Home
ಸುದ್ದಿಜಾಲ

Apple AirPods ಕಳ್ಳತನ ತಡೆಯಲು ಖತರ್ನಾಕ್ ಐಡಿಯಾ! ಈ ವ್ಯಕ್ತಿಯ 'ಚಿನ್ನ'ದಂತ ಪ್ಲಾನ್‌ಗೆ ನೆಟ್ಟಿಗರು ಫಿದಾ

ಪ್ರಸ್ತುತ ದಿನಗಳಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಕೂಡ ಬ್ರಾಂಡೆಂಡ್‌ ವಸ್ತುಗಳ ಕಳ್ಳತನ ಸಾಮಾನ್ಯವಾಗಿದೆ. ಅದರಲ್ಲಿಯೂ ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳು, ಇಯರ್‌ಬಡ್ಸ್‌ಗಳು, ಸ್ಮಾರ್ಟ್‌ವಾಚ್‌ಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದನ್ನು ಗಮನಿಸಿದ್ದೇವೆ. ಹೀಗೆ ಸಾವಿರಾರು ರೂ. ಕೊಟ್ಟು ಖರೀದಿಸಿದ ಬ್ರಾಂಡೆಂಡ್ ವಸ್ತುಗಳ ಕಳ್ಳತನ ತಡೆಯಲು ಇಲ್ಲೊಬ್ಬ ವ್ಯಕ್ತಿ ಅದ್ಭುತ ಐಡಿಯಾ ಮಾಡಿದ್ದಾನೆ, ಆತನ ಜಾಣತನ ಗಮನಿಸಿದರೆ ನೀವು ಕೂಡ ವಾವ್ ಎನ್ನುತ್ತೀರ ಹಾಗಿದ್ರೆ ಏನದು ಐಡಿಯಾ ? ಈ ಕುರಿತು ಜನರ ಪ್ರತಿಕ್ರಿಯೆಗಳೇನು ಎಂಬುದರ ಕಂಪ್ಲೀಟ್ ವರದಿಯನ್ನು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ.

ವಿಶೇಷವಾಗಿ ಜನನಿಬಿಡ ಸ್ಥಳಗಳಲ್ಲಿ ಕಳ್ಳರು ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಫೋನ್ ಕಸಿದುಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಸಾರ್ವಜನಿಕರಿಗೆ ಎಷ್ಟೇ ಜಾಗೃತಿಯಿಂದ ಇದ್ದರೂ ಕೆಲವೊಮ್ಮೆ ಕಳ್ಳರ ಕೈಚಳಕಕ್ಕೆ ಸಿಲುಕುವುದು ಸಾಮಾನ್ಯ ಸಂಗತಿ. ಈ ನಡುವೆ ಕಳ್ಳತನ ತಡೆಗಟ್ಟಲು ಇಲ್ಲೊಬ್ಬ ವ್ಯಕ್ತಿ ಸಾಂಪ್ರದಾಯಿಕವಲ್ಲದ ವಿಶೇಷ ವಿಧಾನವೊಂದನ್ನು ಅನುಸರಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆದಿದ್ದಾನೆ. ಈ ಕುರಿತು ಬೇಕಡ್ ಸಮೋಸ (Baked Samosa) ಎಂಬ ಎಕ್ಸ್‌ (X) ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್ ಮಾಡಿದ್ದು ಅದು ಭಾರೀ ವೈರಲ್ ಆಗಿದೆ. ವಿಷಯ ಏನಂದ್ರೆ ಆ ವ್ಯಕ್ತಿ ತನ್ನ ಆಪಲ್ ಏರ್‌ ಪಾಡ್‌ಗಳ (AirPods) ಕಳ್ಳತನ ತಡೆಯಲು ಆಪಲ್‌ ಲೋಗೋ ಮೇಲೆ ಮೈಕ್ರೋಮ್ಯಾಕ್ಸ್ ಲೋಗೋವನ್ನು ಕೆತ್ತನೆ ಮಾಡಿರುವುದಾಗಿ ಬರೆದುಕೊಂಡಿದ್ದಾನೆ.

