ಸೊಶೀಯಲ್ ಮೀಡಿಯಾ ಬಳಸುವವರೇ ಎಚ್ಚರ! ಪತ್ತೆಯಾಗಿದೆ ಹೊಸ ಮಾಲ್‌ವೇರ್!
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಖಾತೆಗಳನ್ನು ಸೆಕ್ಯುರ್ ಮಾಡುವುದು ದೊಡ್ಡ ಸವಾಲಾಗಿದೆ. ಇಡೀ ಪ್ರಪಂಚವೇ ಹ್ಯಾಕರ್‌ಗಳ ದಾಳಿಯಿಂದ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಟೆಕ್ನಾಲಜಿ ಅಪ್ಡೇಟ್ ಆದಂತೆ ಹ್ಯಾಕರ್‌ಗಳು ಕೂಡ ಅಪ್ಡೇಟ್ ಆಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಸೊಶೀಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ಇದೀಗ ಸೊಶೀಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡುವ ಹೊಸ ಮಾಲ್‌ವೇರ್ ಕಾಣಿಸಿಕೊಂಡಿದೆ. ಇದು ಸುಮಾರು 20 ದೇಶಗಳಲ್ಲಿ ಕಾಣಿಸಿಕೊಂಡಿದೆ.

ಹೌದು, ಸೊಶೀಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡುವ ಹೊಸ ಮಾಲ್‌ವೇರ್ ಇದೀಗ ಸುಮಾರು 20 ದೇಶಗಳಲ್ಲಿ ಕಾಣಿಸಿಕೊಂಡಿದೆ. ಚೆಕ್ ಪಾಯಿಂಟ್ ರಿಸರ್ಚ್ (ಸಿಪಿಆರ್) ನ ಸೈಬರ್ ಸೆಕ್ಯುರಿಟಿ ಸಂಶೋಧಕರ ವರದಿಯ ಪ್ರಕಾರ, ಈ ಮಾಲ್‌ವೇರ್ ಅನ್ನು ಎಲೆಕ್ಟ್ರಾನ್ ಬಾಟ್ ಎಂದು ಗುರುತಿಸಲಾಗಿದೆ. ಈ ಮಾಲ್‌ವೇರ್, ಮೈಕ್ರೋಸಾಫ್ಟ್ ಸ್ಟೋರ್ ಮೂಲಕ ಲ್ಯಾಪ್‌ಟಾಪ್‌ಗಳನ್ನು ಪ್ರವೇಶಿಸಿ ನಿಮ್ಮ ಸೊಶೀಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಲಿದೆ ಎನ್ನಲಾಗ್ತಿದೆ. ಹಾಗಾದ್ರೆ ಈ ಹೊಸ ಮಾಲ್‌ವೇರ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರಸ್ತುತ ದಿನಗಳಲ್ಲಿ ಮಾಲ್‌ವೇರ್, ವೈರಸ್‌ಗಳ ಕಾಟ ತಪ್ಪಿದ್ದಲ್ಲ. ಇದೀಗ ಹೊಸದಾಗಿ ಕಾಣಿಸಿಕೊಂಡಿರುವ ಎಲೆಕ್ಟ್ರಾನ್ ಬಾಟ್ ಮಾಲ್ವೇರ್ 20 ದೇಶಗಳಲ್ಲಿ ತನ್ನ ಪ್ರಭಾವ ಬೀರಿದೆ. ಈ ಅಪಾಯಕಾರಿ ಮಾಲ್‌ವೇರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಒಳಗೊಂಡಿದೆ ಎಂದಯ ವರದಿಯಾಗಿದೆ. 'ಟೆಂಪಲ್ ರನ್' ಮತ್ತು 'ಸಬ್ವೇ ಸರ್ಫರ್' ನಂತಹ ಜನಪ್ರಿಯ ಗೇಮ್‌ಗಳಲ್ಲಿ ಈ ಮಾಲ್ವೇರ್ ಅಡಗಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಇನ್ನು ಈ ಮಾಲ್‌ವೇರ್‌ನ ಕಾರ್ಯನಿರ್ವಹಣೆ ವಿಶೇಷವಾಗಿದ್ದು ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಎಲೆಕ್ಟ್ರಾನ್ ಬಾಟ್ ಮಾಲ್ವೇರ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಮಾಲ್‌ವೇರ್ ಹೊಂದಿರುವ ಗೇಮ್ ಅಥವಾ ಅಪ್ಲಿಕೇಶನ್ ಅನ್ನು ಬಳಕೆದಾರರು ಡೌನ್‌ಲೋಡ್ ಮಾಡಿದಾಗ ಎಲೆಕ್ಟ್ರಾನ್ ಬಾಟ್ ಮಾಲ್‌ವೇರ್ ನಿಮ್ಮ ಲ್ಯಾಪ್‌ಟಾಪ್ ಸೇರುತ್ತದೆ. ಈ ಮಾದರಿಯ ಅಪ್ಲಿಕೇಶನ್‌ಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಗೇಮ್ ಮಾಲ್‌ವೇರ್‌ನೊಂದಿಗೆ ಲ್ಯಾಪ್‌ಟಾಪ್ ಅನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳುಬಿಡುತ್ತದೆ. ಇನ್ನು ಈ ಮಾಲ್ವೇರ್ ನಿಮ್ಮ ಪಿಸಿಗೆ ಪ್ರವೇಶಿಸಿದ ನಂತರ, ಅದು ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (ಎಸ್‌ಇಒ) ವಿಷವನ್ನು ಪ್ರಾರಂಭಿಸುತ್ತದೆ. ಅಲ್ಲದೆ ನಿಮ್ಮ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಸಹ ವಶಪಡಿಸಿಕೊಳ್ಳುತ್ತದೆ.

