ವಿಶ್ವವೇ ಮೆಚ್ಚಿ ಕೊಂಡಾಡಿರುವ ನಮ್ಮ ಕನ್ನಡಿಗನ ಈ ಮಹಾನ್ ಸಾಧನೆ!
ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ಒಂದನ್ನು ತಯಾರಿಸಲು ಹೋದಾಗ 'ಮಕ್ಕಳಾಟ' ಎಂದು ತಿರಸ್ಕೃತಗೊಂಡಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರನೋರ್ವನ ಯೋಜನೆಯೊಂದು ಇಂದು ಇಂಡಿಯನ್ ಆರ್ಮಿ, ಇನ್‌ಫೋಸಿಸ್ ಸೇರಿದಂತೆ ಘಟಾನುಘಟಿ ಉದ್ಯಮಿಗಳೇ ಬೆರಗಾಗಿಸುವಂತೆ ಮಾಡಿರುವ ಈ ಕಥೆ ಬಹುತೇಕ ನಿಮಗೆ ತಿಳಿದಿಲ್ಲ.
ಹೌದು, ಕೇವಲ 2 ರೂ.ಗೆ ಸ್ಯಾನಿಟರಿ ಪ್ಯಾಡ್ ತಯಾರಿಸಿದ 'ಪ್ಯಾಡ್‌ಮ್ಯಾನ್' ಕಥೆಯನ್ನು ನಾವು ಕೇಳಿದ್ದೇವೆ. ಅದೇ ರೀತಿ ಕೇವಲ 20 ರೂ.ಗೆ ನೀರಿನ ಫಿಲ್ಟರ್ ಒಂದನ್ನು ತಯಾರಿಸಿದ್ದ ಕನ್ನಡಿಗನೋರ್ವನ ಸಾಧನೆ ಮಾತ್ರ ಮರೆಮಾಚಿದೆ. ಆದರೆ, ವಿದೇಶದಲ್ಲಿಯೂ ಸದ್ದು ಮಾಡುತ್ತಿರುವ ಈ ಕನ್ನಡಿಗ 'ಪ್ಯಾಡ್ ಮ್ಯಾನ್' ರೀತಿ 'ಫಿಲ್ಟರ್ ಮ್ಯಾನ್' ಆಗಿ ಪ್ರಸಿದ್ಧಿಯಾಗಿದ್ದಾರೆ.

ವಿದೇಶಿ ಮಾಧ್ಯಮಗಳಲ್ಲಿಯೂ ಸುದ್ದಿಯಾದ ಈತನ ಬಗ್ಗೆ ಕನ್ನಡದ ಬಹುತೇಕ ಟಾಪ್ ಮಾಧ್ಯಮಗಳೇ ಆಲಸ್ಯ ತೋರಿಸಿವೆ. ಆದರೆ, ಜಗತ್ತಿನಾಧ್ಯಂತ ಮೆಚ್ಚುಗೆ ಪಡೆದಿರುವ ನಮ್ಮ ಕನ್ನಡಿಗನೋರ್ವನ ಸಾಧನೆಯನ್ನು ನಾವು ಇಂದು ನಿಮ್ಮ ಮುಂದಿಡುತ್ತಿದ್ದೇವೆ. ಹಾಗಾದರೆ, ಯಾರು ಈ ವಿಶ್ವ ಪ್ರಸಿದ್ದ ಕನ್ನಡಿಗ 'ಫಿಲ್ಟರ್ ಮ್ಯಾನ್'? ಈತನ ಸಾಧನೆ ಏನು ಎಂಬುದನ್ನು ಮುಂದೆ ತಿಳಿಯಿರಿ.

