Subscribe to Gizbot

ಆಕಾಶ್‌ ಟ್ಯಾಬ್ಲೆಟ್‌ನಲ್ಲಿ ಇನ್ನು ಸಿಮ್‌ ಬಳಸಬಹುದು

Posted By: Staff

ಕೇಂದ್ರ ಸರ್ಕಾರ ಭಾರೀ ಮಹತ್ವಾಕಾಂಕ್ಷಿ ಯೋಜನೆ ಆಕಾಶ್ ಟ್ಯಾಬ್ಲೆಟ್ ತನ್ನ ಮೂರನೇ ಆವೃತ್ತಿಯಲ್ಲಿ ಹೊಸ ವಿನ್ಯಾಸ ಹೊಸ ಅಪ್ಲಿಕೇಶನ್‌ನೊಂದಿಗೆ ಹೊರಬರಲಿದೆ. ಹೊಸ ಆಕಾಶ್ ಟ್ಯಾಬ್ಲೆಟ್‌ನಲ್ಲಿ ಸಿಮ್‌ ಹಾಕಲು ಸ್ಲಾಟ್‌ ನೀಡಿದ್ದು ನಿಗದಿತ ಬೆಲೆಯಲ್ಲೇ ಆಕಾಶ್‌ ಟ್ಯಾಬ್‌ನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮೂರನೇ ಆವೃತ್ತಿಯಲ್ಲಿ 50 ಲಕ್ಷ ಟ್ಯಾಬ್ ತಯಾರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದ್ದು, ಇದಕ್ಕಾಗಿ ಫೆಬ್ರವರಿಯಲ್ಲಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ.

[caption id="attachment_16562" align="aligncenter" width="500" caption="Aakash-3-tablet"]

ಆಕಾಶ್‌ ಟ್ಯಾಬ್ಲೆಟ್‌ನಲ್ಲಿ ಇನ್ನು ಸಿಮ್‌ ಬಳಸಬಹುದು
[/caption]

ಅತ್ಯಂತ ಕಡಿಮೆ ಬೆಲೆಯ ಆಕಾಶ್‌-2 ಟ್ಯಾಬ್ಲೆಟ್‌ ಅನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ 2012 ನವೆಂಬರ್ 11 ರಂದು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದರು. 2,263 ರೂ. ಮೌಲ್ಯದ ಆಕಾಶ್‌-2 ಟ್ಯಾಬ್ಲೆಟ್‌ ಅನ್ನು ಕೇಂದ್ರ ಸರ್ಕಾರ ಶೇ.50 ರಿಯಾಯಿತಿ ದರದಲ್ಲಿ ಎಂಜಿನಿಯರಿಂಗ್‌ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಒದಗಿಸಲಿದೆ.

1 ಜಿಗಾ ಹರ್ಟ್ಸ ಪ್ರೊಸೆಸರ್, 512 MB RAM, 7 ಇಂಚು ಟಚ್‌ ಸ್ಕ್ರೀನ್‌ ಹಾಗೂ ಮೂರು ಗಂಟೆ ಬಾಳಿಕೆ ಬರಬಲ್ಲ ಬ್ಯಾಟರಿಯನ್ನು ಈ ಟ್ಯಾಬ್ಲೆಟ್‌ ಹೊಂದಿದೆ. ಮುಂದಿನ ಐದರಿಂದ ಆರು ವರ್ಷಗಳಲ್ಲಿ 22 ಕೋಟಿ ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್‌ ಮಾರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot