ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

Posted By:

ನೀವೆಲ್ಲಾ ಕ್ಯೂ ಆರ್ ಕೋಡ್‌ ಬಗ್ಗೆ ಕೇಳಿರುತ್ತೀರಿ. ಇಂಟರ್‌ನೆಟ್‌ನಲ್ಲಿ, ಪತ್ರಿಕೆಯ ಜಾಹೀರಾತಿನಲ್ಲಿ ಒಂದು ಕಪ್ಪನೆಯ ಚೌಕಗಳನ್ನು ನೋಡಿರುತ್ತೀರಿ.ಈ ಚೌಕಗಳ ಪಕ್ಕನೆ ಈ ಚಿತ್ರವನ್ನು ಸ್ಕ್ಯಾನ್‌ ಮಾಡಿ ಎಂಬ ಸಂಕೆತವನ್ನು ನೀವು ನೋಡಿರಬಹುದು. ಈ ಕಪ್ಪನೆಯ ಚಿತ್ರಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಲ್ಲಿರುವ ಕ್ಯೂ ಆರ್‌ ಸ್ಕ್ಯಾನರ್‌ನಿಂದ ಸ್ಕ್ಯಾನ್‌ ಮಾಡಿದ್ರೆ ಇಂಟರ್‌ನೆಟ್‌ನಲ್ಲಿ ಯೂಆರ್‌ಎಲ್‌ ಟೈಪ್‌ ಮಾಡದೇ ಈ ಸೈಟ್‌ಗಳು ಓಪನ್‌ ಆಗುತ್ತವೆ.

ಕ್ಯೂಆರ್ ಕೋಡ್ ಎನ್ನುವುದು ಕ್ವಿಕ್ ರೆಸ್ಪಾನ್ಸ್ ಕೋಡ್ ಎಂಬ ಹೆಸರಿನ ಹ್ರಸ್ವರೂಪ. ಸದ್ಯ ಇಂಟರ್‌ನೆಟ್‌ ಮತ್ತು ಮುದ್ರಣ ಮಾಧ್ಯಮದ ಜಾಹೀರಾತಿನಲ್ಲಿ ಇವುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದ್ರೆ ಈಗ ಈ ಕ್ಯೂ ಆರ್‌ ಕೋಡ್‌ನ್ನು ಕೊಠಡಿಗಳಲ್ಲಿ ಬಳಸುವ ಟೈಲ್ಸ್‌ ಆಗಿ ಬಳಸಿದ್ದಾರಂತೆ. ಅದು ಅಂತಿಂಥ ಕ್ಯೂ ಆರ್‌ ಕೋಡ್ ಇರುವ ಟೈಲ್ಸ್‌ ಅಲ್ಲ. ಅಶ್ಲೀಲ ವೀಡಿಯೋ,ಮತ್ತು ಫೋಟೋಗಳ ಯುಆರ್‌ಎಲ್‌ ಇರುವಂತಹ ಕ್ಯೂ ಆರ್‌ ಕೋಡ್‌ ಟೈಲ್ಸ್‌.

ನೆದರ್‌ಲ್ಯಾಂಡ್‌ನ ಮಾಡ್ಸ್‌ ಹೋಟೆಲ್‌ನ ರೂಮನ್ನು ಈ ರೀತಿ ವಿನ್ಯಾಸ ಮಾಡಿದ್ದು, ಈ ರೂಮಿನಲ್ಲಿರುವ ವಾಲ್‌ಪೇಪರ್‌,ಪರದೆ, ಕುಳಿತುಕೊಳ್ಳುವ ಆಸನಗಳೆಲ್ಲಾ ಈ ಅಶ್ಲೀಲ ಕ್ಯೂ ಆರ್‌ ಕೋಡ್‌ಗಳಿರುವ ವಿನ್ಯಾಸ ಮಾಡಿದ್ದಾರಂತೆ.ಯಾಕೆ ಈ ಹೋಟೆಲ್‌ನಲ್ಲಿ ಈ ರೀತಿಯ ರೂಮ್‌ ವಿನ್ಯಾಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ರೆ ಇವತ್ತಿನ ಜನರಿಗೆ ಅನುಕೂಲವಾಗುವಂತಹ ರೂಮ್‌ಗಳನ್ನು ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ.ಹಾಗಾಗಿ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಹೋಟೆಲ್‌ ಮಾಲೀಕರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಹೋಟೆಲ್‌ ತೆರೆದಿದ್ದು ಸದ್ಯ ಈ ರೂಮ್‌ಗೆ ಫುಲ್‌ ಡಿಮ್ಯಾಂಡ್‌ ಇದೆಯಂತೆ. ಒಟ್ಟಿನಲ್ಲಿ ಈ ಹೋಟೆಲ್‌ ರೂಮ್‌ ಹೇಗಿದೆ ಎನ್ನುವ ಕುತೂಹಲ ನಿಮ್ಮಲ್ಲೂ ಇರಬಹುದು. ಹಾಗಾಗಿ ಗಿಜ್ಬಾಟ್‌ ರೂಮ್‌ ಚಿತ್ರಗಳನ್ನು ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot