ಮತ್ತೊಂದು ಶಾಕಿಂಗ್ ಸುದ್ದಿ...ಆಧಾರ್ ಭದ್ರತೆಯಲ್ಲಿ ಗಂಭೀರ ಲೋಪ ಪತ್ತೆ!!

By Bhaskar N J
|

ಆಧಾರ್ ಎಷ್ಟೇ ಸೇಫ್ ಆಗಿದೆ ಎಂದು ಸರ್ಕಾರ ಹೇಳಿದರೂ ಆಧಾರ್ ಬಗೆಗಿನ ಶಾಕಿಂಗ್ ಸುದ್ದಿಗಳು ಹೊರಬೀಳುತ್ತಲೇ ಇವೆ. ಆಧಾರ್ ಭದ್ರತೆಯಲ್ಲಿ ಗಂಭೀರ ಲೋಪಗಳು ಪತ್ತೆಯಾಗಿದ್ದು, ಆಧಾರ್ ಸಾಫ್ಟ್‌ವೇರ್‌ ಅನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಕುಳಿತುಕೊಂಡು ಯಾರು ಬೇಕಾದರೂ ಆಪರೇಟರ್‌ಗಳಾಗಿ ಕೆಲಸ ಮಾಡಬಹುದು ಎಂಬ ಶಾಕಿಂಗ್ ಸುದ್ದಿ ಈಗ ಹೊರಬಿದ್ದಿದೆ.

ಹೌದು, ಆಧಾರ್ ಸಾಫ್ಟ್‌ವೇರ್‌ ಅನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದರೂ, ಯಾರೂ ಬೇಕಾದರೂ ಅನಧಿಕೃತ ಆಧಾರ್ ನೋಂದಾವಣೆ ಆಪರೇಟರ್‌ಗಳಾಗಿ ಕೆಲಸ ಮಾಡಬಹುದಾಗಿದೆ ಎಂದು ಹಫ್ ಪೋಸ್ಟ್‌ ಸುದ್ದಿ ವೆಬ್‌ ಸೈಟ್‌ ನಡೆಸಿರುವ ತನಿಖಾ ವರದಿ ತಿಳಿಸಿದೆ. ಈಗಾಗಲೇ ವಿವಾದದ ಕೇಂದ್ರದಲ್ಲಿರುವ ಆಧಾರ್ ಸುರಕ್ಷತೆ ಬಗ್ಗೆ ಈ ಸುದ್ದಿ ಮತ್ತೆ ಪ್ರಶ್ನೆ ಮೂಡುವಂತೆ ಮಾಡಿದೆ.

ಮತ್ತೊಂದು ಶಾಕಿಂಗ್ ಸುದ್ದಿ...ಆಧಾರ್ ಭದ್ರತೆಯಲ್ಲಿ ಗಂಭೀರ ಲೋಪ ಪತ್ತೆ!!

ಆಧಾರ್ ಸಾಫ್ಟ್‌ವೇರ್‌ನ ಈ ನಿರ್ಣಾಯಕ ಪ್ಯಾಚ್‌ ಹ್ಯಾಕ್ ಮಾಡಿದಲ್ಲಿ ಭದ್ರತಾ ಅಂಶಗಳನ್ನು ಬೈಪಾಸ್‌ ಮಾಡಬಹುದಾಗಿರುವ ಈ ತನಿಖಾ ವರದಿ ಈಗ ಮತ್ತೊಮ್ಮೆ ಆಧಾರ್ ಸರಕ್ಷತೆ ವಿವಾದವನ್ನು ಹುಟ್ಟಿಹಾಕಿದ್ದು, ಹಾಗಾದರೆ, ಹಫ್ ಪೋಸ್ಟ್‌ ಸುದ್ದಿ ವೆಬ್‌ ಸೈಟ್‌ ನಡೆಸಿರುವ ತನಿಖಾ ವರದಿಯಲ್ಲಿ ಏನಿದೆ? ಆಧಾರ್ ಎಕೆ ಸುರಕ್ಷಿತವಾಗಿಲ್ಲ ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ಶಾಕಿಂಗ್ ವರಿದಿ?

ಏನಿದು ಶಾಕಿಂಗ್ ವರಿದಿ?

ಸುಮಾರು ಮೂರು ತಿಂಗಳ ಕಾಲ ನಡೆಸಿರುವ ತನಿಖಾ ವರದಿಯೊಂದನ್ನು ಪ್ರಕಟಿಸಿರುವುದಾಗಿ ತಿಳಿಸಿರುವ ಹಫ್ ಪೋಸ್ಟ್‌ ಸುದ್ದಿ ವೆಬ್‌ಸೈಟ್‌ ಆದಾರ ಸುರಕ್ಷತೆ ಬಗ್ಗೆ ಪ್ರಶ್ನೆ ಮುಡುವಂತೆ ಮಾಡಿದೆ. ಕೂಲಂಕಷ ತನಿಖೆಯಲ್ಲಿ ತತ್‌ಪರಿಣಾಮವಾಗಿ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರಿಗೂ ಆಧಾರ್‌ ನಂಬರ್‌ ಕೊಡಬಹುದಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ.

ವರದಿಯಲ್ಲಿ ಏನಿದೆ?

ವರದಿಯಲ್ಲಿ ಏನಿದೆ?

