ಆಧಾರ್ ತೋರಿಸಿ ಹೆಬ್ಬೆಟ್ಟು ಒತ್ತಿ ಹಣ ಪಡೆದುಕೊಳ್ಳುವವರು ಇಲ್ಲೊಮ್ಮೆ ಗಮನಿಸಿ!
ಇತ್ತೀಚಿನ ದಿನಗಳಲ್ಲಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ವ್ಯಾಪಕವಾಗಿದೆ. ಬ್ಯಾಂಕ್‌ಗೆ ತೆರಳಿ ಹಣ ಡ್ರಾ ಮಾಡಲು ಆಗದ ವಯೋವೃದ್ಧರು, ಹಳ್ಳಿ ಜನರು ತಾವಿದ್ದಲ್ಲಿಯೇ ಬರುವ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ಗ್ರಾಹಕರ ಮೂಲಕ ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಸಿಸ್ಟಂನಲ್ಲಿಯೂ ಕೂಡ ಹಲವು ಪ್ರದೇಶಗಳಲ್ಲಿ ವಂಚನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಹೌದು, Aadhaar-enabled Payment System ಮೂಲಕವೂ ಕೂಡ ವಂಚನೆ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಈ ಆಘಾತಕಾರಿ ಮಾಹಿತಿಯು ಕೂಡ ಬಹಿರಂಗವಾಗಿದೆ. ಆದರಿಂದ ಸರ್ಕಾರವು ಆಧಾರ್ ಕಾರ್ಡ್ ಅನ್ನು ಬಳಸುವ ಮುನ್ನ ಅನುಸರಿಬೇಕಾದ ಕೆಲವು ಪ್ರಮುಖ ಅಂಶಗಳನ್ನು ವಿವರಿಸಿದೆ. ಹಾಗಾದ್ರೆ ಆಧಾರ್ ಕಾರ್ಡ್ ಬಳಸುವವರು ಏನೆಲ್ಲಾ ಸೂಚನೆ ಅನುಸರಿಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಯಾಂಕ್‌ಗೆ ಹೋಗಿ ಯಾರ್ ತಾನೇ ಹಣ ಡ್ರಾ ಮಾಡಿಕೊಂಡು ಬರ್ತಾರೆ. ಇಲ್ಲೇ ನಮ್ಮೂರಲ್ಲೇ ಆಧಾರ್ ಕಾರ್ಡ್ ತೋರಿಸಿಬಿಟ್ಟು ಹೆಬ್ಬೆಟ್ಟು ನೀಡಿದ್ರೆ ಹಣ ಕೊಡ್ತಾರೆ ಅಂತಾ ಹೇಳುವವರು ಈ ಸುದ್ದಿ ಗಮನಿಸಲೇಬೇಕು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ AePS ಕೂಡ ವಂಚನೆಯ ಜಾಲವಾಗಿ ಬದಲಾಗಿದೆ. ಈ ಸಿಸ್ಟಂನಲ್ಲಿ ಗ್ರಾಹಕರು ತಮ್ಮ ಆಧಾರ್-ಸಂಯೋಜಿತ ಖಾತೆಗಳಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಹಣಕಾಸು ವಹಿವಾಟ ನಡೆಸಲು ಅವಕಾಶವಿದೆ. ಆದರೆ ನಿಮ್ಮ ಆಧಾರ್ ಬಯೋಮೆಟ್ರಿಕ್ ಬೇರೆ ಕಡೆಗಳಲ್ಲಿ ವಂಚನೆಗಳಿಗೆ ಬಳಸಬಹುದು ಎಂದು ಹೇಳಲಾಗಿದೆ.
ಅಲ್ಲದೆ ಆಧಾರ್‌ಗೆ ಸಂಬಂಧಿಸಿದಂತೆ ನಿಮಗೆ UIDAI ಕಡೆಯಿಂದ ಯಾವುದೇ ಕರೆ ಬರುವುದಿಲ್ಲ. UIDAI ಪ್ರತಿನಿಧಿಯಂತೆ ಕರೆ ಮಾಡಿ ಯಾರಾದರೂ ನಿಮ್ಮ ಬಳಿ ಒಟಿಪಿ ಕೇಳಿದರೆ ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಇದಲ್ಲದೆ ನಿಮ್ಮ ಆಧಾರ್ ಮೊಬೈಲ್ ಅಪ್ಲಿಕೇಶನ್ ಪಾಸ್‌ವರ್ಡ್ ಅನ್ನು ಸಹ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದಿಷ್ಟೇ ಅಲ್ಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು X (Twitter), Facebook ಅಥವಾ Instagram ನಂತಹ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ.

ನೀವು ಆಧಾರ್‌ನ ಮೂಲ ಪ್ರತಿಗೆ ಬದಲಾಗಿ ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಸಹ ಬಳಸಬಹುದು. ಆದರಿಂದ ನಿಮ್ಮ ಒರಿಜಿನಲ್ ಆಧಾರ್ ಅನ್ನು ಪದೇ ಪದೇ ಝೆರಾಕ್ಸ್ ಮಾಡಿಸುವ ಬದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಡಿಜಿಟಲ್ ಆಧಾರ್ ಅನ್ನು ಸೇವ್ ಮಾಡಿಕೊಳ್ಳುವುದು ಸೂಕ್ತ. ಇದಲ್ಲದೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅನಪೇಕ್ಷಿತ ಆಧಾರ್ ಆಧಾರಿತ ವಹಿವಾಟುಗಳನ್ನು ತಪ್ಪಿಸಲು, UIDAI ನಲ್ಲಿ ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದಕ್ಕೆ ಕೂಡ ಅವಕಾಶವಿದೆ.

ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮ್ಮ ಆಧಾರ್ ಅನ್ನು ಬೇರೆ ಬಳಸಿದಾಗ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರಲಿದೆ. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಆಗದೇ ಇದ್ದರೆ ಕೂಡಲೇ ನಿಮ್ಮ ಹತ್ತಿರದ ಮೂಲ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಪ್ಡೇಟ್ ಮಾಡಿಸಿ. ಇದಲ್ಲದೆ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಲಾಗಿದೆ ಎನ್ನುವ ಹಿಸ್ಟರಿಯನ್ನು ಆಗಾಗ ಟ್ರ್ಯಾಕ್ ಮಾಡುವುದು ಕೂಡ ಸೂಕ್ತ. ಇದಕ್ಕಾಗಿ ನೀವು UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದರಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಇತಿಹಾಸವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.


Click it and Unblock the Notifications








