ವಿಶ್ವದ ಮೊತ್ತ ಮೊದಲ '3D ಪ್ರಿಂಟರ್' ಮನೆಗೆ ಫ್ರಾನ್ಸ್‌ನಲ್ಲಿ ಗೃಹಪ್ರವೇಶ!!

|

ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಒಂದು ಮನೆಯನ್ನು ಕಟ್ಟುವುದು ಜೀವಿತಾವಧಿಯ ಆಸೆಗಳಲ್ಲಿ ಒಂದು. ಆದರೆ, ಮನೆ ಕಟ್ಟುವ ಕೆಲಸ ಇನ್ಮುಂದೆ ಹಾಗಿರುವುದಿಲ್ಲ. ಏಕೆಂದರೆ, ತಂತ್ರಜ್ಞಾನದ ವಿಕಾಸದಲ್ಲಿ ಕೆಲವೇ ಗಂಟೆಗಳ ಸಮಯದಲ್ಲಿ ವಿಶ್ವದ ಮೊತ್ತ ಮೊದಲ 'ಮುದ್ರಣ ಗೊಂಡ' ಮನೆಗೆ ಫ್ರಾನ್ಸ್‌ನಲ್ಲಿ ಗೃಹಪ್ರವೇಶ ಆಗಿದೆ.

ಹೌದು, ಮೂರು ಮಕ್ಕಳೊಂದಿಗೆ ನೋರ್ಡೇನ್ ಮತ್ತು ನೌರಿಯಾ ರಾಮ್‌ದಾನಿ ಕುಟುಂಬವು ಮೊದಲ 'ಮುದ್ರಣ ಗೊಂಡ' ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾರೆ. ಮಾನವನು ತಂತ್ರಜ್ಞಾನ ಬಳಕೆಯಲ್ಲಿ ಮತ್ತೊಂದು ಮಜಲನ್ನು ಪ್ರವೇಶಿದ್ದಾನೆ. 3ಡಿ ಪ್ರಿಂಟರ್‌ಗಳನ್ನು ಉಪಯೋಗಿಸಿ ನಾವು ಏನೆಲ್ಲಾ ತಯಾರಿಸಬಹುದು ಎಂಬುದಕ್ಕೆ ಇದೊಂದು ಅಪ್ರತಿಮ ಉದಾಹರಣೆಯಾಗಿದೆ.

ವಿಶ್ವದ ಮೊತ್ತ ಮೊದಲ '3D ಪ್ರಿಂಟರ್' ಮನೆಗೆ ಫ್ರಾನ್ಸ್‌ನಲ್ಲಿ ಗೃಹಪ್ರವೇಶ!!

3ಡಿ ತಂತ್ರಜ್ಞಾನದ ಪ್ರಿಂಟರ್‌ಗಳು ಈ ಜಗತ್ತಿಗೆ ಕಾಲಿಟ್ಟಾಗ ಅವುಗಳನ್ನು ಕೇವಲ ವೈಜ್ಞಾನಿಕ ಪ್ರಯೋಗಗಳಿಗೆ ಮಾತ್ರ ಉಪಯೋಗಿಸಬಹುದು ಎಂದು ತಜ್ಞರು ಹೇಳಿದ್ದರು. ಆದರೆ, ಆ ತಂತ್ರಜ್ಞಾನದ ಬೆಳವಣಿಗೆ ತಜ್ಞರ ಮಾತನ್ನು ಸುಳ್ಳಾಗಿಸಿದೆ. ಹಾಗಾದರೆ, 3ಡಿ ತಂತ್ರಜ್ಞಾನದ ಮೊದಲ ಮನೆ ಹೇಗಿದೆ? ಮನೆಯ ವಿಶೇಷತೆಗಳು ಏನು ಎಂಬುದನ್ನು ಮುಂದೆ ತಿಳಿಯೋಣ.

