Just In
Don't Miss
- News
ಎಟಿಎಂನಲ್ಲಿ ಹಣ ಮಾತ್ರ ಅಲ್ಲ, ಇನ್ಮುಂದೆ ಹಾಲು ಸಹ ಬರುತ್ತೆ
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Finance
150ರ ಗಡಿ ಸಮೀಪಿಸಿದ ಈರುಳ್ಳಿ ದರ, ರಾಜ್ಯದಲ್ಲೂ ದರ ಏರಿಕೆ ಬಿಸಿ
- Movies
ನಿತ್ಯ ರಾಮ್ 'ನಟಿ' ಅನ್ನೋದೇ ಭಾವಿ ಪತಿ ಗೌತಮ್ ಗೆ ಗೊತ್ತಿರಲಿಲ್ಲ.! ಅಸಲಿಗೆ ಯಾರೀತ.?
- Sports
ಪುರುಷರ ಏಕದಿನಕ್ಕೆ ಮೊದಲ ಮಹಿಳಾ ರೆಫರಿಯಾಗಿ ಇತಿಹಾಸ ಬರೆದ ಲಕ್ಷ್ಮೀ!
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Automobiles
ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಆಧಾರ್‌ನಿಂದ ಫೋನ್ ಹ್ಯಾಕ್: ನೀವೆ ಟ್ರೈ ಮಾಡಿ, ಕಾಂಟೆಕ್ಟ್‌ನಲ್ಲಿ 'UIDAI' ಎಂದು ಟೈಪ್ ಮಾಡಿ..!
ಕಳೆದ ಒಂದು ದಿನದಲ್ಲಿ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ UIDAI ಎನ್ನುವ ಕಾಂಟೆಕ್ಟ್ ಒಂದು ಸೇವ್ ಆಗಿದೆ. ಇದರಲ್ಲಿ 1800-300-1947 ಎನ್ನುವ ಸಂಖ್ಯೆಯೊಂದು ಕಾಣಿಸಿಕೊಂಡಿದ್ದು, ಇದು ಆಧಾರ್ ಹೆಲ್ಪ್ ಲೈನ್ ಸಂಖ್ಯೆ ಎನ್ನುವ ಹೆಸರಿನಲ್ಲಿ ಸೇವ್ ಆಗಿದೆ. ಈ ಕುರಿತು ಫೋನ್ ಬಳಕೆದಾರರಿಗೆ ಯಾವುದೇ ಮಾಹಿತಿ ಇಲ್ಲ. ಹೇಗೆ ಇದು ಫೋನಿನಲ್ಲಿ ಸೇವ್ ಆಯ್ತು, ಯಾಕೆ ಸೇವ್ ಆಯ್ತು ಎನ್ನುವುದು ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.
ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಭಾರತೀಯರ ಮೊಬೈಲ್‌ಗಳು ಹ್ಯಾಕ್ ಆಗಿದೆಯೇ ಎಂಬ ಪ್ರಶ್ನೇ ಇದರಿಂದ ಉದ್ಬವವಾಗಿದೆ. ಇದನ್ನು ತಾನು ಮಾಡಿಸಿಲ್ಲ ಎಂದು ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ ತಿಳಿಸಿದೆ. ಅಲ್ಲದೇ ಅದು ವ್ಯಾಲಿಡ್ ನಂಬರ್ ಸಹ ಅಲ್ಲ ಎಂದಿದೆ. ನಿಮ್ಮ ಫೋನ್ ಹ್ಯಾಕ್ ಆಗಿದೆ ಬೇಕಿದ್ದರೇ ನೀವು ಟ್ರೈ ಮಾಡಿ. ನಿಮ್ಮ ಫೋನಿನಲ್ಲಿ ಕಾಂಟೆಕ್ಟ್ ಒಪನ್ ಮಾಡಿ ಅದರಲ್ಲಿ 'UIDIA' ಎಂದು ಟೈಪ್ ಮಾಡಿ ನಿಮ್ಮ ಫೋನ್ ಹ್ಯಾಕ್ ಆಗಿರುವುದು ತಿಳಿಯಲಿದೆ. ಈ ಹೆಸರಿನಲ್ಲಿ ನಂಬರ್ ಒಂದು ಸೇವ್ ಆಗಿರಲಿದೆ.

