Home
ಸುದ್ದಿಜಾಲ

ಹೊಸ ಸಿಮ್ ಕಾರ್ಡ್ ಖರೀದಿಸುವವರ ಗಮನಕ್ಕೆ..! ಯಾವುದೇ ಕಾರಣಕ್ಕೂ ಆಧಾರ್ ಕೊಡಬೇಡಿ..!

By Srinidhi

ಈಗಾಗಲೇ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ ಅನ್ನು ನೀಡುವಂತೆ ಮನವಿ ಮಾಡುತ್ತಿದ್ದು, ಅಲ್ಲದೇ ಹೊಸ ಸಿಮ್ ಕಾರ್ಡ್ ಮಾರಾಟ ಮಾಡುವ ಸಂದರ್ಭದಲ್ಲಿಯೂ ಆಧಾರ್ ಬಯೋಮೆಟ್ರಿಕ್ ಕಡ್ಡಾಯವಾಗಿ ಬೇಕು ಎನ್ನುವ ಬೇಡಿಕೆಯನ್ನು ಇರಿಸುತ್ತಿವೆ. ಆದರೆ ಮೂಲಗಳ ಪ್ರಕಾರ ಸಿಮ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿ ಬೇಕಾಗಿಲ್ಲ ಎನ್ನಲಾಗಿದೆ.

ಹೊಸ ಸಿಮ್ ಕಾರ್ಡ್ ಖರೀದಿಸುವವರ ಗಮನಕ್ಕೆ..! ಯಾವುದೇ ಕಾರಣಕ್ಕೂ ಆಧಾರ್ ಕೊಡಬೇಡಿ..!

ಭಾರತ ಸರಕಾರ ನೀಡಿರುವ ಅಧಿಕೃತ ಬಯೋಮೆಟ್ರಿಕ್‌ ಗುರುತಾಗಿರುವ ಆಧಾರ್‌ ಕಾರ್ಡ್‌ ಅತೀ ಮುಖ್ಯ ದಾಖಲೆಯಾದರೂ, ಮೊಬೈಲ್‌ ಸಿಮ್‌ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ. ಅದರ ಬದಲಿಗೆ ಬೇರೆ ಗುರುತಿನ ಪತ್ರಗಳನ್ನು ಸ್ವೀಕರಿಸಿ ಸಿಮ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಗ್ರಾಹಕರು ಮಾಹಿತಿಯನ್ನು ಹೊಂದಿರಬೇಕಾಗಿದೆ.

ಆಧಾರ್ ಬಿಟ್ಟು ಬೇರೆಯದನ್ನು ಸ್ವೀಕರಿಸಬೇಕು:

ಆಧಾರ್ ಬಿಟ್ಟು ಬೇರೆಯದನ್ನು ಸ್ವೀಕರಿಸಬೇಕು:

ಈಗಾಗಲೇ ಸುಪ್ರೀಂ ಕೋರ್ಟ್ ಮೊಬೈಲ್ ನಂಬರ್ - ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಸರಕಾರಕ್ಕೆ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ಸಿಮ್‌ ನೀಡುವುದಕ್ಕೆ ಆಧಾರ್‌ ಬದಲು ಇತರ ಗುರುತು ಪತ್ರ ದಾಖಲೆಗಳನ್ನು ಸ್ವೀಕರಿಸಬೇಕು ಎಂದು ಸರಕಾರ ತಿಳಿಸಿದೆ.

ಇತರೆ ಗುರುತಿನ ಪತ್ರ:

ಇತರೆ ಗುರುತಿನ ಪತ್ರ:

ಸರಕಾರವು ಅಧಿಕೃತವಾಗಿ ನೀಡಿರುವ ಡ್ರೈವಿಂಗ್‌ ಲೈಸನ್ಸ್‌ (DL), ವೋಟರ್‌ ಐಡಿ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿದಂತೆ ಇತ್ಯಾದಿ ಗುರುತಿನ ಪತ್ರಗಳನ್ನು ಸ್ವೀಕರಿಸಿ ಸಿಮ್ ಕಾರ್ಡ್ ನೀಡುವಂತೆ ಸರಕಾರ ಟೆಲಿಕಾಂ ನಿರ್ವಾಹಕರಿಗೆ ಸೂಚಿಸಿರುವುದಾಗಿ ವರದಿಯಾಗಿದೆ.

ಆಧಾರ್ ಕಡ್ಡಾಯವಲ್ಲ:

ಆಧಾರ್ ಕಡ್ಡಾಯವಲ್ಲ:

ಸರಕಾರಿ ಸೇವೆಗಳನ್ನು ಪಡೆಯಲು ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಸೇರಿದಂತೆ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದಕ್ಕೆ ಸರಕಾರವು ನಿಗಧಿ ಪಡಿಸಿದ್ದ ಗಡುವಿಗೆ ಸುಪ್ರೀಂ ಕೋರ್ಟ್ ತಡೆ ಹಾಕಿದ್ದು, ಇದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ ಎನ್ನಲಾಗಿದೆ.

ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ?

ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ?

ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಅನ್ನು ಎಲ್ಲಾ ಕಡೆಗಳಲ್ಲಿಯೂ ಬಳಕೆ ಮಾಡಿಕೊಳ್ಳುವುದು ಅಧಿಕವಾಗುತ್ತಿದೆ. ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಮಾಹಿತಿಗಳು ಲೀಕ್ ಆಗುತ್ತಿದೆ ಎನ್ನುವ ಮಾಹಿತಿಯೂ ಆಗಾಗ್ಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಇದಕ್ಕಾಗಿ ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವೂ ಅವಕಾಶವನ್ನು ಮಾಡಿಕೊಟ್ಟಿದ.

ಟ್ರಾಕ್ ಮಾಡಬಹುದಾಗಿದೆ

ಟ್ರಾಕ್ ಮಾಡಬಹುದಾಗಿದೆ

ಈ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ಯಾವ ಕಾರಣಕ್ಕೆ, ಎಲ್ಲಿ ಬಳಕೆ ಮಾಡಿಕೊಂಡಿದ್ದೀರಾ ಎಂಬುದನ್ನು ಟ್ರಾಕ್ ಮಾಡಬಹುದಾಗಿದೆ. ಆಕೌಂಟ್ ಲಿಂಕ್. ಸಿಮ್ ಕಾರ್ಡ್. ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ನೀಡಿದೆ. ಇದರೊಂದಿಗೆ ನಿಮ್ಮ ಆಧಾರ್ ಮಾಹಿತಿಯೂ ಮೀಸ್ ಯೂಸ್ ಆಗಿದೆ ಎಂದರೆ ನೀವು ದೂರ ಸಹ ನೀಡಬಹುದಾಗಿದೆ.

ಹಂತ 01:

ಹಂತ 01:

ಮೊದಲಿಗೆ UIDAI ವೆಬ್ ಸೈಟಿಗೆ ಭೇಟಿ ನೀಡಿ. ಮತ್ತು ಆಧಾರ್ ಅಥ್ರಟಿಫಿಕೇಷನ್ ಹಿಸ್ಟರಿ ಪೇಜ್ ಒಪನ್ ಮಾಡಿರಿ. https://resident.uidai.gov.in/notification-aadhaar.

ಹಂತ 02:

ಹಂತ 02:

ಪೇಜ್ ಓಪನ್ ಮಾಡಿ ಮತ್ತು 12 ಅಂಕಿಗಳ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ದಾಖಲಿಸಿ.

ಹಂತ 03:

ಹಂತ 03:

ನಂತರ ಅಲ್ಲಿಯೇ ಕೆಳಗೆ ಇರುವ ಜನರೆಟ್ OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04:

ಹಂತ 04:

ನಿಮ್ಮ ರಿಜಿಸ್ಟರ್ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗೆ OTPಯು ಬರಲಿದೆ. OTP ಬರಬೇಕಾದರೆ ನಿಮ್ಮ ಮೊಬೈಲ್ ನಂಬರ್ ವೇರಿಫಿಕೇಷನ್ ಆಗಿರಬೇಕು.

ಹಂತ 05:

ಹಂತ 05:

ನಿಮಗೆ ಬೇಕಾದ ಮಾಹಿತಿಯ ವಿಧ ಮತ್ತು ಅವಧಿಯನ್ನು ಎಂಟ್ರಿ ಮಾಡಬೇಕಾಗಿದೆ. ನಂತರದಲ್ಲಿ OTP ಯನ್ನು ಎಂಟ್ರಿ ಮಾಡಿದ ನಂತರದಲ್ಲಿ ಸುಮಾರು 50 ಬಳಕೆಯ ಮಾಹಿತಿಯೂ ನಿಮಗೆ ದೊರೆಯಲಿದೆ. ಅಲ್ಲದೇ ಆರು ತಿಂಗಳ ಅವಧಿಯದ್ದು ಮಾತ್ರವೇ ಲಭ್ಯವಿರಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಹಂತ 06:

ಹಂತ 06:

ಮಾಹಿತಿಯಲ್ಲಿ ನೀವು ಆಧಾರ್ ಬಳಕೆ ಮಾಡಿದ ಸ್ಥಳ, ಸಮಯ ಮತ್ತು ಬಳಕೆ ಮಾಡಿದ ಕಾರ್ಯವು ಯಶಸ್ವಿಯಾಗಿದೆಯೇ ಎಂಬುದರ ಸಂಪೂರ್ಣ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Aadhaar card not mandatory to get mobile SIM: Report. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+