ಬೆರಳಷ್ಟು ಉದ್ದದ ಅವರ 'ಫ್ರೀ ಫಿಲ್ಟರ್'!!
ಮೊದಲೇ ಹೇಳಿದಂತೆ ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ 'ಮಕ್ಕಳಾಟ' ಎಂದು ತಿರಸ್ಕೃತಗೊಂಡಿದ್ದ ಪ್ರಾಜೆಕ್ಟ್ ಈ ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್'! ಇಂದು ಜಾಗತಿಕ ಮಟ್ಟದಲ್ಲಿ ಫಿಲ್ಟರ್ ಮಾರಾಟ ನಡೆಸುತ್ತಿರುವ ಒಂದು ಅತ್ಯಂತ ಕಡಿಮೆ ಬೆಲೆಯ ಸಾಧನವಿದು ಎಂದರೆ ಆಶ್ಚರ್ಯವಾಗದೆ ಇರಲು ಸಾಧ್ಯವಿಲ್ಲ.!

ಯಾರೀತ ಕನ್ನಡ ಕುವರ!!
ಇಂಡಿಯನ್ ಆರ್ಮಿ. ಇನ್‌ಫೋಸಿಸ್ ಸೇರಿದಂತೆ ಜಗತ್ತಿನ ಘಟಾನುಘಟಿ ಉದ್ಯಮಿಗಳೇ ಬೆರಗಾಗುವಂತೆ ಮಾಡಿರುವುದು ನಮ್ಮ ರಾಜ್ಯದ ಬೆಳಗಾವಿಯ ನಿರಂಜನ್ ಕಾರಗಿ ಎಂಬುವವರು. 23 ವರ್ಷದ ಯುವಕ ನಿರಂಜನ್ ಕಾರಗಿ ಅವರ 'ಫ್ರೀ ಫಿಲ್ಟರ್' ಈಗ ವಿದೇಶದಲ್ಲಿಯೂ ಸದ್ದು ಮಾಡುತ್ತಿದ್ದು, 'ಪ್ಯಾಡ್ ಮ್ಯಾನ್' ರೀತಿ 'ಫಿಲ್ಟರ್ ಮ್ಯಾನ್' ಆಗಿ ಪ್ರಸಿದ್ಧಿಯಾಗಿದ್ದಾರೆ.

ಇಲೆವೆಂಟ್ 100 ಪ್ರಶಸ್ತಿ!
ಇತ್ತೀಚೆಗೆ ಕರ್ನಾಟಕ ಸರಕಾರ ಆಯೋಜಿಸಿದ್ದ ಇಲೆವೆಂಟ್ 100 ಸಮಾವೇಶದಲ್ಲಿ ನಿರಂಜನ್ ಅವರ ಫಿಲ್ಟರ್ ಸಾಧನಕ್ಕೆ ಪ್ರಶಸ್ತಿ ಲಭಿಸಿದೆ. ರಾಜ್ಯ ಸರಕಾರ ಸ್ಟ್ರಾರ್ಟ್‌ಅಪ್ ಸಹಾಯಧನ ಕೂಡ ಮಂಜೂರು ಮಾಡಿದೆ. ಈಗ 'ನಿರ್ನಲ್' ಎನ್ನುವ ಕಂಪೆನಿ ಹೆಸರಿನೊಂದಿಗೆ ಈ ಉದ್ಯಮ ಲಕ್ಷಾಂತರ ವ್ಯವಹಾರ ಮಾಡುತ್ತಿದೆ.

ಏನಿದು 'ಫ್ರೀ ಫಿಲ್ಟರ್'?
ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದಾದ ಫಿಲ್ಟರ್‌ಗೆ 'ಫ್ರೀ ಫಿಲ್ಟರ್' ಎಂದು ಹೆಸರಿಡಲಾಗಿದೆ. ಈ ಒಂದು 'ಫಿಲ್ಟರ್' ಸಾಧನ 100 ಲೀ. ನೀರು ಶುದ್ಧ ಮಾಡುತ್ತದೆ. ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದು ಎಂದು ಕನ್ನಡಿಗ 'ಫಿಲ್ಟರ್ ಮ್ಯಾನ್' ಸಾಧಿಸಿ ತೋರಿಸಿದ್ದಾರೆ.

