಪೇಜ್‌ಗೆ ಕರೆದೊಯ್ಯಲಾಗುತ್ತದೆ
* ಇಲ್ಲಿ, ಸ್ಕ್ರೀನ್‌ಶಾಟ್‌ಗಳು ಅಥವಾ ಫೈಲ್‌ಗಳಂತಹ ಕ್ರೈಂ ವಿವರಗಳನ್ನು ಒದಗಿಸಬೇಕಾಗುತ್ತದೆ
* ನಂತರ, 'ಸೇವ್ ಆಂಡ್ ನೆಕ್ಸ್ಟ್' ಕ್ಲಿಕ್ ಮಾಡಿ.
* ಇದೀಗ ನೀವು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ ಮತ್ತು 'ಸಬ್ಮಿಟ್' ಬಟನ್ ಕ್ಲಿಕ್ ಮಾಡಬೇಕಾಗುತ್ತದೆ.
* ನಂತರ ನಿಮ್ಮ ದೂರನ್ನು ಸ್ವೀಕರಿಸಿರುವುದರ ಬಗ್ಗೆ ಸಂದೇಶ ಬರಲಿದೆ.


Click it and Unblock the Notifications








