Home
ಸುದ್ದಿಜಾಲ

ಆಧಾರ್ ಕಾರ್ಡ್ ಮಾಡಿಸುವ ಮುನ್ನ ಎಚ್ಚರ: ಮಾರುಕಟ್ಟೆಯಲ್ಲಿ ನಕಲಿ ಆಧಾರ್ ಹಾವಳಿ...!

By Srinidhi

ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ ಕೋಟಿ ಕೋಟಿ ಆಧಾರ್ ಬಳಕೆದಾರರ ಮಾಹಿತಿಯೂ ಮಾರಾಟವಾಗುತ್ತಿದೆ ಎಂಬ ಆಘಾತಕಾರಿ ಸುದ್ದಿಯೂ ಜನರ ಮನಸ್ಸಿನಿಂದ ಮಾಯವಾಗುವ ಮುನ್ನವೇ ಮತ್ತೊಂದು ಬೆಚ್ಚಿಬೀಳಿಸುವ ವರದಿಯೊಂದು ಹೊರ ಬಿದ್ದಿದೆ. ಏಷ್ಯಾ ಟೈಮ್ಸ್‌ ವರದಿ ಪ್ರಕಾರ ಹೊಸದಾಗಿ ಆಧಾರ್ ಕಾರ್ಡ್ ಸೃಷ್ಠಿ ಮಾಡುವ ಸಾಫ್ಟ್‌ವೇರ್ ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಆಧಾರ್ ಕಾರ್ಡ್ ಮಾಡಿಸುವ ಮುನ್ನ ಎಚ್ಚರ: ಮಾರುಕಟ್ಟೆಯಲ್ಲಿ ನಕಲಿ ಆಧಾರ್ ಹಾವಳಿ...!

ವಿಶಿಷ್ಠ ಗುರುತಿನ ಪ್ರಾಧಿಕಾರವು ಆಧಾರ್‌ ದಾಖಲಾತಿಗೆ ಬಳಸುವ ಸಾಫ್ಟ್‌ವೇರ್‌ನ ಕ್ರ್ಯಾಕಡ್‌ ವರ್ಶನ್ ಸದ್ಯ ಬ್ಲಾಕ್ ಮಾರ್ಕೆಟ್‌ನಲ್ಲಿ ಕೆಲವೇ ಸಾವಿರಗಳಿಗೆ ಮಾರಾಟವಾಗುತ್ತಿದ್ದು, ಇದನ್ನು ಬಳಸಿಕೊಂಡು ಆಧಾರ್ ಮಾಹಿತಿಯನ್ನು ಯಾರು ಬೇಕಾದರು ತಿದ್ದುವ ಮತ್ತು ಹೊಸದಾಗಿ ಸೇವೆಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು, ಇದು ವಿಶ್ವದ ಅತೀ ದೊಡ್ಡ ಮಾಹಿತಿಯ ಸುರಕ್ಷತೆಗೆ ಎದುರಾಗಿರುವ ಅತೀ ದೊಡ್ಡ ಸವಾಲಾಗಿದೆ.

ಏಷ್ಯಾ ಟೈಮ್ಸ್‌ ವರದಿ:

ಏಷ್ಯಾ ಟೈಮ್ಸ್‌ ವರದಿ:

ಮತ್ತೊಮ್ಮೆ ಆಧಾರ್ ಮಾಹಿತಿ ಸುರಕ್ಷಿತವಲ್ಲ ಎನ್ನುವ ಸುದ್ದಿಯೂ ದೇಶದಲ್ಲಿ ಆತಂಕವನ್ನು ಸೃಷ್ಠಿಸಿದೆ. ಆಧಾರ್ ದಾಖಲಾತಿಗೆ ವ್ಯಾಪಕವಾಗಿ ನಕಲಿ ಸಾಫ್ಟ್‌ವೇರ್ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿರುವ ಬಗ್ಗೆ ಏಷ್ಯಾ ಟೈಮ್ಸ್‌ ವರದಿ ಪ್ರಕಟಿಸಿದೆ, ಇದು ಆಧಾರ್ ಸುರಕ್ಷತೆಗೆ ದೊಡ್ಡ ಹೊಡೆತ ಎಂದು ದಿ ವೈರ್‌ ಸಹ ಸುದ್ದಿ ಮಾಡಿದೆ.

ಯಾವುದೇ ದಾಖಲಾತಿ ಬೇಕಾಗಿಲ್ಲ:

ಯಾವುದೇ ದಾಖಲಾತಿ ಬೇಕಾಗಿಲ್ಲ:

ಕ್ರ್ಯಾಕಡ್‌ ವರ್ಶನ್ ಸಾಫ್ಟ್‌ವೇರ್ ನಿಂದ ಆಧಾರ್‌ಗೆ ಮಾಹಿತಿಗಳನ್ನು ಹೊಸದಾಗಿ ಸೇರಿಸಲು ಮತ್ತು ಹಳೇಯ ಮಾಹಿತಿಯನ್ನು ಮಾರ್ಪಾಡು ಮಾಡಲು ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ಯಾರು ಬೇಕಾದರು ಸೃಷ್ಠಿಸಬಹುದು:

ಯಾರು ಬೇಕಾದರು ಸೃಷ್ಠಿಸಬಹುದು:

ಸದ್ಯ ಆಧಾರ್ ಪಡೆದುಕೊಳ್ಳಲು ಹೆಚ್ಚಿನ ಪ್ರಮಾಣದ ದಾಖಲಾತಿಗಳ ಅವಶ್ಯಕತೆ ಇದೆ ಆದರೆ. ಕ್ರ್ಯಾಕಡ್‌ ವರ್ಶನ್ ಸಾಫ್ಟ್‌ವೇರ್ ನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಹೊಸ ಆಧಾರ್‌ ಸಂಖ್ಯೆಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ.

