Home
ಸುದ್ದಿಜಾಲ

ಆಧಾರ್ ದೃಢೀಕರಣದ ಹೊಸ ಸೌಲಭ್ಯ ಜುಲೈ ಬದಲಾಗಿ ಆಗಸ್ಟ್ 1 ರಿಂದ ಜಾರಿ...!

By Gizbot bureau

ಆಧಾರ್ ನಲ್ಲಿ ಮುಖ ಗುರುತಿಸುವಿಕೆ, ಕಣ್ಣುಗಳ ಗುರುತಿಸುವಿಕೆ ಮತ್ತು ಬೆರಳಚ್ಚು ತಂತ್ರಜ್ಞಾನದಲ್ಲಿ ಅಸ್ಪಷ್ಟತೆ ಅನುಭವಿಸುತ್ತಿರುವವರ ನೆರವಿಗೆ ಬರಲು ಮುಂದಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 1 ಕ್ಕೆ ಇದು ಬಿಡುಗಡೆಗೊಳ್ಳಬೇಕಿತ್ತು. ಆದರೆ ಈಗ ಜುಲೈ 1 ರ ಬದಲಾಗಿ ಅಗಸ್ಟ್ 1 ರಂದು ಬಿಡುಗಡೆಗೊಳಿಸಲು ಮುಂದಾಗುತ್ತಿದೆ.

ಬಿಡುಗಡೆಗೊಂಡ ನಂತರ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಸಂಪೂರ್ಣ ಸ್ಪಷ್ಟತೆಯೊಂದಿಗೆ ಹೊರಬರಲು ಯುಐಡಿಎಐ ನಿರ್ಧಾರ ಮಾಡಿದೆ. “ ಜುಲೈ 1 ರಂದು ಬಿಡುಗಡೆಗೊಳಿಸಬೇಕೆಂದು ಅಂದಾಜಿಸಲಾಗಿದ್ದ ಸೌಲಭ್ಯವನ್ನು ನೀಡಲು ಸದ್ಯ ಸಮಯಾವಕಾಶದ ಅಗತ್ಯವಿದ್ದು, ಕೆಲವೇ ದಿನದಲ್ಲಿ ಪೂರ್ಣ ಸಿದ್ಧತೆಯೊಂದಿಗೆ ಬರಲಿದ್ದೇವೆ” ಎಂದು ತಿಳಿಸಿದ್ದಾರೆ ಯುಐಡಿಎಐ ನ ಸಿಇಓ ಆಗಿರುವ ಅಜಯ್ ಭೂಷಣ್.

ಆಧಾರ್ ದೃಢೀಕರಣದ ಹೊಸ ಸೌಲಭ್ಯ ಜುಲೈ ಬದಲಾಗಿ ಆಗಸ್ಟ್ 1 ರಿಂದ ಜಾರಿ...!

ಜುಲೈ 1 ರಿಂದ ಅಗಸ್ಟ್ 1 ರ ವರೆಗೆ ವಿಸ್ತರಿಸಿದ ಅವಧಿಯಲ್ಲಿ ಏಜೆನ್ಸಿಗಳು, ಬ್ಯಾಂಕ್ ಗಳು ಮತ್ತು ಟೆಲಿಕಾಂ ಕಂಪೆನಿಗಳಿಗೆ ವರ್ಚ್ಯುವಲ್ ಐಡಿಯನ್ನು ಸಂಪೂರ್ಣವಾಗಿ ಬಳಕೆಗೆ ತರಲು ಹೇಳಲಾಗಿದೆಯಂತೆ. "ನಾವು ಕೆಲಸ ಮಾಡುತ್ತಿದ್ದೇವೆ, ಅಗಸ್ಟ್ 1 ರಂದು, ನಾವು ಇದನ್ನು ಮಾಡಲು ಸಾಧ್ಯವಾಗುತ್ತದೆ. ಯಾವುದೋ ವಸ್ತುವನ್ನು ಖರೀದಿಸುವಂತೆ ಸುಮ್ಮನೆ ಒಂದು ದಿನಾಂಕವನ್ನು ಗುರಿಯಾಗಿಸಿಕೊಂಡು ಟೆಕ್ನಾಲಜಿಯನ್ನು ಹೊರತರಲು ಸಾಧ್ಯವಾಗುವುದಿಲ್ಲ.” ಎಂದು ಪಾಂಡೇ ಅಭಿಪ್ರಾಯ ಪಟ್ಟಿದ್ದಾರೆ

“ನಿಧಾನವಾಗಿಯಾದರೂ ಸಂಬಂಧಪಟ್ಟವರು ಸರಿಯಾದ ರೀತಿಯಲ್ಲಿ ಬಿಡುಗಡೆಗೊಳಿಸಬೇಕು ಎಂದು ನಿರ್ಧರಿಸಿದ್ದಾರೆ ಮತ್ತು ಹಾಗಾಗಿ ಅಗಸ್ಟ್ 1 ರಂದು ನಾವು ಇದನ್ನು ಉತ್ತಮ ರೀತಿಯಲ್ಲಿ ಬಿಡುಗಡೆಗೊಳಿಸಲು ಅಣಿಯಾಗುತ್ತಿದ್ದೆವೆ”. ಯುಐಡಿಎಐ ಹೇಳುವಂತೆ ಆಧಾರ್ ವಿವರಗಳನ್ನು ಪರಿಶೀಲಿಸಲು ಬೆರಳಚ್ಚು ಅಥವಾ ಐರಿಸ್ ಅಥವಾ ಒಟಿಪಿ (ಒಂದು ಬಾರಿಯ ಪಾಸ್ವರ್ಡ್) ಜೊತೆಗೆ ಮುಖ ಮಾನ್ಯತೆಯನ್ನು "ಸಮ್ಮಿಳನದಲ್ಲಿ ಮಾತ್ರ" ಅನುಮತಿಸಲಾಗುವುದು.

ಏಜೆನ್ಸಿ ನಿರೀಕ್ಷೆ ಮಾಡುತ್ತಿರುವಂತೆ, ಯಾರು ಗುರುತನ್ನು ದೃಢಿಕರಿಸಲು ವೃಧ್ಧಾಪ್ಯದ ಕಾರಣದಿಂದಾಗಿ ಕಷ್ಟ ಪಡುತ್ತಿದ್ದಾರೋ ಅವರುಗಳಿಗೆ ಸಬ್ಸಿಡಿ ಮತ್ತು ಇತರೆ ಸರ್ಕಾರಿ ಸೇವೆಗಳು ಮತ್ತು ಲಾಭಗಳಿಗಾಗಿ ತಮ್ಮ ದೃಢಿಕರಣ ನೀಡಲು ಅನಾನುಕೂಲವಾಗುತ್ತಿದೆಯೋ ಅಂತವರಿಗೆ ಇದು ನೆರವಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗುತ್ತಿದೆ.

ಆಧಾರ್ ದೃಢೀಕರಣದ ಹೊಸ ಸೌಲಭ್ಯ ಜುಲೈ ಬದಲಾಗಿ ಆಗಸ್ಟ್ 1 ರಿಂದ ಜಾರಿ...!

“ ಅಗಸ್ಟ್ 1 ರಿಂದ, ಇದು ಬಳಕೆದಾರರ ಏಜೆನ್ಸಿಗಳಿಗೆ ಲಭ್ಯವಾಗಲಿದೆ. ನಂತರ ನಾವು ಇದು ಕೆಲಸ ಕೆಲಸ ಮಾಡುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ಇನ್ನಷ್ಟು ಬದಲಾವಣೆಯ ಅಗತ್ಯವಿದ್ದರೆ, ಅದನ್ನು ನಾವು ಮಾಡುತ್ತೇವೆ ಮತ್ತು ಮುಂದಿನ ಕೆಲವೇ ತಿಂಗಳಲ್ಲಿ ಅದು ಸ್ಥಿರವಾಗಲಿದೆ.ನಂತರ ನಾವಿದ್ದನ್ನು ನಮ್ಮೆಲ್ಲ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಹೊಸ ಸೌಲಭ್ಯಗಳನ್ನು ಯಾವಾಗಿನಿಂದ ದೃಢಿಕರಣ ಸಂಸ್ಥೆಗಳು ಪಡೆಯಲಿವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಯುಐಡಿಎಐ ಮೊದಲು ಹೇಳಿಕೆ ನೀಡಿರುವಂತೆ,ಹೊಸ ದೃಢೀಕರಣ ಸೇವೆಯು , ಬಯೋಮೆಟ್ರಿಕ್ ಸಾಧನ ಪೂರೈಕೆದಾರರೊಂದಿಗೆ ,ಮುಖದ ಮಾಪಕವನ್ನು ನೊಂದಾಯಿತ ಸಾಧನಗಳಿಗೆ ಸಂಯೋಜಿಸಲು ಕೆಲಸ ಮಾಡಲಾಗುತ್ತಿದೆ. ಇದು ಕೆಲವು ಸಾಫ್ಟವೇರ್ ಡೆಲವಪ್ ಮೆಂಟ್ ಕಿಟ್ ನಲ್ಲಿ ಫೇಸ್ ಇಮೇಜ್, liveness ಪರಿಶೀಲಿಸಿ, ಮತ್ತು ಡಿಜಿಟಲ್ ಸಹಿ ಮತ್ತು ಎನ್ಕ್ರಿಪ್ಟ್ ದೃಢೀಕರಣ ಇನ್ಪುಟ್ ಅನ್ನು ರಚನೆಯ ಸಾಮರ್ಥ್ಯವೂ ಇರಲಿದೆ.

Best Mobiles in India

English summary
Aadhaar face recognition authentication delayed, now coming on August 1. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+