Apple AirPods ಕಳ್ಳತನ ತಡೆಯಲು ವ್ಯಕ್ತಿಯೋರ್ವನಿಂದ 'ಚಿನ್ನ'ದಂತ ಐಡಿಯಾ !

ಅಷ್ಟಕ್ಕೂ ಈ ಘಟನೆಗೆ ಕಾರಣ ಸಾಮಾಜಿಕ ಮಾದ್ಯಮ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಿದ್ದ ಫೋನ್ ಕಿತ್ತುಕೊಳ್ಳುವ ಘಟನೆಯ ದೃಶ್ಯ, ಅಲ್ಲಿ ಒಬ್ಬ ವ್ಯಕ್ತಿ ಪುದುಚೇರಿ ಬೀದಿಗಳಲ್ಲಿ ತನ್ನ ಫೋನ್ ಕಳ್ಳತನವಾಗಿರುವ ಕುರಿತು ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಬಳಿಕ ಆ ಪೋಸ್ಟ್‌ಗೆ ಅನೇಕ ಕಾಮೆಂಟ್‌ಗಳು ಸಹ ಬಂದಿವೆ. ಅದರಂತೆ ಬೇಕಡ್‌ ಸಮೋಸ ಹೆಸರಿನ ವ್ಯಕ್ತಿಯು ತನ್ನ ಆಪಲ್ ಏರ್‌ಪಾಡ್ಸ್ ಕೇಸ್‌ನಲ್ಲಿ ಮೈಕ್ರೋಮ್ಯಾಕ್ಸ್‌ ಲೋಗೋ ಎಮೋಜಿಯೊಂದಿಗೆ ಕೆತ್ತಲಾದ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ.

ಆವನ ತರ್ಕ ಏನು ಅಂದ್ರೆ ಕಳ್ಳರು ಇದು ಆಪಲ್ ಏರ್‌ಪಾಡ್ ಎಂದು ತಕ್ಷಣ ಗುರುತಿಸಲು ಸಾಧ್ಯವಿಲ್ಲಾ ಹಾಗಾಗಿ ಕಳ್ಳತನ ತಡೆಯಲು ನನ್ನ ಏರ್‌ಪಾಡ್‌ಗಳಲ್ಲಿ ನಾನು ಮೈಕ್ರೋಮ್ಯಾಕ್ಸ್‌ ಎಮೋಜಿಯನ್ನು ಕೆತ್ತಿದ್ದೇನೆ ಆ ಕಾರಣದಿಂದ ಅದು ಮೈಕ್ರೋಮ್ಯಾಕ್ಸ್ ಎಂದು ಕಳ್ಳರು ಗೊಂದಲಕ್ಕೊಳಗಾತ್ತಾರೆ ಮತ್ತು ಕಳ್ಳತನವಾಗದಂತೆ ತಡೆಯಲು ಅನುಕೂಲವಾಗುತ್ತದೆ ಎಂದು ವಿವರಣೆ ನೀಡಿದ್ದಾನ.

ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ ಅವರು, ತಾನು ಏರ್‌ಪಾಡ್‌ಗಳನ್ನು ಖರೀದಿಸಿದಾಗ ದೆಹಲಿ ಎನ್‌ಸಿಆರ್‌ನಲ್ಲಿ ನೆಲೆಸಿದ್ದೆ, ಖರೀದಿಯ ಸಮಯದಲ್ಲಿ ಆಪಲ್ ಏರ್‌ಪಾಡ್ಸ್ ಕೇಸ್‌ನಲ್ಲಿ ಆಪಲ್‌ ಲೋಗೋವನ್ನೇ ಒದಗಿಸಿತ್ತು ಇದರಿಂದ ಕಳ್ಳತನವಾಗುವ ಸಾಧ್ಯತೆ ಹೆಚ್ಚಾಗಿದ್ದರಿಂದ ಕಳ್ಳತನ ತಡೆಯಲು ಮೈಕ್ರೋಮ್ಯಾಕ್ಸ್ ಲೋಗೋ ಹೋಲುವ ಎಮೋಜಿಯನ್ನು ಕೆತ್ತಿಸಿದ್ದೇನೆ ಎಂದು ಎಂದು 23 ವರ್ಷದ ವ್ಯಕ್ತಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು 'ನಾನು ಈ ಏರ್‌ಪಾಡ್‌ಗಳನ್ನು ಖರೀದಿಸಿದಾಗ ಎನ್‌ಸಿಆರ್‌ನಲ್ಲಿ ವಾಸಿಸುತ್ತಿದ್ದೆ, ನನ್ನ ಅನೇಕ ಸ್ನೇಹಿತರು ತಮ್ಮ ಸಾಧನಗಳನ್ನು ಅಲ್ಲಿ ಕಳೆದುಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಬೈಕ್‌ನಲ್ಲಿ ಬಂದ ಗೂಂಡಾಗಳು ನೋಡುವವರ ಫೋನ್‌ಗಳನ್ನು ಕಸಿದುಕೊಳ್ಳುವುದನ್ನು ನಾನು ನೋಡಿದ್ದೇನೆ ಅದೃಷ್ಟವೆಂದರೆ ನಾನು ಇಲ್ಲಿಯವರೆಗೆ ನನ್ನ ಯಾವುದೇ ವಸ್ತುಗಳನ್ನು ಕಳೆದುಕೊಂಡಲ್ಲ ಎಂದು ಎಂದು ಆ ವ್ಯಕ್ತಿ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಅವರ ಈ ಕಳ್ಳತನ ತಡೆಯುವ ಸಾಂಪ್ರದಾಯಿಕವಲ್ಲದ ಕ್ರಮ ವೈರಲ್‌ ಆಗಲು ಇಂಟರ್ನೆಟ್‌ನಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ. ಬಳಕೆದಾರರ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಕಾಮೆಂಟ್ ವಿಭಾಗವು ಮನರಂಜನೆಯಿಂದ ತುಂಬಿದ್ದು ನೋಡುಗರ ಹಾಟ್‌ಸ್ಪಾಟ್ ಆಗಿದೆ.

ಅದರಲ್ಲಿ ಒಬ್ಬ ಬಳಕೆದಾರ, 'ನಾವು ಮಾತನಾಡುವಾಗ ಈ ಮೈಕ್ರೋಮ್ಯಾಕ್ಸ್ ಏರ್‌ಪಾಡ್‌ಗಳನ್ನು ಹಿಂಪಡೆಯಲು ಟಿಮ್ ಕುಕ್ ಸಿದ್ಧರಾಗಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು 'ಬಿಗ್ ಬ್ರೈನ್ ಪ್ರೊ ಮ್ಯಾಕ್ಸ್, ಮೈಕ್ರೋಮ್ಯಾಕ್ಸ್' ಎಂದು ಕಿಚಾಯಿಸಿದ್ದಾರೆ. ಇನ್ನೋರ್ವ 'ಭಾರತೀಯರಿಗೆ ಮಾತ್ರ ಇಂತಹ ಆಲೋಚನೆಗಳೊಂದಿಗೆ ಬರಲು ಸಾಧ್ಯ' ಎಂಬ ಕಾಮೆಂಟ್‌ಗಳೊಂದಿಗೆ ಥ್ರೆಡ್ ತುಂಬಿದೆ.
'ಇದು "ಚಿನ್ನ" ಮತ್ತು "ನಿಮ್ಮ ಮೆದುಳನ್ನು ನೀವು 100% ಬಳಸಿದರೆ ಏನಾಗುತ್ತದೆ?' ಎಂಬುದಕ್ಕೆ ಉದಾಹರಣೆ ಎಂಬಂತಹ ಕಾಮೆಂಟ್‌ಗಳಿಂದ ಪೋಸ್ಟ್‌ ಹಾಸ್ಯದಿಂದ ಕೂಡಿದೆ.

Best Mobiles in India

English summary
A person wrote on his X account that he had engraved the Micromax logo over the Apple logo to prevent theft of his Apple Air Pods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+