ಹೇಗಿದೆ ಫಿಲ್ಟರ್?
ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ 'ಫ್ರೀ ಫಿಲ್ಟರ್' ಅನ್ನು ತಯಾರಿಸಲಾಗಿದೆ. ಇದು ನೀರನ್ನು ಶುದ್ಧ ಮಾಡುವ ಜತೆಗೆ ಶೇ. 80 ರಷ್ಟು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಬೆರಳಿನ ಗಾತ್ರದ ಈ ಸಾಧನದಿಂದ ಒಮ್ಮೆ ನೀರನ್ನು ಫಿಲ್ಟರ್ ಮಾಡಿದರೆ, ಆ ನೀರನ್ನು ಗರಿಷ್ಠ ಎರಡು ತಿಂಗಳ ವರೆಗೆ ಬಳಸಬಹುದಾಗಿದೆ.

ಫಿಲ್ಟರ್ ಮಾರಾಟ ಎಲ್ಲೆಲ್ಲಿ?
ತೋರು ಬೆರಳಷ್ಟು ಉದ್ದದ ಅವರ 'ಫ್ರೀ ಫಿಲ್ಟರ್' ಸಾಧನ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಆಫ್ರಿಕಾ, ಫ್ರಾನ್ಸ್, ನ್ಯೂಜಿಲೆಂಡ್, ಸಿಂಗಾಪುರ, ಕತಾರ್ ದೇಶಗಳಿಗೆ ತಲುಪಿದೆ. ಭಾರತೀಯ ಸೇನೆ ಕೂಡ ಸುಮಾರು ಒಂದು ಸಾವಿರ ಫಿಲ್ಟರ್‌ಗಳನ್ನು ಖರೀದಿಸಿದೆ ಎಂದು ನಿರಂಜನ್ ಕಾರಗಿ ಅವರು ತಿಳಿಸಿದ್ದಾರೆ.

'ಫ್ರೀ ಫಿಲ್ಟರ್' ಬೆಲೆ ಎಷ್ಟು?
100 ಲೀ. ನೀರನ್ನು ಶುದ್ಧ ಮಾಡುವ ಈ ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್' ಬೆಲೆ 30 ರೂಪಾಯಿಗಳಾಗಿವೆ. ಜಿಎಸ್‌ಟಿ ಬೆಲೆಗಳೆಲ್ಲವೂ ಸೇರಿ ಈ ಸಾಧನದ ಬೆಲೆಯನ್ನು ಕನಿಷ್ಠ ಬೆಲೆಯಲ್ಲಿ ನಿಗಧಿಪಡಿಸಲಾಗಿದೆ. ಈ ಫಿಲ್ಟರ್‌ನಲ್ಲಿ ಇನ್ನಷ್ಟು ಸುಧಾರಣೆ ಮಾಡಿ ಅತ್ಯಂತ ಕನಿಷ್ಠ ಬೆಲೆಯಲ್ಲಿ ಜನರಿಗೆ ಕೊಡುವ ಯೋಚನೆಯನ್ನು ನಿರಂಜನ್ ಕಾರಗಿ ಹೊಂದಿದ್ದಾರೆ.

12 ಸಾವಿರ ರೂ. ಹೂಡಿಕೆ!
ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ಫಿಲ್ಟರ್ ಅನ್ನು ನಿರಂಜನ್ ಕಾರಗಿ ಅವರು ತಮ್ಮ ಉದ್ಯಮದಲ್ಲಿ ತಯಾರಿಸುತ್ತಿದ್ದಾರೆ. 12 ಸಾವಿರ ರೂ. ಹೂಡಿಕೆಯೊಂದಿಗೆ ಆರಂಭವಾದ ಅವರ ಉದ್ಯಮ ಈಗ 'ನಿರ್ನಲ್' ಎನ್ನುವ ಕಂಪೆನಿ ಹೆಸರಿನೊಂದಿಗೆ ಲಕ್ಷಾಂತರ ವ್ಯವಹಾರ ಮಾಡುತ್ತಿದೆ.

ಮುಂದೆ 'ಅಲ್ಟ್ರಾ ಫಿಲ್ಟರ್' ಸಾಧನ!
ಸರಕಾರಿ ಶಾಲೆಯೊಂದರ ಮಕ್ಕಳು ಕಲುಷಿತ ನೀರು ಕುಡಿಯುತ್ತಿದ್ದರು. ಅದಕ್ಕೆ ಬಾಟಲಿಗೇ ಅಳವಡಿಸುವ ಈ ಫಿಲ್ಟರ್ ತಯಾರಿಸಿದ್ದಾಗಿ ನಿರಂಜನ್ ಅವರು ತಿಳಿಸಿದ್ದಾರೆ. ಈ ಫಿಲ್ಟರ್ ಅನ್ನು ಮತ್ತಷ್ಟು 80 ರೂ.ಗೆ 10 ಸಾವಿರ ಲೀಟರ್‌ವರೆಗೆ ಶೇ. 100ರಷ್ಟು ನೀರು ಶುದ್ಧ ಮಾಡುವ 'ಅಲ್ಟ್ರಾ ಫಿಲ್ಟರ್' ಸಾಧನ ರೂಪಿಸುತ್ತಿರುವುದಾಗಿ ನಿರಂಜನ್ ಹೇಳಿದ್ದಾರೆ.

ನೀವು ಫಿಲ್ಟರ್ ಖರೀದಿಸಿ.!
ಅತ್ಯಂತ ಕಡಿಮೆ ಬೆಲೆಯಲ್ಲಿ ಶುದ್ದ ನೀರನ್ನು ಕುಡಿಯುವ ಸಲುವಾಗಿ ನೀವು ಸಹ ಇಂತಹ ಫಿಲ್ಟರ್ ಖರೀದಿವ ಅವಶ್ಯಕಕತೆ ಇದೆ. ನೀರಿನ ಬಾಟಲಿಗೇ ಅಳವಡಿಸಿಕೊಳ್ಳಬಹುದಾದ ಈ ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್' ಅನ್ನು ನಿರಂಜನ್ ಅವರನ್ನು ಸಂಪರ್ಕಿಸಿ ನೀವು ಖರೀದಿಸಬಹುದಾಗಿದೆ. ಅವರ ಸಂಪರ್ಕಕ್ಕೆ ಮೊಬೈಲ್ ನಂಬರ್ ಇಲ್ಲಿದೆ. 7795339714.!