ಆಧಾರ್ ಸಾಫ್ಟ್ ವೇರ್‌ನಲ್ಲನನಿರ್ಣಾಯಕ ಪ್ಯಾಚ್‌ ತಲುಪುವಿಕೆಯನ್ನು ತಾನು ಪಡೆದಿದ್ದು ಹಲವಾರು ಪರಿಣತರ ಮೂಲಕ ಇದನ್ನು ತಾನು ಪರಿಶೀಲಿಸಿದ್ದೇನೆ ಎಂದು ಹಫ್ ಪೋಸ್ಟ್‌ ಹೇಳಿದೆ. ಆಧಾರ್ ಸಾಫ್ಟ್‌ವೇರ್‌ನ ಈ ನಿರ್ಣಾಯಕ ಪ್ಯಾಚ್‌ ತಲುಪುವ ಮೂಲಕ ಅನಧಿಕೃತ ಜನರು ಕೂಡ ಆಧಾರ್ ನೋಂದಾವಣೆ ಮಾಡಬಹುದಾಗಿದೆ ಎಂದು ತಿಳಿಸಿದೆ.

ಹಫ್ ಪೋಸ್ಟ್‌ ತಿಳಿಸಿರುವುದೇನು?

ಹಫ್ ಪೋಸ್ಟ್‌ ತಿಳಿಸಿರುವುದೇನು?

ಹೊಸ ಬಳಕೆದಾರರನ್ನು ನೋಂದಾಯಿಸುವುದಕ್ಕೆ ಬಳಸಲ್ಪಡುವ ಆಧಾರ್ ಸಾಫ್ಟ್‌ವೇರ್‌ ಅನ್ನು ಯಾರೂ ಬೇಕಾದರೂ ಹ್ಯಾಕ್ ಮಾಡಲು ಸಾಧ್ಯವಿದೆ. ಅದರಲ್ಲಿನ ಭದ್ರತಾ ಅಂಶಗಳಿರುವ ನಿರ್ಣಾಯಕ 'ಪ್ಯಾಚ್‌' ನಿಷ್ಕ್ರಿಯಗೊಳಿಸುವ ಮೂಲಕ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರೂ ಕೂಡ ಆಧಾರ್ ನೋಂದಾವಣೆ ಮಾಡಬಹುದು ಎಂದು ತನಿಖೆಯಿಂದ ಬಹಿರಂಗಪಡಿಸಿದೆ.

ದಾಖಲೆಗಳನ್ನೇ ಕೇಳುವುದಿಲ್ಲ!

ದಾಖಲೆಗಳನ್ನೇ ಕೇಳುವುದಿಲ್ಲ!

ಆಧಾರ್ ಸಾಫ್ಟ್‌ವೇರ್‌ನ ಈ ನಿರ್ಣಾಯಕ ಪ್ಯಾಚ್‌ ಹ್ಯಾಕ್ ಮಾಡಿದರೆ ಅದು ಆಧಾರ್ ನೋಂದಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಭದ್ರತಾ ದಾಖಲೆಗಳನ್ನು ಕೇಳುವುದಿಲ್ಲ ಎಂದು ಹಫ್ ಪೋಸ್ಟ್‌ ಹೇಳಿದೆ. ಅಧಿಕೃತ ಆಧಾರ್ ಸಾಫ್ಟ್‌ವೇರ್‌ ಎನ್‌ರೋಲ್‌ಮೆಂಟ್‌ ಆಪರೇಟರ್‌ ಗಳು ಇರುವ ತಾಣಗಳನ್ನು ಗುರುತಿಸುವುದಕ್ಕೆ ಇಲ್ಲಿ ಸುಲಭ ಅವಕಾಶವಿದೆ ಎಂದು ತಿಳಿಸಿದೆ.

ಆಧಾರ್ ಸುರಕ್ಷತೆ ಬಗ್ಗೆ ಅನುಮಾನ!

ಆಧಾರ್ ಸುರಕ್ಷತೆ ಬಗ್ಗೆ ಅನುಮಾನ!

ಆಧಾರ್ ನಂಬರ್ ಸಹಾಯದಿಂದ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ವಿಚಾರವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟವಾಗಿ ತಳ್ಳಿಹಾಕಿದೆ. ಅದರೆ, ಈ ಸುದ್ದಿಯ ಜೊತೆಗೆ ಫ್ರೆಂಚ್ ಭದ್ರತಾ ತಜ್ಞ ಎಲಿಯಟ್ ಆಂಡರ್ಸನ್ ಬಹಿರಂಗಪಡಿಸಿರುವ ಮಾಹಿತಿಗಳು ಆಧಾರ್ ಸುರಕ್ಷತೆಯನ್ನು ನಂಬಲೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ

ಯಾರು ಈ ಎಲಿಯಟ್?

ಯಾರು ಈ ಎಲಿಯಟ್?

ಆಧಾರ್ ಸುರಕ್ಷಿತೆ ಬಗ್ಗೆ ಹ್ಯಾಕರ್ಸ್‌ಗಳಿಗೆ ಸವಾಲೆಸೆದಿದ್ದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ಆರ್.ಎಸ್.ಶರ್ಮಾವರ ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ನಂಬರ್, ಹಾಗೂ ಪರ್ಯಾಯ ಫೋನ್ ನಂಬರ್, ಇಮೇಲ್ ಐಡಿ, ಬಳಕೆ ಮಾಡುತ್ತಿರುವ ಫೋನ್ ಕುರಿತ ಮಾಹಿತಿ ಹಾಗೂ ವಾಟ್ಸ್ ಪ್ರೊಫೈಲ್ ಫೋಟೋ ಸೇರಿ ಇನ್ನಿತರೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಫ್ರೆಂಚ್ ಭದ್ರತಾ ತಜ್ಞ ಎಲಿಯಟ್ ಆಂಡರ್ಸನ್ ಬಹಿರಂಗಪಡಿಸಿದ್ದರು.

Best Mobiles in India

English summary
Unique Identification Authority of India (UIDAI) might be in for some more controversy in the coming days as an investigation by a news website has found serious lapses in Aadhaar security.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X