Home
ಸುದ್ದಿಜಾಲ

Cyber Fraud: ವರ್ಕ್‌ ಫ್ರಮ್‌ ಹೋಮ್‌ ಆಸೆಗೆ ಬಿದ್ದವನಿಗೆ ವಂಚನೆ: ರೂ. 20.54 ಲಕ್ಷ ಪಂಗನಾಮ !

ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಗಳು ಕೂಡ ದಿನೇ ದಿನೇ ಹೆಚ್ಚುತ್ತಲೇ ಇವೆ. ಆಪ್ ಡೌನ್‌ಲೋಡ್, ಹಣ ಡಬಲ್ ಮಾಡುವುದು, ವರ್ಕ್ ಫ್ರಮ್ ಹೋಮ್ ಸೇರಿ ಹಲವು ಆಮಿಷಗಳನ್ನು ಒಡ್ಡಿ ಸೈಬರ್ ವಂಚಕರು ಅಪರಾಧ ಎಸಗುತ್ತಿರುವ ಪ್ರಕರಣಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಿವೆ. ಇದೀಗ ಗ್ರೇಟರ್ ನೋಯ್ಡಾದ ನಿವಾಸಿಯೊಬ್ಬರು ಸೈಬರ್ ವಂಚನೆಗೆ (Cyber Fraud) ಒಳಗಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವರ್ಕ್‌ ಫ್ರಮ್‌ ಹೋಮ್‌ ಆಮಿಷವೊಡ್ಡಿ ಹಂತ ಹಂತವಾಗಿ ಹಣ ಪಡೆದು 20.54 ಲಕ್ಷ ರೂ. ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಂಚನೆಗೊಳಗಾದವರು ದೂರು ದಾಖಲಿಸಿದ್ದಾರೆ.

ಸಂದೀಪ್ ಕುಮಾರ್ ಎಂಬುವವರು ವಂಚನೆಗೊಳಗಾಗಿದ್ದು ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆ ಅಪರಿಚಿತ ಆರೋಪಿಗಳ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ನಡೆದ ಘಟನೆ ಇದಾಗಿದ್ದು ಕಳೆದ ಸೋಮವಾರ ವರದಿಯಾಗಿದೆ.

Cyber Fraud: ವರ್ಕ್‌ ಫ್ರಮ್‌ ಹೋಮ್‌ ಆಸೆಗೆ ಬಿದ್ದವನಿಗೆ ವಂಚನೆ !

ಗ್ರೇಟರ್ ನೋಯ್ಡಾದ ಚಿ-1 ಸೆಕ್ಟರ್‌ನಲ್ಲಿ ವಾಸಿಸುತ್ತಿರುವ ನಿವಾಸಿ ಸಂದೀಪ್ ಕುಮಾರ್ ಎಂಬುವವರು ಸೈಬರ್ ವಂಚನೆಗೆ ಒಳಗಾಗಿರುವ ಕುರಿತು ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಟೆಕ್ಸ್ಟ್‌ ಮೆಸೇಜ್ ಬಂದಿದ್ದು, ಅದರಲ್ಲಿ ವರ್ಕ್‌ ಫ್ರಮ್ ಹೋಮ್‌ ಕೆಲಸದ ಆಮಿಷ ಒಡ್ಡಲಾಗಿತ್ತು, ಅದರಲ್ಲಿ Google Map ಮೂಲಕ ಹೋಟೆಲ್‌ಗಳ ರೇಟ್ ಮಾಡಬೇಕೆಂಬ ಸಂದೇಶ ಕಳಿಸಲಾಗಿತ್ತು ಮತ್ತು ಇದಕ್ಕೆ ಪ್ರತಿಯಾಗಿ ತಾವು ಹಣ ಸ್ವೀಕರಿಸುವುದಾಗಿ ಟೆಕ್ಸ್ಟ್‌ ಮೆಸೇಜ್‌ನಲ್ಲಿ ಸೂಚನೆ ನೀಡಿದ್ದರು.