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!
ಹತ್ತನೇ ವಯಸ್ಸಿನಲ್ಲಿ ಆತನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಕಂಪ್ಯೂಟರ್ ಮಾತ್ರ. ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಆ ಕಂಪ್ಯೂಟರ್ ಜೊತೆಗಿನ ಅವನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಇಂದು ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಆತನ 21ನೇ ವಯಸ್ಸಿನ ವೇಳೆಗೆ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪೆನಿಯ ಮಾಲಿಕನನ್ನಾಗಿಸಿದೆ ಎಂದರೆ ನೀವು ನಂಬಲೇಬೇಕು.!
ಹೌದು, ಇದು ಕೇರಳ ರಾಜ್ಯದ ಕಣ್ಣೂರಿನ ಹುಡುಗ ಜಾವೇದ್ ಎಂಬ ಯುವಕನ ಯಶಸ್ವಿ ಯುವಕನ ಕಥೆ. ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ. ಎಳೆಯ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಅದ್ಬುತ ಯಶಸ್ಸನ್ನು ಸಾಧಿಸಿರುವ ಈತ ಈಗ ಯುವಕರ ಆಶಾಕಿರಣ ಎಂದರೆ ತಪ್ಪಾಗಲಾರದು.! ಏಕೆಂದರೆ, ಈಗ ತನ್ನ 21ನೇ ವಯಸ್ಸಿನ ವೇಳೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ಈಗ ವಿಶ್ವದಾಧ್ಯಂತ ಗ್ರಾಹಕರನ್ನು ಹೊಂದಿದ್ದಾನೆ.
ಇ-ಕಾಮರ್ಸ್, ವೆಬ್‌ಡಿಸೈನ್ ಮತ್ತು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ತನ್ನದೇ ಸ್ವಂತ ಕಂಪೆನಿಯನ್ನು ಹುಟ್ಟಿಹಾಕಿಕೊಂಡಿರುವ ಜಾವೇದ್ ಈಗ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ, ಹಾಗಾದರೆ, ಕಣ್ಣೂರಿನ ಹುಡುಗ ಜಾವೇದ್ ಬಾಲ್ಯ ಜೀವನ ಹೇಗಿತ್ತು? ಕಂಪ್ಯೂಟರ್ ಪ್ರಪಂಚದಲ್ಲಿ ಜಾವೇದ್ ಕೋಟಿ ಕೋಟಿ ಹಣವನ್ನು ಗಳೀಸಲು ಸಾಧ್ಯವಾಗಿದ್ದು ಹೇಗೆ? ಕಂಪ್ಯೂಟರ್ ಜೊತೆಗಿನ ಜಾವೆದ್‌ನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಹೇಗಿತ್ತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!
ಈಗ ಯಶಸ್ವಿ ಉದ್ಯಮಿಯಾಗಿರುವ ಜಾವೇದ್ ಅವರ ಮೂಲ ಹೆಸರು ಮೊಹಮ್ಮದ್ ಜಾವೇದ್ ಟಿ ಎನ್ ಎಂದಾಗಿತ್ತು. ಹತ್ತನೇ ವಯಸ್ಸಿನಲ್ಲಿ ಜಾವೇದ್ ಹುಟ್ಟುಹಬ್ಬಕ್ಕೆ ಅವರ ತಂದೆ ಕಂಪ್ಯೂಟರ್ ಮತ್ತುನ ಇಂಟರ್‌ನೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಜಾವೇದ್‌ಗೆ ಬಹಳ ಕುತೋಹಲ ಮೂಡಿಸಿತ್ತು. ನಂತರದ ದಿನಗಳಲ್ಲಿ ಜಾವೇದ್‌ನ ಕಂಪ್ಯೂಟರ್ ಮೇಲಿನ ಕುತೋಹಲ ಅವನನ್ನು ಕಂಪ್ಯೂಟರ್ ಲೋಕಕ್ಕೆ ಇಳಿಸಿಬಿಟ್ಟಿತ್ತು.

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!
ಅಪ್ಪ ಏನೋ ಕಂಪ್ಯೂಟರ್ ಕೊಡಿಸಿದರು. ಆದರೆ, ಆ ಹಂತದಲ್ಲಿ ಜಾವೇದ್ ಬಳಿಯಲ್ಲಿ ಐಡಿ ಇರಲಿಲ್ಲ. ಹಾಗಾಗಿ, ಜಾವೇದ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲು ಮುಂದಾಗಿದ್ದರೆ, ಆ ಹೆಸರಿನಲ್ಲಿ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‌ಎಮ್ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‌ನಿಂದ ಸಲಹೆ ಬಂತು. ಆ ಹೆಸರು ಜಾವೇದ್ ಅವರಿಗೆ ಲಕ್ಕಿ ಹೆಸರಾಗಿಯೂ ಕ್ಲಿಕ್ ಆಯಿತು. ಗೂಗಲ್‌ನ ಸದ್ಬಳಕೆಯಿಂದ ಕೋಟಿ, ಕೋಟಿ ಹಣಗಳಿಸುವಂತೆ ಸಹ ಮಾಡಿತು.

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?
ಬಾಲಕ ಜಾವೇದ್ ಕಂಪ್ಯೂಟರ್ ಜೊತೆಗೆ ಸಮಯ ಕಳೆಯುವ ವೇಳೆ ಆತನಿಗೆ ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳು ತುಂಬಿರುತ್ತಿದ್ದವಂತೆ.! ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇದನ್ನೆಲ್ಲಾ ಮಾಡುವವರು ಯಾರು? ಹೀಗೆ ಪ್ರತಿಯೊಂದನ್ನು ತಿಳಿದುಕೊಳ್ಳುವುದರಲ್ಲಿ ನನಗೆ ಕುತೋಹಲವಿತ್ತು. ಒಂದರ್ಥದಲ್ಲಿ ಆ ಸಮಯದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾಗಿದ್ದೆ, ಆದರೆ ಒಳ್ಳೆಯ ಉದ್ದೇಶಕ್ಕಾಗಿ ಎಂದು ಜಾವೇದ್ ಅವರು ನೆನಪಿಸಿಕೊಳ್ಳುತ್ತಾರೆ.

