Subscribe to Gizbot

ಆಕಾಶ್ 2 ಬರೋದ್ರಲ್ಲಿ ಡೌಟೇ ಇಲ್ಲ: ಕಪಿಲ್

Posted By: Varun
ಆಕಾಶ್ 2 ಬರೋದ್ರಲ್ಲಿ ಡೌಟೇ ಇಲ್ಲ: ಕಪಿಲ್
ನಮಗಂತೂ ಈ ಆಕಾಶ್ ಟ್ಯಾಬ್ಲೆಟ್ ಬಗ್ಗೆ ಬರೆಯೋಕ್ಕೆ ನಿಜವಾಗಲೂ ಬೇಜಾರು ಆಗುತ್ತೆ. ಹೋದ ವರ್ಷ ಅಕ್ಟೋಬರ್ ತಿಂಗಳಿಂದ ಆಕಾಶ್ ಟ್ಯಾಬ್ಲೆಟ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ನಮ್ಮ ಸರ್ಕಾರ ಅಪ್ಗ್ರೇಡ್ ಆಗಿರುವ ಆಕಾಶ್ 2 ಟ್ಯಾಬ್ಲೆಟ್ ಅನ್ನು ಇವಾಗಬಿಡ್ತೀವಿ ಅವಾಗ ಬಿಡ್ತೀವಿ ಅಂತಾ ಹೇಳ್ತಾನೇ ಇದೆ.

ವಿಶ್ವದ ಅತಿ ಅಗ್ಗದ ಟ್ಯಾಬ್ಲೆಟ್ ಎಂಬ ಹೆಗ್ಗಳಿಕೆ ಗಳಿಸಿರುವ (ಆದ್ರೆ ಪ್ರಯೋಜನ ಇಲ್ಲ) ಆಕಾಶ್ 2 ಟ್ಯಾಬ್ಲೆಟ್ ಅತಿ ಶೀಘ್ರದಲ್ಲಿ ಬರಲಿದೆ ಅಂತ ಮೊನ್ನೆ ಕಪಿಲ್ ಸಿಬಲ್ ಹೈದರಾಬಾದ್ ನಲ್ಲಿ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಲ್ಲಿ ಮಾತಾಡುತ್ತಾ ಮತ್ತೆ ಘೋಷಣೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಸಬ್ಸಿಡಿ ದರದಲ್ಲಿ ಟ್ಯಾಬ್ಲೆಟ್ ಕೊಡೋದು ತಮ್ಮ ಕನಸಾಗಿದ್ದು, ಇದಕ್ಕೋಸ್ಕರ ತಮ್ಮ ಇಲಾಖೆ (ಮಾನವ ಸಂಪನ್ಮೂಲ) ಯೋಜಿಸಿದ್ದು, ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಇಂಟರ್ನೆಟ್ ಮೂಲಕ ಬೇಕಿರುವ ಮಾಹಿತಿ ಪಡೆಯುವ ಹಾಗೆ ಮಾಡಲು ಆಕಾಶ್ 2 ಟ್ಯಾಬ್ಲೆಟ್ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಸುಧಾರಿತ ಆಕಾಶ್ 2 ಟ್ಯಾಬ್ಲೆಟ್ 3 ಗಂಟೆ ಬ್ಯಾಟರಿ ಬ್ಯಾಕಪ್, 800 MHz ಪ್ರೋಸೆಸರ್, ಹಾಗು ಕೆಪಾಸಿಟಿವ್ ಸ್ಕ್ರೀನ್ ಹೊಂದಲಿದ್ದು, ಐಐಟಿ-ಮುಂಬೈ ನ ಸಹಯೋಗದೊಂದಿಗೆ ತಯಾರಾಗುತ್ತಿದೆ.

ಹಲವಾರು ತಿಂಗಳುಗಳಿಂದ ಹಿನ್ನೆಡೆ ಅನುಭವಿಸುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಗತವಾಗಿ ಇನ್ನೂ ಯಾವಾಗ ವಿದ್ಯಾರ್ಥಿಗಳ ಕೈಗೆ ಆಕಾಶ್ 2 ಟ್ಯಾಬ್ಲೆಟ್ ಬರಲಿದೆ ಅಂತ ಕಾಯ್ತಾ ಕೂರೋದೊಂದೇ ಗತಿ ಅನ್ಸುತ್ತೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot