ನಿಮಿಷದಲ್ಲೇ ಮೊಬೈಲ್ ಬ್ಯಾಟರಿ ಪೂರ್ತಿ ಚಾರ್ಜ್!..ವಿಶ್ವದ ಗಮನ ಸೆಳೆದ ನೂತನ ಸಂಶೋಧನೆ!!
ನಿಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತಿದೆ ಎಂಬ ಚಿಂತೆಯನ್ನು ಇನ್ಮುಂದೆ ಬಿಟ್ಟು ಬಿಡಿ. ಏಕೆಂದರೆ, ಕೇಂಬ್ರಿಜ್ಡ್ ವಿಶ್ವವಿದ್ಯಾನಿಲಯದ ಹತ್ತಾರು ಸಂಶೋಧಕರು ಸೇರಿ ಒಂದೇ ನಿಮಿಷದಲ್ಲಿ ಮೊಬೈಲ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುವಂತ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ದಿ ಪಡಿಸಿ ವಿಶ್ವದ ಗಮನ ಸೆಳೆದಿದ್ದಾರೆ.
ಹೌದು, ಕೇಂಬ್ರಿಜ್ಡ್ ವಿಶ್ವವಿದ್ಯಾನಿಲಯದ ಹತ್ತಾರು ಸಂಶೋಧಕರು ಸೇರಿ, ನಿಮಿಷಗಳಲ್ಲಿ ಸಂಪೂರ್ಣ ಸಾಮರ್ಥ್ಯದವರೆಗೂ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಅನುಮತಿಸುವಂತಹ ಒಂದು ಹೊಚ್ಚ ಹೊಸ ಭೌತಿಕ ವಸ್ತುವನ್ನು ಕಂಡುಹಿಡಿದಿದ್ದಾರೆ. ಸಂಶೋಧಕರು ಅಭಿವೃದ್ದಿಪಡಿಸಿರುವ ಈ ಹೊಸ ಭೌತಿಕ ವಸ್ತುವಿಗೆ 'ನಿಯೋಬಿಯಮ್ ಟಂಗ್‌ಸ್ಟೈನ್ ಆಕ್ಸೈಡ್' ಹೆಸರಿಡಲಾಗಿದೆ.

ಈ 'ನಿಯೋಬಿಯಮ್ ಟಂಗ್‌ಸ್ಟೈನ್ ಆಕ್ಸೈಡ್' ಬ್ಯಾಟರಿಯೊಳಗೆ ಕಡಿಮೆ ಪ್ರತಿರೋಧವನ್ನುನೀಡುತ್ತದೆ ಮತ್ತು ವಿಶಿಷ್ಟ ಸೆರಾಮಿಕ್ ಎಲೆಕ್ಟ್ರೋಡ್ ವಸ್ತುಗಳ ಮೂಲಕಧನಾತ್ಮಕವಾಗಿ ಚಾರ್ಜ್ ಮಾಡಲಾದ ಕಣಗಳು ನೂರಾರು ಬಾರಿ ವೇಗವಾಗಿ ಪ್ರಯಾಣಿಸಲು ಅನುಮತಿಸುತ್ತದೆಯಂತೆ. ಹಾಗಾದರೆ, ವಿಶ್ವದ ಗಮನ ಸೆಳೆದ ಈ ಸಂಶೋಧನೆ ಹೇಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಹೊಸ ಪೀಳಿಗೆಯ ಬ್ಯಾಟರಿ ತಂತ್ರಜ್ಞಾನ!
ಸಂಶೋಧಕರು ಹೇಳುವಂತೆ ಈ ಹೊಸ ಸಂಶೋಧನೆಯು ರಾತ್ರಿ ಪೂರ್ತಿ ಬ್ಯಾಟರಿ ಚಾರ್ಜ್ ಮಾಡುವಂತಹ ಕ್ರಮವನ್ನು ಅಳಿಸುತ್ತದೆ. ಸಂಶೋಧನೆಯ ಫಲವಾಗಿ ಬ್ಯಾಟರಿಗಳು ಹೊಸ ಪೀಳಿಗೆಯ ಅವಶ್ಯಕತೆಗೆ ಬಂದಿವೆ. ಈ ನೂತನ ಸಂಶೋಧನೆ ನಿಮಿಷದಲ್ಲಿ ಮೊಬೈಲ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುವಂತಹ ತಂತ್ರಜ್ಞಾನವಾಗಿದೆ ಎಂದು ಹೇಳಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ ಬ್ಯಾಟರಿ ತಂತ್ರಜ್ಞಾನ?
ಮೊದಲೇ ಹೇಳಿದಂತೆ, ಸಂಶೋಧಕರು ಕಂಡುಹಿಡಿದಿರುವ 'ನಿಯೋಬಿಯಮ್ ಟಂಗ್‌ಸ್ಟೈನ್ ಆಕ್ಸೈಡ್' ಬ್ಯಾಟರಿಯೊಳಗೆ ಕಡಿಮೆ ಪ್ರತಿರೋಧವನ್ನು ನೀಡುತ್ತದೆ. ಪ್ರಸ್ತುತ ಇರುವ ತಾಂತ್ರಿಕತೆಗಿಂತ ನೂರಾರು ಬಾರಿ ವೇಗವಾಗಿ ಬ್ಯಾಟರಿ ಧನಾತ್ಮಕ ಕಣಗಳನ್ನು ಪ್ರಯಾಣಿಸಲು ಅನುಮತಿಸುತ್ತದೆ. ಇದರಿಂದ ನಿಮಿಷದಲ್ಲಿ ಮೊಬೈಲ್ ಬ್ಯಾಟರಿ ಚಾರ್ಜ್ ಫುಲ್ ಆಗುತ್ತದೆ.

