ಪ್ರವಾಸಿ ತಾಣಕ್ಕಿಂತಲೂ ಸುಂದರ ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಟೆಕ್ ಬೃಹತ್ ಕಂಪನಿ "ಆಪಲ್" ಈಗ ತನ್ನ ಹೊಸ ಸ್ಪೇಸ್‌ಶಿಪ್ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡಲು ಸಜ್ಜಾಗುತ್ತಿದೆ. ಒಮ್ಮೆ ಕಲ್ಪನೆ ಮಾಡಿಕೊಳ್ಳಿ ಹೆಸರೇ ಹೇಳುವಂತೆ ಸ್ಪೇಸ್‌ಶಿಪ್ ಕ್ಯಾಂಪಸ್ ಎಂದರೆ ಹೇಗಿರುತ್ತದೆ ಎಂದು. ಸಂಶಯವೇ ಬೇಡ ಅದು ಸ್ಪೇಸ್‌ಶಿಪ್ ರೀತಿಯಲ್ಲೇ ಇರುತ್ತದೆ. ಆಪಲ್'ನ ಹೊಸ ಕಾರ್ಪೋರೇಟ್ ಕಛೇರಿಯಾದ ಸ್ಪೇಸ್‌ಶಿಪ್ ಕ್ಯಾಂಪಸ್‌ನಲ್ಲಿ ತನ್ನ ಹೊಸ ಪ್ರಾಡಕ್ಟ್‌ಗಳ ಸೇವೆಗಾಗಿ ಕಾರ್ಯಕ್ರಮಕ್ಕೆ ಥಿಯೇಟರ್ ಅನ್ನು ಸಹ ಅಲ್ಲಿಯೇ ನಿರ್ಮಾಣ ಮಾಡಿದೆ.
ವಿಶೇಷ ಏನಪ್ಪಾ ಅಂದ್ರೆ ಆಪಲ್ ಸ್ಪೇಶ್‌ಶಿಪ್ ಕ್ಯಾಂಪಸ್ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಿ ವಿನ್ಯಾಸ ಗೊಳಿಸಲು ಬರೋಬರಿ 5 ವರ್ಷ ಸಮಯ ತೆಗೆದುಕೊಂಡಿದೆ. ವೃತ್ತಾಕಾರದಲ್ಲಿ ಗ್ಲಾಸ್ ಪ್ಯಾನೆಲ್‌ನಲ್ಲಿ ಬಿಲ್ಡಿಂಗ್ ನಿರ್ಮಿಸಿದ್ದು ಈಗ ಶೇಕಡ 33 ವಿನ್ಯಾಸ ಸಂಪೂರ್ಣಗೊಂಡಿದೆ. ಮುಂದಿನ ಹೊಸ ವರ್ಷ 2017 ಕ್ಕೆ ಸ್ಪೇಸ್‌ಶಿಪ್ ಕ್ಯಾಂಪಸ್ ಉದ್ಘಾಟನೆಗೊಳ್ಳಲಿದೆ. ಆದರೆ ಸ್ಪೇಸ್‌ಶಿಪ್ ಕ್ಯಾಂಪಸ್ ಹೆಸರಿಗೆ ತಕ್ಕ ಅದ್ಭುತ ವಿನ್ಯಾಸ ಹೊಂದಿದ್ದು ಯಾವ ಪ್ರವಾಸಿ ತಾಣಕ್ಕೇನು ಕಡಿಮೆ ಅಲ್ಲ. ಅವುಗಳಿಗೂ ಸೆಡ್ಡುಹೊಡೆಯುವಲ್ಲಿ ಸ್ಪೇಸ್‌ಶೀಪ್ ಕ್ಯಾಂಪಸ್ ವಿನ್ಯಾಸ ಸುಂದರವಾಗಿದೆ. ಬೇಕಾದ್ರೆ ನೀವೆ ಒಮ್ಮೆ ಆ ಸುಂದರ ವಿನ್ಯಾಸಗಳನ್ನು ಲೇಖನದ ಸ್ಲೈಡರ್‌ಗಳಲ್ಲಿ ನೋಡಿ ಹಾಗೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಸ್ಪೇಸ್‌ಶಿಪ್ ಕ್ಯಾಂಪಸ್ ನೀಲಿನಕ್ಷೆ ತಯಾರಿಕೆ ಹಾಗೂ ವಿನ್ಯಾಸಗೊಳಿಸಲು 5 ವರ್ಷ ಸಮಯ ತೆಗೆದುಕೊಂಡಿದೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಆಪಲ್‌ನ ಸ್ಪೇಸ್‌ಶಿಪ್ ಕ್ಯಾಂಪಸ್ ಕಸ್ಟಮ್ ಮಷಿನ್‌ನಿಂದ ನಿರ್ಮಾಣ ಮಾಡುವ ಅಗತ್ಯತೆ ಹೊಂದಿದ್ದು, ಇದು 900 ಕಾಮಾನಿನಾಕಾರದ ಗಾಜಿನ ಫಲಕಗಳನ್ನು ಹೊಂದಿದೆ. 