ಕಾಲ್ ಪ್ಲಸ್ ಅಪ್ಲಿಕೇಶನ್‌ನಲ್ಲಿ ಮಾಡಿ ಅನಿಯಮಿತ ಕರೆ
ಲ್ಯಾಂಡ್‌ಲೈನ್ ಮತ್ತು ಸೆಲ್‌ಫೋನ್‌ಗಳಲ್ಲಿ ಉಚಿತವಾಗಿ ಕರೆ ಮಾಡುವುದನ್ನು ಹೊಸ ಅಪ್ಲಿಕೇಶನ್ ಇದೀಗ ಸಾಧ್ಯವಾಗಿಸಿದೆ. 85 ದೇಶಗಳಲ್ಲಿ ಈ ಯೋಜನೆ ಸಕ್ರಿಯಗೊಂಡಿದೆ.
ಕಾಲ್ ಪ್ಲಸ್ ಆಪ್ ನಿಮಗೆ ಲ್ಯಾಂಡ್‌ಲೈನ್ ಮತ್ತು ಮೊಬೈಲ್‌ಗಳಲ್ಲಿ ಕರೆ ಮಾಡುವ ಸವಲತ್ತನ್ನು ಒದಗಿಸುತ್ತಿದ್ದು ನೀವು ಕರೆ ಮಾಡುವ ವ್ಯಕ್ತಿ ಅಪ್ಲಿಕೇಶನ್ ಹೊಂದಿರುವುದು ಅತೀ ಅಗತ್ಯವೇನಲ್ಲ. ಎಂದು ಸಿಎನ್‌ಇಟಿ ವರದಿ ಮಾಡಿದೆ.

ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದ್ದು, ಕಾಲ್ ಪ್ಲಸ್ ಲ್ಯಾಂಡ್‌ಲೈನ್ ಹಾಗೂ ಮೊಬೈಲ್ ಎರಡರಲ್ಲೂ ನಿಮಗೆ ಕರೆ ಮಾಡಲು ಅನುಮತಿಸುತ್ತದೆ ಮತ್ತು ನಿಮ್ಮ ಪ್ರಸ್ತುತ ಫೋನ್ ಸಂಖ್ಯೆಯನ್ನು ಕಾಲರ್ ಐಡಿಯಾಗಿ ಇದು ತೋರಿಸುತ್ತದೆ.
ಯುಎಸ್ ಮತ್ತು ಮೆಕ್ಸಿಕೋ ಚೈನಾ ಹಾಗೂ ಬ್ರೆಜಿಲ್‌ಗಳಲ್ಲಿ ಅನಿಯಮಿತ ಉಚಿತ ಕರೆಗಳನ್ನು ನಿಮಗೆ ಮಾಡಬಹುದಾಗಿದೆ. ನೀವು ವಿಭಿನ್ನ ದೇಶಗಳಿಗೆ ಕರೆ ಮಾಡಬೇಕು ಎಂದಾದಲ್ಲಿ ನಿಮಗೆ ಎರಡು ಆಯ್ಕೆಗಳಿವೆ
ನೀವು ಒಂದು ದಿನದ ಅನಿಯಮಿತ ಕರೆ ಮಾಡುವ ಸೇವೆಯನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಂತೆ ಎರಡೂ ಫೋನ್‌ಗಳಲ್ಲೂ ಅಪ್ಲಿಕೇಶನ್‌ಗಳನ್ನು ನೀವು ಹೊಂದಿರಬೇಕು. ಅಪ್ಲಿಕೇಶನ್ ಇಲ್ಲದೆಯೇ ಉಚಿತ ವಾಯ್ಸ್ ಕರೆಗಳನ್ನು ಕಾಲ್ ಪ್ಲಸ್ ಆಪ್ ಅನುಮತಿಸುತ್ತದೆ.
ದಿನದ ಸೇವೆಯಲ್ಲಿ ಹಲವಾರು "ಪಾರ್ಟನರ್" ಕೊಡುಗೆಗಳನ್ನು ಸಂಪೂರ್ಣಗೊಳಿಸಲು ಕಾಲ್ ಪ್ಲಸ್ ನಿಮ್ಮನ್ನು ಅನುಮತಿಸುತ್ತದೆ


Click it and Unblock the Notifications