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!
ಕಂಪ್ಯೂಟರ್ ಜಗತ್ತಿನ ಬಗ್ಗೆ ಜಾವೇದ್‌ಗೆ ತಿಳಿದುಕೊಳ್ಳುವ ಹಂಬಲದಿಂದ ಆ ಕಂಪ್ಯೂಟರ್ ಬಗ್ಗೆ ಹೆಚ್ಚೆಚ್ಚು ತಿಳಿಯಲು ಆರಂಭಿಸಿದ. ಬ್ಲಾಗಿಂಗ್ ಮತ್ತು ವೆಬ್‌ಡಿಸೈನಿಂಗ್ ವಿಷಯಗಳ ಬಗ್ಗೆ ಆನ್‌ಲೈನ್ ಮೂಲಕವೇ ಹೆಚ್ಚು ತಿಳಿದುಕೊಳ್ಳುತ್ತಿದ್ದನಂತೆ. ತನ್ನ ಹತ್ತನೇ ತರಗತಿ ವೇಳೆಗೆ ಹಲವು ಬ್ಲಾಗ್‌ಗಳನ್ನು ಸೃಷ್ಟಿಸಿದ್ದ ಜಾವೇದ್, ನಂತರ ತನ್ನ ಸಹಪಾಠಿ ಸಿರಾಜ್ ಜೊತೆ ಸೇರಿ ಜೆಸ್ರಿ.ಟಿಕೆ ಎಂಬ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದರಂತೆ. ಡೊಮೈನ್ ಖರೀದಿಸಲು ಹಣವಲ್ಲದೇ ಉಚಿತ ಡೊಮೈನ್ ಮೂಲಕ ವೆಬ್‌ಸೈಟ್ ಸೃಷ್ಟಿಮಾಡಿದ್ದರಂತೆ.!