ಹಳೆ ತಂತ್ರಜ್ಞಾನಕ್ಕಿಂತ ಹೇಗೆ ಭಿನ್ನ?
ನಿಯೋಬಿಯಂ ಟಂಗ್ಸ್ಟನ್ ಆಕ್ಸೈಡ್‌ಗಳು ಮೂಲಭೂತವಾಗಿ ವಿಭಿನ್ನವಾಗಿವೆ 'ಎಂದು ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಲೇಖಕ ಕೆಂಟ್ ಗ್ರಿಫಿತ್ ಹೇಳಿದ್ದಾರೆ. 'ಆಮ್ಲಜನಕ ಸ್ತಂಭಗಳು ಇತರ ಬ್ಯಾಟರಿ ಸಂಯುಕ್ತಗಳಿಗಿಂತ ಹೆಚ್ಚು ಗಡುಸಾದಂತೆ ಮಾಡುತ್ತವೆ, ಇದರಿಂದಾಗಿ ಲಿಥಿಯಂ ಅಯಾನುಗಳು ಹೆಚ್ಚು ವೇಗವಾಗಿ ಚಲಿಸುತ್ತವೆ ಎಂದು ತಿಳಿಸಿದ್ದಾರೆ.

ನಿಮಿಷದಲ್ಲಿ ಮೊಬೈಲ್ ಬ್ಯಾಟರಿ ಚಾರ್ಜ್ ಆಗುವುದು ಹೇಗೆ?
ಲಿಥಿಯಂ ಅಯಾನುಗಳು ಎಂದು ಕರೆಯಲ್ಪಡುವ ಧನಾತ್ಮಕ ಚಾರ್ಜ್ ಕಣಗಳನ್ನು ಚಾರ್ಜ್ ಮಾಡಲು, ಬ್ಯಾಟರಿಯ ನಕಾರಾತ್ಮಕ ಅಂತ್ಯಕ್ಕೆ ಹರಿಯುವಂತೆ ಮಾಡಬೇಕಾಗುತ್ತದೆ. ಹೆಚ್ಚಿನ ಕಾರ್ಯಕ್ಷಮತೆ ಬ್ಯಾಟರಿ ವಸ್ತುಗಳ (ಟಂಗ್ಸ್ಟನ್ ಆಕ್ಸೈಡ್) ಸಹಾಯದಿಂದ ಬ್ಯಾಟರಿ ಹೆಚ್ಚು ವೇಗವಾಗಿ ಚಾರ್ಜ್ ಆಗುತ್ತದೆ ಮತ್ತು ಅಧಿಕ ವಿದ್ಯುತ್ ಉತ್ಪಾದನೆಯನ್ನು ಸಹ ತಲುಪಿಸುತ್ತದೆ.

ನೂತನ ತಂತ್ರಜ್ಞಾನದ ಸುರಕ್ಷತೆ ಹೇಗಿದೆ?
ಹೆಚ್ಚಿನ ಶಕ್ತಿಯ ಸಾಂದ್ರತೆಯನ್ನು ಹೊಂದಿರುವಂತೆ ಗ್ರ್ಯಾಫೈಟ್ ನಕಾರಾತ್ಮಕ ವಿದ್ಯುದ್ವಾರಕ್ಕೆ ಸಾಮಾನ್ಯವಾಗಿ ಬಳಸುವ ವಸ್ತುವಾಗಿದೆ. ಇದು ಬೆಂಕಿಯ ಮತ್ತು ಸ್ಫೋಟಗಳಿಂದಾಗಿ ವಿಪರೀತ ವೈಫಲ್ಯಕ್ಕೆ ಕಾರಣವಾಗಬಹುದು. ಆದರೆ, ಸುರಕ್ಷಿತವಾದ ವೇಗದ ಚಾರ್ಜಿಂಗ್ ಅನ್ವಯಗಳಿಗೆ ಈ ವಸ್ತು ಖಂಡಿತವಾಗಿಯೂ ಯೋಗ್ಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ನೂತನ ಬ್ಯಾಟರಿ ತಂತ್ರಜ್ಞಾನ ಬಳಕೆ ಯಾವಾಗ?
ಹೊಸ ಬ್ಯಾಟರಿ ಸಾಮಗ್ರಿಗಳು ಇತ್ತೀಚಿನ ಸ್ಮಾರ್ಟ್ಫೋನ್‌ಗಳಲ್ಲಿ ಲಭ್ಯವಿರದಿದ್ದರೂ ಸಹ, ಹೊಸ ತಂತ್ರಜ್ಞಾನವು ಅಂತಿಮವಾಗಿ ಹೊಸ ಬ್ಯಾಟರಿಗಳ ಬ್ಯಾಟರಿಯ ಆಧಾರದ ಮೇಲೆ ರೂಪಿಸಬಹುದೆಂದು ಸಂಶೋಧಕರು ಸೂಚಿಸಿದ್ದಾರೆ. ಹಾಗಾಗಿ, 2020ರ ವೇಳೆಗೆ ಈ ತಂತ್ರಜ್ಞಾನ ಮೊಬೈಲ್ ಬ್ಯಾಟರಿಗಳಲ್ಲಿ ಬರಬಹುದು ಎಂಬುದು ಸಂಶೋಧಕ ಲೆಕ್ಕಾಚಾರ.!


Click it and Unblock the Notifications








