ಹೊಸ ಆಧಾರ ಕಾರ್ಡ್ ಮಾಡಿಸಿಕೊಂಡವರಿಗೆ ಪ್ಯಾನ್ ಕಾರ್ಡ್ ಉಚಿತ..!

By GizBot Bureau
|

ಸರ್ಕಾರಿ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು ಎಂದರೆ ಅದೊಂದು ಅದ್ವಾನ ಎಂದೇ ಎಲ್ಲರೂ ಬೈದುಕೊಳ್ಳುತ್ತಾರೆ. ಸರ್ಕಾರಿ ಗುರುತಿನ ಚೀಟಿಗಳೆಂದರೆ ನಮಗೊಂದು ಗೋಣಿಚೀಲ ಬೇಕಾದೀತು ಇಟ್ಟುಕೊಳ್ಳೋದಕ್ಕೆ!

ಹೌದು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಎಲೆಕ್ಷನ್ ಐಡಿ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಹೀಗೆ ಒಂದು ಕಾರ್ಡ್ ಮಾಡಿಸಿಕೊಳ್ಳೋಕೂ ನೂರು ಬಾರಿ ಓಡಾಡಬೇಕು. ಯಾವುದೇ ಒಂದು ಇಲ್ಲದೇ ಇದ್ದರೂ ಅದು ಸಮಸ್ಯೆಯೇ ಆಗಿರುತ್ತದೆ. ಆಧಾರ ಇಲ್ಲದೇ ಪ್ಯಾನ್ ಆಗುವುದಿಲ್ಲ, ಪ್ಯಾನ್ ಕಾರ್ಡ್ ಇಲ್ಲದೇ ಇದ್ದರೆ ಬ್ಯಾಂಕ್ ಅಕೌಂಟ್ ಆಗೋದಿಲ್ಲ.

ಹೊಸ ಆಧಾರ ಕಾರ್ಡ್ ಮಾಡಿಸಿಕೊಂಡವರಿಗೆ ಪ್ಯಾನ್ ಕಾರ್ಡ್ ಉಚಿತ..!

ಹೀಗೆ ಎಲ್ಲಾ ಸರ್ಟಿಫಿಕೇಟ್ ಗಳು ಒಂದಕ್ಕೊಂದು ಇಂಟರ್ ಲಿಂಕ್ ಆಗಿವೆ. ಆದರೆ ಹೀಗೆ ಜನರು ಪಡುವ ಕಷ್ಟವನ್ನು ನಿವಾರಿಸಲು ಸರ್ಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದು ನಿಜವಾದ ಸಂಗತಿ. ಆ ನಿಟ್ಟಿನಲ್ಲಿ ನಡೆಯುತ್ತಿದೆ ಒಂದು ಹೊಸ ಪ್ರಯತ್ನ.

ಹೌದು ಇನ್ನು ಮುಂದೆ ಯಾರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುತ್ತಾರೋ ಅವರಿಗೆ ಪ್ಯಾನ್ ಕಾರ್ಡ್ ಕೂಡ ಮಾಡಿಕೊಡಲಾಗುತ್ತದೆ. ತೆರಿಗೆ ಇಲಾಖೆಯು ಹೊಸದಾದ ಇನ್ಸ್ಟೆಂಟ್ ಆಧಾರ್ ಬೇಸ್ಡ್ ಪ್ಯಾನ್ ಅಲೋಟ್ ಮೆಂಟ್ ಸೇವೆಯನ್ನು ಪರಿಚಯಿಸಿದ್ದು, ಯಾರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುತ್ತಾರೋ ಅವರು ತಮ್ಮ ಪ್ಯಾನ್ ನಂಬರ್ ನ್ನೂ ಕೂಡ ಪಡೆಯಬಹುದು.

“ ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ಈ ರೀತಿಯ ಇನ್ಸ್ಟೆಂಟ್ ಇ-ಪ್ಯಾನ್ ಅಲೋಟ್ ಮೆಂಟ್ ಕೆಲವೇ ದಿನಗಳ ವರೆಗೆ ಲಭ್ಯವಿರಲಿದೆಯಂತೆ. ಯಾರು ಮೊದಲು ಬರುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದಾಗಿ ಇಲಾಖೆ ತಿಳಿಸಿದೆ. ಹಣಕಾಸು ಮತ್ತು ತೆರಿಗೆಗಾಗಿ (PAN) ನ್ನು ಹೆಚ್ಚಿನ ಜನರು ಪಡೆದುಕೊಳ್ಳಬೇಕು ಎಂಬ ದೃಷ್ಟಿಯಿಂದ ಇದನ್ನು ಪರಿಚಯಿಸಲಾಗುತ್ತದೆ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ಪ್ಯಾನ್ ಕಾರ್ಡ್ ನ್ನು ವ್ಯಕ್ತಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗುವ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಿ ಅದನ್ನು ಬಳಸಿ ಹಂಚಿಕೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಜೊತೆಗೆ ಈ ಯಾಂತ್ರಿಕತೆಯ ಮೂಲಕ ಸಿಗುವ ಪ್ಯಾನ್ ನಂಬರ್ ನಲ್ಲೂ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಲಾಗುತ್ತದೆ.

ಈ-ಪ್ಯಾನ್ ಸೌಲಭ್ಯವು ಕೇವಲ ನಿವಾಸಿ ವ್ಯಕ್ತಿಗಳಿಗೆ ಮಾತ್ರವಾಗಿದ್ದು, ಹಿಂದೂ ಅವಿಭಜಿತ ಕುಟುಂಬ,ಸಂಸ್ಥೆಗಳು, ಟ್ರಸ್ಟ್ ಗಳು ಮತ್ತು ಕಂಪೆನಿ ಇತ್ಯಾದಿಗಳಿಗೆ ಸಂಬಂಧ ಪಟ್ಟಿರುವುದಿಲ್ಲ ಎಂಬುದನ್ನು ಅಧಿಕೃತವಾಗಿ ತೆರಿಗೆ ಇಲಾಖೆಯಿಂದ ತಿಳಿಸಲಾಗಿದೆ.

ಹೊಸ ಆಧಾರ ಕಾರ್ಡ್ ಮಾಡಿಸಿಕೊಂಡವರಿಗೆ ಪ್ಯಾನ್ ಕಾರ್ಡ್ ಉಚಿತ..!

ಒಮ್ಮೆ ಅರ್ಜಿದಾರನಿಗೆ ಪ್ಯಾನ್ ಕಾರ್ಡ್ ಹಂಚಿಕೆಯಾಗಲು ಎಲೆಕ್ಟ್ರಾನಿಕ್ ಆಧಾರ್ ಬೇಸ್ಡ್ ವೆರಿಫಿಕೇಷನ್ ಸಿಸ್ಟಮ್ ನಿಂದ ಕೆಲವೇ ಸೆಕೆಂಡ್ ಗಳಲ್ಲಿ ಮಂಜೂರಾತಿ ದೊರೆತರೆ, ಅರ್ಜಿದಾರನಿಗೆ ಪ್ಯಾನ್ ಕಾರ್ಡ್ ನ್ನು ಅಂಚೆ ಮೂಲಕ ಕಳುಹಿಸಿ ಕೊಡಲಾಗುವುದು ಎಂಬುದನ್ನು ಅಧಿಕೃತ ಮೂಲಗಳು ತಿಳಿಸಿದೆ. ಸರ್ಕಾರಿ ಸೇವೆ ಮತ್ತು ಸೌಲಭ್ಯವನ್ನು ತ್ವರಿತವಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮತ್ತೊಂದು ಕ್ರಮ ಇದಾಗಿದೆ. ಈ ಪ್ರಕ್ರಿಯೆಯನ್ನು ಇಲಾಖೆಯ ಅಧಿಕೃತ ವೆಬ್ ಪೋರ್ಟಲ್ ನಲ್ಲಿ ನಡೆಸಲಾಗುತ್ತದೆ.