"ಟಿಎಂಎನ್ ಆನ್‌ಲೈನ್ ಸೊಲ್ಯೂಷನ್''
ಕಂಪ್ಯೂಟರ್ ಆಸಕ್ತಿಯ ಜೊತೆಗೆ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಜಾವೇದ್, ವೆಬ್‌ಸೈಟ್ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿರುವುದನ್ನು ಅಂದೇ ಕಂಡುಕೊಂಡಿದ್ದ. ಆಗಲೇ ತನ್ನ ಮೊಟ್ಟ ಮೊದಲ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ಡೊಮೈನ್ ನೇಮ್ ಅನ್ನು ನೊಂದಾಯಿಸಿದ. ಅಂದು ಜಾವೇದ್ ನೊಂದಾಯಿಸಿದ ಈ ಡೊಮೈನ್ ನೇಮ್ ಈಗಲೂ ವರ್ಚುವಲ್ ಕಂಪೆನಿಯಾಗಿ ಬೆಳದುನಿಂತಿದೆ. ಆಗಲೇ ಹೇಳಿದಂತೆ ಜಾವೇದ್‌ಗೆ ಇದು ಗೂಗಲ್ ಲಕ್ಕಿ ನೇಮ್.!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!
ಡೊಮೈನ್ ನೇಮ್ ಖರೀದಿಸಿ ಕಂಪೆನಿಯನ್ನು ಕಟ್ಟಿದ ಜಾವೇದ್, ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆದರೆ, ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿಲ್ಲದೆ ಅವರ ಕೆಲಸ ವಿಫಲವಾಗಿತ್ತು. ಆದರೆ, ಛಲಬಿಡದ ಜಾವೇದ್ ಕೆಲ ವೆಬ್‌ಸೈಟ್ ಡಿಸೈನ್ ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನದನ್ನು ತಿಳಿದುಕೊಂಡ. ನಂತರ ಶಿಕ್ಷಕಿಯೋರ್ವರು ಕೇಳಿದಂತೆ ಮೊದಲ ವೆಬ್‌ಸೈಟ್ ತಯಾರಿಸಿ ನೀಡಿ 2500 ರೂ.ಹಣಗಳಿಸಿ ತನ್ನ ತಾಯಿಯ ಕೈಗಿಟ್ಟನಂತೆ ಜಾವೇದ್.!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!
ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ
1 ಲಕ್ಷ ಹಣ ಹೂಡಿ ಕಂಪೆನಿ ತೆರೆದಿದ್ದ ಜಾವೇದ್‌ನ ಮೊದಲ ದಿನಗಳು ಬಹಳ ಕಷ್ಟದ ದಿನಗಳಾಗಿದ್ದವು. ಆ ಸಮಯದಲ್ಲಿ ಓದು ಮತ್ತು ಕೆಲಸ ಎರಡರಲ್ಲಿಯೂ ಜೀವನದ ಜಂಜಾಟದಲ್ಲಿ ಜಾವೇದ್ ಇದ್ದರು. ಆಫಿಸ್ ಬಾಡಿಗೆ ನಿಡುವಷ್ಟು ಸಹ ಆದಾಯವಿರಲಿಲ್ಲ. ಮನೆ ಪರಿಸ್ಥಿತಿ ಸಹ ಹದಗೆಟ್ಟಿತ್ತು. ಯಾವುದೇ ಪ್ರಾಜೆಕ್ಟ್ ಸಹ ಜಾವೇದ್ ಕೈ ಸೇರಿರಲಿಲ್ಲ. ಇಂತಹ ಸಮಯದಲ್ಲಿ ಜಾವೇದ್ ಧೃತಿಗೆಟ್ಟಿದ್ದರಂತೆ. ತಮ್ಮ ತಾಯಿಯ ಚಿನ್ನದ ಬಳೆಗಳನ್ನು ಇಟ್ಟು ಕಚೇರಿಯನ್ನು ನಿರ್ವಹಣೆ ಮಾಡಿದ್ದರಂತೆ.

ಇಂದು ಸ್ವಂತ ಮನೆ, ಐಶಾರಾಮಿ ಕಾರು!!
ಹಗಲು, ರಾತ್ರಿ ಎನ್ನದೇ ಸಿಕ್ಕಿದ ಕೆಲ ಗ್ರಾಹಕರ ಜೊತೆ ವ್ಯವಹರಿಸಿದ ಜಾವೇದ್ ನಂತರ ಕೇರಳದಲ್ಲಿ 10 ಸಣ್ಣ ಪ್ರಮಾಣದ ಕೆಲಸ ಪಡೆದರಂತೆ. ಆ ಸಮಯದಲ್ಲಿ ಆದಾಯಕ್ಕಿಂತ ಕೆಲಸದಲ್ಲಿ ವೈವಿಧ್ಯ ಮುಖ್ಯ ಎಂಬುದನ್ನು ಅರಿತ ಜಾವೇದ್ ಅವರು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಂತರ ಯಶಸ್ವಿ ವೆಬ್‌ಡಿಸೈನ್ ಉದ್ಯಮಿಯಾಗಿ ಜಾವೇದ್ ಬೆಳೆದು ನಿಂತಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಬೆಳೆದ ಜಾವೇದ್ ತನ್ನ ಆಸೆಯಂತೆ 19ನೇ ವಯಸ್ಸಿನಲ್ಲಿಯೇ ಸ್ವಂತ ಮನೆಯನ್ನು ಕಟ್ಟಿದ್ದಾರೆ. ಬಿಎಂಡಬ್ಲೂ ಕಾರನ್ನು ಸಹ ಖರೀದಿಸಿದ್ದಾರೆ.!


Click it and Unblock the Notifications