ಬಳಿಕ ವಂಚಕರು ಸಂದೀಪ್ ಕುಮಾರ್ ಅವರನ್ನು ಸುಮಾರು 100 ಸದಸ್ಯರಿರುವ ಟೆಲಿಗ್ರಾಮ್ ಗುಂಪಿಗೆ ಸೇರಿಸುತ್ತಾರೆ, ಅಲ್ಲಿ ಅವರು ರೇಟಿಂಗ್ ಕಾರ್ಯಗಳನ್ನು ನಿರ್ವಹಿಸಲು ಹೇಳುತ್ತಾರೆ ಮತ್ತು ಶೀಘ್ರದಲ್ಲೇ ಹೂಡಿಕೆ ಕಾರ್ಯಗಳು ಆರಂಭವಾಗಲಿವೆ ಎಂದು ತಿಳಿಸಿದ್ದರು ಎಂದು ಎಫ್‌ಐಆರ್‌ ನಲ್ಲಿ ತಿಳಿಸಿದ್ದಾರೆ. ತಾವು ಹೋಟೆಲ್‌ ಹಾಗೂ ಇತ್ಯಾದಿಗಳನ್ನು ರೇಟಿಂಗ್ ಮಾಡಲು ಪ್ರಾರಂಭಿಸಿದ್ದು, ಇದಕ್ಕಾಗಿ ಮೊದಲು 50,000 ರೂ. ಹೂಡಿಕೆ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಆದರೆ, ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ ಎಂದು ಕುಮಾರ್ ಅವರು ತಿಳಿಸಿದ್ದಾರೆ.

ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಹೆಚ್ಚುವರಿಯಾಗಿ 5 ಲಕ್ಷ ತೆರಿಗೆ ಪಾವತಿಸುವಂತೆ ಕೇಳಿದರು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮಗೆ ವಂಚನೆಯಾಗಿದೆ ಎಂದು ಅರಿತ ಕುಮಾರ್ ಅವರು ಅಲ್ಲಿಯವರೆಗೂ ಹೂಡಿಕೆ ಮಾಡಿದ್ದ 20,54,464 ರೂ. ಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತಾರೆ ಆದರೆ ಅದು ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ತಮ್ಮ ಹಣ ವಾಪಸ್ ಪಡೆಯಲು ತಮ್ಮ ಖಾತೆಗೆ 5 ಲಕ್ಷ ರೂ. ಹೆಚ್ಚುವರಿ ತೆರಿಗೆ ಪಾವತಿಸಲು ತಮ್ಮ ಬಳಿ ಕೇಳಿದ್ದಾರೆ. ಅಲ್ಲಿ ತಾವು ಸೈಬರ್ ವಂಚನೆಗೆ ಬಲಿಯಾಗಿರುವುದು ಅರಿವಾಯಿತು ಎಂದು ತಿಳಿಸಿದ್ದಾರೆ. ಅದುವರೆಗೂ ತಾವು ಹೂಡಕೆ ಮಾಡಿದ್ದ ಸುಮಾರು 20,54,464 ಹೂಡಿಕೆ ಹಣವನ್ನು ಹಿಂಪಡೆಯಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಕುಮಾರ್ ಅವರು ಪ್ರಕರಣ ದಾಖಲಿಸಿದ್ದಾರೆ. ಹಣಕಾಸಿನ ವಂಚನೆ ಜೊತೆಗೆ ಟೆಲಿಗ್ರಾಂ ಮತ್ತು ಫೋನ್ ಕರೆಗಳ ಮೂಲಕ ವಂಚಕರು ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಹ ಕುಮಾರ್ ಆರೋಪಿಸಿದ್ದಾರೆ.

ನೋಯ್ಡಾ ಸೆಕ್ಟರ್ 36 ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ಕುರಿತು ಐಪಿಸಿ ಸೆಕ್ಷನ್ 420 (ವಂಚನೆ), 506 (ಅಪರಾಧ ಬೆದರಿಕೆ), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Best Mobiles in India

English summary
A case has come out where a resident of Greater Noida has been subjected to Cyber fraud. 20.54 lakhs by getting money with the lure of work from home. He complained that he was cheated
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+