46 ಅಡಿ ಉದ್ದ ಹಾಗೂ 10.5 ಅಡಿ ಅಗಲ ಅಳತೆಯನ್ನು ಗಾಜಿನ ಫಲಕಗಳು ಹೊಂದಿವೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಆಪಲ್‌ನ ಮುಖ್ಯ ಬಿಲ್ಡಿಂಗ್ 13,000 ಉದ್ಯೋಗಿಗಳಿಗೆ ಮನೆಯಾಗಲಿದೆ. ಮುಖ್ಯ ಬಿಲ್ಡಿಂಗ್‌ನ ಗಾಜಿನ ಹೊರನೋಟವನ್ನು ಶೇಕಡ 33 ಸಂಪೂರ್ಣಗೊಳಸಲಾಗಿದೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಥಿಯೇಟರ್ 120,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 1000 ಸೀಟ್‌ಗಳನ್ನು ಹೊಂದಿದೆ. ವೃತ್ತಾಕಾರದ ಛಾವಣಿಯು 44 ಒಂದೇ ರೀತಿಯ ಫಲಕಗಳನ್ನು ಹೊಂದಿದ್ದು, ಪ್ರತಿಯೊಂದು 70 ಅಡಿ ಉದ್ದ, 11 ಅಡಿ ಅಗಲ ಹೊಂದಿವೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಸ್ಪೇಸ್‌ಶಿಪ್ ಕ್ಯಾಂಪಸ್ 360 ಡಿಗ್ರಿಯಲ್ಲಿ ಪ್ರದರ್ಶನ ಹೊಂದಿದ್ದು, ಇಲ್ಲಿ ಪ್ರಾಡಕ್ಟ್ ಸಂಬಂಧಪಟ್ಟ ಸಂವಾದಗಳು ಏರ್ಪಡುತ್ತವೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಸ್ಪೇಸ್‌ಶಿಪ್ ಕ್ಯಾಂಪಸ್ ಓಪನ್ ನಂತರದಲ್ಲಿ ಕಾಣುವ ಕ್ಯಾಂಪಸ್ ನೋಟ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಆಪಲ್ ಜರ್ಮನಿ ಮೂಲದ ಐಕಾನಿಕ್ ಗಾಜಿನ ಕ್ಯೂಬ್ ವಿನ್ಯಾಸದ ಸೀಲ್/ಸೆಡಕ್ ಕಂಪನಿಯೊಂದಿಗೆ ಕ್ಯಾಂಪಸ್ ವಿನ್ಯಾಸ ಕೆಲಸ ನಿರ್ವಹಿಸುತ್ತಿದೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
ಆಪಲ್ ಈಗಾಗಲೇ 3,000 ಗಾಜಿನ ಫಲಕಗಳನ್ನು ವ್ಯವಸ್ಥೆಗೊಳಿಸಿದೆ.

ಆಪಲ್ ಸ್ಪೇಸ್‌ಶಿಪ್ ಕ್ಯಾಂಪಸ್
60,000 ಚದರ ಅಡಿ ರೆಸ್ಟೋರೆಂಟ್ ಒಳಭಾಗದಲ್ಲಿ 2,800 ಉದ್ಯೋಗಿಗಳಿಗೆ ಸ್ಥಳವಿದ್ದು, ಹೊರಭಾಗದಲ್ಲಿ 1,200 ಉದ್ಯೋಗಿಗಳಿಗೆ ಪ್ಯಾಟಿಯೋದಲ್ಲಿ ಅವಕಾಶ ಮಾಡಲಾಗಿದೆ.

ಗಿಜ್‌ಬಾಟ್



Click it and Unblock the Notifications