ಯಾರಿಗೆ ಬೇಕಾದರು ಆಧಾರ್:

ಯಾರಿಗೆ ಬೇಕಾದರು ಆಧಾರ್:

ದೇಶದಲ್ಲಿ ಹೆಚ್ಚಾಗುತ್ತಿರುವ ನುಸುಳುಕೋರರಿಗೆ ಮತ್ತು ಭಯೋತ್ಪಾದಕರಿಗೆ ಆಧಾರ್‌ ಪಡೆಯಲು ಇದು ಸಹಾಯಕಾರಿಯಾಗಲಿದ್ದು, ನಕಲಿ ದಾಖಲೆಗಳ ಮೂಲಕ ಆಧಾರ್‌ ಸೃಷ್ಟಿಸಿಕೊಳ್ಳಬಹುದು. ಭಾರತೀಯ ನಾಗರೀಕರಾಗದ ವಿದೇಶಿಯರಿಗೂ ಆಧಾರ್ ಪಡೆಯಲು ಇದು ಅವಕಾಶ ಮಾಡಿಕೊಡಲಿದೆ.

ರೂ.2000ಕ್ಕೆ ಮಾರಾಟ

ರೂ.2000ಕ್ಕೆ ಮಾರಾಟ

ಆಧಾರ್‌ ದಾಖಲಾತಿಗೆ ಸಾಫ್ಟ್‌ವೇರ್‌ನ ಕ್ರ್ಯಾಕಡ್‌ ವರ್ಶನ್‌ ರೂ.2000ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದ್ದು, ದೇಶದ ಮೂಲೆ ಮೂಲೆಯಲ್ಲಿಯೂ ಈ ಸಾಫ್ಟ್‌ವೇರ್ ಬಳಕೆಯಾಗುತ್ತಿದೆ.

ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಹಂಚಿಕೆ:

ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಹಂಚಿಕೆ:

ಈ ಹಿಂದೆ ರೂ.500ಕ್ಕೆ ವಾಟ್ಸ್‌ಆಪ್ ಮೂಲಕವೇ ಆಧಾರ್ ಬಳಕೆದಾರರ ಮಾಹಿತಿಯನ್ನು ಪಡೆಯಲು ಸಾಫ್ಟ್‌ವೇರ್ ವೊಂದನ್ನು ಮಾರಾಟ ಮಾಡುತ್ತಿದ್ದ ಮಾದರಿಯಲ್ಲಿಯೇ ಕ್ರ್ಯಾಕಡ್‌ ವರ್ಶನ್ ಸಾಫ್ಟ್‌ವೇರ್ ಅನ್ನು ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಲ್ಯಾಪ್‌ಟಾಪ್‌ನಲ್ಲಿಯೇ ಬಳಕೆ:

ಲ್ಯಾಪ್‌ಟಾಪ್‌ನಲ್ಲಿಯೇ ಬಳಕೆ:

ಈ ಆಧಾರ್‌ ದಾಖಲಾತಿಗೆ ಸಾಫ್ಟ್‌ವೇರ್‌ನ ಕ್ರ್ಯಾಕಡ್‌ ವರ್ಶನ್‌ ಅನ್ನು ಯಾವುದೇ ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ನಲ್ಲಿ ಬಳಕೆ ಮಾಡಬಹುದಾಗಿದೆ. ಬಯೋಮೆಟ್ರಿಕ್‌ ಮತ್ತು ಜಿಯೊ-ಲೊಕೇಶನ್‌ ಇಲ್ಲದೆಯೇ ಕಾರ್ಯನಿರ್ವಹಿಸುವಂತೆ ಸಾಫ್ಟ್‌ವೇರ್ ಅನ್ನು ವಿನ್ಯಾಸ ಮಾಡಲಾಗಿದೆ.

ದೇಶದ ಸುರಕ್ಷತೆಗೆ ಭಾರೀ ಹೊಡೆತ:

ದೇಶದ ಸುರಕ್ಷತೆಗೆ ಭಾರೀ ಹೊಡೆತ:

ಈಗಾಗಲೇ ದೇಶದ ಪ್ರಮುಖ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಿರುವುದು ಸಾಮಾನ್ಯ ಜನರಿಗೆ ಕಿರಿಕಿರಿ ಉಂಟುಮಾಡಿದೆ. ಇದರ ನಡುವೆಯೇ ಈ ರೀತಿಯ ವರದಿಗಳು ಒಂದರ ಹಿಂದೆ ಒಂದರಂತೆ ಪ್ರಕಟವಾಗುತ್ತಿರುವುದು ದೇಶದ ಭದ್ರತೆ ಸವಾಲು ಒಡ್ಡುತ್ತಿದೆ. ಸರಕಾರ ಎಚ್ಚೆತ್ತು ಇದನ್ನು ಸರಿಪಡಿಸಲು ಮುಂದಾಗಬೇಕಾಗಿದೆ.

Best Mobiles in India

English summary
Aadhaar enrollment software compromised.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+