3ಡಿ ಮನೆಯ ವಿಶ್ವದಾಖಲೆ

3ಡಿ ಮನೆಯ ವಿಶ್ವದಾಖಲೆ

3ಡಿ ತಂತ್ರಜ್ಞಾನದ ಮೂಲಕ ಮನೆಯನ್ನು ಸಹ ತಯಾರಿಸಲು ಸಾಧ್ಯ ಮತ್ತು ಅಂತಹ ಮನೆಯಲ್ಲಿ ವಾಸಿಸಲು ಸಾಧ್ಯ ಎಂಬುದನ್ನು ಫ್ರಾನ್ಸ್ ದಂಪತಿಗಳು ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ. ‘3ಡಿ ತಂತ್ರಜ್ಞಾನ'ದಿಂದ ತಯಾರಿಸಿದ ಮೊದಲ ಮನೆಯಲ್ಲಿ ವಾಸಿಸಿದವರು ಎಂಬ ವಿಶೇಷ ದಾಖಲೆ ನೋರ್ಡೇನ್ ಮತ್ತು ನೌರಿಯಾ ದಂಪತಿಗಳ ಹೆಸರಿಗೆ ದಕ್ಕಿದೆ.

3ಡಿ ಪ್ರಿಂಟರ್ ಮನೆ ಹೇಗಿದೆ?

3ಡಿ ಪ್ರಿಂಟರ್ ಮನೆ ಹೇಗಿದೆ?

ನೋರ್ಡೇನ್ ಮತ್ತು ನೌರಿಯಾ ದಂಪತಿಗಳ ಅಭಿಲಾಷೆಯಂತೆ 1022 ಸ್ಕ್ವೇರ್ ಫೀಟ್ ಮನೆಯನ್ನು 3ಡಿ ಪ್ರಿಂಟರ್ ಮೂಲಕ ಮುದ್ರಣ ಮಾಡಲು ಸುಮಾರು ಗಂಟೆಗಳ ಸಮಯ ಸಾಕಾಗಿದೆಯಂತೆ. ಜತೆಗೆ, ಮನೆಯೊಳಗಿನ ಪರಿಕರ, ಪೀಠೋಪಕರಣ, ವಿನ್ಯಾಸಗಳನ್ನು ಸಂಪೂರ್ಣವಾಗಿ ಹೊಂದಿಸಲು ನಾಲ್ಕು ತಿಂಗಳು ಸಾಕಾಗಿದೆ.

ಹಣ ಮತ್ತು ಸಮಯದ ಉಳಿತಾಯ!

ಹಣ ಮತ್ತು ಸಮಯದ ಉಳಿತಾಯ!

3ಡಿ ತಂತ್ರಜ್ಞಾನದ ಮನೆಯನ್ನು ನಿರ್ಮಿಸುವಲ್ಲಿ ಮುಖ್ಯ ವಿನ್ಯಾಸಕಾರನಾಗಿ ಕೆಲಸ ಮಾಡಿದ ಬೆನೋಯ್ಟ್ ಫುರೆಟ್ ಅವರ ಪ್ರಕಾರ, 3ಡಿ ತಂತ್ರಜ್ಞಾನ ಉಪಯೋಗಿಸಿ ಮುದ್ರಿಸುವ ಮನೆಗಳ ವಿಶೇಷತೆ ಎಂದರೆ ಹಣ ಮತ್ತು ಸಮಯದ ಉಳಿತಾಯವಾಗುತ್ತದೆಯಂತೆ. ಸಾಮಾನ್ಯ ಮನೆಗಳಿಗಿಂತ ಶೇ.20% ಕಡಿಮೆ ಖರ್ಚಿನಲ್ಲಿ ಈ ಮನೆಯನ್ನು ತಯಾರಿಸಲಾಗಿದೆಯಂತೆ.

2,34,000 ಪೌಂಡುಗಳು

2,34,000 ಪೌಂಡುಗಳು

ವಿಶ್ವದ ಮೊತ್ತ ಮೊದಲ ‘ಮುದ್ರಣ ಗೊಂಡ' ಮನೆ ತಯಾರಿಕೆಗೆ ಸುಮಾರು 2,34,000 ಪೌಂಡುಗಳ ವೆಚ್ಚವಾಗಿದೆಯಂತೆ. ಈ ಮನೆಯು ಇದೇ ವಿಸ್ತೀರ್ಣದದಾಯಿಕ ಮನೆಗಿಂತ ಶೇ.20% ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾಗಿದೆ ಎಂದು ತಂತ್ರಜ್ಞರು ಹೇಳುತ್ತಾರೆ. ಭವಿಷ್ಯದಲ್ಲಿ 3ಡಿ ತಂತ್ರಜ್ಞಾನದ ಮನೆಗಳು ಶೇ.50 ರಷ್ಟು ಹಣ ಉಳಿಸುತ್ತವೆ ಎಂದು ಹೇಳುತ್ತಿದ್ದಾರೆ.

