ಆಧಾರ್, ಪಾನ್ ಲಿಂಕ್ ಕಡ್ಡಾಯ, ಮಾರ್ಚ್‌ 31 ಕೊನೆ ದಿನ

|

ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದೀರಾ? ನೀವು ಆದಾಯ ತೆರಿಗೆ ಪಾವತಿಸುತ್ತಿದ್ದೀರಾ? ಹಾಗಿದ್ದ ಮೇಲೆ ಪಾನ್ ಕಾರ್ಡ್ ಇರಲೇಬೇಕು? ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನು ಲಿಂಕ್ ಮಾಡಿಕೊಂಡಿದ್ದೀರಾ? ಹಾಗಾದ್ರೆ ಈ ಸ್ಟೋರಿಯನ್ನು ನೀವು ಓದಲೇಬೇಕು. ಹೌದು ಭಾರತೀಯ ಪ್ರಜೆಗಳಿಗೆ ಈ ಎರಡೂ ಕಾರ್ಡ್ ಗಳು ಇನ್ನು ಮುಂದೆ ಕಡ್ಡಾಯ. ಯಾಕೆ ಎಂದು ಕೇಳುತ್ತಿದ್ದೀರಾ ಮುಂದೆ ಓದಿ.

ಆಧಾರ್, ಪಾನ್  ಲಿಂಕ್ ಕಡ್ಡಾಯ, ಮಾರ್ಚ್‌ 31 ಕೊನೆ ದಿನ

ಆಧಾರ್ ಯೋಜನೆಯ ಸಾಂವಿಧಾನಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು 5 ನ್ಯಾಯಾಧೀಶರ ಸುಪ್ರೀಂಕೋರ್ಟ್ ನ ಪೀಠವು ಬುಧವಾರ ಆಧಾರ್ ಕಾರ್ಡ್ ನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಹೇಳಿದೆ.

ಆಧಾರ್-ಪಾನ್ ಲಿಂಕ್ ಗೆ ಕಾನೂನು ಮಾನ್ಯತೆ:

ಆಧಾರ್-ಪಾನ್ ಲಿಂಕ್ ಗೆ ಕಾನೂನು ಮಾನ್ಯತೆ:

ಭಾರತೀಯ ಸರ್ಕಾರವು ಭಾರತೀಯ ಪ್ರಜೆಗಳಿಗೆ ಸೂಚಿಸಿರುವ ಆಧಾರ್ ಮತ್ತು ಪಾನ್ ಲಿಂಕ್ ಮಾಡುವ ಪ್ರಕ್ರಿಯೆಯು ಕಾನೂನಾತ್ಮಕವಾಗಿದೆ ಮತ್ತು ಈ ಪ್ರಕ್ರಿಯೆಗೆ ಕಾನೂನಿನ ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ನ ಈ ಪೀಠವು ತಿಳಿಸಿದೆ. ಆದಾಯ ತೆರಿಗೆ ಕಾಯಿದೆಯ 139 ಎಎ ಸೆಕ್ಷನ್ ಅಡಿಯಲ್ಲಿ ಇದು ಕಾನೂನಾತ್ಮಕವಾಗಿದೆ ಎಂಬುದನ್ನು ಎತ್ತಿ ಹಿಡಿದಿದೆ.

139ಎಎ ಸೆಕ್ಷನ್ ನಲ್ಲಿ ಏನಿದೆ?

139ಎಎ ಸೆಕ್ಷನ್ ನಲ್ಲಿ ಏನಿದೆ?

ಈ ಸೆಕ್ಷನ್ ನಲ್ಲಿ ಆಧಾರ್ ನಂಬರ್ ನ್ನು ಉಲ್ಲೇಖಿಸುತ್ತದೆ. "ಶಾಶ್ವತ ಖಾತೆ ಸಂಖ್ಯೆಯ ಅರ್ಜಿ ನಮೂನೆ" ಮತ್ತು "ಆದಾಯದ ಲಾಭ" ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸುತ್ತದೆ.

ಇತರೆ ಕೆಲವು ಸೂಚನೆಗಳು:

ಇತರೆ ಕೆಲವು ಸೂಚನೆಗಳು:

139ಎಎ ಪ್ರಕಾರ ಸುಪ್ರೀಂಕೋರ್ಟ್ ಇನ್ನೂ ಕೆಲವು ಅಂಶಗಳನ್ನು ಆಧಾರ್ ಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದೆ. ಅದರಲ್ಲಿ ಬುಧವಾರ ಸುಪ್ರೀಂಕೋರ್ಟ್ ಹೇಳಿರುವ ಮತ್ತೊಂದು ಅಂಶವೆಂದರೆ ಆಧಾರ್ ಜೊತೆ ಮೊಬೈಲ್ ಫೋನ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಯಮಗಳು ಅಸಂವಿಧಾನಿಕವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಖಾಸಗಿ ಕಂಪೆನಿಗೆ ಆಧಾರ್ ದೃಢೀಕರಣ ಬಳಸಲು ಅನುಮತಿ ಇಲ್ಲ:

