ಕ್ಯೂಆರ್ ಕೋಡ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಮಾನ್ಯತೆ ಪರಿಶೀಲಿಸಲು ಹೀಗೆ ಮಾಡಿ!
ಇಂದಿನ ದಿನಗಳಲ್ಲಿ ಪ್ರತಿಯೊಂದು ಸೇವೆಗೂ ಕೂಡ ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಆದರೆ ನಿಮ್ಮ ಬಳಿ ಇರುವ ಆಧಾರತ್ ಕಾರ್ಡ್ ಆಕ್ಟಿವ್ ಆಗಿದೆಯಾ? ಇಲ್ಲವೇ ಬ್ಲಾಕ್ ಆಗಿದೆಯಾ ಅನ್ನೊದು ಕೂಡ ಮುಖ್ಯವಾಗುತ್ತದೆ. ಕೆಲವರ ಬಳಿ ಆಧಾರ್ ಕಾರ್ಡ್ ಇದ್ದರೂ ಸಹ ತಮ್ಮ ಬಯೋಮೆಟ್ರಿಕ್ ಹೊಂದಿಕೆಯಾಗುತ್ತಿಲ್ಲ ಎಂದು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಹೌದು, ಸರ್ಕಾರಿ ಸೌಲಭ್ಯಗಳು ಮಾತ್ರವಲ್ಲದೆ ಕೆಲವು ಅಗತ್ಯ ಸೇವೆಗಳಿಗೆ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಆದರಿಂದ ನಿಮ್ಮ ಆಧಾರ್ ಕಾರ್ಡ್ ಮಾನ್ಯವಾಗಿದೆಯಾ? ಇಲ್ಲವೇ ಅಂತಾ ಆಗಾಗ ತಿಳಿದುಕೊಳ್ಳುವುದು ಸೂಕ್ತವಾಗಿದೆ. ಇದನ್ನು ನೀವು ಇದ್ದಲಿಯೇ ಕ್ಯೂಆರ್ ಕೋಡ್ ಮೂಲಕ ನಿಮ್ಮ ಆಧಾರ್ ಕಾರ್ಡ್ ವಿವರಗಳ ದೃಡೀಕರಣವನ್ನು ಪರಿಶೀಲಿಸಬಹುದಾಗಿದೆ. ಹಾಗಾದ್ರೆ ಕ್ಯೂ ಆರ್ ಕೋಡ್ ಮೂಲಕ ಆಧಾರ್ ವಿವರಗಳನ್ನು ಪರಿಶೀಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಅನ್ನು ನೀಡುತ್ತಾ ಬಂದಿದೆ. 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆಯು ಭಾರತದಲ್ಲಿ ನಿಮ್ಮ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸಲಿದೆ. ಆದರೆ ನೀವು ಸರ್ಕಾರಿ ಸೇವೆಗಳು ಮತ್ತು ಸಬ್ಸಿಡಿಗಳು ಸೇರಿದಂತೆ ಯಾವುದೇ ಸೇವೆ ಪಡೆಯಬೇಕಾದರೂ ಆಧಾರ್ ಕಾರ್ಡ್ ಮಾನ್ಯವಾಗಿರುವುದು ಅತ್ಯಗತ್ಯ. ಇದಕ್ಕಾಗಿ ನೀವು ನಿಮ್ಮ ಆಧಾರ್ ಮಾನ್ಯವಾಗಿದೆಯಾ ಅಂತ ಪರಿಶೀಲಿಸಬೇಕಾಗುತ್ತದೆ.
ಸಾಮಾನ್ಯವಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಸತತ ಮೂರು ವರ್ಷಗಳ ಕಾಲ ಎಲ್ಲಿಯೂ ಕೂಡ ಬಳಕೆ ಮಾಡದಿದ್ದರೆ, ಯಾವುದೇ ಸೇವೆಗೂ ಆಧಾರ್ ಕಾರ್ಡ್ ದೃಡೀಕರಣವನ್ನು ನೀಡದಂತಹ ಸಂದರ್ಭದಲ್ಲಿ ನಿಮ್ಮ ಆಧಾರ್ ಬ್ಲಾಕ್ ಆಗಿರುತ್ತದೆ. ಅಲ್ಲದೆ ನಿಮ್ಮ ಬಯೋಮೆಟ್ರಿಕ್ ಹೊಂದಿಕೆಯಾಗದ ಸನ್ನಿವೇಶದಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಮಾನ್ಯತೆ ರದ್ದಾಗಿರುತ್ತದೆ. ಆದರಿಂದ ನೀವು ನಿಮ್ಮ ಆಧಾರ್ ಅನ್ನು ಆಗಾಗ ಬಳಸಬೇಕಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ಆಧಾರ್ ವಿವರಗಳನ್ನು ಆಗಾಗ ಪರಿಶೀಲಿಸಬೇಕಾಗುತ್ತದೆ.

