Home
ಸುದ್ದಿಜಾಲ

ಆಧಾರ್‌ ಕಾರ್ಡ್‌ ದೃಢೀಕರಣದ ಬಗ್ಗೆ ಹೊಸ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ!

ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳಿಂದಾಗಿ ದೇಶದಲ್ಲಿ ಆಧಾರ್‌ ಕಾರ್ಡ್‌ ಬಳಸುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಅದರಲ್ಲೂ ಮಾರ್ಚ್‌ 2023 ರಲ್ಲಿ ಸುಮಾರು 2.31 ಬಿಲಿಯನ್ ದೃಢೀಕರಣ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

ಹೌದು, ಮಾರ್ಚ್‌ 2023 ರಲ್ಲಿ ಸುಮಾರು 2.31 ಬಿಲಿಯನ್ ದೃಢೀಕರಣ ವಹಿವಾಟು ನಡೆಸಿದ್ದಾರೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಇದು ದೇಶದಲ್ಲಿ ಆಧಾರ್‌ನ ಬಳಕೆಯಲ್ಲಿನ ಹೆಚ್ಚಳ ಮತ್ತು ಡಿಜಿಟಲ್‌ ಆರ್ಥಿಕತೆಯ ಬೆಳವಣಿಗೆ ಸೂಚಕ ಎನ್ನಲಾಗಿದೆ. ಹಾಗಾದ್ರೆ ದೇಶದಲ್ಲಿ ಆಧಾರ್‌ ಹೊಂದಿರುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾದ ಅಂಶಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಧಾರ್‌ ಕಾರ್ಡ್‌ ದೃಢೀಕರಣದ  ಬಗ್ಗೆ ಹೊಸ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ!

ದೇಶದಲ್ಲಿ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿ ಬಳಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದೆ ಅನ್ನೊದನ್ನ ಕೇಂದ್ರ ಸರ್ಕಾರ ದೃಡಪಡಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್‌ ಆರ್ಥಿಕತೆ ಹಾಗೂ ಆಧಾರ್‌ ಕಡ್ಡಾಯ ವಿಚಾರಗಳು ಇದಕ್ಕೆ ಪೂರಕವಾಗಿವೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಕಳೆದ ಫೆಬ್ರವರಿ ತಿಂಗಳಿನಲ್ಲಿ 2.26 ಬಿಲಿಯನ್ ದೃಢೀಕರಣ ವಹಿವಾಟು ನಡೆದಿತ್ತು. ಆದರೆ ಮಾರ್ಚ್‌ ತಿಂಗಳಿನಲ್ಲಿ ಅದರ ಪ್ರಮಾಣ ಇನ್ನು ಹೆಚ್ಚಾಗಿದೆ. ಇದರಲ್ಲಿ ಬಹುಪಾಲು ದೃಢೀಕರಣ ವಹಿವಾಟು ಸಂಖ್ಯೆಗಳನ್ನು ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ನಡೆಸಲಾಗಿದೆ.

ಸರ್ಕಾರ ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯ, ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಕಡ್ಡಾಯ, ಹೀಗೆ ಹಲವು ವಿಚಾರಗಳಲ್ಲಿ ಆಧಾರ್‌ ಕೆವೈಸಿ ಕಡ್ಡಾಯ ಮಾಡಿದೆ. ಇದು ಆಧಾರ್‌ ಹೊಂದುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದಲ್ಲದೆ ಆಧಾರ್ ಇ-ಕೆವೈಸಿ ಸೇವೆಯು ಪಾರದರ್ಶಕ ಮತ್ತು ಸುಧಾರಿತ ಗ್ರಾಹಕರ ಅನುಭವವನ್ನು ಒದಗಿಸುತ್ತಿದೆ. ಅಲ್ಲದೆ ಆಧಾರ್‌ ಬ್ಯಾಂಕಿಂಗ್‌ ಮತ್ತು ಬ್ಯಾಂಕಿಂಗ್‌ ಅಲ್ಲದ ಹಣಕಾಸು ಸೇವೆಗಳಿಗೆ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಆಧಾರ್‌ ಕಾರ್ಡ್‌ ದೃಢೀಕರಣದ  ಬಗ್ಗೆ ಹೊಸ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ!

ಇದೇ ಕಾರಣಕ್ಕೆ ಮಾರ್ಚ್ 2023 ರಲ್ಲಿ 311.8 ಮಿಲಿಯನ್ eKYC ವಹಿವಾಟುಗಳನ್ನು ನಡೆಸಲಾಗಿದೆ. ಫೆಬ್ರವರಿಯಲ್ಲಿ 16.3% ಕ್ಕಿಂತ ಇದು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಇ-ಕೆವೈಸಿ ಅಳವಡಿಕೆಯ ಮತ್ತೊಂದು ಪ್ರಯೋಜನವೆಂದರೆ ಇದು ಹಣಕಾಸು ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಇತರರಿಗೆ ಗ್ರಾಹಕರ ಸ್ವಾಧೀನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಜೊತೆಗೆ ಡಿಜಿಟಲ್ ಇಂಡಿಯಾ ಗುರಿಯನ್ನು ಬೆಂಬಲಿಸುವಲ್ಲಿ ಆಧಾರ್‌ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಇನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್‌ ಕಾರ್ಡ್‌ ಪಡೆದುಕೊಂಡು 10 ವರ್ಷ ಆಗಿರುವವರು ಮತ್ತೊಮ್ಮೆ ಆಧಾರ್‌ ಅಪ್ಡೇಟ್‌ ಮಾಡುವಂತೆ ಸೂಚಕಿಸಿದೆ. ಯಾಕೆಂದರೆ ಇತ್ತೀಚಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್‌ ಮಾಡಬೇಕು, ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್‌ನಲ್ಲಿ ಮಾಹಿತಿಯ ನಿಖರತೆಯನ್ನು ಮುಂದುವರೆಸುವುದಕ್ಕೆ ಇದು ಅತ್ಯಗತ್ಯ ಎಂದು ಹೇಳಿದೆ.

ಆಧಾರ್‌ ಕಾರ್ಡ್‌ ದೃಢೀಕರಣದ  ಬಗ್ಗೆ ಹೊಸ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ!

ಇನ್ನು ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡುವುದಕ್ಕಾಗಿ ನೀವು ಮೈ ಆಧಾರ್‌ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಬೆಂಬಲಿತ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇಲ್ಲವೆ ನಿಮ್ಮ ಹತ್ತಿರದ ಆಧಾರ್‌ ಸೇವಾ ಸೆಂಟರ್‌ಗೆ ಬೇಟಿ ನೀಡುವ ಮೂಲಕ ತಮ್ಮ ಆಧಾರ್ ವಿವರಗಳನ್ನು ಅಪ್ಡೇಟ್‌ ಮಾಡಬಹುದಾಗಿದೆ. ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಇದು ನಿಮಗೆ ಅತಿ ಅಗತ್ಯವಾಗಿದೆ. ಇನ್ನು ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಿದರೆ 25ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಆಫ್‌ಲೈನ್ ಮೂಲಕ ಮಾಹಿತಿ ಅಪ್ಡೇಟ್‌ ಮಾಡಿದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ.

Best Mobiles in India

English summary
Aadhaar holders have carried out nearly 2.31 billion authentication transactions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+