ಇನ್ನು CPR ಪ್ರಕಾರ, ಮಾಲ್‌ವೇರ್ ಅನ್ನು ಪಬ್ಲಿಕ್ ಕ್ಲೌಡ್ ಸ್ಟೋರೇಜ್, mediafire.com ಗೆ ಬಲ್ಗೇರಿಯಾ ಮೂಲಕ ಅಪ್‌ಲೋಡ್ ಮಾಡಲಾಗಿದೆ. ಈ ಮಾಲ್‌ವೇರ್ ಪ್ರಮೋಷನ್ ಬಲ್ಗೇರಿಯನ್ ಕುಸ್ತಿಪಟು ಮತ್ತು ಸಾಕರ್ ಆಟಗಾರನಿಗೆ ಸೇರಿದೆ ಎಂದು ವರದಿಯಾಗಿದೆ. ಅಲ್ಲದೆ ಯೂಟ್ಯೂಬ್ ಮತ್ತು ಸೌಂಡ್‌ಕ್ಲೌಡ್ ಅಕೌಂಟ್‌ಗಳನ್ನು ಪ್ರಮೋಷನಲ್ ಮಾಡಲು ಈ ಮಾಲ್ವೇರ್ ಹ್ಯಾಕ್ ಮಾಡಿರುವ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ಸದ್ಯ ಇಲ್ಲಿಯ ತನಕ ಎಲೆಕ್ಟ್ರಾನ್ ಬಾಟ್ ಮಾಲ್ವೇರ್ ಜಾಗತಿಕವಾಗಿ 5,000 ಕ್ಕೂ ಹೆಚ್ಚು ಬಲಿಪಶುಗಳ ಮೇಲೆ ದಾಳಿ ಮಾಡಿದೆ. ಎಲೆಕ್ಟ್ರಾನ್ ಫ್ರೇಮ್‌ವರ್ಕ್ GPU ಕಂಪ್ಯೂಟಿಂಗ್ ಸೇರಿದಂತೆ ಎಲ್ಲಾ ಕಂಪ್ಯೂಟರ್ ಸಂಪನ್ಮೂಲಗಳಿಗೆ ಪ್ರವೇಶದೊಂದಿಗೆ ಎಲೆಕ್ಟ್ರಾನ್ ಅಪ್ಲಿಕೇಶನ್‌ಗಳನ್ನು ಒದಗಿಸುತ್ತದೆ. ಪ್ರತಿ ರನ್ ಸಮಯದಲ್ಲಿ ಬೋಟ್‌ನ ಪೇಲೋಡ್ ಕ್ರಿಯಾತ್ಮಕವಾಗಿ ಲೋಡ್ ಆಗುವುದರಿಂದ, ಆಕ್ರಮಣಕಾರರು ಕೋಡ್ ಅನ್ನು ಮಾರ್ಪಡಿಸಬಹುದು ಮತ್ತು ಬಾಟ್‌ಗಳ ನಡವಳಿಕೆಯನ್ನು ಹೆಚ್ಚಿನ ಅಪಾಯಕ್ಕೆ ಬದಲಾಯಿಸಬಹುದು. ಇದಲ್ಲದೆ ಎರಡನೇ ಹಂತದಲ್ಲಿಯೂ ನಿಮ್ಮನ್ನು ಹ್ಯಾಕ್ ಮಾಡುವುದಕ್ಕೆ ಪ್ರಯತ್ನಿಸಬಹುದು. ಇದಕ್ಕಾಗಿ RAT ನಂತಹ ಹೊಸ ಮಾಲ್‌ವೇರ್ ಅನ್ನು ಬಿಡಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.


Click it and Unblock the Notifications