ಎಲ್ಲವೂ ಕಂಪ್ಯೂಟರ್!

ಎಲ್ಲವೂ ಕಂಪ್ಯೂಟರ್!

ಒಂದು ಮನೆಯನ್ನು ಕಂಪ್ಯೂಟರ್‌ನಲ್ಲಿ ಹೇಗೆ ಸ್ಕೆಚ್ ಮಾಡಲು ಸಾಧ್ಯವಿದೆಯೋ ಹಾಗೆಯೇ ಕಂಪ್ಯೂಟರ್ ಮೂಲಕವೇ ಅದರ ನಿರ್ಮಾಣ ಮಾಡುವುದು ಸಾಧ್ಯವಾಗಿದೆ. ಕಂಪ್ಯೂಟರ್‌ನಲ್ಲಿ ನೀಡಿದ ಮಾರ್ಗದರ್ಶನಗಳನ್ನು ನಿರ್ಧಿಷ್ಟವಾಗಿ ಪಾಲಿಸುವ ಯಂತ್ರಗಳು ಮಾನವನ ಸಹಾಯವಿಲ್ಲದೆ ಮನೆಯನ್ನು ನಿರ್ಮಿಸಿ ನೀಡುವಂತಹ ಕೆಲಸವೇ ಅದ್ಬುತ ಅಲ್ಲವೆ?.

ತೊಡಕು ಕೂಡ ಹೆಚ್ಚಿದೆ.

ತೊಡಕು ಕೂಡ ಹೆಚ್ಚಿದೆ.

3ಡಿ ತಂತ್ರಜ್ಞಾನದಲ್ಲಿ ಮನೆ ನಿರ್ಮಾಣದ ವಿಷಯ ಸುಲಭವಾದರೂ ಕೂ ಇಲ್ಲಿ ತೊಡಕುಗಳು ಕೂಡ ಹೆಚ್ಚಿವೆ. ಪ್ರಿಂಟರ್‌ಗಳ ದುಬಾರಿ ಬೆಲೆ, 3ಡಿ ತಂತ್ರಜ್ಞಾನ ಪರಿಕರ ಮತ್ತು ಸಾಮಗ್ರಿಗಳ ಬೆಲೆಗಳಿಂದಾಗಿ ಇವುಗಳ ಸಾರ್ವತ್ರಿಕ ಬಳಕೆ ಕಷ್ಟವಾಗಿದೆ. ಮನೆಯ ಗೋಡೆಯ ಎತ್ತರವನ್ನು ಎಟಕಬಲ್ಲಷ್ಟು ದೊಡ್ಡದಾದ 3ಡಿ ಪ್ರಿಂಟರ್ ಬೆಲೆ ಕೋಟಿಗಳನ್ನು ದಾಟಬಹುದು.

ಭವಿಷ್ಯದಲ್ಲಿ ಬಳಕೆಗೆ!

ಭವಿಷ್ಯದಲ್ಲಿ ಬಳಕೆಗೆ!

ವಿಶ್ವವಿದ್ಯಾಲಯದಲ್ಲೋ, ಪ್ರಯೋಗ ಶಾಲೆಯಲ್ಲೋ ಸ್ಥಾಪಿಸಲಾಗಿರುವ 3ಡಿ ಪ್ರಿಂಟರ್ ಉಪಯೋಗಿಸಿ ಮುದ್ರಿಸುವ ಪರಿ ಪಾಠ ಈಗಲೂ ಬಳಕೆಯಲ್ಲಿದೆ. ಆದರೆ, ಸಣ್ಣ ಪುಟ್ಟ ಯಂತ್ರ ಮತ್ತು ಅದರ ಬಿಡಿ ಭಾಗಗಳಿಂದ ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸುವುದು ಕಷ್ಟವಾಗಲಿದೆ. ಆದರೆ, ಭವಿಷ್ಯದಲ್ಲಿ ಇಂತಹ ಪರಿಪಾಠ ಆರಂಭವಾಗಲಿದೆ ಎಂದು ಊಹಿಸಬಹುದಾಗಿದೆ.

Best Mobiles in India

English summary
Could this impact the construction of future 3D-printed homes? Only future will tell!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X