ಆಪಲ್ ಸಹ ಹ್ಯಾಕ್ ಆಗಿದೆ:
ಇದು ಕೇಲವ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರವೇ ಈ ಕಾಂಟೆಕ್ಟ್ ಸೇವ್ ಆಗಿದೆ ಎಂದುಕೊಂಡರೆ ಇದು ತಪ್ಪು, ಆಪಲ್ ಫೋನ್‌ಗಳಲ್ಲಿಯೂ ಸಹ ಈ ಕಾಂಟೆಕ್ಟ್ ಸೇವ್ ಆಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಆಪಲ್ ಸಹ ಸೇಫ್ ಎನ್ನುವ ಹಾಗಿಲ್ಲ.

ಯಾರು ಮಾಡಿದ್ದಾರೆ:
ಮೊದಲು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಆಧಾರ್ ಹೆಲ್ಪ್ ಲೈನ್ ಎಂಬ ಹೆಸರಿನಲ್ಲಿ UIDAI ಕಾಂಟೆಕ್ಟ್ ಸೇವ್ ಆಗಿದೆ. ಮೊದಲಿಗೆ ಎಲ್ಲರೂ ಇದನ್ನು ಆಧಾರ್ ಕಡೆಯಿಂದ ಮಾಡಿಸಲಾಗಿದೆ ಎಂದು ಕೊಂಡಿದ್ದರು. ಆದರೆ ಇದು ಸುಳ್ಳು. ಇದನ್ನು ಟೆಲಿಕಾಂ ಕಂಪನಿಗಳೇ ಅಥಾವ ಮೊಬೈಲ್ ತಯಾರಿಕಾ ಕಂಪನಿಗಳು ಸೇವ್ ಮಾಡಿವೆ ಎನ್ನಲಾಗಿದೆ.

ಆಧಾರ್ ಮಾಡಿಲ್ಲ:
ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರವೇ ಹೆಲ್ಪ್ ಲೈನ್ ನಂಬರ್ ಸೇವ್ ಮಾಡಲು ಆದೇಶವನ್ನು ನೀಡಿದೆ ಎಂದು ತಿಳಿಯಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ, ತಾನು ಯಾವುದೇ ರೀತಿಯಲ್ಲಿಯೂ ನಂಬರ್ ಸೇವ್ ಮಾಡುವಂತೆ ಹೇಳಿಲ್ಲ ಎಂದಿದೆ.

#PressStatement ಮೂಲಕ ಮಾಹಿತಿ ನೀಡಿದ UIDAI:
ಈಗಾಗಲೇ ದೇಶದಲ್ಲಿ UIDAI ನಂಬರ್ ಯಾರಿಗೂ ತಿಳಿದ ಹಾಗೆ ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಆಗಿರುವ ಕುರಿತು ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ UIDAI ಪ್ರತಿಕ್ರಿಯೆಯನ್ನು #PressStatement ಎಂಬ ಹ್ಯಾಷ್ ಟ್ಯಾಗ್ ಅನ್ನು ಹಾಕಿ ಟ್ವಿಟರ್ ನಲ್ಲಿ ನೀಡಿದೆ. ಈ ಕುರಿತು ಸಂಫೂರ್ಣ ಮಾಹಿತಿಯೂ ಇಲ್ಲಿದೆ.
|
ಟ್ವಿಟ್ ನಂಬರ್ 01:
ಆಂಡ್ರಾಯ್ಡ್ ಫೋನಿನಲ್ಲಿ ಔಟ್ ಡೇಟೆಡ್ ಮತ್ತು ಇನ್‌ವ್ಯಾಲ್ಯುಡ್ ಟೋಲ್ ಫ್ರಿ ನಂಬರ್ 1800-300-1947 ಅನ್ನು ಸೇವ್ ಮಾಡಲಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದಕ್ಕಾಗಿಯೇ ಟ್ಚಿಟರ್ ನಲ್ಲಿ ಮಾಹಿತಿ ನೀಡುತ್ತಿರುವುದಾಗಿ ಮೊದಲ ಟ್ವಿಟ್ ನಲ್ಲಿ ತಿಳಿಸಲಾಗಿದೆ.