ಕೇಂದ್ರ ತೆರಿಗೆ ಮಂಡಳಿಯು (ಸಿಬಿಡಿಟಿ) ತೆರಿಗೆ ಇಲಾಖೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಅಂದರೆ ಪ್ಯಾನ್- ಆಧಾರ್ ಲಿಂಕಿಂಗ್ ಗೆ ಮುಂದಿನ ವರ್ಷದ ಮಾರ್ಚ್ ವರೆಗೆ ಗಡುವನ್ನು ವಿಸ್ತರಿಸಿದೆ.ಇದು 5 ನೇ ಬಾರಿ ತನ್ನ ಡೆಡ್ ಲೈನ್ ನ್ನು ಇಲಾಖೆಯು ವಿಸ್ತರಿಸಿದ್ದು, ಪ್ಯಾನ್ ಕಾರ್ಡ್ ನ್ನು ಆಧಾರ್ ಜೊತೆಗೆ ಜೋಡಣೆ ಮಾಡಲು ಹೇಳಿದೆ. ಸೆಕ್ಷನ್ 139 AA (2) ನ ತೆರೆಗೆ ಆಕ್ಟ್ ಹೇಳುವಂತೆ, ಪ್ರತಿ ವ್ಯಕ್ತಿಯು ಪ್ಯಾನ್ ಕಾರ್ಡ್ ನ್ನು ಜುಲೈ 1, 2017 ರ ಒಳಗೆ ಹೊಂದಿರತಕ್ಕದ್ದು . ತೆರಿಗೆ ಅಧಿಕಾರಿಗಳಿಗೆ ತಮ್ಮ ಆಧಾರ್ ವಿವರಗಳನ್ನು ನೀಡತಕ್ಕದ್ದು.

ಆಧಾರ್ ನ್ನು ಪ್ರತಿ ವ್ಯಕ್ತಿಯು ತನ್ನ ಗುರುತಿನ ಚೀಟಿಯಾಗಿ ಹೊಂದಿರುತ್ತಾರೆ. ಇದು ಭಾರತೀಯ (UIDAI) ಯಿಂದ ಪಡೆಯಲೇ ಬೇಕು ಅದೇ ರೀತಿ 10 ಸಂಖ್ಯೆಯ ಆಲ್ಫಾ ನ್ಯೂಮರಿಕ್ ಪ್ಯಾನ್ ನಂಬರ್ ಕೂಡ ಐಟಿ ಡಿಪಾರ್ಟ್ ಮೆಂಟ್ ನಿಂದ ಪ್ರತಿ ವ್ಯಕ್ತಿಯ ಪಡೆಯಲೇಬೇಕು.

ಒಟ್ಟಿನಲ್ಲಿ ತೆರಿಗೆ ವಸೂಲಾತಿಗೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತೋ ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಅನ್ನುವುದಂತೂ ಸತ್ಯ. ಭಾರತೀಯನಾದ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆ ವ್ಯಾಪ್ತಿಗೆ ಒಳಪಡಬೇಕು ಎಂಬುದು ಸರ್ಕಾರದ ಚಿಂತನೆಯಾಗಿರಬಹುದು. ಅದೇ ಕಾರಣಕ್ಕೆ ಗುರುತಿನ ಚೀಟಿ ಪಡೆದ ವ್ಯಕ್ತಿಗೆ ಆ ಕೂಡಲೇ ಪ್ಯಾನ್ ನಂಬರ್ ನ್ನೂ ಕೂಡ ಹಂಚಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಿಜ ಹೇಳಬೇಕು ಎಂದರೆ ಇದು ಜನಸಾಮಾನ್ಯರಿಗೂ ಸುಲಭವಾಗುವ ವಿಚಾರವೇ ಆಗಿದೆ. ಒಂದೇ ರೀತಿಯ ಕೆಲಸಕ್ಕೆ ಎರಡೆರಡು ಬಾರಿ ಸಮಯ ವ್ಯರ್ಥ ಮಾಡುವ ಚಿಂತೆ ಇಲ್ಲ.

Best Mobiles in India

Read more about:
English summary
Aadhaar-Based Instant PAN Allotment System Launched by Income Tax Department. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X