ಖಾಸಗಿ ಕಂಪೆನಿಗೆ ಆಧಾರ್ ದೃಢೀಕರಣ ಬಳಸಲು ಅನುಮತಿ ಇಲ್ಲ:

ಹೌದು ಸೆಕ್ಷನ್ 57 ನ್ನು ಸುಪ್ರೀಂಕೋರ್ಟ್ ಕೆಳಗಿಳಿಸಿತು ಅಂದರೆ ಈ ಸೆಕ್ಷನ್ ನ ಅಡಿಯಲ್ಲಿ ಖಾಸಗಿ ಕಂಪೆನಿಗಳೂ ಕೂಡ ಆಧಾರ್ ದೃಢೀಕರಣವನ್ನು ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಈಗ ಈ ಅನುಮತಿಯನ್ನು ರದ್ದುಗೊಳಿಸಲಾಗಿದೆ.ಖಾಸಗಿ ಕಂಪೆನಿಗಳಾದ ಪೇಟಿಎಂನಂತ ಕಂಪೆನಿಗಳು ಆಧಾರ್ ದೃಢೀಕರಣವನ್ನು ಬಳಕೆದಾರರಿಂದ ಪಡೆಯಲು ಅನುಮತಿ ಇಲ್ಲ ಎಂದು ತಿಳಿಸಿದೆ.

ಸರ್ಕಾರ ಯಾವಾಗ ಈ ನಿಯಮ ತಂದಿದ್ದು?

ಸರ್ಕಾರ ಯಾವಾಗ ಈ ನಿಯಮ ತಂದಿದ್ದು?

ಭಾರತ ಸರ್ಕಾರವು 139ಎಎ ಅಡಿಯ ಆದಾಯ ತೆರಿಗೆ ಆಕ್ಟ್ ನಂತೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವಂತೆ ಸೂಚಿಸಿತ್ತು ಮತ್ತು ಅದಕ್ಕೆ ಜುಲೈ 31,2017 ನ್ನು ಕೊನೆಯ ದಿನಾಂಕವೆಂದು ಘೋಷಿಸಿತ್ತು. ಆದರೆ ಈ ವಿಚಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಇದು ಸುಪ್ರೀಂಕೋರ್ಟ್ ನ ದೊಡ್ಡ ಆಧಾರ್ ಸಂಬಂಧಿತ ಕೇಸ್ ಎಂದು ಪರಿಗಣಿಸಲಾಯಿತು. ಅದರ ನಂತರ ಆಧಾರ್ ಸಂಬಂಧಿತ ಈ ಕೇಸಿನ ವಿಚಾರಣೆಯು ನಡೆಯುತ್ತಲೇ ಇತ್ತು. ಹಾಗಾಗಿ ಸರ್ಕಾರವು ಈ ಅಂತಿಮ ದಿನಾಂಕವನ್ನು ಆಗಾಗ ಬದಲಿಸುತ್ತಲೇ ಬಂದಿತ್ತು. ಆದರೆ ಇದೀಗ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ಪ್ರಕಟಿಸಲಾಗಿದೆ.

ಮಾರ್ಚ್ 31,2019 ಕೊನೆಯ ದಿನಾಂಕ:

ಮಾರ್ಚ್ 31,2019 ಕೊನೆಯ ದಿನಾಂಕ:

ಈಗ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವುದಕ್ಕೆ ಮತ್ತೊಂದು ಡೆಡ್ ಲೈನ್ ನೀಡಲಾಗಿದೆ ಅದುವೇ ಮಾರ್ಚ್ 31,2019. ಒಮ್ಮೆ ಸುಪ್ರೀಂ ಕೋರ್ಟ್ ದಿನಾಂಕ ನಿಗದಿ ಪಡಿಸಿದೆ ಎಂದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಬಳಿ ಪಾನ್ ಕಾರ್ಡ್ ಇದ್ದು ನೀವು ತೆರಿಗೆ ಪಾವತಿದಾರರಾಗಿದ್ದಲ್ಲಿ ಕೂಡಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಒಂದು ವೇಳೆ ಆಧಾರ್ ಇದ್ದಲ್ಲಿ ಅದನ್ನು ಕೂಡಲೇ ಪಾನ್ ಗೆ ಲಿಂಕ್ ಮಾಡಿ.

Best Mobiles in India

English summary
Aadhaar-PAN linking is mandatory, says Supreme Court. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X