ಡಿಎಲ್‌ಗೂ ಆಧಾರ್ ಲಿಂಕ್ ಕಡ್ಡಾಯ!!..ಉಪಯೋಗ ಏನು?.ಲಿಂಕ್ ಮಾಡುವುದು ಹೇಗೆ?

ಮುಂದೆ ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗಲೂ ಮತ್ತು ಲೈಸೆನ್ಸ್ ನವೀಕರಣಕ್ಕೂ ಆಧಾರ್ ಅಗತ್ಯ.!!

|

ಡ್ರೈವಿಂಗ್ ಲೈಸೆನ್ಸ್ ಮೂಲಕ ಆಗುತ್ತಿರುವ ವಂಚನೆಗಳನ್ನು ತಡೆಗಟ್ಟಲು ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ವರ್ಷ ಅಕ್ಟೋಬರ್‌ನಿಂದ ನೂತನ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು,ಹಾಗಾಗಿ, ಇನ್ನು ಮುಂದೆ ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗಲೂ ಮತ್ತು ಲೈಸೆನ್ಸ್ ನವೀಕರಣಕ್ಕೂ ಆಧಾರ್ ಅಗತ್ಯ.!!

ಆನ್‌ಲೈನ್ ಮೂಲಕ ಡಿಎಲ್ ಬಳಕೆದಾರರು ತಮ್ಮ ಲೈಸೆನ್ಸ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ನೀಡಲು ಮುಂದಾಗಿದೆ ಎನ್ನಲಾಗಿದ್ದು,.! ಹಾಗಾದರೆ, ಡಿಎಲ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲೇಬೇಕು ಏಕೆ? ಇದರಿಂದ ಜನರಿಗೆ ಏನು ಲಾಭ? ಲಿಂಕ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

18 ಕೋಟಿಗೂ ಅಧಿಕ ಡಿಎಲ್‍ಗಳಿವೆ.!!

18 ಕೋಟಿಗೂ ಅಧಿಕ ಡಿಎಲ್‍ಗಳಿವೆ.!!

ಒಂದು ಅಂದಾಜಿನ ಪ್ರಕಾರ, ಈವರೆಗೆ ದೇಶಾದ್ಯಂತ 18 ಕೋಟಿಗೂ ಅಧಿಕ ಡಿಎಲ್‍ಗಳಿವೆ. ಆದರೆ, ಒಂದೇ ಹೆಸರಿನಲ್ಲಿ ಬಹು ಪರವಾನಗಿಗಳನ್ನು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಒ) ಮತ್ತು ಪೊಲೀಸ್ ಇಲಾಖೆಗೆ ವಂಚಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಂಚನೆ, ಅಪರಾಧ ಚಟುವಟಿಕೆಗಳು ಮತ್ತು ನಕಲಿ ಗುರುತುಗಳನ್ನು ತಡೆಗಟ್ಟಲು ಆಧಾರ್ ಅಸ್ತ್ರವನ್ನು ಬಳಸಲು ಉದ್ದೇಶಿಸಲಾಗಿದೆ.!!

ಇನ್ನು ಬಯೋಮೆಟ್ರಿಕ್ ವಿವರ!!

ಇನ್ನು ಬಯೋಮೆಟ್ರಿಕ್ ವಿವರ!!

ವಿವಿಧ ರಾಜ್ಯಗಳಲ್ಲಿನ ಅನೇಕ ಆರ್‍ಟಿಒ ಕಚೇರಿಗಳಿಂದ ಬಹು ಲೈಸನ್ಸ್‌ಗಳನ್ನು ಪಡೆಯುತ್ತಿರುವ ಪ್ರಕರಣಗಳ ಹೆಚ್ಚಾಗಿವೆ. ಇನ್ನು ಒಂದೇ ಡ್ರೈವಿಂಗ್ ಲೈಸನ್ಸ್ ಅನ್ನು ಹಲವರು ಉಪಯೋಗಿಸುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದು, ಇನ್ನು ಬಯೋಮೆಟ್ರಿಕ್ ವಿವರಗಳ ಮೂಲ ನಕಲಿ ಹಾವಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ.!!

ರಿಯಲ್-ಟೈಮ್ ಡಾಟಾ ವ್ಯವಸ್ಥೆ!!

ರಿಯಲ್-ಟೈಮ್ ಡಾಟಾ ವ್ಯವಸ್ಥೆ!!

ದೇಶದ ಬಹುತೇಕ ಆರ್‍ಟಿಒಗಳಲ್ಲಿ ರಿಯಲ್-ಟೈಮ್ ಡಾಟಾ ವ್ಯವಸ್ಥೆ ಇರದ ಕಾರಣ ಹೊಸ ಅರ್ಜಿದಾರರ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ.! ಆದರೆ, ಇನ್ನು ಆಧಾರ್‌ ಮೂಲಕ ಡಿಎಲ್ ಸಂಪರ್ಕಿಸುವ ಕಾರಣ ರಿಯಲ್-ಟೈಮ್ ಡಾಟಾ ಆರ್‌ಟಿಒಗಳಿಗೆ ಸಿಗುತ್ತದೆ.!!

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಆಧಾರ್ ಕಡ್ಡಾಯದಿಂದ ಜನರಿಗೆ ಹೆಚ್ಚು ಲಾಭ!!

ಆಧಾರ್ ಕಡ್ಡಾಯದಿಂದ ಜನರಿಗೆ ಹೆಚ್ಚು ಲಾಭ!!

ಆಧಾರ್ ಕಾರ್ಡ್ ಅನ್ನು ಡಿಎಲ್‌ ಜೊತೆ ಕಡ್ಡಾಯಗೊಳಿಸಿದರೆ ಹೊಸದಾಗಿ ಡಿಎಲ್ ಪಡೆಯುವವರು ತಮ್ಮ ಗುರುತು ಮತ್ತು ವಿಳಾಸವನ್ನು ದೃಢಪಡಿಸಲು ಅನೇಕ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಕಂಡುಬರುವುದಿಲ್ಲ. ಇದರಿಂದ ಹೊಸದಾಗಿ ಡಿಎಲ್‌ ಮಾಡಿಸುವವರಿಗೆ ಅನುಕೂಲವಾಗಲಿದೆ.!!

 ಸಾರಥಿ ಆನ್‌ಲೈನ್‌ ವ್ಯವಸ್ಥೆ.!!

ಸಾರಥಿ ಆನ್‌ಲೈನ್‌ ವ್ಯವಸ್ಥೆ.!!

ಆನ್‌ಲೈನ್‌ನಲ್ಲಿ ಕೇವಲ 30 ರೂಪಾಯಿಗಳಿಗೆ ಡಿಎಲ್‌ ಮಾಡಿಸಿಕೊಳ್ಳಬಹುದಾದ ಸಾರಥಿ ವೆಬ್‌ಸೈಟ್‌ನಲ್ಲಿ ಆಧಾರ್ ಮತ್ತು ಡಿಎಲ್‌ ಲಿಂಕ್ ಮಾಡಲು ಡಿಜಿಟಲ್ ವ್ಯವಸ್ಥೆಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ವೆಬ್‌ಸೈಟ್‌ನಲ್ಲಿ ಒಂದು ಕ್ಲಿಕ್‌ನಲ್ಲಿ ಆಧಾರ್ ಲಿಂಕ್ ಮಾಡಬಹುದಾಗಿದೆ.!!

<strong>ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!</strong>ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

Best Mobiles in India

Read more about:
English summary
The Aadhaar number's biometrics details will help prevent such practices. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X