ಇನ್ನು ನಿಮ್ಮ ಆಧಾರ್ ಕಾರ್ಡ್ ಮಾನ್ಯತೆಯನ್ನು ಪರಿಶೀಲಿಸಲು ಆನ್‌ಲೈನ್ ಅಥವಾ ಆಫ್‌ಲೈನ್ ಎರಡು ವಿಧದಲ್ಲಿಯು ಅವಕಾಶ ನೀಡಲಾಗಿದೆ. ನೀವು ಆಫ್‌ಲೈನ್ ಮೂಲಕ ಪರಿಶೀಲಿಸಲು ಬಯಸಿದರೆ ಆಧಾರ್ ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡಬಹುದು. ಆನ್‌ಲೈನ್ ಮೂಲಕ ಪರಿಶೀಲಿಸಲು ಬಯಸಿದರೆ ಅಧಿಕೃತ UIDAI ವೆಬ್‌ಸೈಟ್ ಅನ್ನು ಬಳಸಬಹುದಾಗಿದೆ. ಇದಲ್ಲದೆ ಆಧಾರ್ ಕಾರ್ಡ್, ಇ-ಆಧಾರ್ ಅಥವಾ ಆಧಾರ್ PVC ಯಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕೂಡ ದೃಡೀಕರಣವನ್ನು ಪರಿಶೀಲಿಸಬಹುದಾಗಿದೆ.
QR ಕೋಡ್ ಬಳಸಿ ಆಧಾರ್ ಕಾರ್ಡ್ ಪರಿಶೀಲಿಸುವುದು ಹೇಗೆ?
* ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಮೂಲಕ mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ mAadhaar ಅಪ್ಲಿಕೇಶನ್ ತೆರೆಯಿರಿ
* ನಂತರ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ QR ಕೋಡ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಇದೀಗ ನೀವು ಪರಿಶೀಲಿಸಲು ಬಯಸುವ ಆಧಾರ್ ಕಾರ್ಡ್ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ನಿಮ್ಮ ಸ್ಕ್ಯಾನ್ ಯಶಸ್ವಿಯಾದರೆ ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಆಧಾರ್‌ನಲ್ಲಿರುವ ಫೋಟೋ ವಿವರಗಳು ಕಾಣಿಸಲಿದೆ
* ಇದರೊಂದಿಗೆ UIDAI ಮಾಡಿರುವ ಡಿಜಿಟಲ್ ಸಹಿ ಕೂಡ ಕಾಣಲಿದೆ ಇದನ್ನು ದೃಡೀಕರಣಕ್ಕಾಗಿ ಕೂಡ ನೀವು ಪರಿಶೀಲಿಸಬಹುದು.

UIDAI ಅಧಿಕೃತ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್ ಮಾನ್ಯತೆ ಪರಿಶೀಲಿಸುವುದು ಹೇಗೆ?
UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೂಡ ನಿಮ್ಮ ಆಧಾರ್ ಸಂಖ್ಯೆಯ ಮಾನ್ಯತೆಯನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ನೀವು ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇದಲ್ಲದೆ ಆಧಾರ್ ಮಿತ್ರ ಎಂಬ AI ಆಧಾರಿತ ಚಾಟ್‌ಬಾಟ್ ಮೂಲಕ ಕೂಡ ನಿಮ್ಮ ಆಧಾರ್ ಮಾನ್ಯತೆಯನ್ನು ಪರಿಶೀಲಿಸಬಹುದಾಗಿದೆ.


Click it and Unblock the Notifications