|
ಟ್ವಿಟ್ ನಂಬರ್ 02:
ಈ ಕುರಿತು UIDAI ಯಾವುದೇ ಟೆಲಿಕಾಂ ಮತ್ತು ಮೊಬೈಲ್ ತಯಾರಕರನ್ನು ಟೊಲ್ ಫ್ರಿ ನಂಬರ್ ಅನ್ನು ಫೋನ್‌ಗಳಲ್ಲಿ ಸೇವ್ ಮಾಡಿ ಎಂದು ಮನವಿಯನ್ನು ಮಾಡಿಲ್ಲ. ಈ ಮಾದರಿಯಲ್ಲಿ ಯಾವುದೇ ರೀತಿಯ ಆದೇಶವನ್ನು ನೀಡಿಲ್ಲ ಎಂದು ಎರಡನೇ ಟ್ವಿಟ್‌ನಲ್ಲಿ ತಿಳಿಸಿದೆ ಎನ್ನಲಾಗಿದೆ.
|
ಟ್ವಿಟ್ ನಂಬರ್ 03:
ಇದಲ್ಲದೇ ಈಗ ನಿಮ್ಮ ಫೋನ್‌ಗಳಲ್ಲಿ ಸೇವ್ ಆಗಿರುವ ನಂಬರ್ 1800-300-1947 ವ್ಯಾಲಿಡ್ ಅಲ್ಲ ಎಂಬುದನ್ನು ಸಾರಿ ಹೇಳಿದೆ. ಇದು ವ್ಯಾಲಿಡ್ ಟೂಲ್ ಫ್ರಿ ನಂಬರ್ ಅಲ್ಲ ಎಂದು UIDAI ತಿಳಿಸಿದೆ. ಇದರಿಂದ ಸಾರ್ವಜನಿಕರು ಕನ್‌ಫ್ಯೂಸ್ ಆಗಬಾರದು ಎಂದು ಮನವಿ ಮಾಡಿದ್ದಾರೆ.
|
ಟ್ವಿಟ್ ನಂಬರ್ 04:
ಇದಲ್ಲದೇ ತನ್ನ ಟೂಲ್ ಫ್ರಿ ನಂಬರ್ 1947 ಅನ್ನು ಟ್ವಿಟರ್ ನಲ್ಲಿ ತಿಳಿಸಿದೆ. ಇದು ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ. ಆಧಾರ್ ಕುರಿತು ಯಾವುದೇ ಮಾಹಿತಿ ಬೇಕಿದ್ದರೆ ಇದೇ ನಂಬರ್ ಗೆ ಕರೆ ಮಾಡುವಂತೆ ತಿಳಿಸಿದೆ. 1800-300-1947 ಸಂಖ್ಯೆ ವ್ಯಾಲಿಡ್ ಇಲ್ಲ ಎಂದು ತಿಳಿಸಿದೆ.
|
ಟ್ವಿಟ್ ನಂಬರ್ 05:
UIDAI ಮತ್ತೊಮ್ಮೆ ತಿಳಿಸಿದ್ದು, ಯಾವುದೇ ಟೆಲಿಕಾಂ ಕಂಪನಿ ಹಾಗೂ ಮೊಬೈಲ್ ತಯಾರಿಕರಿಗೆ ಮನವಿ ಮಾಡಿಲ್ಲ, ಇದು ಹೇಗೆ ನಿಮ್ಮ ಪೋನಿನಲ್ಲಿ ಸೇರಿಕೊಂಡಿದೆ ಎಂಬುದನ್ನು ತನಗೆ ತಿಳಿದಿಲ್ಲ ಎಂದು ತಿಳಿಸಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090